- Monday
- March 31st, 2025

ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜಾನಕಿ ಶಾಂತಿನಗರ, ಉಪಾಧ್ಯಕ್ಷರಾಗಿ ವನಿತಾ ಸುವರ್ಣ ಬಾಮೂಲೆ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ ಎಲ್ಲಾ 7 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ನಾಲ್ಕು ವರ್ಷಗಳ ಹಿಂದೆ ಅಗಲಿದ ಸುಳ್ಯದ ಪತ್ರಕರ್ತ ದಿ.ಚೇತನರಾಂ ಇರಂತಕಜೆ ಇವರ ಸಂಸ್ಮರಣೆ ಮತ್ತು ಉಪನ್ಯಾಸ ಕಾರ್ಯಕ್ರಮ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಫೆ. 17ರಂದು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿತು. ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಇವರ ಅಧ್ಯಕ್ಷತೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಶ್ರೀಮತಿ ಯಶೋಧ ರವರು ದೀಪ...

ಅಜ್ಜಾವರ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸತ್ಯವತಿ ದೊಡ್ಡೇರಿ, ಉಪಾಧ್ಯಕ್ಷೆಯಾಗಿ ಲೀಲಾ ಮನಮೋಹನ್ ಮುಡೂರು ಆಯ್ಕೆಯಾದರು. ಇಲ್ಲಿ ಕಾಂಗ್ರೆಸ್ ಬಹುಮತವಿದ್ದರೂ ಮೀಸಲಾತಿ ನಿಗದಿಯಿಂದ ಅಧಿಕಾರ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಸಮಧಾನ ಪಟ್ಟುಕೊಳ್ಳಬೇಕಿದೆ. ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್ 10, ಬಿಜೆಪಿ 5, ಪಕ್ಷೇತರರು 3 ಸ್ಥಾನ ಪಡೆದಿದ್ದರು.

ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪುಷ್ಪಾವತಿ ಕುಡೆಕಲ್ಲು ಹಾಗೂ ಉಪಾಧ್ಯಕ್ಷರಾಗಿ ದಿನೇಶ್ ಕಣಕ್ಕೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಲ್ಲಿ 21ಸ್ಥಾನಗಳ ಪೈಕಿ ಬಿಜೆಪಿ 13 ಹಾಗೂ ಕಾಂಗ್ರೆಸ್ 8 ಸ್ಥಾನ ಪಡೆದುಕೊಂಡಿದೆ.

ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪದ್ಮಪ್ರಿಯಾ ಮೇಲ್ತೋಟ, ಉಪಾಧ್ಯಕ್ಷರಾಗಿ ಶಶಿಕಲಾ ಕೇನಡ್ಕ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 17 ಸ್ಥಾನಗಳ ಪೈಕಿ 11 ಬಿಜೆಪಿ, 4 ಕಾಂಗ್ರೆಸ್, 2 ಪಕ್ಷೇತರ ಸದಸ್ಯರಿದ್ದಾರೆ.

ಹರಿಹರ ಪಲ್ಲತ್ತಡ್ಕ ಗ್ರಾಮದ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜಯಂತ ಬಾಳುಗೋಡು ಹಾಗೂ ಉಪಾಧ್ಯಕ್ಷರಾಗಿ ವಿಜಯ ಅಂಗಣ ಅವಿರೋಧ ಆಯ್ಕೆಯಾಗಿದ್ದಾರೆ. ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಒಟ್ಟು 6 ಸ್ಥಾನಗಳಲ್ಲಿ 5 ಸ್ಥಾನವನ್ನು ಬಿಜೆಪಿ ಗೆದ್ದರೆ 1 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ✍ವರದಿ:-ಉಲ್ಲಾಸ್ ಕಜ್ಜೋಡಿ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶೀಲಾವತಿ ಬೊಳ್ಳಾಜೆ, ಉಪಾಧ್ಯಕ್ಷರಾಗಿ ಧನಂಜಯಕುಮಾರ್ ಕೋಟೆಮಲೆ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 8 ಸ್ಥಾನಗಳ ಪೈಕಿ ಬಿಜೆಪಿ 6 ಹಾಗೂ ಬಂಡಾಯ ಸದಸ್ಯರು 2 ಸ್ಥಾನ ಪಡೆದುಕೊಡಿದ್ದರು.

ಜಾಲ್ಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆಗೆ ಫೆ.17ರಂದು ಚುನಾವಣೆ ನಡೆದು ಅಧ್ಯಕ್ಷರಾಗಿ ಕೆ.ಎಂ.ಬಾಬು ಜಾಲ್ಸೂರು ಮತ್ತು ಉಪಾಧ್ಯಕ್ಷರಾಗಿ ಲೀಲಾವತಿ ವಿನೋಬನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ.ನಲ್ಲಿ ಒಟ್ಟು 17 ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 3, ಪಕ್ಷೇತರ 3 ಸ್ಥಾನ ಪಡೆದುಕೊಂಡಿದೆ.

ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರದೀಪ್ ರೈ ಅಜಿರಂಗಳ ಹಾಗೂ ಉಪಾಧ್ಯಕ್ಷರಾಗಿ ಹರ್ಷನ್ ಕೆ .ಟಿ. ಆಯ್ಕೆಯಾಗಿದ್ದಾರೆ. ಪ್ರದೀಪ್ ರೈ ರವರನ್ನು ಶ್ರೀಮತಿ ವಿಜಯ ಹಾಗೂ ಹರ್ಷನ್ ಕೆ ಟಿ ರವರನ್ನು ಶ್ರೀಮತಿ ಚಿತ್ರರವರು ಸೂಚಿಸಿದರು. ಇಲ್ಲಿ 6 ಸ್ಥಾನಗಳ ಪೈಕಿ 4 ಬಿ ಜೆ ಪಿ ಹಾಗು 2 ಕಾಂಗ್ರೇಸ್ ಸ್ಥಾನ ಪಡೆದಿತ್ತು. ಚುನಾವಣಾಧಿಕಾರಿಯಾಗಿ...

All posts loaded
No more posts