- Sunday
- August 9th, 2026
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಕನಕ ಜಯಂತಿ ನ.11ರಂದು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರು ಹಾಗೂ ಪೌರರಕ್ಷಣಾ ಪಡೆ ದ.ಕ ಜಿಲ್ಲೆ ಇದರ ಮುಖ್ಯ ಪಾಲಕರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಕನಕ ದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುದರ ಮೂಲಕ ಕನಕ ಜಯಂತಿ ಆಚರಣೆಗೆ ಚಾಲನೆ ನೀಡಿದರು....
ಬೊಳುಬೈಲು, ನ.5: ಪೀಸ್ ಸ್ಕೂಲ್, ಬೊಳುಬೈಲು, ಸುಳ್ಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ 'ಲಸಿಕಾ ಶಿಬಿರ' ಕಾರ್ಯಕ್ರಮವು ಪೀಸ್ ಸ್ಕೂಲ್ ವಠಾರದಲ್ಲಿ ಜರುಗಿತು. ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ, ಇದರ ಆರೋಗ್ಯಾಧಿಕಾರಿಯಾದ ಡಾ.ಗಿರೀಶ್ ಮುಂದಿನ ತಿಂಗಳಿನಲ್ಲಿ ಒಂದರಿಂದ ಹದಿನೈದು ವಯಸ್ಸಿನ ಮಕ್ಕಳಿಗೆ ನೀಡಲಾಗುವ ಜೆಇ(ಜಪಾನೀಸ್ ಎನ್ಸಫಾಲಿಟಿಸ್) ಲಸಿಕೆಯು ಪಡೆಯುವ ಮಹತ್ವದ...
ಪೆರ್ನಾಜೆ: ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಮ್ಮುಂಜೆ ಅನುದಾನಿತ ಹಿಪ್ರಾ ಶಾಲೆ ವಠಾರದಲ್ಲಿ ನ13 ರಂದು ನಡೆಯುವ ವಿವಿಧ ಕವಿಗೋಷ್ಠಿ ವಿಚಾರಗೋಷ್ಠಿ ಸಭಾ ಕಾರ್ಯಕ್ರಮದಲ್ಲಿ ನಡೆಯುವ ಸನ್ಮಾನ ಕಾರ್ಯಕ್ರಮ ದಲ್ಲಿ ಸವಿತಾ ಕೋಡಂದೂರು ಸಂಗೀತ ಬರಹ ಕ್ಷೇತ್ರದಲ್ಲಿ ಸನ್ಮಾನಕ್ಕೆ ಆಗಿದ್ದಾರೆ.ಗ್ರಾಮೀಣ ಕಲಾಪ್ರತಿಭೆ, ಕೃಷಿ ಜೊತೆ ಸಂಗೀತ ಶಾಸ್ತ್ರೀಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ...
ಆಲೆಟ್ಟಿ ಗ್ರಾಮದ ಬಡ್ಡಡ್ಕ ಗಡಿ ಪ್ರದೇಶ ಕಲ್ಲಪ್ಪಳ್ಳಿ-ಬಾಟೋಳಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಗುದ್ದಲಿ ಪೂಜೆಯನ್ನು ನ.11ರಂದು ನೆರವೇರಿಸಲಾಯಿತು. ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರರ ವಿಶೇಷ ಅನುದಾನದಲ್ಲಿ ಸುಮಾರು 110 ಮೀಟರ್ ಗಳಷ್ಟು ಕಾಮಗಾರಿ ನಡೆಯುತ್ತಿದೆ. ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು,ಸ್ಥಳೀಯ ಮುಖಂಡ ನಂದಕುಮಾರ್,ಸುಧಾಕರ ಬಾಟೋಳಿ,ಗುತ್ತಿಗೆದಾರ ಪುನೀತ್ ಕುಂಚಡ್ಕ ಹಾಗೂ ಸ್ಥಳೀಯ...
ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ ನ.26 ರಂದು ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ. ಸಚಿವರ ಸಹಕಾರದಲ್ಲಿ ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆ ಎರಡನೇ ಬಾರಿಗೆ ಸುಳ್ಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ. ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ನಡೆಯುವ ಉದ್ಯೋಗ...
ಕಡಬ ತಾಲೂಕು ಕೊಡಿಂಬಾಳದಲ್ಲಿ ರಿಕ್ಷಾ - ಪಿಕಪ್ ಮಧ್ಯೆ ನಡೆದ ಅಪಘಾತದಲ್ಲಿ ಪಂಜದ ಬಾಲಕ ಮತ ಪಟ್ಟ ಘಟನೆ ನ.10 ಸಂಜೆ ವರದಿಯಾಗಿದೆ. ಕೂತ್ಕುಂಜ ಗ್ರಾಮದ ಜಳಕದಹೊಳೆ ಸಮೀಪದ ಮೀನಡ್ಕ ಕಟ್ಟಪುಣಿ ನವೀನ್ ಮತ್ತು ಶ್ರೀಮತಿ ನಿಶ್ಮಿತಾ ದಂಪತಿಗಳ ಪುತ್ರ 4 ವರ್ಷ ಪ್ರಾಯದ ಹಾರ್ದಿಕ್ ಮೃತ ಪಟ್ಟ ಬಾಲಕ.ಕೊಡಿಂಬಾಳ ಆನಂದ ಎಂಬವರ ರಿಕ್ಷಾದಲ್ಲಿ ನಿಶ್ಮಿತಾ...
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಶ್ರಯದಲ್ಲಿ 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಸಲುವಾಗಿ ಸುಳ್ಯ ತಾಲ್ಲೂಕಿನ ಸಹಕಾರಿಗಳಿಗಾಗಿ ಪ್ರಥಮವಾಗಿ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನ.11 ರಂದು ನಡೆಯಿತು. .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಸಹಕಾರಿ ಸಂಘದ...
ಕಾರ್ಮೆಲ್ ಬಾಲಕಿಯರ ಪ್ರೌಢಶಾಲೆ ಮೊಡಂಕಾಪು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ವಿಭಾಗದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳಾದ 10ನೇ ತರಗತಿಯ ಯಶ್ವಿತ್ ಎಸ್. ಮತ್ತು 9ನೇ ತರಗತಿಯ ಮನ್ವಿತ್ ಎಂ.ಪಿ. ಇವರು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ .ಇವರಿಗೆ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ...
ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅ.08 ರಂದು ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಂಟಿ ಆಶ್ರಯದಲ್ಲಿ ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ಗೋಪೂಜೆ ನಡೆಯಿತು.ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ) ಸುಳ್ಯ ತಾಲೂಕು ಸಂಪಾಜೆ ವಲಯದ ಪೆರಾಜೆ ಅಂಜಿಕಾರು ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅನುದಾನದಲ್ಲಿ ನಿರ್ಮಾಣಗೊಂಡ ವಾತ್ಸಲ್ಯ ಮನೆ ಮತ್ತು ಸಹಾಯಧನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಡುಪಿಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ಭಾಗವಹಿಸಿ ಮನೆಯ...
Loading posts...
All posts loaded
No more posts
