ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಭಾಗ್ಯಶ್ರೀ ಕುದ್ಕುಳಿ ರಾಜ್ಯಮಟ್ಟಕ್ಕೆ ಆಯ್ಕೆ

ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪೆರಾಜೆ ಜ್ಯೋತಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಭಾಗ್ಯಶ್ರೀ ಕೆ ಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಹಪಠ್ಯ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಬಲ್ಲುದೇ ಎಂಬ ವಿಷಯದ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದರು. ಈಕೆ ಪೆರಾಜೆ ಕುದ್ಕುಳಿ ದಿನೇಶ್ ಗೌಡ ಮತ್ತು ವೇದಾವತಿರವರ ಪುತ್ರಿ. ಶಿಕ್ಷಕರಾದ ವೇಣುಗೋಪಾಲ್ ಕೊಯಿಂಗಾಜೆ...

ಅಮರ ಪಡ್ನೂರು : ವೀಲ್ ಚೇರ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ದೊಡ್ಡತೋಟ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದ ರುಕ್ಮಯ್ಯ ಗೌಡ ಕಾಯರ ಇವರಿಗೆ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾದ ವೀಲ್ ಚೇರ್ ಅನ್ನು ಡಿ.01 ರಂದು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಪಡ್ಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡತೋಟ...
Ad Widget

ಕೃಷಿ ಮೇಳದ ಚಪ್ಪರ ಮುಹೂರ್ತ – ಆಮಂತ್ರಣ ಬಿಡುಗಡೆ

ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ದ.೧೬, ೧೭ ಮತ್ತು ೧೮ರಂದು ಮೂರು ದಿನಗಳ ಕಾಲ ನಡೆಯಲಿರುವ ಪಯಸ್ವಿನಿ ಕೃಷಿ ಮೇಳದ ಚಪ್ಪರ ಮುಹೂರ್ತಕ್ಕೆ ಚಾಲನೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಡಿ.೪ರಂದು ನಡೆಯಿತು.ಕಾರ್ಯಕ್ರಮದ ಚಪ್ಪರ ಮಹೂರ್ತವನ್ನು ಶ್ರೀ ಚೆನ್ನಕೇಶವ ದೇವಸ್ಥಾನದ ಅರ್ಚಕ ಕೃಷ್ಣ ಸರ ಳಾಯ ನೆರವೇರಿಸಿದರು. ಅಧ್ಯಕ್ಷತೆಯನ್ನು ಕೃಷಿ ಮೇಳದ ವ್ಯವಸ್ಥಾಪನಾ ಸಮಿತಿ...

ಬೆಳ್ಳಾರೆ: ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ತಾಲೂಕು ಪಂಚಾಯತ್ ಸುಳ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುಳ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇವುಗಳ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾ ಕೂಟವು ಬೆಳ್ಳಾರೆಯ ಕೆ.ಪಿ.ಎಸ್ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಾರೆಯ ಕೆ.ಪಿ.ಎಸ್ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಾಥ್ ಬಾಳಿಲ...

ದೊಡ್ಡತೋಟ : ಜನಜಾಗೃತಿ ವೇದಿಕೆಯ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ದೊಡ್ಡತೋಟ ವಲಯದ ಜನಜಾಗೃತಿ ವೇದಿಕೆಯ ಸಭೆಯು ಅಮರ ಪಡ್ನೂರು ಹಾಲು ಉತ್ಪಾದಕರ ಸಭಾಭವನದಲ್ಲಿ ಡಿ.02 ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜನಜಾಗೃತಿ ವಲಯದ ಅಧ್ಯಕ್ಷರಾದ ರಾಜಾರಾಮ್ ಬೆಟ್ಟ ವಹಿಸಿ “ಕಳೆದ 3 ವರ್ಷಗಳಿಂದ ವಲಯ ಅಧ್ಯಕ್ಷನಾಗಿ ವಲಯದಲ್ಲಿ ಉತ್ತಮ ಸಹಕಾರ ನೀಡಿರುತ್ತೀರಿ ಹಾಗೂ...

ಸಂಸ್ಕೃತಿ ಬೆಳೆಸುವುದರ ಜತೆಗೆ ಆಡಳಿತ ಕ್ಷೇತ್ರದಲ್ಲೂ ನಮ್ಮ ಸಮುದಾಯ ಮುಂದೆ ಬರಲಿ : ಕಜೆಗದ್ದೆ

ಭಾಷೆ ಮೇಲೆ ಆತಂಕ ಇರಬಾರದು ಎಲ್ಲಾ ಭಾಷೆಗಳಿಗೆ ತನ್ನದೆಯಾದ ಹಿಡಿತ ಇರುತ್ತದೆ. ಬೆಂಗಳೂರಿಗೆ ಬಂದರೂ ಸಂಸ್ಕೃತಿ ಮರೆಯಾಗದಿರಲಿ ಎಂದು ಇಂತಹ ಸಂಸ್ಥೆಗಳು ಹುಟ್ಟಿಕೊಂಡಿದೆ ಎಂದು ಕರ್ನಾಟಕ ಸರ್ಕಾರದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಹೇಳಿದರು.ಅವರು ಬೆಂಗಳೂರು ಪ್ಯಾಲೆಸ್ ಅಡ್ಡ ರಸ್ತೆಯಲ್ಲಿ ಡಿ. 4 ರಂದು ನಡೆದ ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ...

ಹರಿಹರ ಪಲ್ಲತ್ತಡ್ಕ : ಉಚಿತ ಯೋಗ ಶಿಬಿರ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ವತಿಯಿಂದ ಡಿ.01 ರಿಂದ ಡಿ.15 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ಉಚಿತ ಯೋಗ ಶಿಬಿರ ನಡೆಯಲಿದ್ದು, ಇಂದು(ಡಿ.01) ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಅವರು ಯೋಗ ಶಿಬಿರವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಅಧ್ಯಕ್ಷರಾದ ಲ. ಪ್ರೋ ರಂಗಯ್ಯ ಶೆಟ್ಟಿಗಾರ್...

ಶುಭವಿವಾಹ: ಚಿ|ರಾ|ಭಾಸ್ಕರ – ಚಿ|ಸೌ|ಚೈತ್ರಾ

ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ತಿಮ್ಮಣ್ಣ ನಾಯ್ಕರ ಸುಪುತ್ರ ಚಿ|ರಾ|ಭಾಸ್ಕರ ರವರ ವಿವಾಹವು ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ಶ್ರೀ ಸೇಸಪ್ಪ ನಾಯ್ಕರ ಸುಪುತ್ರಿ ಚಿ|ಸೌ|ಚೈತ್ರಾ ರವರೊಂದಿಗೆ ಡಿ.04ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.

100ನೇ ಬಾರಿಗೆ ರಕ್ತದಾನ ಮಾಡಿ ಮಾದರಿಯಾದ ಶೈಲೇಶ್ ಅಂಬೆಕಲ್ಲು

ಸಮಾಜ ಸೇವೆಯಲ್ಲಿ ಜೊತೆಗೆ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವುದರ ಜೊತೆಗೆ ನೂರಾರು ಜೀವಗಳ ಉಳಿಸಿದ ಯುವ ಸಂಘಟನ ಚತುರ ಈ ಶೈಲೇಶ್ ಅಂಬೆಕಲ್ಲು. ಇವರು ಯುವಜನ ಸಂಯುಕ್ತ ಮಂಡಳಿ ಯ ಅಧ್ಯಕ್ಷರಾಗಿ ತಮ್ಮ ಊರಿನ ಹಾಗೂ ತಾಲೂಕಿನ ವಿವಿಧೆಡೆ ನೂರಾರು ಯುವಕ ಮಂಡಲಗಳ ಹುಟ್ಟುಹಾಕುವುದರ ಜತೆಗೆ ಅದರಿಗೆ ಬೇಕಾದ ಪ್ರೋತ್ಸಾಹ ನೀಡಿ, ಬೆಳೆವಣಿಗೆ ಶ್ರಮಿಸಿ...

ಶುಭವಿವಾಹ: ಚಿ|ಪ್ರಸಾದ – ಚಿ|ಸೌ|ಅಶ್ವಿನಿ

ಬೆಳ್ಳಾರೆ (ಕೊಳ್ತಿಗೆ) ಶ್ರೀಮತಿ ಸುಮತಿ ಮತ್ತು ಶ್ರೀ ಸತ್ಯನಾರಾಯಣ ಆಚಾರ್ಯರ ಸುಪುತ್ರ ಚಿ|ಪ್ರಸಾದ ರವರ ವಿವಾಹವು ಕಯ್ಯಾರು ಶ್ರೀಮತಿ ಆಶಾ ಮತ್ತು ಶ್ರೀ ಚಂದ್ರಶೇಖರ ಆಚಾರ್ಯರ ಸುಪುತ್ರಿ ಚಿ|ಸೌ|ಅಶ್ವಿನಿ ರವರೊಂದಿಗೆ ಡಿ.02 ಶುಕ್ರವಾರದಂದು ಪುತ್ತೂರಿನ ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!