
ಸುಳ್ಯ ನಗರದ ಬೂಡು – ಪನ್ನೆಬೀಡು ಭಗವತೀ ಅಮ್ಮನಿಗೆ ಕಲಶೋತ್ಸವದ ಸಂಭ್ರಮ. ಮಾ.8 ರಿಂದ 10 ರ ವರೆಗೆ ಕ್ಷೇತ್ರದಲ್ಲಿ ಉತ್ಸವಗಳನ್ನು ನಡೆಸಲು ಈಗಾಗಲೇ ಕ್ಷೇತ್ರದ ತಂತ್ರಿಗಳು ದಿನ ಗೊತ್ತುಪಡಿಸಿದ್ದು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಸಮಿತಿ ರಚನೆ ಮಾಡಲಾಗಿದೆ.
ಪೂರ್ವಭಾವಿ ಸಭೆ, ಊರಿನ ಭಕ್ತಾದಿಗಳ ಸಹಭಾಗಿತ್ವದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಯುತ್ತಿದೆ. ಮಾ.8ರಿಂದ ಕಲಶೋತ್ಸವ ಆರಂಭಗೊಳ್ಳಲಿದ್ದು, ಧಾರ್ಮಿಕ, ಸಭೆ, ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದ್ದೂ ಮೂರು ದಿನದ ಕಲಶೋತ್ಸವಕ್ಕೆ ಕ್ಷೇತ್ರ ಸಿದ್ಧಗೊಳ್ಳುತ್ತಿದೆ.