ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ರಚನೆಗೊಂಡಿದ್ದು ಇದರ ಉದ್ಘಾಟನೆ ಫೆ. 24 ರಂದು ನಡೆಯಲಿದೆ. ಸಭಾಧ್ಯಕ್ಷತೆಯನ್ನು ಅರಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ವಹಿಸಲಿದ್ದಾರೆ. ಉದ್ಘಾಟನೆಯನ್ನು ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ.ಚಿದಾನಂದ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್ ಎಂ ಸಿ ಪ್ರಾಂಶುಪಾಲರಾದ ಡಾ.ಪೂವಪ್ಪ ಕಣಿಯೂರು, ಉಪನ್ಯಾಸಕರಾದ ಸಂಜೀವ ಕುದ್ಪಾಜೆ ಉಪಸ್ಥಿತರಿರಲಿದ್ದಾರೆ.
ಅರೆಬಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಅಧ್ಯಕ್ಷರಾಗಿ ದ್ವಿತೀಯ ಬಿ.ಕಾಂ.ನ ಕುಲದೀಪ್ ಎಚ್., ಉಪಾಧ್ಯಕ್ಷ ರಾಗಿ ದ್ವಿತೀಯ ಬಿ.ಎಸ್.ಡಬ್ಲ್ಯೂ ನ ಧನ್ಯಶ್ರೀ ಕಳಗಿ, ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎಸ್ಸಿ ಯ ಅಭಿಜಿತ್ ಕೆ.ಜೆ., ಕೋಶಾಧಿಕಾರಿಯಾಗಿ ದ್ವಿತೀಯ ಬಿ.ಎ. ಯ ಮೇಘರಾಜ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎಸ್ಸಿ. ಯ ಮೋನಿತಾ ಬಿ.ಜಿ., ಸಾಹಿತ್ಯ ಕಾರ್ಯದರ್ಶಿಯಾಗಿ ದ್ವಿತೀಯ ಬಿಕಾಂ ನ ಪ್ರತಿಕ್ಷಾ ಕೆ.ಬಿ., ಸದಸ್ಯರಾಗಿ ಆಸ್ತಿಕ್ ಎಸ್.ಟಿ. (ಪ್ರಥಮ ಬಿ.ಕಾಂ.), ದೀಕ್ಷಾ ಕೆ. ವಿ. (ಪ್ರಥಮ ಬಿ.ಎ.), ವರ್ಷಾ ಡಿ. ಜೆ. (ಪ್ರಥಮ ಬಿ.ಬಿ.ಎಂ.), ಪೂಜಿತಾ ಯು. ಡಿ. (ದ್ವಿತೀಯ ಬಿ.ಎ.), ವಿಶ್ಮಿತಾ ಕೆ. ಪಿ. (ಪ್ರಥಮ ಬಿ. ಕಾಂ.), ನಿಶಾಂತ್ ಎ. ಡಿ. (ಪ್ರಥಮ ಬಿ.ಎಸ್.ಡಬ್ಲ್ಯೂ), ದಿವಿತ್ ಕುಡೆಕಲ್ಲು (ಪ್ರಥಮ ಬಿ. ಎಸ್ಸಿ) ಆಯ್ಕೆಯಾಗಿದ್ದಾರೆ.
- Friday
- November 22nd, 2024