Ad Widget

ಪಹಲ್ಗಾಮ್ ಘಟನೆ ಕಲ್ಲುಗುಂಡಿ ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ಕೃತ್ಯಕ್ಕೆ ಖಂಡನೆ

ಭಾರತದ ಹಚ್ಚ ಹಸಿರಿನ ತಾಣ ಕಾಶ್ಮೀರದ ಪಹಲ್ಗಾಮ್ ಬಳಿ ಉಗ್ರಗಾಮಿಗಳಿಂದ ಹುತಾತ್ಮರಾದ ಪ್ರವಾಸಿಗರಿಗೆ ಸಂತಾಪ ಸೂಚಿಸಿ ಮಾತಾನಾಡಿದ ಕಲ್ಲುಗುಂಡಿ ಜುಮಾ ಮಸೀದಿಯ ಧರ್ಮ ಗುರುಗಳಾದ ಬಹು ನಾಸಿರ್ ದಾರಿಮಿ ಇಸ್ಲಾಂ ಧರ್ಮ ಯಾವತ್ತೂ ಉಗ್ರ ವಾದವನ್ನು ಬೆಂಬಲಿಸುವುದಿಲ್ಲ, ಹಾಗು ಉಗ್ರಗಾಮಿಗಳನ್ನು ಬೆಂಬಲಿಸುವುದಿಲ್ಲ . ಹುತಾತ್ಮರಾದ ಎಲ್ಲರ ಕುಟುಂಬ ವರ್ಗಕ್ಕೆ ಸಹನೆ ತಾಳ್ಮೆ ಇರಲಿ ನಾವೆಲ್ಲರೂ ಭಾರತೀಯರು...

ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ

ಕುಕ್ಕೆಸುಬ್ರಹ್ಮಣ್ಯದ ಹಿಂದೂ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ ಎ.25 ರಂದು ಕುಕ್ಕೆಸುಬ್ರಹ್ಮಣ್ಯದ ರಥಬೀದಿಯಲ್ಲಿ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ನಿವೃತ್ತ ಅಧಿಕಾರಿ ಅಶೋಕ್ ಮೂಲೆಮಜಲು, ಉಪನ್ಯಾಸಕ ಪದ್ಮ ಕುಮಾರ್ ಗುಂಡಡ್ಕ ಘಟನೆ...
Ad Widget

ಸುಳ್ಯದ ಓಡಬಾಯಿನಲ್ಲಿ ಶುಭಾರಂಭಗೊಂಡ ಟೊಯೋಟಾ ಶೋರೂಂ – ಉದ್ಘಾಟನೆ ನೆರವೇರಿಸಿದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್

ಸುಳ್ಯದ ಒಡಬಾಯಿಯಲ್ಲಿ ಯುನೈಟೆಡ್ ಟೊಯೋಟಾದ ನೂತನ ಗ್ರಾಮೀಣ ಶೋರೂಂ ಎ.25 ರಂದು ಶುಭಾರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಎಂ.ಸುಂದರ್ ರಾವ್, ಯುನೈಟೆಡಡ್ ಟೊಯೋಟಾ ಮಾಲಕರಾದ ರಾಮ್ ಗೋಪಾಲ್ ರಾವ್ , ಗ್ರಾಹಕರಾದ ಶಾಫಿ ಬೊಳುಬೈಲು, ನಿವೃತ್ತ ರೇಂಜರ್ ರಾಧಾಕೃಷ್ಣ ಕುರುಂಜಿಗುಡ್ಡೆ, ಹಾಜಿ ಇಬ್ರಾಹಿಂ...

ಬಿಜೆಪಿ ಪಕ್ಷದ ಬಗ್ಗೆ ಸುಳ್ಯದ ಯೂಟ್ಯೂಬರ್ ನಿಂದ ಕೆಟ್ಟ ಪದ ಬಳಕೆ – ಕ್ಷಮೆ ಯಾಚಿಸಲು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಒತ್ತಾಯ

ಕಾಶ್ಮೀರದ ಪಹಲ್ಗಮ್ ಲ್ಲಿ ನಡೆದ ಉಗ್ರರ ಹೇಯ ಕೃತ್ಯವನ್ನು ಖಂಡಿಸುವ ವಿಚಾರದಲ್ಲಿ ಯೂ ಟ್ಯೂಬ್ ಚಾನೆಲ್ ನಿರೂಪಕರೊಬ್ಬರು ಬಿಜೆಪಿ ಪಕ್ಷದ ಬಗ್ಗೆ ಅಸಹ್ಯಕಾರ, ಕೆಟ್ಟ ಪದ ಬಳಸಿರುವುದನ್ನು ಬಿಜೆಪಿ ಮಂಡಲ ಸಮಿತಿ ಖಂಡಿಸುತ್ತದೆ. ವಿಜೆ ವಿಖ್ಯಾತ್ ಬಗ್ಗೆ ನಮಗೆ ಗೌರವವಿತ್ತು.ಹಳ್ಳಿ, ಬಡತನದಿಂದ ಬಂದ ಹುಡುಗ ಏನೋ ಒಂದಷ್ಟು ಒಳ್ಳೆಯ ಕಾರ್ಯ ಮಾಡುತ್ತಿದ್ದೇನೆಂಬ ಭಾವನೆಯಿತ್ತು. ಆದರೆ ಕಾಶ್ಮೀರದಲ್ಲಿ...

ಕಾಶ್ಮೀರದಲ್ಲಿನ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಆಲೆಟ್ಟಿ ಕಾಂಗ್ರೆಸ್ ನಿಂದ ಮೊಂಬತ್ತಿ ಉರಿಸುವ ಮೂಲಕ ಪ್ರತಿಭಟನೆ

ಆಲೆಟ್ಟಿ ಗ್ರಾಮ ಕಾಂಗ್ರೆಸ್ ವತಿಯಿಂದ ನಾಗಪಟ್ಟಣ ಸೇತುವೆ ಬಳಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ, ದಾಳಿಯಿಂದ ಅನ್ಯಾಯವಾಗಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಮೊಂಬತ್ತಿ ಉರಿಸುವ ಮೂಲಕ ಮಾಡಲಾಯಿತು.  . ಈ ದಾಳಿಯಲ್ಲಿ ಅನ್ಯಾಯವಾಗಿ ಮಡಿದವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕರಾದ ಬಾಪೂ...

ಎ.25 ರಂದು ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಸುಳ್ಯದ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ **ಮನಸ್ಸು - ಮನುಷ್ಯನ ವ್ಯಕ್ತಿತ್ವದ ತಳಹದಿ” ವಿಷಯದ ಕುರಿತ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ದಿನಾಂಕ 25-04-2025 ರ ಶುಕ್ರವಾರದಂದು ರಾತ್ರಿ 8.30ಕ್ಕೆ ಬಿತ್ತರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಈ ಹಿಂದೆ ಮಂಗಳೂರು ಹಾಗೂ ಮಡಿಕೇರಿ...

ಕೆ ಎಸ್ ಎಸ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ನಿಂದ ದತ್ತಿ ನಿಧಿ ಸ್ಥಾಪನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ವತಿಯಿಂದ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮವನ್ನು ದಿನಾಂಕ 21/04/2025ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ .ಟಿ ವಹಿಸಿದರು. ಕಾರ್ಯಕ್ರಮದಲ್ಲಿ, ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಘಟಕವನ್ನು ಹುಟ್ಟು ಹಾಕಿದ ಕೆ...

ಅರಂತೋಡು : ಜಮ್ಮುಕಾಶ್ಮೀರದ ಪಹಲ್ಗಾಂವ್ ನಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ

ಜಮ್ಮು ಕಾಶ್ಮೀರದ ಪಹಲ್ಗಾಂವ್  ನಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎ. 23 ರಂದು  ಪೂರ್ವಾಹ್ನ 11.00 ರಿಂದ 12.00 ಗಂಟೆಯ ತನಕ ಎಲ್ಲಾ ವ್ಯಾಪಾರ ವ್ಯವಹಾರ ಗಳನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತ ಬಂದ್ ನಡೆಸಿದರು. ಹಾಗೂ ಅರಂತೋಡು ರಿಕ್ಷಾ ನಿಲ್ದಾಣ ದ ಬಳಿ ಸೇರಿ ಪ್ರತಿಭಟನೆ ನಡೆಸಲಾಯಿತು....

ಬ್ಯಾರಿ ಮೇಳ 2025ರಲ್ಲಿ ಉಬೈಸ್‌ಗೆ ಗೂನಡ್ಕ ಅವರಿಗೆ ಸಾಧನೆ ಪ್ರಶಸ್ತಿ ಪ್ರದಾನ

ಮಂಗಳೂರಿನಲ್ಲಿ ನಡೆದ ಬ್ಯಾರಿ ಮೇಳ 2025ರಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರಿಂದ ಉಬೈಸ್ ಅವರಿಗೆ ಸಾಮಾಜಿಕ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಹ್ಯಾದ್ರಿ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಮಂಜುನಾಥ್ ಭಂಡಾರಿ, ನಿವೃತ್ತ ಡಿಸಿಪಿ ಜಿ.ಎ. ಬಾವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಮತ್ತು ನಸೀಮಾ ಫೌಂಡೇಶನ್ ಸ್ಥಾಪಕ ಯು.ಟಿ. ಝುಲ್ಫಿಕಾರ್...

ಕಲ್ಲುಗುಂಡಿ : ಬರೆಗೆ ಗುದ್ದಿದ ಟ್ಯಾಂಕರ್ – ಚಾಲಕನ ಕಾಲಿಗೆ ಗಾಯ

ಕಲ್ಲುಗುಂಡಿ ಪೊಲೀಸ್ ಔಟ್ ಪೋಸ್ಟ್ ಬಳಿ ಏ 23 ರಂದು ತಡರಾತ್ರಿ ಸುಮಾರು ಮೂರು ಗಂಟೆಗೆ ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಗುದ್ದಿದ್ದು ಘಟನೆಯಿಂದ ಲಾರಿ ಚಾಲಕನ ಕಾಲು ಸಿಲುಕಿಕೊಂಡಿತ್ತು. ಬಳಿಕ ಸ್ಥಳೀಯರ ಸಹಕಾರದಿಂದ ಹೊರತೆಗೆಯಲಾಯಿತು.‌ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!