Ad Widget

ಮುರೂರುವರೆಗಿನ ವಿದ್ಯುತ್ ಲೈನ್ ಟ್ರೀಕಟ್ಟಿಂಗ್ ಬಳಕೆದಾರರ ಶ್ರಮದಾನ

ಸುಳ್ಯದಿಂದ ಬರುವ ವಿದ್ಯುತ್ ಲೈನ್ ನ ವಿದ್ಯುತ್ ಬಳಕೆದಾರರಿಂದ ಇಂದು ಶ್ರಮದಾನ ನಡೆಯಿತು. ಸುಮಾರು 9 ತಂಡಗಳಿಂದ ಎನ್ನೆಟ್ಟಿ, ಕಾಡುಸೊರಂಜ, ಮೈತಡ್ಕ, ಕೇನಾಜೆ, ದೇವರಗುಂಡ, ಮೂರೂರು, ಕಾಪಿನಡ್ಕ ಭಾಗದಲ್ಲಿ 11ಕೆ ವಿ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಮರದ ಗೆಲ್ಲು ಬಳ್ಳಿಗಳನ್ನು ತೆರವು ಗೊಳಿಸಲಾಯಿತು, ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಜತೆಗೆ ಇದ್ದು ಮಾರ್ಗದರ್ಶನ ನೀಡಿದರು

ಜೂ.8 : ಬೆಳ್ಳಾರೆ ಜಕಾರಿಯಾ ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೈಗೊಂಡ ಕ್ರಮದಿಂದ ಪ್ರಾರ್ಥನಾ ಮಂದಿರಗಳ ಪ್ರವೇಶ ಸುಮಾರು 2 ತಿಂಗಳುಗಳಿಂದ ನಿರ್ಬಂಧಿಸಲಾಗಿದ್ದು ಜೂ.8 ರಿಂದ ಮತ್ತೆ ತೆರೆಯಲಿದೆ. ಬೆಳ್ಳಾರೆಯ ಮುಖ್ಯ ಪೇಟೆ ಸಮೀಪ ಇರುವ ಝಖರಿಯ್ಯಾ ಜುಮ್ಮಾ ಮಸೀದಿಯಲ್ಲಿ ಭಕ್ತಾದಿಗಳಿಗೆ ಇಂದಿನಿಂದ ಪ್ರವೇಶ ನೀಡಲಾಗಿದೆ. ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಬರಬೇಕು. ಸರಕಾರದ ಆದೇಶಗಳನ್ನುಸಂಪೂರ್ಣ ವಾಗಿ ಪಾಲಿಸಲಾಗುವುದು.ಮಸೀದಿಯಲ್ಲಿ ಪ್ರವೇಶಿಸುವವರಿಗೆ...
Ad Widget

ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಸರ್ಕಾರದ ನಿರ್ದೇಶನ ಕಡ್ಡಾಯವಾಗಿ ಪಾಲಿಸಿ-ಎಸ್ ಎಂ ಎ ಸುಳ್ಯ

ಕೋವಿಡ್ 19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸಂಪೂರ್ಣ ಲಾಕ್ ಡೌನ್ ಗೊಂಡು ಮಸೀದಿಗಳು ಒಳಗೊಂಡಂತೆ ಎಲ್ಲಾ ಧಾರ್ಮಿಕ ಕ್ಷೇತ್ರಗಳು ಮುಚ್ಚಿದ್ದವು. ಇದೀಗ ಲಾಕ್ ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಜೂ. 08 ರಿಂದ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಕೂಲ ಸಾಧ್ಯತೆ ಇರುವುದರಿಂದ ಅತ್ಯಂತ ಜಾಗರೂಕತೆಯಿಂದ ಅದನ್ನು ಸದುಪಯೋಗ ಪಡಿಸಬೇಕಾಗಿದೆ.ಈ ನಿಟ್ಟಿನಲ್ಲಿ ಮಸೀದಿಗಳ ಪ್ರಾರ್ಥನೆಯ ಪುನರಾರಂಭಕ್ಕೆ ಸರಕಾರ...

ಹರಿಹರ ಕರಂಗಲ್ಲು ಮುಳ್ಳುಬಾಗಿಲು ವಿದ್ಯುತ್ ಲೈನ್ ಸ್ವಚ್ಛತೆ

ಹರಿಹರ ಕರಂಗಲ್ಲು ಮುಳ್ಳುಬಾಗಿಲು ಕಜ್ಜೋಡಿ ಮಾಡಬಾಗಿಲು ರಸ್ತೆಯ ಬದಿ ಹಾದುಹೋಗುವ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಹಾಗೂ ಈ ರಸ್ತೆಯ ಚರಂಡಿ ದುರಸ್ತಿ ಕಾರ್ಯ ಕೂಡ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

ಲತೀಫ್ ಹತ್ಯೆಯ ಸಂಚಿನ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲಿ- ರಿಫಾಯಿ ಜುಮಾಃ ಮಸ್ಜಿದ್ ಸಮಹಾದಿ

ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ಬಣಗಳ ಕಾದಾಟದಲ್ಲಿನಮ್ಮ ಜಮಾಅತ್ ಗೆ ಒಳಪಟ್ಟ ಅಮಾಯಕ ಅಬ್ದುಲ್ ಲತೀಫ್ ಎಂಬ ಯುವಕನನ್ನು ಹಾಡಹಗಲೇ ದುಷ್ಕರ್ಮಿಗಳು ಕೊಲೆಗೈದು ವಿಕ್ರತಿ ಮೆರೆದದ್ದು ಖಂಡನೀಯವಾಗಿದೆ.ಸಾದು ಸ್ವಭಾವ ಮತ್ತು ಪರೋಪಕಾರಿ ಯಾಗಿ ನಮ್ಮ ಜಮಾಅತ್ ನ ಎಲ್ಲಾ ಆಗು ಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಈ ಯುವಕನ ಅಕಾಲಿಕ ಮರಣವು ಇಡೀ ಊರನ್ನೆ ಶೋಕ ಸಾಗರದಲ್ಲಿ...

ಜೂನ್ 14 ಡಿಕೆಶಿ ಪದಗ್ರಹಣ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜೂನ್ 7ರಂದು ನಿಗದಿಯಾಗಿದ್ದ ಡಿಕೆಶಿ ಪದಗ್ರಹಣ ಮುಂದೂಡಿಕೆ ಯಾಗಿತ್ತು. ಇದೀಗ ಜೂನ್ 14ರಂದು ಪದಗ್ರಹಣಕ್ಕೆ ಮುಹೂರ್ತ ಪಿಕ್ಸ್ ಆಗಿದೆ ಎಂದು ತಿಳಿದುಬಂದಿದೆ

ಚಂದನ ಸಾಹಿತ್ಯ ವೇದಿಕೆ – ಪ್ರೇಮಪತ್ರ ಬರಹ ಸ್ಪರ್ಧೆ ಫಲಿತಾಂಶ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಪ್ರೇಮಪತ್ರ ಬರಹ ಸ್ಪರ್ಧೆಯು ಇತ್ತೀಚಿಗೆ ಸಾಮಾಜಿಕ ಜಾಲತಾಣವಾದ ವಾಟ್ಸಾಪಲ್ಲಿ ನಡೆಸಿತ್ತು . ಪ್ರೇಮಪತ್ರ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ . ಅತ್ಯುತ್ತಮ ಪ್ರೇಮಪತ್ರ ಬಹುಮಾನವನ್ನು ಸುಕೃತಿ ಪೂಜಾರಿ ಈಶ್ವರಮಂಗಲ , ಪುತ್ತೂರು ಇವರು ಪಡೆದುಕೊಂಡರು. ಪ್ರಥಮ ಬಹುಮಾನಗಳನ್ನು ಗೋವಿಂದ ರಾಜು ಬಿ ವಿ ಚನ್ನರಾಯಪಟ್ಟಣ ,ವಿಜಯ...

ಐವರ್ನಾಡು ವಿಶ್ವ ಪರಿಸರ ದಿನಾಚರಣೆ

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮ ವಿಕಾಸ ಸಭಾಭವನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ .5 ರಂದು ಆಚರಿಸಲಾಯಿತು . ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಬೆಳ್ಳಾರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್.ಮನ್ಮಥರ ಅಧ್ಯಕ್ಷತೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮ ವಿಕಾಸ ಸಭಾಭವನದ...

ಬೆಳ್ತಂಗಡಿ:ಗ್ರಾಹಕರಿಗೆ ಪಂಗನಾಮ ಹಾಕಿದ ಅಡಿಕೆ ವ್ಯಾಪಾರಿ

ಬೆಳ್ತಂಗಡಿ ಮುಂಗಡ ಅಡಕೆ ಖರೀದಿಸಿ ನೂರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ಹಣ ಕೊಡಲು ಬಾಕಿ ಮಾಡಿದ್ದ ಅಡಕೆ ವ್ಯಾಪಾರಿಯೋರ್ವರು ಮನೆಗೆ ಬೀಗ ಹಾಕಿ ಒಂದು ವಾರದಿಂದ ನಿಗೂಢವಾಗಿ ನಾಪತ್ತೆಯಾದ ಘಟನೆ ಬಂದಾರು ಗ್ರಾಮದಿಂದ ವರದಿಯಾಗಿದ್ದು ಹಣ ಕಳೆದುಕೊಳ್ಳುವ ಭೀತಿಯಲ್ಲಿರುವ ಗ್ರಾಹಕರು ದಾರಿ ತೋಚದ ತೀವ್ರ ಆತಂಕ ಪಡುವಂತಾಗಿದೆ . ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಟ್ಲಡ್ಕ...

ಗ್ರಾಮವಿಕಾಸ ಸಮಿತಿಯಿಂದ ಆತ್ಮ ನಿರ್ಭರ ಭಾರತಕ್ಕೆ ಚಾಲನೆ – ಸ್ವಾವಲಂಬಿ ಬದುಕಿಗೆ ತರಕಾರಿ ಕೃಷಿ ಪೂರಕ

ಜೂ .8 ರಂದು ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಗ್ರಾಮ ವಿಕಾಸ ಸಮಿತಿ ಸುಳ್ಯ ಮತ್ತು ಅಜ್ಜಾವರ ಆಶ್ರಯದಲ್ಲಿ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಸುಳ್ಯ ಸಿಎ ಬ್ಯಾಂಕ್ ವಠಾರದಲ್ಲಿ ನಡೆಯಲಿದೆ . ಶಾಸಕ ಅಂಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ . ಬಳಿಕ ತಾಲೂಕಿನಲ್ಲಿ ಪ್ರತೀ ಗ್ರಾಮ ಮಟ್ಟದಲ್ಲೂ ಆಯಾ ಗ್ರಾಮದ...
Loading posts...

All posts loaded

No more posts

error: Content is protected !!