ಗ್ರಾಮವಿಕಾಸ ಸಮಿತಿಯಿಂದ ಆತ್ಮ ನಿರ್ಭರ ಭಾರತಕ್ಕೆ ಚಾಲನೆ – ಸ್ವಾವಲಂಬಿ ಬದುಕಿಗೆ ತರಕಾರಿ ಕೃಷಿ ಪೂರಕ

ಜೂ .8 ರಂದು ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಗ್ರಾಮ ವಿಕಾಸ ಸಮಿತಿ ಸುಳ್ಯ ಮತ್ತು ಅಜ್ಜಾವರ ಆಶ್ರಯದಲ್ಲಿ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಸುಳ್ಯ ಸಿಎ ಬ್ಯಾಂಕ್ ವಠಾರದಲ್ಲಿ ನಡೆಯಲಿದೆ . ಶಾಸಕ ಅಂಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ . ಬಳಿಕ ತಾಲೂಕಿನಲ್ಲಿ ಪ್ರತೀ ಗ್ರಾಮ ಮಟ್ಟದಲ್ಲೂ ಆಯಾ ಗ್ರಾಮದ ಸಹಕಾರಿ ಸಂಘ ಮತ್ತು ಗ್ರಾಮ ವಿಕಾಸ ಸಮಿತಿಯ ವತಿಯಿಂದ ತರಕಾರಿ ಬೀಜ ವಿತರಣೆ ನಡೆಯಲಿದೆ.

. . . . . . . . .

ಆಸಕ್ತ ಕೃಷಿಕರು ತರಕಾರಿ ಬೆಳೆಯನ್ನು ಬೆಳೆಯುವಂತೆ ಉತ್ತೇಜನ ನೀಡಲು ಈ ಯೋಜನೆ ಹಾಕಿಕೊಳ್ಳಲಾಗಿದೆ ಈ ಮೂಲಕ ಆತ್ಮನಿರ್ಭರ ಭಾರತ ಕೈಗೊಳ್ಳಲು ಸಹಕಾರಿಯಾಗಲಿದೆ. ಅಲಸಂಡೆ , ಪಡುವಲಕಾಯಿ , ಹಾಗಲಕಾಯಿ , ಬೆಂಡೆಕಾಯಿ , ಸೋರೆಕಾಯಿ , ಬದನೆ , ಚೀನೀಕಾಯಿ ಸೇರಿದಂತೆ ವಿವಿಧ ತರಕಾರಿ ಬೀಜಗಳು ಲಭ್ಯವಾಗಲಿದೆ . ಗುಣಮಟ್ಟದ ತರಕಾರಿ ಬೀಜಗಳನ್ನೇ ಆಯ್ಕೆ ಮಾಡಲಾಗಿದ್ದು ಕೃಷಿಕರಿಗೆ ವಿತರಣೆಯಾಗಲಿದೆ . ತಾಲೂಕಿನ ಸುಮಾರು 6000 ಕುಟುಂಬಗಳಿಗೆ ತರಕಾರಿ ಬೀಜ ವಿತರಣೆ ಮಾಡುವ ಗುರಿ ಹೊಂದಲಾಗಿದೆ . ಇದಕ್ಕಾಗಿ ಸಹಕಾರಿ ಸಂಘಗಳೂ ಸಹಕಾರ ಪಡೆಯಲು ಗ್ರಾಮ ವಿಕಾಸ ಸಮಿತಿ ಸುಳ್ಯ ತೀರ್ಮಾನಿಸಿದೆ.
ಕೃಷಿಕರಿಗೆ ಸ್ವಾವಲಂಬನೆಯ ಜತೆಗೆ ಆರೋಗ್ಯಕರವಾದ ತರಕಾರಿ,ಹೆಚ್ಚು ಬೆಳೆಸಿದರೇ ಮಾರಾಟ ಮಾಡಿ ಉತ್ತಮ ಆದಾಯ ಪಡೆಯಬಹುದು

. . . . . . .

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘ ಹಾಗೂ ಗ್ರಾಮ ವಿಕಾಸ ಸಮಿತಿ ವತಿಯಿಂದ ಜೂ ೧೦ ರಂದು ಸೊಸೈಟಿ ವಠಾರ ಮತ್ತು ಮಾವಿನಕಟ್ಟೆ ವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ಹಾಗೂ ಜೂ‌.೧೧ ರಂದು ನಡುಗಲ್ಲು ಶಾಲಾ ವಠಾರದಲ್ಲಿ ತರಕಾರಿ ಬೀಜ ವಿತರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading