ಜ.17 ರಂದು  ದೇವ – ಕಂದ್ರಪ್ಪಾಡಿ ರಸ್ತೆ ಕಾಮಗಾರಿ ಉದ್ಘಾಟನೆ

ದೇವ ಕಂದ್ರಪ್ಪಾಡಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಜ. 17ರಂದು ಬೆಳಿಗ್ಗೆ 10-00 ಗಂಟೆಗೆ ಉದ್ಘಾಟನೆ ನಡೆಯಲಿದೆ. ಶಾಸಕರು,ಜನಪ್ರತಿನಿಧಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ರಸ್ತೆ ಉದ್ಘಾಟನೆ ನಡೆಯಲಿದೆ ಎಂದು ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ.

ಸೇವಾಜೆ ಅಂಗನವಾಡಿ ಕೇಂದ್ರಕ್ಕೆ ಇನ್ವರ್ಟರ್ ಕೊಡುಗೆ

ಸೇವಾಜೆ ಅಂಗನವಾಡಿ ಕೇಂದ್ರಕ್ಕೆ ಪೋಷಕರಾದ ಹೊನ್ನಮೂಲೆ ಹೊನ್ನಪ್ಪ ಗೌಡರು 27 ಸಾವಿರ ರೂ. ಮೌಲ್ಯದ ಇನ್ವರ್ಟರ್ ನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಗುಡ್ಡನಮನೆ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Ad Widget

ಕುಕ್ಕೆ ಸುಬ್ರಹ್ಮಣ್ಯ : ಬೀದಿ ವ್ಯಾಪಾರಿಗಳ ಮನವಿಗೆ ಸ್ಪಂದಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಕುಕ್ಕೆ ಸುಬ್ರಹ್ಮಣ್ಯದ ಬೀದಿ ವ್ಯಾಪಾರಿಗಳ ಮನವಿಗೆ ಸ್ಪಂದಿಸಿದ ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಜಿಲ್ಲಾಧಿಕಾರಿಗಳಿಗೆ ಮತ್ತು ಪುತ್ತೂರು ಉಪ ವಿಭಾಗ ಅಧಿಕಾರಿಯೊಂದಿಗೆ ಚರ್ಚಿಸಿ, ಅತೀ ಶೀಘ್ರವಾಗಿ ಬೀದಿ ವ್ಯಾಪಾರಿಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸ್ಥಳ ಗುರುತಿಸಿದ್ದು, ಹಲವು ಸಮಯದಿಂದ ಸಂಕಷ್ಟದಲ್ಲಿದ್ದ ಬೀದಿ ವ್ಯಾಪಾರಿಗಳು ದಕ್ಷಿಣ ಕನ್ನಡ ಸಂಸದರಾದ...

ಐವರ್ನಾಡು : ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.08 ರಿಂದ 10 ರವರೆಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಹಿರಿಯರಾದ  ಬೆಳ್ಯಪ್ಪ ಗೌಡ ಮಡ್ತಿಲ ರವರು ಇಂದು ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಶ್ ಭಟ್ ಬಾಂಜಿಕೋಡಿ ಹಾಗು ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಾಭಿಮಾನಿಗಳು, ಅರ್ಚಕರು ಹಾಗೂ ಸಿಬ್ಬಂದಿಗಳು...

ಬೆಳಗಾವಿ ರಾಷ್ಟ್ರೀಯ ಯುವ ದಿನಾಚರಣೆ – ರಾಷ್ಟ್ರ ಮಟ್ಟದ ಕಲಾ ವಿಭೂಷಣ ಪ್ರಶಸ್ತಿಗೆ ಕು.ಪೂಜಾ ಬೋರ್ಕರ್ ಆಯ್ಕೆ

ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಕಲೆ,ಸಾಹಿತ್ಯ ಭಾಷೆ, ನೆಲ- ಜಲ ,ಸಂಸ್ಕೃತಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಗೈದ ಗಣ್ಯರಿಗೆ ರಾಷ್ಟ್ರೀಯ ಯುವ ದಿನಾಚರಣೆಯಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆನ್ಸಿಲ್ ಆರ್ಟ್, ವಾಲ್ ಆರ್ಟ್ ಆರ್ಕಿಲಿಕ್ ಆರ್ಟ್ ಮುಖವಾಡ ತಯಾರಿ ಕ್ಯಾನ್ವಾಸ್ ಆರ್ಟ್...

ಎನ್ ಲೈಟ್ ಎಜ್ಯುಕೇಶನ್ ಸರ್ವಿಸ್ ಮತ್ತು ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ

ಅರಂತೋಡು ಪಟೇಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಸುಳ್ಯ ಏನ್ ಲೈಟ್ ಎಜ್ಯುಕೇಶನ್ ಸರ್ವಿಸ್ ವತಿಯಿಂದ ಎಸ್ ಎಸೆಲ್ಸಿ ವಿದ್ಯಾರ್ಥಿ ಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ತರಬೇತಿ ಮತ್ತು ಪರಿಕ್ಷಾ ಪೂರ್ವ ಸಿದ್ಧತಾ ಮಾಹಿತಿ ಕಾರ್ಯಗಾರ ವು ಅರಂತೋಡು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಜ.14 ರಂದು ನಡೆಯತು.ಅಧ್ಯಕ್ಷತೆಯನ್ನು ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ...

ಕಳಂಜ: ಬೈಕ್-ಜೀಪು ಅಪಘಾತ, ಬೈಕ್ ಸವಾರನಿಗೆ ಗಾಯ

ಕಳಂಜ ವಿಷ್ಣುನಗರದ ಬಳಿ ಚಂದ್ರ ಗೌಡ ಕಜೆಮೂಲೆಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಜೀಪಿಗೆ ಅಯ್ಯನಕಟ್ಟೆಯಿಂದ ಚೊಕ್ಕಾಡಿ ಕಡೆಗೆ ವೇಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ಜ.13ರಂದು ವರದಿಯಾಗಿದೆ. ಬೈಕ್ ಸವಾರ ಪೆರಾಜೆಯವರಾಗಿದ್ದು ಅಪಘಾತದ ಪರಿಣಾಮ ಬೈಕ್ ಸಂಪೂರ್ಣ ನಜ್ಜು-ಗುಜ್ಜಾಗಿದ್ದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಹೆಚ್ಚಿನ...

ಪಂಬೆತ್ತಾಡಿ :  ಕಾಂಗ್ರೆಸ್‌ ಬೆಂಬಲಿತ ಮಹೇಶ್‌ ಕುಮಾರ್ ಕರಿಕ್ಕಳ ನೇತೃತ್ವದ ನಾಗರಿಕ ಸಮಿತಿ ಅಧಿಕಾರಕ್ಕೆ –  ಕಾಂಗ್ರೆಸ್ 8, ಬಿಜೆಪಿ, ಜೆಡಿಎಸ್‌ ಮೈತ್ರಿಗೆ 4 ಸ್ಥಾನ

ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಹೇಶ್ ಕುಮಾ‌ರ್ ಕರಿಕ್ಕಳ ನೇತೃತ್ವದಲ್ಲಿ ನಾಗರಿಕ ಸಮಿತಿ 12 ರಲ್ಲಿ 8 ಸ್ಥಾನ ಪಡೆದು ಅಧಿಕಾರಕ್ಕೇರಿದೆ.  ಬಿಜೆಪಿ, ಜೆಡಿಎಸ್  ನೇತೃತ್ವದ ತಂಡ 4 ಸ್ಥಾನ ಪಡೆದಿದ್ದಾರೆ.ನಾಗರಿಕ ಸಮಿತಿಯಿಂದ ಸಾಮಾನ್ಯ ಕ್ಷೇತ್ರದಿಂದ ಮಹೇಶ್ ಕುಮಾ‌ರ್ ಕರಿಕ್ಕಳ, ಗಣೇಶ್ ಪ್ರಸಾದ್ ಭೀಮಗುಳಿ, ಹಿಂದುಳಿದ ವರ್ಗ...

ಗುತ್ತಿಗಾರು : ವಿವಿಧ ಅಂಗಡಿ ಹಾಗೂ ದೈವಸ್ಥಾನದ ಕಾಣಿಕೆ ಹುಂಡಿಗೆ ಕನ್ನ – ಕಳ್ಳನ ಚಲನವನ ಸಿಸಿ ಕ್ಯಾಮರಾದಲ್ಲಿ ಸೆರೆ

https://youtu.be/zIL-JVq6PZU?si=Ll8F6c0lBuwrKXMu ಗುತ್ತಿಗಾರು ಬಸ್ ನಿಲ್ದಾಣದ ಮುಂಭಾಗದ ತರಕಾರಿ ಅಂಗಡಿ, ಪಕ್ಕದ ಕಟ್ಲೇರಿ ಅಂಗಡಿ, ಮೇಲಿನ ಪೇಟೆಯ ಮುತ್ತಪ್ಪ ನಗರದ ಗುಡಿಯ ಕಾಣಿಕೆ ಹುಂಡಿಗೆ ಕನ್ನ ಹಾಕಿರುವುದಾಗಿ ತಿಳಿದುಬಂದಿದೆ. ಅಂಗಡಿಗಳಿಂದ ನಗ-ನಗದು ಕಳವುಗೈದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಕಳ್ಳನ ಚಲನವನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಯುವವಾಹಿನಿ ಸುಳ್ಯ ಘಟಕದ ಪದಗ್ರಹಣ – ಅಧ್ಯಕ್ಷರಾಗಿ ಹರೀಶ್ ಯು.ಕೆ. ಬೆಳ್ಳಾರೆ, ಕಾರ್ಯದರ್ಶಿಯಾಗಿ ನವೀನ್ ರಾಮ ಕುಮೇರಿ, ಕೋಶಾಧಿಕಾರಿಯಾಗಿ ಅಶೋಕ ಸುವರ್ಣ

ಯುವವಾಹಿನಿ(ರಿ) ಸುಳ್ಯ ಘಟಕದ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಐವರ್ನಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜ. 12 ರಂದು ಯುವವಾಹಿನಿ (ರಿ) ಸುಳ್ಯ ಘಟಕದ ಅಧ್ಯಕ್ಷ ರಾದ ಸುನೀಲ್ ಪಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು,2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಯು. ಕೆ ಬೆಳ್ಳಾರೆ ಕಾರ್ಯದರ್ಶಿ ಯಾಗಿ ನವೀನ್ ರಾಮ...
Loading posts...

All posts loaded

No more posts

error: Content is protected !!