ಚಂದನ ಸಾಹಿತ್ಯ ವೇದಿಕೆ ವತಿಯಿಂದ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರಿಗೆ ಸನ್ಮಾನ ಕಾರ್ಯಕ್ರಮ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ನಾಡಿನ ಖ್ಯಾತ ಹಿರಿಯ ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ ಸುಳ್ಯ ಅವರಿಗೆ 85 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಅವರಿಗೆ ಅವರ ಚೊಕ್ಕಾಡಿ ಗೃಹದಲ್ಲಿ ಜನ್ಮದಿನದ ಶುಭಾಶಯಗಳನ್ನು ಕೋರಿ ಪ್ರೀತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಈ ಸನ್ಮಾನ ಕಾರ್ಯಕ್ರಮವನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರು, ಸಾಹಿತಿ, ಗಾಯಕ ಮತ್ತು...

ಸುಂದರ ಸುಳ್ಯಕ್ಕೆ “ಸ್ವರ್ಣಂ” ಸ್ಪರ್ಶ

ಜು.07 ರಂದು “ಸ್ವರ್ಣಂ ಜ್ಯುವೆಲ್ಸ್” ಶುಭಾರಂಭ

ಸುಳ್ಯದ ಚಿನ್ನಾಭರಣದ ಉದ್ಯಮದಲ್ಲಿ ಹೊಸತನ ಸೃಷ್ಟಿಸಲು  ಸ್ವರ್ಣಂ ಜ್ಯುವೆಲ್ಸ್ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದ್ದು, ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಂ ನಲ್ಲಿ  ಜು.07 ರಂದು ಉದ್ಘಾಟನೆಗೊಳ್ಳಲಿದೆ.ಪ್ರವೀಣ್.ಬಿ ಗೌಡ, ಭವಿತ್.ಯು ಹಾಗೂ ಲೋಕೇಶ್.ಎಂ.ಎಸ್, ಸಂಜೀವ.ಕೆ ಅವರು ಸ್ವರ್ಣಂ ಜ್ಯುವೆಲ್ಸ್‌ ನ ಆಡಳಿತ ಪಾಲುದಾರರಾಗಿದ್ದಾರೆ. ಗ್ರಾಹಕರ ಸೇವೆಯಲ್ಲಿ ಚಿನ್ನೋದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ.ದೀಪೋಜ್ವಲನ ಕಾರ್ಯಕ್ರಮದಲ್ಲಿ...
Ad Widget

ನಿಧನ : ಮಾಧವ ಗೌಡ ಏನಡ್ಕ

ಎಡಮಂಗಲ ಗ್ರಾಮದ ಏನಡ್ಕ ಮಾಧವ ಗೌಡ ರವರು ಜು.03 ರಂದು ನಿಧನರಾದರು.ಅವರಿಗೆ 60 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಸುನಂದಾ, ಸಹೋದರರಾದ ಈಶ್ವರ ಗೌಡ ಏನಡ್ಕ, ಲೋಕಪಾಲ ಗೌಡ ಏನಡ್ಕ, ಆನಂದ ಗೌಡ ಏನಡ್ಕ, ಪದ್ಮನಾಭ ಗೌಡ ಏನಡ್ಕ, ಶಿವರಾಮ ಗೌಡ ಏನಡ್ಕ, ಸಹೋದರಿ ಮೋಹಿನಿ ದಾಸಪ್ಪ ಪಾಲೋಳಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಂದಡ್ಕ : ಮರ ಬಿದ್ದು ರಸ್ತೆ ಬಂದ್

ಕಂದಡ್ಕ ಮರಸಂಕ ಸೇತುವೆಯ ಬಳಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಮುಖ್ಯ ರಸ್ತೆ ಬಂದ್ ಆಗಿದೆ. ವಿದ್ಯುತ್ ತಂತಿ ಹಾಗೂ ಕಂಬಕ್ಕೆ ಹಾನಿಯಾಗಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಪೈಚಾರು – ಬಸ್, ಬೈಕ್ ಅಪಘಾತ – ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯ ಆಸ್ಪತ್ರೆಯಲ್ಲಿ ಮೃತ್ಯು

ಪೈಚಾರಿನಲ್ಲಿ ಜೂನ್ 09 ರಂದು ನಡೆದ ಬಸ್ ಮತ್ತು ಬೈಕ್ ಮುಖಾಮುಖಿ ಅಪಘಾತದಲ್ಲಿ ಬೈಕ್ ಸವಾರ ಕಲ್ಲುಗುಂಡಿಯ ವೈದ್ಯ ಡಾ. ಶ್ಯಾಮ್ ಭಟ್ ಅವರ ಪುತ್ರ ದುಗ್ಗಲಡ್ಕದ ನಮ್ಮ ಕ್ಲಿನಿಕ್ ನಲ್ಲಿ ವೈದ್ಯರಾಗಿರುವ ಡಾ. ಶಮಂತ್ ಕಾಲಿಗೆ ಗಂಭೀರ ಗಾಯಗಳಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟರೆಂದು...

ಸುಳ್ಯ : ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ತರಬೇತಿ ಕಾರ್ಯಾಗಾರ – ಸನ್ಮಾನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು, ಜನಜಾಗೃತಿ ಪ್ರಾದೇಶಿಕ ವಿಭಾಗ ಹಾಗೂ ತಾಲೂಕಿನ "ಶೌರ್ಯ" ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವು ಸುಳ್ಯದ ಲಯನ್ಸ್‌ ಸೇವಾ ಸದನದಲ್ಲಿ ಜು.3 ರಂದು ನಡೆಯಿತು.ಕಾರ್ಯಾಗಾರದ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ್ ಅಮೆಚೂರ್ ರವರು ವಹಿಸಿದ್ದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ...

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದಲ್ಲಿ ಲಲಿತಕಲಾ ತರಗತಿಗಳ ಉದ್ಘಾಟನೆ

ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ ಲಲಿತಕಲಾ ತರಗತಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.ಉದ್ಘಾಟನೆಯನ್ನು ಶ್ರೀ ರಾಮಚಂದ್ರ.ಡಿ ಸುಬ್ರಹ್ಮಣ್ಯ ಟಮ್ಕಿ ನುಡಿಸುವುದರ ಮೂಲಕ ಉದ್ಘಾಟಿಸಿದರು.ಲಲಿತ ಕಲೆಗಳಾದ ಭರತನಾಟ್ಯ, ಯಕ್ಷಗಾನ, ಚಿತ್ರಕಲೆ, ಚೆಸ್ ಮುಂತಾದ ತರಗತಿಗಳು ಪ್ರತಿ ಬುಧವಾರ ಸಂಸ್ಥೆಯಲ್ಲಿ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಕುಮಾರಿ ಶ್ರಾವ್ಯ ಹತ್ತನೇ ತರಗತಿ ವಹಿಸಿದ್ದರು.ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ...

ಜಗತ್ ಪೌoಡೇಷನ್ ವತಿಯಿಂದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ರೈನ್ ಕೋಟ್ ಹಾಗೂ ಕೊಡೆ ವಿತರಣೆ

ಜಗತ್ ಪೌoಡೇಷನ್ (ರಿ )ಸುಳ್ಯ ವತಿಯಿಂದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಬ್ರಾಂಡೆಡ್ ಕಂಪೆನಿಯ ರೈನ್ ಕೋಟ್ ಹಾಗೂ ಕೊಡೆ ವಿತರಿಸಲಾಯಿತು.  ಸುಳ್ಯ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದಲ್ಲಿ ಕರ್ನಾಟಕ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರು, ದ. ಕ ಜಿಲ್ಲಾ ಕೃಷಿಕ ಸಮಾಜ ಮಂಗಳೂರು ಇದರ ಉಪಾಧ್ಯಕ್ಷರು ಹಾಗೂ ದ....

ಪೆರಾಜೆ : ಬೈಕ್ ಸ್ಕಿಡ್ – ಸವಾರನಿಗೆ ಗಂಭೀರ ಗಾಯ

ಪೆರಾಜೆ ಕಲ್ಚರ್ಪೆ ಸಮೀಪ ಬೈಕೊಂದು ಸ್ಕಿಡ್ ಆಗಿ ಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಾರ ಐವರ್ನಾಡು ಗ್ರಾಮದ ನಿಡುಬೆ ನಿವಾಸಿ ಗೋಪಿನಾಥ್ ಎಂದು ತಿಳಿದುಬಂದಿದೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ದಿನಾಚರಣೆ ; ಸನ್ಮಾನ ಕಾರ್ಯಕ್ರಮ

“ಮುದ್ರಣ ಮಾಧ್ಯಮಗಳ ಮೇಲೆ ಜನರಿಗೆ ಹೆಚ್ಚು ವಿಶ್ವಾಸವಿದೆ” : ವಾಲ್ಟರ್ ನಂದಳಿಕೆ

ಮಂಗಳೂರು ಜು.02 : “ಮುದ್ರಣ ಮಾಧ್ಯಮಗಳ ಮೇಲೆ ಜನರಿಗೆ ಹೆಚ್ಚು ವಿಶ್ವಾಸ ಇನ್ನೂ ಉಳಿದಿದೆ ಎನ್ನುವ ಅಭಿಪ್ರಾಯ ಇದೆ” ಎಂದು ವಾಲ್ಟರ್ ನಂದಳಿಕೆ ತಿಳಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ  ಮಂಗಳೂರು ಪತ್ರಿಕಾ ಭವನದಲ್ಲಿ  ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ “ಮಾಧ್ಯಮದ ಸವಾಲುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಇವರು “ಇತ್ತೀಚೆಗೆ...
Loading posts...

All posts loaded

No more posts

error: Content is protected !!