Ad Widget

ಉಬರಡ್ಕ : ಮಾವಿನ ಮಿಡಿ ಕೊಯ್ಯುವಾಗ ಮರದಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಉಬರಡ್ಕದಲ್ಲಿ ಮಾವಿನ ಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದ ಪರಿಣಾಮ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಜನಾರ್ದನ ಪೂಜಾರಿಯವರು ಮಾ.22ರಂದು ಕೆಲಸಕ್ಕೆ ಹೋಗಿದ್ದರು. ಅಲ್ಲಿ ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಕೆಳಕ್ಕೆ ಬಿದ್ದರು. ಪರಿಣಾಮ ಅವರ ಸೊಂಟಕ್ಕೆ ಹಾಗೂ ತಲೆಗೆ...

ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸಲು ಚಿಂತನೆ – ಅರ್ಜಿ ಸಲ್ಲಿಸಲು ಏ.05 ಕೊನೆಯ ದಿನಾಂಕ

ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸುವುದಾಗಿ ಚಿಂತನೆ ನಡೆಸಲಾಗಿದೆ. ಸಾಮೂಹಿಕ ವಿವಾಹವಾಗಲು ಬಯಸುವವರು ಏಪ್ರಿಲ್ ತಿಂಗಳ 5ನೇ ತಾರೀಖಿನೊಳಗೆ ಹೆಸರನ್ನು ನೋಂದಾಯಿಸಬೇಕಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ತೀರ್ಥಕುಮಾರ್ ಕುಂಚಡ್ಕ ತಿಳಿಸಿದ್ದಾರೆ. ವಿವಾಹದ ದಿನಾಂಕವನ್ನುನಿಗದಿಪಡಿಸಿ ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗೆ 72598944079483288240, 9449471373 ಇವರನ್ನು ಸಂಪರ್ಕಿಸಬಹುದು.
Ad Widget

ಅರಂತೋಡಿನಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ – ಗ್ರಾ. ಪಂ. ಮನವಿಗೆ ಶೀಘ್ರ ಸ್ಪಂದಿಸಿದ ಸುಳ್ಯದ ಪಶು ವೈದ್ಯಾಧಿಕಾರಿ ನಿತಿನ್ ಪ್ರಭು

ಆರಂತೋಡಿನ ಮನೆಯೊಂದರ ಕೆಲಸಕ್ಕೆ ಬಂದು ನಾಯಿ ಕಡಿತದಿಂದ ನಾಲ್ಕೈದು ದಿನಗಳ ಹಿಂದೆ ಸಂಪಾಜೆಯ ಗೂನಡ್ಕದಲ್ಲಿ ಮಹಿಳೆಯೊಬ್ಬರು ಮೃತರಾದ ಹಿನ್ನಲೆಯಲ್ಲಿ ಆರಂತೋಡು ಗ್ರಾಮ ಪಂಚಾಯತ್ ಆಡಳಿತ ತಕ್ಷಣ ಕಾರ್ಯಪ್ರವೃತ್ತವಾಗಿ ಸುಳ್ಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ನಿತಿನ್ ಪ್ರಭು ಅವರ ಸಹಕಾರದಿಂದ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ಮಾಡಲಾಯಿತು. ಆರಂತೋಡು ಮತ್ತು ತೊಡಕಾನ...

ಸಂವಿಧಾನ ಬದಲಾವಣೆ ಕುರಿತು ಡಿಕೆಶಿ  ಹೇಳಿಕೆಗೆ ಸುಳ್ಯ ಬಿಜೆಪಿ ಖಂಡನೆ – ಕ್ಷಮೆಯಾಚನೆಗೆ ಒತ್ತಾಯ

ಸಂವಿಧಾನ ಬದಲಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಯನ್ನು ಖಂಡಿಸಿ ಸುಳ್ಯ ಬಿಜೆಪಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಡಿಕೆಶಿ ತಮ್ಮ ಹೇಳಿಕೆ ಹಿಂಪಡೆದು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.‌ಸಭೆಯಲ್ಲಿ ಮುಖಂಡರಾದ ಪಿ.ಕೆ.ಉಮೇಶ್, ಯುವ...

ಪೈಚಾರ್: ವಿದ್ಯುತ್ ತಂತಿ ಮೇಲೆ ಬಿದ್ದ ತೆಂಗಿನ ಮರ – ತಪ್ಪಿದ ಸಂಭಾವ್ಯ ಅಪಾಯ

ಸುಳ್ಯದಲ್ಲಿ ಇಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಪೈಚಾರ್ ಜಂಕ್ಷನ್ ನಲ್ಲಿ ರಸ್ತೆ ಯ ಬದಿಯಲ್ಲಿದ್ದ ತೆಂಗಿನ ಮರವೊಂದು 11ಕೆ.ವಿ. ವಿದ್ಯುತ್ ಲೈನ್  ಮೇಲೆ ಬಿದ್ದು ರಸ್ತೆಯ ಕಡೆ ವಾಲಿ ನಿಂತಿದೆ. ಮರ ಬಿದ್ದ ಸಂದರ್ಭ ವಿದ್ಯುತ್ ತಂತಿ ತುಂಡು ಆಗದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ. ತೆಂಗಿನ ಮರ ಇನ್ನಷ್ಟೇ ತೆರವುಗೊಳ್ಳಬೇಕಿದೆ.

ಮಿಥುನ್ ಕುಮಾರ್ ಸೋನಾ ರವರಿಗೆ “ಚಂದನ ಪ್ರತಿಭಾ ರತ್ನ ಪ್ರಶಸ್ತಿ”

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ರವರ ನೇತೃತ್ವದಲ್ಲಿ “ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹಾ ಸಂಭ್ರಮ-2025” ಕಾರ್ಯಕ್ರಮವು ಮಾ.23 ರಂದು ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಕಿರುತೆರೆ ಹಾಗೂ ಹಿರಿತೆರೆ ರಂಗದ ಸಾಧನೆಯನ್ನು ಗುರುತಿಸಿ 2025ನೇ ಸಾಲಿನ “ಚಂದನ ಪ್ರತಿಭಾ ರತ್ನ ಪ್ರಶಸ್ತಿ” ಯನ್ನು ಯುವ...

ಸುಳ್ಯ : ಭಾರಿ ಗಾಳಿ ಮಳೆ – ಆಲಿಕಲ್ಲು ಸಹಿತ ಮಳೆ – ಕೈಕೊಟ್ಟ ಕರೆಂಟ್

ಸುಳ್ಯ ತಾಲೂಕಿನ ವಿವಿಧೆಡೆ ಭಾರಿ ಗಾಳಿ ಬೀಸಿದ್ದು ಆಲಿಕಲ್ಲು ಸಹಿತ ಮಳೆ ಸುರಿದಿದ್ದು ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಹಲವು ಕಡೆಗಳಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದ್ದು ವಿದ್ಯುತ್ ಕೈಕೊಟ್ಟಿದೆ. ಸುಳ್ಯ ಕೃಷಿ ಇಲಾಖೆಯ ಧ್ವಜಸ್ತಂಭ ಕುಸಿದು ವಿದ್ಯುತ್ ಲೈನ್ ಮೇಲೆ ಬಿದ್ದಿದೆ.  33 ಕೆ.ವಿ.ವಿದ್ಯುತ್ ಲೈನ್ ಗೆ ದೊಡ್ಡೇರಿ ಬಳಿ...

ಬಾಜಿನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ  ದೈವಸ್ಥಾನದ ನೂತನ ಸಮಿತಿ ರಚನೆ  – ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ, ಕಾರ್ಯದರ್ಶಿಯಾಗಿ ಸುಂದರ ಬಾಜಿನಡ್ಕ, ಕೋಶಾಧಿಕಾರಿಯಾಗಿ ಕುಸುಮಾಧರ ಬಾಜಿನಡ್ಕ

ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ನೂತನ ಸಮಿತಿ ರಚನೆಯನ್ನು ಮಾ.23 ರಂದು ಮಾಡಲಾಯಿತು. ನೂತನ  ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ, ಉಪಾಧ್ಯಕ್ಷರಾಗಿ ವಾಸುದೇವ ಅಡ್ಕಬಳೆ, ಕಾರ್ಯದರ್ಶಿಯಾಗಿ ಸುಂದರ ಬಾಜಿನಡ್ಕ, ಜತೆ ಕಾರ್ಯದರ್ಶಿಯಾಗಿ ಶಂಕರ ಬಾಜಿನಡ್ಕ, ಕೋಶಾಧಿಕಾರಿಯಾಗಿ ಕುಸುಮಾಧರ ಬಾಜಿನಡ್ಕ, ಆಯ್ಕೆಯಾದರು. ದೈವಸ್ಥಾನ ಆಡಳಿತ ಮೊಕ್ತೇಸರರಾಗಿ ಚೌಕಾರು ಕಟ್ಟಕೋಡಿ ಇವರನ್ನು ಆಯ್ಕೆ...

ಅಡ್ಕಾರು ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥನೆ

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಳೆಯ ಅನುಗ್ರಹಕ್ಕಾಗಿ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮೊಕ್ತೇಸರ ಗುರುರಾಜ್ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಕೊಲ್ಲಮೊಗ್ರು : ಮಾ.27 ರಂದು ನೂತನ ಸೇತುವೆಗೆ ಗುದ್ದಲಿಪೂಜೆ

ಕೊಲ್ಲಮೊಗ್ರು ಗ್ರಾಮದ ಅರಳಿಕಟ್ಟೆಯ ಸಮೀಪದ ಮುಖ್ಯರಸ್ತೆಯಲ್ಲಿ ಕೊಲ್ಲಮೊಗ್ರು ಕಲ್ಮಕಾರು-ಸಂಪರ್ಕ ಸೇತುವೆಗೆ ಗುದ್ದಲಿಪೂಜೆಯು ಮಾ.27ನೇ ಗುರುವಾರದಂದು ನಡೆಯಲಿದ್ದು, ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಇವರು ಗುದ್ದಲಿ ಪೂಜೆ ನೆರವೇರಲಿದ್ದಾರೆ.ಅಲ್ಲದೆ ಅದೇ ದಿನ ಗಡಿಕಲ್ಲು ಸಮೀಪದ ಪನ್ನೆ ಎಂಬಲ್ಲಿ ರಸ್ತೆ ಸಮೀಪದ ನದಿಗೆ ತಡೆಗೋಡೆ ರಚನೆಗೂ ಗುದ್ದಲಿ ಪೂಜೆ ಸೇರಿದಂತೆ ಕೊಲ್ಲಮೊಗ್ರು ಗ್ರಾಮದಲ್ಲಿ ನಡೆಯುವ ವಿವಿಧ ಕಾಮಗಾರಿ...
Loading posts...

All posts loaded

No more posts

error: Content is protected !!