- Saturday
- May 9th, 2026
ಸುಳ್ಯ ನಗರ ಪಂಚಾಯತ್ ಕಚೇರಿ ಬಳಿ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಅಪಾಯದ ಸ್ಥಿತಿಯಲ್ಲಿ ನಿಂತಿದ್ದು ಮುಂದೊಂದು ದಿನ ಜೀವಹಾನಿಗೆ ಕಾರಣವಾಗಬಹುದು. ಜನಪ್ರತಿನಿಧಿಗಳು ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ದೂರಿ ಕೊಳ್ಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿದ್ದು ಈ ರಸ್ತೆಯಲ್ಲಿ ವಿದ್ಯಾರ್ಥಿಗಳ...
ನಿಲ್ಲಿಸಿದ್ದ ಬೈಕ್‌ನಲ್ಲಿ ವಯರಿಂಗ್ ಶಾರ್ಟ್ ಸರ್ಕ್ಯೂಟ್‌ಗೊಂಡು ಬೈಕ್ ಸಂಪೂರ್ಣ ಹೊತ್ತಿ ಉರಿದ ಘಟನೆ ಸೆ.16 ಮಧ್ಯಾಹ್ನ ಬಾಳಿಲದಿಂದ ವರದಿಯಾಗಿದೆ . ಬಾಳಿಲ ಭಾರತ ಕಾಂಪ್ಲೆಕ್ಸ್ ಸಮೀಪ ಸೆಡ್‌ನಲ್ಲಿ ರಾಕೇಶ್ ಎಂಬವರು ತಮ್ಮ ಬಜಾಜ್ ಪಲ್ಸರ್ ಬೈಕ್‌ನ್ನು ನಿಲ್ಲಿಸಿದ್ದರು . ಬೈಕ್ ಹೊತ್ತಿ ಉರಿಯುತ್ತಿರುವುದನ್ನು ಕಂಡು ಸ್ಥಳಿಯರು ನೀರು ಹಾಯಿಸಿ ನಂದಿಸಲು ಸಹಕರಿಸಿದರು . ಈ ವೇಳೆ...
ಸುಳ್ಯ ನಗರ ಪಂಚಾಯತ್ ಅನುದಾನದಲ್ಲಿ ಸುಮಾರು ಐದು ಲಕ್ಷ ರೂಪಾಯಿಗಳ ವೆಚ್ಚದ ಚರಂಡಿ ಕಾಮಗಾರಿಯ ಕಾರ್ಯ ನಡೆಯುತ್ತಿದೆ. ಗಾಂಧಿನಗರ ಸಂತೋಷ್ ಚಿತ್ರಮಂದಿರದ ಬಳಿಯಿಂದ ಮುಖ್ಯರಸ್ತೆಯ ವರೆಗೆ ಈ ಕಾಮಗಾರಿಯ ಪ್ರಗತಿಯಲ್ಲಿ ನಡೆಯುತ್ತಿದೆ. ಸ್ಥಳೀಯ ವಾರ್ಡ್ ಸದಸ್ಯ ಕೆ ಎಸ್ ಉಮ್ಮರ್ ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ನಡೆಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಸುಳ್ಯ ಇದರ ಆಶ್ರಯದಲ್ಲಿ ಗುತ್ತಿಗಾರು ರಿಕ್ಷಾ ಚಾಲಕ, ಮಾಲಕರು ಪ್ರಾರಂಭಿಸಿದ ಫ್ರೆಂಡ್ಸ್ ಹೆಸರಿನ ಸಂಘವನ್ನು ಗುತ್ತಿಗಾರು ಒಕ್ಕೂಟದ ಅಧ್ಯಕ್ಷ ಅಚ್ಯುತ ಗುತ್ತಿಗಾರು ರವರು ದೀಪ ಬೆಳಗಿಸಿ ಉದ್ಘಾಟಿಸಿದರು.ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಸುಧಿರ್ ರವರು ಸಂಘದ ನಿಯಮಾವಳಿಗಳನ್ನು ಹಾಗೂ ಸಂಘದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.ಫ್ರೆಂಡ್ಸ್ ಸಂಘದ...
ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರನ್ನು ಬಂಧಿಸಿ ಅವರ ಮೇಲೆ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ಆಶ್ರಯದಲ್ಲಿ ಸಹಿ ಸಂಗ್ರಹ ಅಭಿಯಾನ ಇಂದು ಸುಳ್ಯದಲ್ಲಿ ನಡೆಯಿತು.ಎಲ್.ಡಿ. ಬ್ಯಾಂಕ್ ಎದುರುಗಡೆ ಮುಖ್ಯ ರಸ್ತೆಯ ಬದಿಯಲ್ಲಿ ಬೋರ್ಡ್ ಅಳವಡಿಸಿ ಅದಕ್ಕೆ ಸಾರ್ವಜನಿಕ ರಿಂದ ಸಹಿ ಸಂಗ್ರಹ ನಡೆಯಿತು. ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ...
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಸುಬ್ರಹ್ಮಣ್ಯ ಕುಮಾರ ಸ್ವಾಮಿ ಆಂಗ್ಲ ಮಾದ್ಯಮ ಪ್ರೌಡ ಶಾಲೆಯ ವಿದ್ಯಾರ್ಥಿ ಎ.ಎಲ್ ಅನುಷ್ ಇವರನ್ನು ದಿನಾಂಕ 12.09.2020 ರಂದು ಅರಂತೋಡಿನಲ್ಲಿ ನಡೆದ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರಧಾನ ಮತ್ತು...
ಬದಲಾದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸ್ವಾವಲಂಬಿ, ಸ್ವಾಭಿಮಾನಿ, ಸ್ವ ಸಾಮರ್ಥ್ಯದಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇದೇ ಸೆ.20ರಿಂದ 26 ರವರೆಗೆ ಒಂದು ವಾರಗಳ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುತ್ತಿಗಾರು ಪ್ರಾ.ಕೃ.ಪ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹೇಳಿದರು.ಅವರು ಗುತ್ತಿಗಾರು ಪ್ರಾ.ಕೃ.ಸಂಘದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನುರಿತ ತರಬೇತುದಾರರಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ, ವಿದ್ಯುತ್...
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಗ್ರಾಮ ಸಮಿತಿ ನೇತೃತ್ವದಲ್ಲಿ ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಯೇನೆಕಲ್ಲು ಗ್ರಾಮಸ್ಥರಿಂದ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಭವಾನಿಶಂಕರ ಪೂಂಬಾಡಿ, ಶಿವಪ್ರಸಾದ್ ನಡುತೋಟ, ಮನುದೇವ್ ಪರಮಲೆ, ಕುಮಾರ್ ಪೈಲಾಜೆ, ಮೋಹನ ಕೋಟಿಗೌಡನ...
ನರೇಂದ್ರಮೋದಿ ಜನ್ಮದಿನಾಚರಣೆಯ ಅಂಗವಾಗಿ ಪೆರಾಜೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪೆರಾಜೆ ಶಾಲೆಯಲ್ಲಿ ಪುಸ್ತಕ ವಿತರಣೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ನಾಗೇಶ್ ಕುಂದಲ್ಪಾಡಿ, ದೊಡ್ಡಣ್ಣ ಬರೆಮೇಲು, ಪ್ರಸನ್ನ ನೆಕ್ಕಿಲ, ಪ್ರವೀಣ್ ಮಜಿಕೋಡಿ, ಉದಯ ಕುಂಬಳಚೇರಿ, ನಂಜಪ್ಪ ನಿಡ್ಯಮಲೆ, ಧನಂಜಯ ಕೋಡಿ, ಮಹೇಶ್ ಮೂಲೆಮಜಲು, ಸುಭಾಷ್ ಬಂಗಾರಕೋಡಿ, ಸೀತಾರಾಮ್ ಕದಿಕಡ್ಕ,ಚಿನ್ನಪ್ಪ...
ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಇದರ ಆಶ್ರಯದಲ್ಲಿ ಮೋದಿ ಜನ್ಮದಿನಾಚರಣೆ ಹಾಗೂ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಶಿಬಿರ ಸೆ. 17 ರಂದುಕಂದ್ರಪ್ಪಾಡಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಮಹಾಬಲೇಶ್ವರ ಮುಂಡೋಡಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ವಹಿಸಿದ್ದರು. ದೊಡ್ಡಣ್ಣ ಕಾಜಿಮಡ್ಕ ಮುಖ್ಯ ಅತಿಥಿಯಾಗಿದ್ದರು. ಯುವಕ...
Loading posts...
All posts loaded
No more posts
