- Tuesday
- April 1st, 2025

ಜೂ.27 ರಂದು ಕಜ್ಜೋಡಿ, ಮುಳ್ಳುಬಾಗಿಲು, ಕರಂಗಲ್ಲು ಹಾಗೂ ದೊಡ್ಡಕಜೆ ಊರಿನ ಜನರು ಹರಿಹರದಿಂದ ಕರಂಗಲ್ಲು ವರೆಗೆ ವಿದ್ಯುತ್ ಲೈನ್ ಗಳಿಗೆ ಮುಟ್ಟುವ ಮರದ ಕೊಂಬೆಗಳನ್ನು ಕಡಿದು, ರಸ್ತೆ ಬದಿಯಲ್ಲಿನ ಕಾಡು(ಕಳೆ) ಕಡಿದು, ನೀರು ಸರಾಗವಾಗಿ ಹರಿದು ಹೋಗುವಂತೆ ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಿಸಿ ಮುಂತಾದ ಕೆಲಸಗಳನ್ನು ಶ್ರಮದಾನದ ಮೂಲಕ ಮಾಡಿದರು. ✍ವರದಿ :- ಉಲ್ಲಾಸ್ ಕಜ್ಜೋಡಿ

ಜೂ. 28 ಸೋಮವಾರದಂದು ಪೆರುವಾಜೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ 385 ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ 34 ಕೋವಿಡ್ ಲಸಿಕೆಗಳು ಲಭ್ಯವಿರುವುದು. ಎಲ್ಲಾ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕೆಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ಪೆರುವಾಜೆ ಗ್ರಾ.ಪಂ.ಸದಸ್ಯರಾಗಿರುವ ಪದ್ಮನಾಭ ಶೆಟ್ಟಿ ಪೆರುವಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರುವಿನಲ್ಲಿ ಕೊರಗಜ್ಜ ಎಂಬ ಹೆಸರಿನ ನೂತನ ಪ್ರಗತಿಬಂಧು ಸಂಘವು ಆಲ್ಕಬೆ ಚೆನ್ನಪ್ಪ ಗೌಡರ ಮನೆಯಲ್ಲಿ ಜೂ.24ರಂದು ಉದ್ಘಾಟನೆಗೊಂಡಿತು.ಸಂಘದ ಉದ್ಘಾಟನೆಯನ್ನು ಪುಷ್ಪಾವತಿ ಆಲ್ಕಬೆ ಅವರು ನೆರವೇರಿಸಿದರು.ಪ್ರಾಸ್ತಾವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ ಅವರು ಮಾತನಾಡಿದರು.ಸಂಘಗಳ ವ್ಯವಹಾರಗಳ...

ಕಲ್ಮಕಾರು ಗ್ರಾಮದ ಗೋಪಾಲಕೃಷ್ಣ ದಬ್ಬಡ್ಕ ಅವರ ಮನೆಗೆ ಜೂ.21 ರಂದು ಮರ ಬಿದ್ದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜೂ.22 ರಂದು ಮನೆಗೆ ಬಿದ್ದ ಮರವನ್ನು ತೆರವುಗೊಳಿಸಿ ಮನೆಯ ಒಳಾಂಗಣ ಹಾಗೂ ಹೊರಾಂಗಣ ಸ್ವಚ್ಛಗೊಳಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ...

ಭಾಷೆ ಪ್ರಾಂತ್ಯಗಳಿಗೆ ಸೀಮಿತಮಾಡಿ ಎನ್ನಡ ಎಕ್ಕಡಗಳ ಮಧ್ಯೆ ಮಾತೃ ಭಾಷೆ ಕನ್ನಡವನ್ನೇ ಮರೆಯುತ್ತಿರುವ ನಮಗೆ ನಮ್ಮ ಭಾಷಪ್ರಾಂತ್ಯಕ್ಕೆ ಸೇರದ ಸರ್ವ ಶ್ರೇಷ್ಠ ವೀರ ಪುರುಷನ ಬಗ್ಗೆ ಗೊತ್ತಿರಲು ಹೇಗೆ ಸಾಧ್ಯ? ಪರಕೀಯ ಆಕ್ರಮಣಕಾರರನ್ನು ವೈಭವಿಕರಿಸಿ ಅಶೋಕನಿಗಿಂತ ಅಕ್ಬರ್ ದಿ ಗ್ರೇಟ್ ಮತ್ತೆ ಉಳಿದವರು ದಾರಿ ತಪ್ಪಿದ ದೇಶ ಭಕ್ತರು ಎಂದು ಹೇಳುವ ಪಠ್ಯಪುಸ್ತಕ ದಲ್ಲಿರುವ ಹಾಗೇಯೇ...

ಭೂ ಪರಿವರ್ತನೆ ಆಗದೆ ಗ್ರಾಮದಲ್ಲಿ ಬಡವರಿಗೆ ಸಮಸ್ಯೆ ಆಗುತಿದೆ. ಇದರ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ನ 14 ಮಂದಿ ಸದಸ್ಯರು ತಾಲೂಕು ಕಚೇರಿ, ತಾ.ಪಂ ಎದುರಿನಲ್ಲಿ ಗ್ರಾ.ಪಂ. ಸದಸ್ಯರು ಧರಣಿ ನಡೆಸಲು ಸಂಪಾಜೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಗ್ರಾ.ಪಂ.ಆಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪಾಜೆ ಗ್ರಾಮದ ಹಲವು ಸರ್ವೆ...

ಬೆಳ್ಳಾರೆ ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಆಟದ ಮೈದಾನ ವಿಸ್ತರಣೆ ಮತ್ತು ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡಿರುವ ಕೂಲಿಕಾರರಿಗೆ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಕೈಗೊಂಡು ಕೋವಿಡ್ ಲಸಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಗ್ರಾಮ ಪಂಚಾಯತ್...

ಎಲಿಮಲೆ ಗಟ್ಟಿಗಾರು ರಸ್ತೆಯ ಫಲಾನುಭವಿಗಳಿಂದ ರಸ್ತೆ ಹಾಗೂ ಮಳೆ ನೀರು ಹರಿಯುವ ಚರಂಡಿಯ ಹೂಳೆತ್ತುವ ಕೆಲಸ ಹಾಗೂ ವಿದ್ಯುತ್ ಲೈನಿಗೆ ತಾಗುವ ಮರದ ಗೆಲ್ಲುಗಳನ್ನು ಜೂ.20 ರಂದು ತೆರವುಗೊಳಿಸುವ ಮೂಲಕಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿಗಂಗಾಧರ ಐ, ಗಂಗಾಧರ ಕೇಪಳಕಜೆ, ಧರ್ಮಪಾಲ ಸುಳ್ಳಿ, ನಿತ್ಯಾನಂದ ಕಾಯರಡಿ, ವಿಶ್ವನಾಥ ಕಾಯರಡಿ, ದೀಕ್ಷಿತ್ ಚಿತ್ತಡ್ಕ, ಕಿರಣ್ ಗುಡ್ಡೆಮನೆ, ನಿತಿನ್ ಗಟ್ಟಿಗಾರು,...

ಮೆಸ್ಕಾಂ ಸುಳ್ಯ ಉಪವಿಭಾಗದ ಸುಳ್ಯ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸ ಇರುವುದರಿಂದ ಕೇರ್ಪಳ, ಶ್ರೀರಾಂಪೇಟೆ, ಸಂಪಾಜೆ, ಅರಂತೋಡು, ಕೋಲ್ಚಾರು, ಕಾವು, ಅಜ್ಜಾವರ, ಕೇನ್ಯ, ಸುಬ್ರಹ್ಮಣ್ಯ ಫೀಡರುಗಳಲ್ಲಿ ನಾಳೆ (ಜೂ.22) ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6ರ ತನಕ ವಿದ್ಯುತ್...

ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲಿನ ಮಹಿಳೆಯೊಬ್ಬರಿಗೆ ನಾಗರಹಾವು ಕಚ್ಚಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲು ಎಂಬಲ್ಲಿನ ಚಂದ್ರಾವತಿ ಎಂಬುವವರು ಜೂ.19ರಂದು ಮನೆಯ ಸಮೀಪ ನಾಗರಹಾವು ಕಚ್ಚಿದ್ದು, ಪರಿಣಾಮ ಮಹಿಳೆ ಸ್ಮೃತಿ ತಪ್ಪಿದ್ದು ತಕ್ಷಣವೇ ಮನೆಯವರು ಮಹಿಳೆಯನ್ನು ಕೊಲ್ಲಮೊಗ್ರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ...

All posts loaded
No more posts