- Saturday
- May 2nd, 2026
“ಕನ್ನಡ ರಾಜ್ಯೋತ್ಸವವನ್ನು ಜಾತಿ, ಮತ, ಪಕ್ಷ ಭೇದ ಮರೆತು ಆಚರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸುಳ್ಯದ ಶಾಸಕರಾದ ಕು.ಭಾಗೀರಥಿ ಮುರುಳ್ಯರವರು ಇಂದು ಸಮಯಕ್ಕೆ ಸರಿಯಾಗಿ ಬಾರದೆ, ಮಕ್ಕಳನ್ನು ಅಧಿಕಾರಿಗಳನ್ನು ಕಾಯಿಸುವುದರ ಮೂಲಕ ಜವಾಬ್ದಾರಿ ಇಲ್ಲದವರಂತೆ ವರ್ತಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನೇರವೇರಿಸದೇ ತಡವಾಗಿ ಕಾರ್ಯಕ್ರಮಕ್ಕೆ ಬರುವುದರ ಮೂಲಕ ಮಕ್ಕಳನ್ನು ಬಿಸಿಲಲ್ಲಿ ಕಾಯಿಸಿದ್ದಾರೆ. ಇದು ಖಂಡನೀಯ. ಇದೇ...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇದರ ವತಿಯಿಂದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ 2025 ಕಾರ್ಯಕ್ರಮದ ಅಂಗವಾಗಿ ಮೂರನೇ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 01.11.25 ಶನಿವಾರ ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವನ್ನು ಶುಚಿಗೊಳಿಸಿ ಹಾಗೂ ಸೊಸೈಟಿ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಯುವತಿ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು...
ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಸಂಚಾಲಕರಾದ ಶ್ರೀ ಪಿ ಜಿ ಎಸ್ ಎನ್ ಪ್ರಸಾದ್ ರವರು ರಾಜ್ಯೋತ್ಸವದ ಧ್ವಜವನ್ನು ಆರೋಹಣ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯಕುಮಾರ್ ರೈ ಎಸ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಹರಿಪ್ರಸಾದ್ ರೈ ಜಿ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಂದ ನಾಡಗೀತೆ,...
ಸುಬ್ರಹ್ಮಣ್ಯ : “ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯದ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ನೆಟ್‌ಬಾಲ್ ಸ್ಪರ್ಧೆ 2025-26 ನ.03ರಿಂದ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ” ಎಂದು ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ ನಾಯಕ್ ತಿಳಿಸಿದರು. ಅವರು ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. “ನ.03ರಂದು...
ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರದಲ್ಲಿ ವಿಜ್ಞಾನ ಸಂಘ ಮತ್ತು ಇಕೋ ಕ್ಲಬ್ ವತಿಯಿಂದ "ಧೂಮಪಾನ ಮುಕ್ತ ಯುವ ಪೀಳಿಗೆ ಅಭಿಯಾನ" ಅ.31ರಂದು ನಡೆಯಿತು. ತಂಬಾಕಿನ ಉತ್ಪನ್ನಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬೇಕು. ತಂಬಾಕಿನ ಬೇರೆ ಬೇರೆ ರೂಪಗಳು ಅದರ ಸೇವನೆಯಿಂದ ಬರುವ ಕಾಯಿಲೆಗಳು ಮತ್ತು ಪರಿಣಾಮಗಳು ಹಾಗೂ ಆರ್ಥಿಕವಾಗಿ ಹಾನಿ ಉಂಟು ಮಾಡುವ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಇವರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆಯಲ್ಲಿ ರಂಗ ಮಂದಿರದ ಕೆಲಸಕ್ಕೆ ಯೋಜನೆಯಿಂದ ಮಂಜೂರಾದ ರೂಪಾಯಿ 30,000 ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಮಾಧವ ಗೌಡ ರವರು ಹಸ್ತಾಂತರಿಸಿದರುಈ ಸಂದರ್ಭದಲ್ಲಿ ಮಾವಿನಕಟ್ಟೆ ಒಕ್ಕೂಟದ ಅಧ್ಯಕ್ಷರಾದ ಬಾನು ಪ್ರಕಾಶ್ ತಳೂರು, ವಲಯ ಮೇಲ್ವಿಚಾರಕರಾದ...
ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಮತ್ತು ಸ್ನೇಹಿತರ ಕಲಾ ಸಂಘ ಆಶ್ರಯದಲ್ಲಿ 75 ದಿನಗಳ ಸ್ವಚ್ಛತಾ ಅಭಿಯಾನ ಪಂಚ ಸಪ್ತತಿ 2025 ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಆ.31 ರಂದು ಬೆಳ್ಳಾರೆ ಸುಳ್ಯ ಮುಖ್ಯ ರಸ್ತೆ ಯಲ್ಲಿ ನಡೆಸಲಾಯಿತು.
ಸುಳ್ಯ ತಾಲೂಕಿನಾದ್ಯಂತ ನ.03 ರಿಂದ ಡಿ.2. ರವರೆಗೆ ಸುಮಾರು 30 ದಿನಗಳ ಕಾಲ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮ ನಡೆಯಲಿರುವುದರಿಂದ ತಾಲೂಕಿನ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಪಶು ಆಸ್ಪತ್ರೆ ಸುಳ್ಯದಲ್ಲಿ ನಾಯಿ, ಬೆಕ್ಕು ಮತ್ತು ಇತರ ಸಾಕು ಪ್ರಾಣಿಗಳ ದೈನಂದಿನ ಚಿಕಿತ್ಸಾ ಸೇವೆಯನ್ನು ಮಧ್ಯಾಹ್ನ 02.00 ರಿಂದ...
ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಜಯಲತಾ ಕೆ.ಆರ್ ವಹಿಸಿದರು.ವೇದಿಕೆಯಲ್ಲಿ ಶಿಕ್ಷಕರಾದ ಶಿವಪ್ರಕಾಶ ಕೆ, ಮೀನಕುಮಾರಿ ಕೆ, ಸವಿತಾ ಕುಮಾರಿ, ದೈ.ಶಿ.ಶಿಕ್ಷಕ ಶಿವಪ್ರಸಾದ್ ಕೆ ಉಪಸ್ಥಿತರಿದ್ದರು. ಪ್ರ. ಶಿಕ್ಷಣಾರ್ಥಿಗಳಾದ ನಿಶ್ಮಿತಾ.ಕೆ ನಿರೂಪಿಸಿ, ಆಶಾಶ್ರೀ ಟಿ.ಪಿ ಸ್ವಾಗತಿಸಿದರು. ಯಜ್ಞ.ಎಂ ಸಾಂಸ್ಕೃತಿ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ.ಡಿ ವಂದಿಸಿದರು. ಸಿಬ್ಬಂದಿ ಬೇಬಿ.ಕೆ ಕಾರ್ಯಕ್ರಮಕ್ಕೆ...
ಸುಬ್ರಹ್ಮಣ್ಯ ನ. 1: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆವರಣದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ ಧ್ವಜಾರೋಹಣ ಮಾಡಿ "ನಮ್ಮ ಸಮೃದ್ಧ ಕರ್ನಾಟಕದಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿಟ್ಟುಕೊಂಡು ಅಭಿವೃದ್ಧಿಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ. ಕನ್ನಡದ ಕಂಪು ಎಲ್ಲೆಡೆ ಹರಡಲಿ, ಕನ್ನಡಿಗನೆಂಬ ಛಾಪು ಎಲ್ಲೆಡೆ ಮೂಡಲಿ, ಕನ್ನಡತನ ಎಲ್ಲರಲ್ಲೂ ಪಸರಿಸಲಿ" ಎಂದು...
Loading posts...
All posts loaded
No more posts
