ವ್ಯಕ್ತಿಯೊಬ್ಬರು ಮಾನಸಿಕ ಅಸ್ವಸ್ಥರಾಗಿ ಬಿದ್ದಿರುವುದನ್ನು ಗಮನಿಸಿ ಉಪಚರಿಸಿ ಅವರ ಮನೆಗೆ ತಲುಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ನಾಲ್ಕೂರು ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸತೀಶ್ ಹಾಲೆಮಜಲು ರವರು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮೇ 31 ಬೆಳಗಿನ ಜಾವ ನಾಲ್ಕೂರು ಗ್ರಾಮದ ಮರಕತ ಎಂಬಲ್ಲಿ ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯನ್ನು ಕಂಡ ಶ್ರೀ ಕ್ಷೇತ್ರ ಧರ್ಮಸ್ಥಳ ನಾಲ್ಕೂರು ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸತೀಶ್ ರವರು ಅವರನ್ನು ಉಪಚರಿಸಿ, ಬಟ್ಟೆ ಹಾಗೂ ಚಪ್ಪಲಿ ನೀಡಿದರು. ಅವರನ್ನು ವಿಚಾರಿಸಿದಾಗ ಮಡಿಕೇರಿಯವರು ಎಂದು ತಿಳಿಯುತ್ತದೆ. ತಕ್ಷಣ ಅವರ ಭಾವಚಿತ್ರ ತೆಗೆದು ಮಡಿಕೇರಿ ಸಂಯೋಜಕರಿಗೆ ತಿಳಿಸಿ ಅವರ ಮನೆಯವರನ್ನು ಹುಡುಕುವ ವ್ಯವಸ್ಥೆ ಮಾಡುವಂತೆ ಹೇಳಿದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಮಡಿಕೇರಿ ಸಂಯೋಜಕಿ ಲೀಲಾಶೇಷಮ್ಮ ರವರು ಪುರಸಭಾ ಸದಸ್ಯ ಸುಬ್ರಹ್ಮಣಿ ಇವರ ಸಹಕಾರದಿಂದ ಅವರ ಮನೆಯವರನ್ನು ಸಂಪರ್ಕಿಸಿ ಮಾಹಿತಿ ನೀಡಿ ಸುಬ್ರಹ್ಮಣ್ಯಕ್ಕೆ ಬರುವಂತೆ ಮಾಡಿದರು. ಸುಬ್ರಹ್ಮಣ್ಯ ಕ್ಕೆ ಆಗಮಿಸಿದ ಪತ್ನಿ ಮತ್ತು ಮಗನ ಜೊತೆ ವ್ಯಕ್ತಿಯನ್ನು ಕಳುಹಿಸಿಕೊಡಲಾಯಿತು.
ಈ ಕಾರ್ಯಕ್ಕೆ ಮಡಿಕೇರಿ ಪುರಸಭಾ ಸದಸ್ಯ ಸುಬ್ರಹ್ಮಣಿ, ಮಡಿಕೇರಿ ಠಾಣಾ ಸಿಬ್ಬಂದಿ ಪ್ರವೀಣ್, ಸುಬ್ರಹ್ಮಣ್ಯ ಠಾಣಾ ಸಿಬ್ಬಂದಿಗಳಾದ ನಿತ್ಯಾನಂದ, ಕರುಣಾಕರ್, ಬೀಮನ ಗೌಡ, ಅನಘ ವಸತಿಗೃಹದ ಸಿಬ್ಬಂದಿ ದೇವಿಪ್ರಸಾದ್ ಕುಲ್ಕುಂದ ಸಹಕಾರ ನೀಡಿದ್ದಾರೆ.
*✍ವರದಿ :- ಉಲ್ಲಾಸ್ ಕಜ್ಜೋಡಿ*