ಸುಳ್ಯ : ವೆಂಕಟರಮಣ ಸೊಸೈಟಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಮಹಾತ್ಮಾಗಾಂಧಿ ಮಲ್ನಾಡು ವಿದ್ಯಾಸಂಸ್ಥೆಗೆ ನೀಡಿದ ಕೊಠಡಿಗಳ ಉದ್ಘಾಟನೆ

ಶಿಕ್ಷಣಕ್ಕೆ ಮಹತ್ವ ನೀಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಶಾಲೆಗಳಿಗೆ ಸರಕಾರವೇ ಅನುದಾನ ನೀಡಲು ದುಸ್ತರವಾಗಿರುವ ಸಂದರ್ಭ ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿ ನೀಡಿದ ಕೊಡುಗೆ ಅಭಿನಂದನಾರ್ಹವಾದುದು. ಸುಳ್ಯಕ್ಕೆ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಕಳಶ ಪ್ರಾಯದಂತಿದೆ" ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಅವರು ಸುಳ್ಯದ ಮಹತ್ಮಾಗಾಂಧಿ ಮಲ್ನಾಡು ವಿದ್ಯಾಸಂಸ್ಥೆಗೆ ಸುಳ್ಯದ...

ಗಣಪಯ್ಯ ನಾಯ್ಕ ಬದಿಯಡ್ಕ ನಿಧನ

ಗುತ್ತಿಗಾರು ಗ್ರಾಮದ ವಳಲಂಬೆ ಬದಿಯಡ್ಕ ಗಣಪಯ್ಯ ನಾಯ್ಕ ಸ್ವಗೃಹದಲ್ಲಿ ಜ.20 ರಂದು ಹೃದಯಾಘಾತದಿಂದ ನಿಧನರಾದರು. ಉತ್ತಮ ಕೃಷಿಕರಾಗಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸೀತಮ್ಮ, ಮಕ್ಕಳಾದ ಲೋಕೇಶ್ವರಿ, ಭುವನೇಶ್ವರ, ಪುರುಷೋತ್ತಮ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Ad Widget

ಗುತ್ತಿಗಾರಿನಲ್ಲಿ ಮತ್ತೆ ಕಳ್ಳತನ

ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿ ಆಮ್ಲೆಟ್ ವ್ಯಾಪಾರ ನಡೆಸುತ್ತಿರುವ ಕೇಶವ ಕಡೋಡಿ ಅವರ ಅಂಗಡಿಗೆ ಶನಿವಾರ ರಾತ್ರಿ ಕಳ್ಳರು ಬೀಗ ಒಡೆದು ನುಗ್ಗಿ ಜಾಲಾಡಿದ್ದಾರೆ.‌ ಆದಿತ್ಯವಾರ ಸಂಜೆ ಅಂಗಡಿಗೆ ಬಂದಾಗ ವಿಷಯ ಗೊತ್ತಾಗಿದೆ. ಗೂಡಂಗಡಿಯ ಬಾಗಿಲು, ಬೀಗ ಒಡೆದು ಹಾನಿಯಾಗಿದ್ದು ಕಳ್ಳರು ಸ್ಥಳೀಯರೇ ಇರಬೇಕೆಂಬ ಅನುಮಾನ ಮೂಡುವಂತಾಗಿದೆ..

ಅರಂತೋಡಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಮಹಮ್ಮದ್ ಕುಕ್ಕುವಳ್ಳಿಯವರಿಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಸಮಾಜ ಸೇವಕರು, ಉದ್ಯಮಿಗಳು ಹಾಗೂ ಸೂರು ಇಲ್ಲದವರಿಗೆ ಸೂರು ನಿರ್ಮಾಣದ ರೂವಾರಿ ಮಹಮ್ಮದ್ ಕುಕ್ಕುವಳ್ಳಿ ಅವರು ಇಂದು ಅರಂತೋಡಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಅರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನ ವಿಖಾಯತಂಡದ ಸದಸ್ಯ ತಾಜುದ್ಧೀನ್ ಅರಂತೋಡು ಶಾಲು ಹೊದಿಸಿ,...

ನಿಧನ : ಶಿವಾನಂದ ಗೌಡ ಮುಂಡೋಡಿ

ದೇವಚಳ್ಳ ಗ್ರಾಮದ ಮುಂಡೋಡಿ ಪದ್ಮಯ್ಯ ಗೌಡ ರವರ ಹಿರಿಯ ಮಗನಾದ ಮುಂಡೋಡಿ ಶಿವಾನಂದ ಗೌಡ ರವರು ಜ.19 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ 76 ವರ್ಷ ವಯಸ್ಸಾಗಿತ್ತು. 1984 ರಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ಮೈಸೂರು, ಕಾರ್ಕಳ ಹಾಗೂ ಮಂಗಳೂರು ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದು, ಇವರು ಕೆ.ಇ.ಬಿ ಯಲ್ಲಿ ಕಾನೂನು...

ಸುಳ್ಯ ಹಾಗೂ ಬೆಟ್ಟoಪಾಡಿ ನಡುವಿನ ರಸ್ತೆಯಲ್ಲಿ ಶ್ರಮದಾನದಮೂಲಕ ಹೊಂಡ ಮುಚ್ಚಿದ ಸ್ಥಳೀಯರು

ಸುಳ್ಯ ಹಾಗೂ ಬೆಟ್ಟoಪಾಡಿ ನಡುವಿನ ರಸ್ತೆಯು ಹೊಂಡ ಕೊಂಡ ಗಳಿಂದ ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ಸ್ಥಳೀಯ ಆಟೋ ಚಾಲಕರಾದ ಶೇರಾಜ್ ಕಲ್ಲುಗುಂಡಿ ಬೆಟ್ಟoಪಾಡಿ ಹಾಗೂ ಪಿಗ್ಮಿ ಕಲೆಕ್ಟರ್ ಮೂರ್ತಿ ಯವರು ಹೊಂಡಗಳನ್ನು ಮುಚ್ಚಿ ಸಂಚಾರಕ್ಕೆ ಸಹಕಾರ ನೀಡಿದರು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರ ಭೇಟಿ

ಸುಬ್ರಹ್ಮಣ್ಯ ಜ.20: ಕರ್ನಾಟಕ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪತ್ನಿ ಹಾಗೂ ಮಗಳೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಸೋಮವಾರ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿದ ನಂತರ ಪುರೋಹಿತ ರಮೇಶ್ ಅಸ್ರಣ್ಣರವರು ದೇವರ ಪ್ರಸಾದ ನೀಡಿ ಶಾಲು ಹಾಕಿ ಗೌರವಿಸಿದರು. ಕ್ಷೇತ್ರದ ದೈವ...

ಯೇನೆಕಲ್ಲು : ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಸುಬ್ರಹ್ಮಣ್ಯ ಜ.19: “ನಮಗೆ ನಮ್ಮ ಜೀವನದಲ್ಲಿ ಎರಡು ಕಣ್ಣುಗಳು ಎಷ್ಟು ಮುಖ್ಯವೋ ಅಷ್ಟೇ ಅದನ್ನ ಕಾಪಾಡಿಕೊಂಡು ಬರುವುದು ಕೂಡ ಮುಖ್ಯ. ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆ ಸಮಾಜದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನವಿಟ್ಟು ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಾ ಬಂದಿರುವುದು ಶ್ಲಾಘನೀಯ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು”...

ದ.ಕ.ಸಹಕಾರಿ ನೌಕರರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಕೆ.ಟಿ.ವಿಶ್ವನಾಥರಿಗೆ ಗೌರವ

ದ.ಕ.ಸಹಕಾರಿ ನೌಕರರ ಸಹಕಾರ ಸಂಘದ ನಿರ್ದೇಶಕರಾಗಿ ಪುನರಾಯ್ಕೆಯಾದ ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರವರಿಗೆ ಸೊಸೈಟಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ್, ಉಪಾಧ್ಯಕ್ಷರಾದ ಮೋಹನ ರಾಮ್ ಸುಳ್ಳಿ ಸನ್ಮಾನಿಸಿದರು. ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

Loading posts...

All posts loaded

No more posts

error: Content is protected !!