ವಳಲಂಬೆಯಲ್ಲಿ ಆತ್ಮನಿರ್ಭರಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಎ.ಸಿ. ಯತೀಶ್ ಉಳ್ಳಾಲ್ ಚಾಲನೆ

ವಳಲಂಬೆಯಲ್ಲಿ ಆತ್ಮನಿರ್ಭರಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಎ.ಸಿ. ಯತೀಶ್ ಉಳ್ಳಾಲ್ ಚಾಲನೆ
ಗ್ರಾಮ‌ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು(ರಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ಇವುಗಳ ಸಹಭಾಗಿತ್ವದಲ್ಲಿ ನಡೆಯಲಿರುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಇಂದು ಉದ್ಘಾಟನೆಗೊಂಡಿತು. ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ನ.ಸೀತಾರಾಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಅಂಗಾರ, ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸಂಘದ ಕಾರ್ಯವಾಹಕರಾದ ಚಂದ್ರಶೇಖರ ತಳೂರು, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ, ಪುತ್ತೂರು ವಿದ್ಯಾವರ್ಧಕ ಸಂಘದ ವೆಂಕಟೇಶ್, ಸಹಕಾರಿ ಸಂಘದ ಉಪಾಧ್ಯಕ್ಷ ಕಿಶೋರ್ ಅಂಬೆಕಲ್ಲು, ವಿನೋದ್ ಬೊಳ್ಮಲೆ ಉಪಸ್ಥಿತರಿದ್ದರು. ನೈಪುಣ್ಯ ತರಬೇತಿ ಸಂಯೋಜಕರಾದ ಕಿಶೋರ್ ಕುಮಾರ್ ಪೈಕ ಸ್ವಾಗತಿಸಿದರು. ನವೀನ್ ಬಾಳುಗೋಡು ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading