ಪೆರಾಜೆ : ಕೊಲೆ ಪ್ರಕರಣದ ಆರೋಪಿಗಳಿಗೆ  ಜೀವಾವಧಿ ಶಿಕ್ಷೆ

ಪೆರಾಜೆ ಗ್ರಾಮದಲ್ಲಿ ದಿನಾಂಕ 08-05-2020ರಂದು ನಡೆದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಿಬ್ಬರಿಗೆ ಮಡಿಕೇರಿಯ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ದಿನಾಂಕ 08-05-2020ರಂದು ಪೆರಾಜೆ ಗ್ರಾಮದ  ಉತ್ತರಕುಮಾರ ಎಂಬಾತನೊಂದಿಗೆ  ತಾರೀಣಿ ಮತ್ತು ಆಕೆಯ ಅಕ್ಕನ ಮಗ ಧರಣಿಕುಮಾರ್ ಎಂಬಿಬ್ಬರು ಜಗಳ ಮಾಡಿ...

ಕಲ್ಮಡ್ಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಆಯ್ಕೆಯಾದ ರಾಮಚಂದ್ರ ಕಾಚಿಲರಿಗೆ ಸಹಕಾರಿ ಸಂಘದ ವತಿಯಿಂದ ಸನ್ಮಾನ

ಕಲ್ಮಡ್ಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಆಯ್ಕೆಯಾದ ರಾಮಚಂದ್ರ ಕಾಚಿಲರಿಗೆ ಕಲ್ಮಡ್ಕ ಪ್ರಾ.ಕೃ‌.ಪ.ಸಹಕಾರಿ ಸಂಘದ ವತಿಯಿಂದ ಡಿ.12 ರಂದು ಸನ್ಮಾನಿಸಲಾಯಿತು. ಸಂಘದ ಆಡಳಿತ ಸಭೆಯಲ್ಲಿ ಮುಂದಿನ ಮೂರು ಶೈಕ್ಷಣಿಕ ವರ್ಷಗಳಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ರಾಮಚಂದ್ರ ಕಾಚಿಲ ಇವರನ್ನು ಸಭೆಯಲ್ಲಿ ಸರ್ವ ಸದಸ್ಯರ ಪರವಾಗಿ ಹಿರಿಯ ನಿರ್ದೇಶಕರುಗಳಾದ ಸುಬ್ರಾಯ ಓಣ್ಯಡ್ಕ ಹಾಗೂ ರಾಮಮೂರ್ತಿ...
Ad Widget

ಬಡ್ಡಡ್ಕ – ತಿಮ್ಮನಮೂಲೆ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಉದ್ಘಾಟನೆ

ಅಲೆಟ್ಟಿ ಗ್ರಾಮದ ಬಡ್ಡಡ್ಕ - ತಿಮ್ಮನಮೂಲೆ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿಯವರ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ರೂ. 3.00 ಲಕ್ಷ ಅನುದಾನ ಬಿಡುಗಡೆ ಗೊಂಡು ಕಾಂಕ್ರಿಟಿಕರಣ ಗೊಂಡಿದ್ದು ರಸ್ತೆಯನ್ನು ಇಂದು ಉದ್ಘಾಟಿಸಲಾಯಿತು. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯ ತೇಜಕುಮಾರ್ ಬಡ್ಡಡ್ಕ ಉದ್ಘಾಟಿಸಿ ಶುಭಹಾರೈಸಿದರು. ಗ್ರಾಮ...

ಪೂದೆ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ ಭೇಟಿ

ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ಮತ್ತು ಮಹಾವಿಷ್ಣು ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ   ಇಂದು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ,  ಮೆಚ್ಚುಗೆ ವ್ಯಕ್ತಪಡಿಸಿದರು. ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿಯನ್ನು ಆದಷ್ಟು ಬೇಗ ಸಂಪೂರ್ಣಗೊಳಿಸಲು ಆದೇಶಿಸಿದರು.  ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ...

ವಿಶ್ವನಾಥ ಕೊಪ್ಪಡ್ಕ ನಿಧನ

ಕಲ್ಮಕಾರು ಗ್ರಾಮದ ವಿಶ್ವನಾಥ ಕೊಪ್ಪಡ್ಕ ಎಂಬುವವರು ಇಂದು(ಡಿ.12) ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದು, ಮೃತರಿಗೆ 58 ವರ್ಷ ವಯಸ್ಸಾಗಿತ್ತು.ಹೃದಯಾಘಾತಗೊಂಡ ಕೂಡಲೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದಾರೆನ್ನಲಾಗಿದ್ದು, ಮೃತರು ಪತ್ನಿ ಚಂದ್ರಾವತಿ, ಪುತ್ರ ಅವಿನಾಶ್, ಪುತ್ರಿ ಶ್ರೀಮತಿ ಯುಕ್ತಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಐವರ್ನಾಡು : ಸಹಕಾರಿ ಸಂಘದ ಚುನಾವಣೆ – ಇದುವರೆಗೆ 9 ನಾಮಪತ್ರ ಸಲ್ಲಿಕೆ

ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿ ಚುನಾವಣೆಗೆ ದಿನ ನಿಗದಿಯಾಗಿದ್ದು ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಇದುವರೆಗೆ 9 ನಾಮಪತ್ರ ಸಲ್ಲಿಕೆಯಾಗಿದೆ.‌ಡಿ.14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಪಕ್ಷೇತರರಾಗಿ ವಿಕ್ರಂ ಪೈ, ಕಾಂಗ್ರೆಸ್ ಬೆಂಬಲಿತರಾಗಿ ಜಯಪ್ರಕಾಶ್ ನೆಕ್ರಪ್ಪಾಡಿ, ಕರುಣಾಕರ ಮಡ್ತಿಲ, ಮುಂಜುನಾಥ್ ಮಡ್ತಿಲ, ರಾಜೇಶ್ ಭಟ್ ಬಾಂಜಿಕೋಡಿ, ಅಶ್ವಥ್ ಜಬಳೆ, ಕೇಶವ ಉದ್ದಂಪಾಡಿ, ಚಂದ್ರಕುಮಾರೇಶನ್ ಬಾಂಜಿಕೋಡಿ, ಕಣ್ಣ ಪಾಟಾಳಿ...

ಬೆಳ್ಳಾರೆ: ಸ್ನೇಹಶ್ರೀ ಮಹಿಳಾ ಮಂಡಲದ ದಶ ಸಂಭ್ರಮ ;  ಒಳ್ಳೆಯ ಕೆಲಸ ಮಾಡಿದಾಗ ಹೆಸರು ಶಾಶ್ವತವಾಗಿ ಉಳಿಯುತ್ತದೆ – ಮಮತಾ ಗಟ್ಟಿ

ಬೇರೆ ಬೇರೆ ತಾಯಂದಿರ ಮಕ್ಕಳು ಇಂದು ಒಂದೇ ತಾಯಿಯ ಮಕ್ಕಳಾಗಿ ಸಮಾಜ ಗುರುತಿಸುವಂತ ಕಾರ್ಯ ಮಾಡಿದ್ದಾರೆ. ಹತ್ತು ವರ್ಷಗಳನ್ನು ಪೂರೈಸಿದ ಸಂಸ್ಥೆ 10 ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದು, ಬಡವರಿಗೆ ನೆರವಾಗಿರುವುದು ನಿಜವಾದ ದೇವರ ಪೂಜೆ ಮಾಡಿದಂತೆ. ನಿಮ್ಮ ಸಂಸ್ಥೆಗೆ ಸರಕಾರದ ಮಟ್ಟದಿಂದ ಸಿಗಬಹುದಾದ ಅನುದಾನಕ್ಕೆ ಪ್ರಯತ್ನ ಪಡುತ್ತೇನೆ. ಒಳ್ಳೆಯ ಕೆಲಸ ಮಾಡಿದಾಗ ಹೆಸರು ಶಾಶ್ವತವಾಗಿ ಉಳಿಯುತ್ತದೆ...

ಮಂಡೆಕೋಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಜ.5 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

ಶ್ರೀ ಶಬರಿಗಿರಿ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಕಣೆಮರಡ್ಕ, ಮಂಡೆಕೋಲು ಇಲ್ಲಿ 3ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಜ.5ರಂದು ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ತಿಳಿಸಿದರು. ದ.12 ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸುಮಾರು...

ಐವರ್ನಾಡು : ಸಹಕಾರಿ ಸಂಘದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಘೋಷಣೆ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಭಾರತೀಯ ಜನತಾ ಪಕ್ಷ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಘೋಷಣೆಯಾಗಿದೆ.ಸಾಮಾನ್ಯ ವರ್ಗದಿಂದ ಎಸ್‌.ಎನ್ ಮನ್ಮಥ, ಶ್ರೀನಿವಾಸ್‌ ಮಡ್ತಿಲ, ಸತೀಶ್ ಎಡಮಲೆ, ದೇವದಾಸ್ ಕಲ್ತಡ್ಕ ,ಕಿಶನ್ ಜಬಳೆ, ಅಜಿತ್ ದೇರಾಜೆ. ಹಿಂದುಳಿದ(ಬಿ) ವರ್ಗದಿಂದ ಮಹೇಶ್ ಜಬಳೆ, ಹಿಂದುಳಿದ (ಎ) ವರ್ಗದಿಂದ ನವೀನ್ ಸಾರಕೆರೆ, ಸಾಮಾನ್ಯ ಕ್ಷೇತ್ರದಿಂದ ಮಹಿಳಾ...

ಸಂಪಾಜೆ : ಸಹಕಾರಿ ಸಂಘದ ಚುನಾವಣೆ – ಇದುವರೆಗೆ 12 ನಾಮಪತ್ರ ಸಲ್ಲಿಕೆ 

ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ದಿನ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಆನಂದ ಪಿ.ಎಲ್.,ಗಣಪತಿ ಭಟ್ ಪಿ.ಎನ್., ಲೋಕನಾಥ ಎಸ್.ಪಿ.,  ಹಮೀದ್ ಜಿ.ಕೆ., ಸುಮತಿ ಎಸ್., ಹನೀಫ್ ಎ.ಕೆ., ವರದರಾಜ್ ಎಸ್.ಟಿ., ಜಗದೀಶ ಜಿ.ವಿ‌., ಸದಾನಂದ ರೈ ಕೆ.ಎಂ., ಮನೀಶ್ ಆರ್.ಜಿ., ಶ್ರೀಧರ ಬಿ., ಜಗದೀಶ್ ಕೆ.ಪಿ. ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಡಿ.15...
Loading posts...

All posts loaded

No more posts

error: Content is protected !!