- Friday
- November 22nd, 2024
ಎಲಿಮಲೆ ಅಂಗನವಾಡಿ ಕೇಂದ್ರದಲ್ಲಿ ಮಹಾಲಕ್ಷ್ಮಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘದ ಸದಸರಿಂದ ಶ್ರಮದಾನ ನಡೆಯಿತು. ಊಟದ ವ್ಯವಸ್ಥೆಯನ್ನು ಅಂಗನವಾಡಿ ಕೇಂದ್ರ ಹಾಗೂ ಉತ್ಸವ ಜನರಲ್ ಸ್ಟೋರ್ ಮಾಲಕರಾದ ಸವಿತಾ ಕೇಶವ ಕಾಯರ ನೀಡಿ ಸಹಕರಿಸಿದರು.
ಆಲೆಟ್ಟಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾದ ನೂತನ ಗ್ರಾಮ ಪಂಚಾಯತ್ ಸದಸ್ಯರು ಫೆ.5 ರಂದು ಕಾಂಗ್ರೆಸ್ ನಾಯಕ ಹಾಗು ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದರು . ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮುತ್ತಪ್ಪ ಪೂಜಾರಿ ಆಲೆಟ್ಟಿ , ಸತ್ಯಕುಮಾರ್ ಆಡಿಂಜ ,...
ಶಿಕಾರಿಗೆಂದು ಹೋದ ಯುವಕರ ಯಡವಟ್ಟಿನಿಂದಾಗಿ ಒಬ್ಬನಿಗೆ ಗುಂಡು ತಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ವರದಿಯಾಗಿದೆ. ಅರಂತೋಡಿನ ನಾಲ್ವರು ಯುವಕರು ನಿನ್ನೆ ರಾತ್ರಿ ಶಿಕಾರಿಗೆ ಪೂಮಲೆ ಕಾಡಿಗೆ ಹೋಗಿದ್ದರು. ಬೇರೆ ಬೇರೆ ಕಡೆ ಕುಳಿತು ಕಾಡುಪ್ರಾಣಿಗಳ ನಿರೀಕ್ಷೆಯಲ್ಲಿದ್ದಾಗ ಶಬ್ದ ಬಂದತ್ತ ಒಬ್ಬ ಗುಂಡು ಹಾರಿಸಿದ. ಅದು ಆ ಕಡೆ ಕುಳಿತಿದ್ದ ಸತ್ಯಮೂರ್ತಿ ಎಂಬ ಯುವಕನಿಗೆ ತಾಗಿತೆಂದು...
ಸುಬ್ರಹ್ಮಣ್ಯ ಮಠದಲ್ಲಿ ಪೂಜೆ ಮಾಡುತ್ತಿರುವ ಕಳಂಜ ಗ್ರಾಮದ ಶ್ರೀಕೃಷ್ಣ ರಾವ್ ಅವರ ತಂದೆ ವೆಂಕಟರಮಣಯ್ಯ ಇವರಿಗೆ ಭಕ್ತರೋರ್ವರ ಮೊಬೈಲ್ ದೊರೆತಿದ್ದು ಅದನ್ನು ಶ್ರೀಕೃಷ್ಣ ರಾವ್ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತಲುಪಿಸಿ ಪ್ರಾಮಾಣಿಕ ಮೆರೆದಿರುತ್ತಾರೆ. ಸಂಬಂಧಪಟ್ಟವರು ಪೋಲೀಸ್ ಠಾಣೆಯಿಂದ ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳಲು ಸೂಚಿಸಿದ್ದಾರೆ.
ಕಳಂಜ ಗ್ರಾಮದ ಮಣಿಮಜಲು ನಿವಾಸಿ ಕೇಶವ ಪೂಜಾರಿಯವರು ಫೆ. 4 ರಂದು ನಿಧನರಾದರು. ಮೃತರಿಗೆ 46 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಅಸೌಖ್ಯದಿಂದ ಬಳಲುತ್ತಿದ್ದ ಇವರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫೆ. 4ರ ಸಂಜೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಸುಳ್ಯದ ಕೆ ವಿ ಜಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಪ್ರಜ್ಞಾ ಎಂ.ಆರ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಸಂಶೋಧನೆ ನಡೆಸಿ ಸಲ್ಲಿಸಿರುವ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮಂಗಳೂರು ಎಜೆಐಇಟಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಪಿ.ಜೆ...
ಅಜ್ಜಾವರ ಗ್ರಾ.ಪಂ.ನ 2019-20ನೇ ಸಾಲಿನ ಜಮಾಬಂದಿಯು ಫೆ. 6 ರಂದು ಪೂರ್ವಾಹ್ನ ಗಂಟೆ 11 ಕ್ಕೆ ಸರಿಯಾಗಿ ಅಜ್ಜಾವರ ಗ್ರಾ.ಪಂ.ನ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಸಭಾಭವನದಲ್ಲಿ ಜರುಗಲಿದೆ. ಸದ್ರಿ ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿ, ಚರ್ಚಿಸಿ ಸೂಕ್ತ ಸಲಹೆ ಸೂಚನೆಗಳನ್ನಿತ್ತು ಸಭೆಯನ್ನು ಯಶಸ್ವಿಗೊಳಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜಯಮಾಲ ಎ ಕೆ ಯವರು...
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷ ಮಹೋತ್ಸವ ಆರಂಭಗೊಂಡಿದ್ದು. ಇಂದು ಫೆಬ್ರವರಿ 3 ರಂದು ಪೂತ್ಯ ಹಸಿರು ಕಾಣಿಕೆ ಮೆರವಣಿಗೆಯು ಕಟ್ಟೆಯಿಂದ ಆರಂಭಗೊಂಡು ದೇವಳಕ್ಕೆ ಸಮರ್ಪಣೆ ಗೊಂಡಿತು.ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ತಿಮ್ಮಪ್ಪಗೌಡ ಪುತ್ಯ ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ...
ಬೈಕ್ ನಲ್ಲಿ ಸವಾರಿಸುವ ಹಿಂಬದಿ ಸವಾರರು ಕೂಡಾ ಸುಳ್ಯದಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಇಲ್ಲವಾದಲ್ಲಿ ಬೈಕ್ ಚಲಾಯಿಸುವ ಹಾಗೂ ಹಿಂಬದಿ ಕುಳಿತಿರುವ ಇಬ್ಬರಿಗೂ ದಂಡ ವಿಧಿಸಲಾಗುವುದು ಎಂದು ಸುಳ್ಯ ಎಸ್.ಐ. ಹರೀಶ್ ಎಂ.ಆರ್. ತಿಳಿಸಿದ್ದಾರೆ. ಈ ಆದೇಶ ಕೆಲ ದಿನಗಳಿಂದಲೇ ಜಾರಿಯಲ್ಲಿದೆ. ಸುಳ್ಯದಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೂ ಹೆಚ್ಚಿನ ಹಿಂಬದಿ ಸವಾರರು ಹೆಲ್ಮೆಟ್ ಹಾಕದಿರುವುದು ಕಂಡು...
ಕಳೆದ ಕೆಲವು ತಿಂಗಳುಗಳಿಂದ ಸರಕಾರವು ಪಡಿತರ ಪಲಾನುಭವಿಗಳಿಗೆ ಅನ್ನಬಾಗ್ಯ ಯೋಜನೆಯಡಿ ಕುಚ್ಚುಲು ಅಕ್ಕಿ ಮಾತ್ರ ವಿತರಣೆ ಮಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು , ಇನ್ನು ಮುಂದಕ್ಕೆ ಒಂದು ತಿಂಗಳು ಬೆಳ್ತಿಗೆ ಅಕ್ಕಿ, ಇನ್ನೊಂದು ತಿಂಗಳು ಕುಚ್ಚುಲು ಅಕ್ಕಿ ವಿತರಿಸುವಂತೆ ತಾಲೂಕು ದಂಡಾಧಿಕಾರಿ ಅನಿತಾಲಕ್ಷ್ಮಿ ಅವರಿಗೆ ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ತೊಡಿಕಾನ , ಧರ್ಮಪಾಲ ಕೊಯಿಂಗಾಜೆ , ಎಸ್...
Loading posts...
All posts loaded
No more posts