- Sunday
- August 9th, 2026
ಸುಳ್ಯ ತಾಲೂಕಿನ ಮರ್ಕಂಜ ಸಮೀಪ ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾದ ಕೋಳಿ ಅಂಕಕ್ಕೆ ಪೋಲೀಸ್ ದಾಳಿ ನಡೆದಿದ್ದು ಹಲವರನ್ನು ಬಂಧಿಸಿದ್ದು, ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಡಿ.6ರಂದುಹೊಸದಾಗಿ ಪ್ರವೇಶ ಪಡೆದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳನ್ನುACE ಇದರ ವತಿಯಿಂದ ನಡೆಸಲಾದ “Aakar-2022” ಎನ್ನುವ ಕಾರ್ಯಕ್ರಮದಲ್ಲಿ ಸ್ವಾಗತಿಸಲಾಯಿತು. ಭಾರತ್ ಗ್ರಾಮ ಸಂಪರ್ಕ ನಿರ್ಮಾಣ, ಸುಳ್ಯ ಇದರ ಇಂಜಿನಿಯರ್ ಪತಂಜಲಿ ಭಾರಧ್ವಾಜ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪತಂಜಲಿ ಭಾರಧ್ವಾಜ್ ಇವರು ಮುಂದಿನ ದಿನಗಳಲ್ಲಿ ಸಿವಿಲ್...
ಅಕೌಂಟೆಂಟ್ ಅಸಿಸ್ಟೆಂಟ್ , ಆಡಿಟರ್ ಹುದ್ದೆಗೆ ಸುಳ್ಯ ಆಸುಪಾಸಿನ ಬಿ.ಕಾಂ. ಆಗಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಬಾಲಕೃಷ್ಣ ನಡುಗಲ್ಲು , ಮೊ : 944871025
ತೋಟಗಾರಿಕೆ ಇಲಾಖೆ, ಸುಳ್ಯ ಇದರ ವತಿಯಿಂದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ತಾಳೆ ಮತ್ತು ಕಾಳುಮೆಣಸು ಬೇಸಾಯ ಹಾಗೂ ಅಡಿಕೆ ಎಲೆ ಚುಕ್ಕೆ ರೋಗ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಡಿ.10 ರಂದು ಸಹಕಾರ ಸಂಘದ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ...
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಸುಳ್ಯ ಇದರ ವತಿಯಿಂದ ಸರಕಾರಿ ನೌಕರರ ಕ್ರೀಡಾಕೂಟ ಡಿ.11 ರಂದು ರಂದು ಜೂನಿಯರ್ ಕಾಲೇಜ್ ನ ಮೈದಾನದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ಮಹಾದೇವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್. ಎನ್ ಆಗಮಿಸಲಿದ್ದಾರೆ....
ಗುತ್ತಿಗಾರಿನಲ್ಲಿ ಎಲಿಮಲೆಯಲ್ಲಿ ಡಿ.4 ರಂದು ನಡೆದ ರಕ್ತದಾನ ಶಿಬಿರದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ನೇತೃತ್ವದಲ್ಲಿ ಮಾಡುತ್ತಿರುವ ಸಮಾಜಸೇವೆಯನ್ನು ಪರಿಗಣಿಸಿ ಚಂದ್ರಶೇಖರ ಕಡೋಡಿಯವರನ್ನು ಸನ್ಮಾನಿಸಲಾಯಿತು. ತಾಲೂಕು ವೈಧ್ಯಾಧಿಕಾರಿ ಡಾ. ನಂದಕುಮಾರ್ ಸನ್ಮಾನ ನೆರವೇರಿಸಿದರು. ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಸುಲೋಚನಾ ದೇವ, ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಡಾ. ಅಶೋಕ್,ಸಿ ಎಚ್ ಓ...
ಬೆಳ್ಳಿಪ್ಪಾಡಿ-ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ನಡುಬೆಟ್ಟು ಶ್ರೀ ಉಳ್ಳಾಕುಲು ಧೂಮಾವತಿ ದೈವಸ್ಥಾನದಲ್ಲಿ ಡಿ. 6 ಮತ್ತು 7 ರಂದು ಕಾಲಾವಾಧಿ ನೇಮೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ನಾಲ್ಕು ವರ್ಗ ಊರ ಸಮಸ್ತರು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಪ್ರಸಾದ ಸ್ವೀಕರಿಸಿ ನಂತರ ಅನ್ನಸಂತರ್ಪಣೆ ನಡೆಯಿತು.
2021-22 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ / ಸ್ನಾತಕೋತ್ತರ ಪದವಿ / ಮೆಡಿಕಲ್ / ಇಂಜಿನಿಯರಿಂಗ್ ಇತರೆ ಕೋರ್ಸುಗಳಲ್ಲಿ ಶೇಕಡಾ 60% ಹೆಚ್ಚು ಅಂಕಗಳಿಸಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಲು ಅಂತರ್ಜಾದಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಯನ್ನು ಸಲ್ಲಿಸಿದ ನಂತರ...
ಸುಳ್ಯ ಒಡಬಾಯಿ ವಿನು ನಗರಕ್ಕೆ ತೆರಳುವ ರಸ್ತೆ ಕಾಂಕ್ರೀಟೀಕರಣಗೊಂಡು ಕುಂಭಕ್ಕೋಡು ಶುಭಕರ ರಾವ್ ರಸ್ತೆ ( ಕೆ.ಎಸ್.ರಾವ್ ರಸ್ತೆ) ಇತ್ತೀಚೆಗೆ ಶುಭಾರಂಭಗೊಂಡಿತು. ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ರಸ್ತೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮುಖ್ಯಾಧಿಕಾರಿ ಸುಧಾಕರ ಎಚ್., ನ.ಪಂ.ಸದಸ್ಯ ಬುದ್ಧ ನಾಯ್ಕ್, ರಮೇಶ್ ಕಾಮತ್ ಕುಂಭಕ್ಕೋಡು, ಶಶಿಕಲಾ ಶುಭಕರ...
ಮಾವಿನಕಟ್ಟೆ ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್, ಗ್ರಾಮ ಪಂಚಾಯತ್ ದೇವಚಳ್ಳ, ಆರೋಗ್ಯ ಉಪಕೇಂದ್ರ ಎಲಿಮಲೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರೋಟರಿ ಕ್ಯಾಂಸ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ, ರಕ್ತವರ್ಗೀಕರಣ ಹಾಗೂ ಮಾಹಿತಿ ಶಿಬಿರ ಹಾಗೂ 100 ಬಾರಿಗೆ ರಕ್ತದಾನ ಮಾಡುತ್ತಿರುವ ಶೈಲೇಶ್ ಅಂಬೆಕಲ್ಲು ಅವರಿಗೆ ಸನ್ಮಾನ ಕಾರ್ಯಕ್ರಮ...
Loading posts...
All posts loaded
No more posts
