Ad Widget

ಎನ್. ಎಂ. ಎಂ. ಎಸ್. ಪರೀಕ್ಷೆಯಲ್ಲಿ ದೀಪಕ್ ಎಸ್. ತಾಲೂಕಿಗೆ ಪ್ರಥಮ

2024-25 ನೇ ಸಾಲಿನ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ದೀಪಕ್ ಎಸ್.180 ರಲ್ಲಿ 107 ಅಂಕ ಪಡೆದು ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಪದವಿಪೂರ್ವ ಕಾಲೇಜು ಗುತ್ತಿಗಾರು( ಪ್ರೌಢಶಾಲಾ ವಿಭಾಗ) ಇಲ್ಲಿಯ 8 ನೇ ತರಗತಿಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿಯಾಗಿದ್ದು, ದೇವಚಳ್ಳ ಗ್ರಾಮದ ಮಾವಿನಕಟ್ಟೆ ನಿವಾಸಿ ರಾಜೇಂದ್ರ ಎಂ. ಮತ್ತು ಆಶಾ ಎಸ್. ಇವರ ಸುಪುತ್ರ.

ಸುಳ್ಯ : ಸ. ಮಾ. ಹಿ. ಪ್ರಾ. ಶಾಲೆ ಸುಳ್ಯ- ರೈಟು ಟು ಲೀವ್ ಕೋಟೆ ಫೌಂಡೇಶನ್ ಬೆಂಗಳೂರು ಇವರಿಂದ ಸ್ಮಾರ್ಟ್ ಟಿವಿ ಮತ್ತು ಮಕ್ಕಳಿಗೆ ಬ್ಯಾಗ್ ಕೊಡುಗೆ

ದಿನಾಂಕ 27/03/2025ರಂದು ಕೋಟೆ ಫೌಂಡೇಶನ್ ವತಿಯಿಂದ ಮಾದರಿ ಶಾಲೆ, ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ಹಾಗೂ ಎರಡು ಸ್ಮಾರ್ಟ್ ಟಿವಿ ಯನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕೋಟೆ ಫೌಂಡೇಶನ್ ನಿರ್ದೇಶಕರಾದ ಶ್ರೀ ರಮೇಶ್, ಹಾಗೂ ಸದಸ್ಯರಾದ ಜಯಂತ ವೆಂಕಟರಾಜ್, ಸುಳ್ಯದ ಸಂಯೋಜಕರಾದ ಶ್ರೀಯುತ ಪ್ರದೀಪ್ ಉಬರಡ್ಕ, ನಗರ ಪಂಚಾಯತ್...
Ad Widget

ಸುಳ್ಯ ನ.ಪಂ. ಸದಸ್ಯ ಶರೀಫ್ ಕಂಠಿಯವರ ಮೇಲೆ ಸುಳ್ಳು ಆರೋಪ,  ಎ.ಐ.ಕೆ.ಎಂ.ಸಿ.ಸಿ. ಖಂಡನೆ

ಸುಳ್ಯ ನಗರ ಪಂಚಾಯತ್ ಸದಸ್ಯ ಸಮಾಜ ಸೇವಕ ಷರೀಫ್ ಕಂಠಿ ಯವರ ಮೇಲೆ ಯಾವುದೋ ದುರುದ್ದೇಶದಿಂದ ಮಹಿಳೆಯೊಬ್ಬರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಷಯ. ಸುಳ್ಯ ನಗರದ ಸಾರ್ವಜನಿಕರಿಗೆ ಕಂಠಿ ಯವರ ಬಗ್ಗೆ ಅವರ ಸೇವೆಯ ಬಗ್ಗೆ ಗೊತ್ತಿದ್ದು ಮಹಿಳೆಯೊಬ್ಬರು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿರುವುದನ್ನು ಸುಳ್ಯ ತಾಲೂಕು AIKMCC ತೀವ್ರವಾಗಿ ಖಂಡಿಸುತ್ತದೆ, ಸಮಾಜದಲ್ಲಿ...

ಗುತ್ತಿಗಾರು : ಕೆನರಾ ಬ್ಯಾಂಕ್ ಎಟಿಎಂ ಅವ್ಯವಸ್ಥೆ – ಬೇಕಿದೆ ಪರ್ಯಾಯ ವ್ಯವಸ್ಥೆ

ಬೆಳೆಯುತ್ತಿರುವ ಗುತ್ತಿಗಾರಿನಲ್ಲಿ ಇರುವುದು ಒಂದೇ ರಾಷ್ಟ್ರೀಕೃತ ಬ್ಯಾಂಕ್ ,ಒಂದೇ ಎಟಿಎಂ. ಉತ್ತಮ ಸೇವೆ ನೀಡುವಲ್ಲಿ ನಿರಂತರ ವಿಫಲ. ಹೆಚ್ಚಿನ ದಿನಗಳಲ್ಲಿ ಎಟಿಎಂ ನೋ ಸರ್ವೀಸ್ ನಲ್ಲಿರುತ್ತದೆ. ನಾಲ್ಕು ಗ್ರಾಮಗಳ ಜನರಿಗೆ ಇರುವುದು ಇದೊಂದೇ ಬ್ಯಾಂಕ್. ಈ ಮೊದಲು ಸಿಂಡಿಕೇಟ್ ಬ್ಯಾಂಕ್ ಆಗಿದ್ದಾಗಲೂ ಉತ್ತಮ ಸೇವೆ ನೀಡದ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿ ಬದಲಾದರೂ ಗುಣಮಟ್ಟದಲ್ಲಿ ಬದಲಾಗಿಲ್ಲ....

ಕುಮಾರಧಾರ ನದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಕುಕ್ಕೆ ಶ್ರೀ ದೇವಳದ ಅಧಿಕಾರಿಗಳು ಹಾಗೂ ನೌಕರರು

ಸುಬ್ರಹ್ಮಣ್ಯ ಮಾ.26: ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಹಾಗೂ ಪರಿಸರದ ಪ್ರದೇಶಗಳಲ್ಲಿ ವಿಪರೀತ ತ್ಯಾಜ್ಯ ವಸ್ತುಗಳನ್ನ ಭಕ್ತಾದಿಗಳು ಎಸೆದು ಇಡೀ ನೀರು ಹಾಗೂ ಪರಿಸರ ಮಲಿನಗೊಂಡಿರುತ್ತದೆ. ಶ್ರೀ ದೇವಳದ ವತಿಯಿಂದ ಅಲ್ಲಿಯ ನೌಕರರು ನೀರಿನಿಂದ ಎಷ್ಟೇ ತ್ಯಾಜ್ಯಗಳಾದ ಬಟ್ಟೆ ಬರೆಗಳನ್ನ ತೆಗೆದರೂ ಮತ್ತೆ ಮತ್ತೆ ಭಕ್ತಾದಿಗಳು ನೀರಲ್ಲೇ ಬಟ್ಟೆಗಳನ್ನ ಬಿಡುವ ಚಾಳಿಯನ್ನು ಮುಂದುವರಿಸುತ್ತಿರುವುದು ಕೇದಕರ....

ಎನ್‌.ಎಂ .ಎಂ .ಎಸ್ ಪರೀಕ್ಷೆಯಲ್ಲಿ ಲಾವಣ್ಯ ಡಿ.ಎನ್.‌ ತಾಲೂಕಿಗೆ ತೃತೀಯ

2024 - 25 ನೇ ಸಾಲಿನ ಎನ್‌.ಎಂ .ಎಂ .ಎಸ್ ಪರೀಕ್ಷೆಯಲ್ಲಿ ಲಾವಣ್ಯ ಡಿ.ಎನ್.‌ 180 ರಲ್ಲಿ 104 ಅಂಕ ಪಡೆದು ಸುಳ್ಯ ತಾಲೂಕಿಗೆ ತೃತೀಯ ಸ್ಥಾನಿಯಾಗಿದ್ದಾರೆ. ಎಲಿಮಲೆ ಸ.ಪ್ರೌ.ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈ ಕೆ ಗುತ್ತಿಗಾರು ಗ್ರಾಮದ ದೇರುಮಜಲು ಪೈಕ ನೂತನ್ ಹಾಗೂ ರೂಪ ದಂಪತಿಗಳ ಪುತ್ರಿ.

ಕುಲ್ಕುಂದ ಬಸವೇಶ್ವರ ದೇವಳಕ್ಕೆ ವಾಟರ್ ಫಿಲ್ಟರ್ ಹಾಗೂ ಕಾಣಿಕೆ ಹುಂಡಿ ಕೊಡುಗೆ

ಸುಬ್ರಹ್ಮಣ್ಯ ಮಾ 27: 800 ವರ್ಷಗಳ ಇತಿಹಾಸವನ್ನು ಹೊಂದಿರುವ ಪುರಾಣ ಪ್ರಸಿದ್ಧ ದೇವಸ್ಥಾನ, ಬಸವನ ಹಣೆಯ ಮೇಲೆ ಈಶ್ವರ ಲಿಂಗ ಇರುವಂತಹ ಏಕೈಕ ದೇವಸ್ಥಾನ, ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಪ್ರಾದೇಶಿಕ ಹಾಗೂ ವಲಯ ಕಛೇರಿ ವತಿಯಿಂದ ದೂರದೂರುಗಳಲ್ಲಿ ಇರುವ ಭಕ್ತಾದಿಗಳಿಗೆ ಕಾಣಿಕೆಯನ್ನ ಸಲ್ಲಿಸಲು ಅನುಕೂಲವಾಗುವಂತೆ ಸ್ಕ್ಯಾನರ್...

ಕುಕ್ಕೆ : ಕೆ.ಎಸ್.ಎಸ್. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಅಧ್ಯಯನ ಭೇಟಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಒಂದು ದಿನದ ಅಧ್ಯಯನ ಭೇಟಿಯನ್ನು ಪ್ರಥಮ ವರ್ಷದ ವಾಣಿಜ್ಯ ಪದವಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು. ಮುರುಳ್ಯದ ಕ್ಷೀರ ಎಂಟರ್ಪ್ರೈಸಸ್ ಇಲ್ಲಿಗೆ ಭೇಟಿ ನೀಡಿ ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ರಾಘವ ಗೌಡ ಅವರ ಸಂಶೋಧನೆ...

ಮಹಿಳೆಗೆ ಹಲ್ಲೆ –  ಆರೋಪಿ ಬಂಧನಕ್ಕೆ ವಿ.ಹಿ.ಪಂ. ಒತ್ತಾಯ, ಪ್ರತಿಭಟನೆಯ ಎಚ್ಚರಿಕೆ

ಸುಳ್ಯದ ನಾವೂರು ಎಂಬಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಚಂದ್ರಿಕಾ ಎಂಬ ಮಹಿಳೆಗೆ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಎಂಬವರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸುತೇವೆ. FIR ದಾಖಲಿಸಿ 24 ಗಂಟೆ ಕಳೆದರೂ ಇನ್ನೂ ಬಂಧಿಸದ ಪೊಲೀಸ್ ಇಲಾಖೆ ಆದಷ್ಟು ಬೇಗ ಆರೋಪಿಯನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ...

6ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ” – ಮಾ.28 ರಂದು ಸಂಜೆ 4.30 ಕ್ಕೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರಕ್ಕೆ ಕಾಲಿರಿಸಿದೆ. ಮಾ.28ರಂದು ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.
Loading posts...

All posts loaded

No more posts

error: Content is protected !!