- Thursday
- July 16th, 2026
ಎಸ್.ಎಇ.ಪಿ.ಐ. ಸುಳ್ಯ ಬ್ಲಾಕ್ ಸಮಿತಿಯ ವತಿಯಿಂದ ಸುಳ್ಯದ ಬೋರುಗುಡ್ಡೆ ವಾರ್ಡಿನ ನಾವೂರು-ಜಟ್ಟಿಪಳ್ಳ, ಅನ್ಸಾರಿಯ ರಸ್ತೆಯಲ್ಲಿ ಶ್ರಮದಾನದ ಮೂಲಕ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಂತಹ ಗಿಡಗಂಟಿಗಳನ್ನು ತೆರವುಗೊಳಿಸುವುದರ ಮೂಲಕ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು. ನವಂಬರ್ 29 ರಂದು ನಡೆಯಲಿರುವ ಅನ್ಸಾರಿಯ ಗಲ್ಫ್ ಆಡಿಟೋರಿಯಂನ ಅದ್ದೂರಿಯ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಎಸ್‌ಡಿಪಿಐಯ ಸುಳ್ಯ ಬ್ಲಾಕ್ ಸಮಿತಿಯ ಅಝೀಝ್ ಕಚ್ಚು ರವರ...
ಸಂಪಾಜೆ ಗಡಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ರಮ್ಲ ಹನೀಫ್ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಘಾಟನೆ ಯನ್ನು ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಚಂದ್ರಾವತಿ ಕಲುಮೆ ದೀಪ ಬೆಳಗಿಸಿ ಉದ್ಘಾಟಿಸಿದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಲ್ಲಾ ಮಕ್ಕಳಿಗೆ ಶ್ರೀಮತಿ ಚಂದ್ರಾವತಿ ಕಲುಮೆ ಹಾಗೂ ವೆಂಕಪ್ಪ ದಂಪತಿಗಳು...
ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಕರ್ನಾಟಕ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ್ದು ಇದರ ವಿಜಯೋತ್ಸವದ ಹಿನ್ನಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಗಿತ್ತು.ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿತ್ತು ಪಟಾಕಿ ಸಿಡಿಸಿದ ನಂತರ ರಸ್ತೆಯಲ್ಲಿದ್ದ ಪಟಾಕಿ ಕಸವನ್ನು ಕೂಡಲೇ ಸ್ವಚಮಾಡುವ ಮೂಲಕ ಸ್ವಚತೆ ಆದ್ಯತೆ ನೀಡಿ...
ಪ್ರಥಮ- ಪುನರ್ವಿ ನಾಯಕ್ ಕೆ.ಎಂ. ದ್ವಿತೀಯ- ಹಂಸಿ ಡಿ ತೃತೀಯ- ತ್ರಿಶೂಲ್ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಸುಳ್ಯ ವಲಯದ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ "ಕೂಸು ಮರಿ" ಮಕ್ಕಳ ಫೋಟೋ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಶ್ರೀರಾಂ ಪೇಟೆಯ ಆಸ್ತಾ ಸ್ಟುಡಿಯೋದಲ್ಲಿ ನ.23ರಂದು ನಡೆಯಿತು. ಹಿರಿಯ ಫೋಟೋಗ್ರಾಫರ್ ಆರ್.ಕೆ. ಭಟ್ ವಿಜೇತರಾದ ಮಕ್ಕಳಿಗೆ...
ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಯಲ್ಲಿ ಯುವ ಜನರ ಪಾತ್ರ ಮಹತ್ವವಾಗಿದೆ. ಬರವಣಿಗೆಯಿಂದ ಜ್ಞಾನ ವೃದ್ಧಿ ಸಾಧ್ಯ ಎಂದು ಸಾಹಿತಿ, ಮಧು ಪ್ರಪಂಚ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಆರ್. ಪಿ. ಕಲಾ ಸೇವಾ ಟ್ರಸ್ಟ್ (ರಿ) ಪಾಂಬಾರು ಇದರ ಸಹಯೋಗದಲ್ಲಿ ನಡೆದ ಕನ್ನಡ...
ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಇದರ ವತಿಯಿಂದ ಸುಗಂಧ ಸಾಗರ ಕಲೋತ್ಸವ ಕಾರ್ಯಕ್ರಮ ಕನಕಮಜಲು ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಇಂದು ಪ್ರಾರಂಭಗೊಂಡಿತು .ಬೆಳಿಗ್ಗೆ ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಹಸೈನಾರ್ ಕೆ.ಸಿ.ಧ್ವಜಾರೋಹಣ ನೆರವೇರಿಸಿದರು .ಪೂರ್ವಾಹ್ನ 9.15 ಗಂಟೆಗೆ ಸ್ಪರ್ಧಾರ್ಥಿ ಗಳ ನೋಂದಾವಣಿ ನಡೆಯಲಿದ್ದು.ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಲಯ...
ನ.27 ರಂದು ಕೊಪ್ಪರಿಗೆ ಏರುವುದು, ನ.30 ರಂದು ಲಕ್ಷದೀಪೋತ್ಸವ, ಡಿ.07 ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ ಡಿ.12 ರವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ನ.27 ಬುಧವಾರದಂದು ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.30 ಶನಿವಾರದಂದು ಲಕ್ಷದೀಪೋತ್ಸವ, ಡಿ.01 ಆದಿತ್ಯವಾರದಂದು ರಾತ್ರಿ...
ಉಡುಪಿಯ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ಪ್ರಾಯೋಜಿತ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ನೀಡುವ ಪ್ರಸಿದ್ಧ ಶಾರದಾ ಕೃಷ್ಣ ಪ್ರಶಸ್ತಿ- 2025 ಈ ಬಾರಿ ರಂಗನಿರ್ದೇಶಕ ,ರಂಗ ಮಾಂತ್ರಿಕ,ರಂಗಮಾಣಿಕ್ಯ,ಮುಂತಾದ ಬಿರುದುಗಳನ್ನು ಪಡೆದ ಸುಳ್ಯದ ಪ್ರಸಿದ್ಧ ರಂಗಕರ್ಮಿ, ನಟ , ರಂಗನಿರ್ದೇಶಕ, ಸಂಘಟಕ, ರಂಗ ಶಿಕ್ಷಕ , ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಮತ್ತು...
ಸುಳ್ಯ ಓಡಬಾಯ್ ಅಗ್ನಿ ಶಾಮಕ ಠಾಣಾ ಬಳಿಯಲ್ಲಿ ಕಾರ್ KL 57U8721 ಮತ್ತು ಬೈಕ್ KA01EM2405 ಪರಸ್ಪರ ಡಿಕ್ಕಿ ಹೊಡೆದಿದ್ದು ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Loading posts...
All posts loaded
No more posts
