ಗಾಂಧಿನಗರ : ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ

ಗಾಂಧಿನಗರದ ಶುಭಶ್ರೀ ಮಹಿಳಾ ಮಂಡಲ ಹಾಗೂ ಇನ್ನರ್ ವೀಲ್ ಕ್ಲಬ್, ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು. ಶ್ರೀಮತಿ ಲೀಲಾದಾಮೋದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಶಿಕ್ಷಕರಿಗೆ ಕೊಡಮಾಡುವ "ಉತ್ತಮ ಶಿಕ್ಷಕ ಪ್ರಶಸ್ತಿ" ಸನ್ಮಾನ ನೆರವೇರಿಸಿದರು. ಶಿಕ್ಷಕ ವೃತ್ತಿ ಸಮಾಜದಲ್ಲಿ ಒಂದು ಗೌರವಯುತ ಸ್ಥಾನವನ್ನು...

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಉದ್ದಂತಡ್ಕ – ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾ ಸಭಾ ಕಾರ್ಯಕ್ರಮವು ಸೆ.18 ರಂದು ದ್ವಾರಕಾ ಸಭಾ ಭವನದಲ್ಲಿ ನಡೆಯಿತು.ಸಂಘದ ಮಹಾ ಸಭೆಯ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮಹಾಲಿಂಗನ್ ಬಾಜಿರ್ತೊಟ್ಟಿ, ಶಂಕರ ಪಾಟಾಳಿ ಪರಿವಾರಕಾನ ಅವರು ಮುಖ್ಯ ಅತಿಥಿಗಳಾಗಿದ್ದರು. ವಾರ್ಷಿಕ ಲೆಕ್ಕ ಪತ್ರವನ್ನು ಸಂಘದ ಖಜಾಂಜಿ...
Ad Widget

ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ : ಡಾ|| ಚೂಂತಾರು

ಗಾಂಧಿ ಜಯಂತಿಯ ಅಂಗವಾಗಿ ಇಂದು ಬೆಳ್ಳಾರೆ ಗೃಹ ರಕ್ಷಕ ದಳದ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗಾಂಧೀಜಿಯವರ ತ್ಯಾಗ, ಸೇವೆ ಮತ್ತು ಬಲಿದಾನವನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ "ಗಾಂಧೀಜಿಯವರು ಹಾಕಿ ಕೊಟ್ಟ ತ್ಯಾಗ, ಅಹಿಂಸೆ ಮತ್ತು ತತ್ವದ ಹಾದಿಯಲ್ಲಿ ನಡೆದು,...

ಚೆಂಬು ಗ್ರಾಮದಲ್ಲಿ ಯಶಸ್ವಿ ಉಚಿತ ವೈದ್ಯಕೀಯ ಶಿಬಿರ.

ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆ, ಮಡಿಕೇರಿ ಮತ್ತು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಸಂಪಾಜೆ ಕೊಡಗು ,ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ (ರಿ) ಚೆಂಬು ,ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣೆ ಚಿಕಿತ್ಸೆ ಮತ್ತು ಸಲಹಾ ಶಿಬಿರ ಸೆ.30ರಂದು ಬಾಲಂಬಿಯ ಪಯಸ್ವಿನಿ ಸೊಸೈಟಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘದ ಅದ್ಯಕ್ಷರಾದ ಶ್ರೀ....

ಕಲ್ಲಪ್ಪಳ್ಳಿ: ಆಯುಧ ಪೂಜೆ

ಕಲ್ಲಪ್ಪಳ್ಳಿ ಶ್ರೀ ಷಣ್ಮುಕ ಜನರಲ್ ಸ್ಟೋರ್, ಶಾಮಿಯಾನ ಮತ್ತು ಲೈಟಿಂಗ್ಸ್ ಪಾಡಿಕೊಚ್ಚಿ ಮಾನಸ ನಿಲಯ ಕುಟುಂಬಸ್ತರ ಸಹಕಾರದೊಂದಿಗೆ ಅ.1 ರಂದು ಮೂರನೆ ವರ್ಷದ ಆಯುಧ ಪೂಜೆ ಪುರೋಹಿತ ವೆಂಕಟರಾಜ್ ಇವರ ನೇತೃತ್ವದಲ್ಲಿ ನಡೆಯಿತು.

ಸುಳ್ಯ: ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಮಹಾಸಭೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ವಾರ್ಷಿಕ ಮಹಾಸಭೆಯು ಸೆ.28ರಂದು ಸಂಘದ ಕಟ್ಟಡದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರುಗಳಾದ ಪ್ರಭಾಕರ ನಾಯರ್, ಆದಂ ಹಾಜಿ ಕಮ್ಮಾಡಿ, ರಾಮಚಂದ್ರ ಪಿ, ಸಿ.ಎ. ಗಣೇಶ್ ಭಟ್ ವೇದಿಕೆಯಲ್ಲಿದ್ದರು.ಪ್ರಧಾನ ಕಾರ್ಯದರ್ಶಿ ಡಿ.ಎಸ್. ಗಿರೀಶ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುರೇಶ್ಚಂದ್ರ ಕಮಿಲ ಲೆಕ್ಕಪತ್ರ...

ಮೈಸೂರು ”ಯುವದಸರಾ” ಕಾರ್ಯಕ್ರಮದಲ್ಲಿ ಸುಳ್ಯದ ರಂಗ ಮಯೂರಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ

ಮೈಸೂರು ದಸರಾ ಹಬ್ಬದ ಅಂಗವಾಗಿ ಮೈಸೂರಿನ ಮಹಾರಾಜಾ ಕಾಲೇಜಿನ ವೇದಿಕೆ ಯಲ್ಲಿ ನಡೆಯುವ ಪ್ರತಿಷ್ಠಿತ”ಯುವದಸರಾ” ಕಾರ್ಯಕ್ರಮದಲ್ಲಿ ಸುಳ್ಯದ ರಂಗ ಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಯಕ್ಷನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ಸಿಗ್ನೇಚರ್ ಡ್ಯಾನ್ಸ್ ಕಂಪನಿ ಮೈಸೂರು ತಂಡದ ಸಹಯೋಗದಲ್ಲಿ ವಿನೋದ್ ಕರ್ಕೇರ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ರಾಹುಲ್ ಎಸ್ ರಾವ್ ,ಪೃಥ್ವಿ ನಾಯಕ್ ತಂಡದ...

ಸುಳ್ಯ: ಮಹಿಳೆಯ ಮೊಬೈಲ್ ಫೋನ್ ಎಗರಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸುಳ್ಯದ ಲ್ಯಾಂಪ್ ಸೊಸೈಟಿ ಪಡಿತರ ಕೇಂದ್ರದ ಮಹಿಳಾ ಸಿಬ್ಬಂದಿಯ ಮೊಬೈಲ್ ಫೋನನ್ನು ಅಕ್ಕಿ ಪಡೆಯಲೆಂದು ಬಂದ ಮಹಿಳೆಯೋರ್ವರು ಕಳ್ಳತನ ಮಾಡಿದ ಸಿ ಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ಈ ಘಟನೆಯು ಸೆ. 24ರಂದು ಸಂಜೆ ಘಟನೆ ನಡೆದಿದ್ದು ಸೊಸೈಟಿಯಲ್ಲಿ ಬಿಲ್ ಕೌಂಟರಿನ ಮೇಲೆ ಇರಿಸಿದ್ದ ಸಿಬ್ಬಂದಿಯ ಮೊಬೈಲ್ ಫೋನನ್ನು ಮಹಿಳೆ ತಾನು ಸೊಸೈಟಿಯಿಂದ...

ನಿಧನ :- ಚಂದ್ರ ಗೌಡ ಕುಕ್ಕುಂದ್ರಡ್ಕ

ಹರಿಹರ ಪಲ್ಲತ್ತಡ್ಕ ಗ್ರಾಮದ ಕುಕ್ಕುಂದ್ರಡ್ಕ ನಿವಾಸಿ ಚಂದ್ರ ಗೌಡ ಅವರು ಅನಾರೋಗ್ಯದಿಂದ ಸೆ.30 ರಂದು ಸಂಜೆ 7:15 ರ ಸುಮಾರಿಗೆ ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಸಂತಿ, ಮಕ್ಕಳಾದ ಲಿಂಗಪ್ಪ, ಯೋಗೀಶ್, ಹರೀಶ್, ವೇದಾವತಿ, ವಿಶಾಲಾಕ್ಷಿ, ಪದ್ಮಾವತಿ, ಯಶೋಧ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಇವರು...

ಕೊಡಿಯಾಲ : ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ಹಾಗೂ ಸಿಐಎಫ್ ಸಾಲ ವಿತರಣೆ

ಶ್ರೀ ಗೌರಿ ಸಂಜೀವಿನಿ ಕೊಡಿಯಾಲ ಇದರ ಮಾಸಿಕ ಸಭೆ ಹಾಗೂ ಸಾಲ ವಿತರಣಾ ಕಾರ್ಯಕ್ರಮ ಸೆ.29 ರಂದು ನಡೆಯಿತು.ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳ ಉದ್ಘಾಟಿಸಿದರು.ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತರವರು ಯೋಜನೆಯ ಸದುಪಯೋಗ ಪಡೆಯುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ, ಸದಸ್ಯೆ ಯಶವಂತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ...
Loading posts...

All posts loaded

No more posts

error: Content is protected !!