ತಹಶೀಲ್ದಾರ್ ಹೆಸರು ದುರುಪಯೋಗಪಡಿಸಿಕೊಂಡ ಕೆಲ ಸಿಬ್ಬಂದಿಗಳು – ದೂರು ಬಂದರೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ತಹಶೀಲ್ದಾರ್

ತಾಲೂಕು ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚಿದ್ದು, ತಹಶಿಲ್ದಾರರ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಯಾವುದೇ ಕೆಲಸಗಳಿಗೆ ತಹಶೀಲ್ದಾರ್ ಅಥವಾ ಕಂದಾಯ ಇಲಾಖೆಯ‌ ಸಿಬ್ಬಂದಿಗೆ ಲಂಚ ನೀಡಬೇಕಿಲ್ಲ. ತಹಶಿಲ್ದಾರರ ಹೆಸರು ದುರುಪಯೋಗಪಡಿಸಿಕೊಂಡು ಈಗಾಗಲೇ ಕೆಲವು ತಳಮಟ್ಟದ ಸಿಬ್ಬಂದಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದಾರೆಂದು ದೂರುಗಳು ಕೇಳಿಬಂದಿತ್ತು....

ಪೆರುವಾಜೆ : ವಾರ್ಷಿಕ ಜಾತ್ರೆಯ ಪ್ರಯುಕ್ತ ಚಪ್ಪರ ಮುಹೂರ್ತ – ಡಿ.19 ರಂದು ಕಲ್ಲುರ್ಟಿ ದೈವದ ಬಾಲಾಲಯ ಪ್ರತಿಷ್ಠೆ

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆಯ ಪ್ರಯುಕ್ತ ಚಪ್ಪರ ಮುಹೂರ್ತ ಡಿ.16 ರಂದು ದೇವಾಲಯದಲ್ಲಿ ನಡೆಯಿತು. ಉದ್ಭವ ಶ್ರೀ ಜಲದುರ್ಗಾದೇವಿ, ಗಣಪತಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಧಾನ‌ ಅರ್ಚಕ ಶ್ರೀನಿವಾಸ ಹೆಬ್ಬಾರ್ ಅವರ ನೇತೃತ್ವದಲ್ಲಿ ಚಪ್ಪರ ಮುಹೂರ್ತದ ಪೂಜೆ ನೆರವೇರಿತು. ಇಪ್ಪತ್ತೊಂದು ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟಿರುವ ಶ್ರೀ ಕ್ಷೇತ್ರದಲ್ಲಿ...
Ad Widget

ಹರಿಹರ ಪಲ್ಲತ್ತಡ್ಕ : ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಡಿ.01 ರಿಂದ ಡಿ.15 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವು ಡಿ.15 ರಂದು ಬೆಳಿಗ್ಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಅಧ್ಯಕ್ಷರಾದ ಲ.ಪ್ರೋ.ರಂಗಯ್ಯ ಶೆಟ್ಟಿಗಾರ್ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಶ್ರೀ...

ಡಿ.16-20; ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ರಥೋತ್ಸವ

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.16 ರಿಂದ ಡಿ.20 ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಬ್ರಹ್ಮರಥೋತ್ಸವ ನೆರವೇರಲಿದೆ.ಡಿ.16 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾರಂಗ ಪೂಜೆ, ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ವಸಂತಕಟ್ಟೆ ಪೂಜೆ, ಅಷ್ಟಾವಧಾನ ಸೇವೆ, ಮಂತ್ರಾಕ್ಷತೆ,...

ಬೈತಡ್ಕ : ಕಂಟೈನರ್ ಪಲ್ಟಿ – ಚಾಲಕ ಪಾರು

ಕಂಟೈನರ್ ವಾಹನದ ಬ್ರೇಕ್ ವೈಫಲ್ಯದಿಂದಾಗಿ, ಚಾಲಕನ‌ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಡಿ.15 ರಂದು ರಾತ್ರಿ ನಡೆದಿದೆ. ಮಂಗಳೂರಿನಿಂದ ಮೈಸೂರಿಗೆ ಕಡೆ ತೆರಳುತ್ತಿದ್ದ ಕಂಟೈನರ್ ಲಾರಿ ಬೈತಡ್ಕದ ತಿರುವಿನ ಇಳಿಜಾರಿನ ಬಳಿ ತಲುಪುತ್ತಿದ್ದಂತೆಯೆ ಬ್ರೇಕ್ ವೈಫಲ್ಯವಾದ ಪರಿಣಾಮ ರಸ್ತೆಯ ಎಡಭಾಗಕ್ಕೆ ಲಾರಿಯು ಪಲ್ಟಿಯಾಗಿದ್ದು, ಕಂಟೈನರ್ ನಲ್ಲಿ ಚಾಲಕ ಮಾತ್ರನಿದ್ದು,...

ಹಲಾಲ್ ಪ್ರಮಾಣ ಪತ್ರ ನಿಷೇಧಿಸಿ ಮತ್ತು ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸಲು ಹಿಂದೂ ಜನಜಾಗೃತಿ ಸಮಿತಿ ಸರಕಾರಕ್ಕೆ ಮನವಿ

ರಾಜ್ಯದಲ್ಲಿ ಅನಧಿಕೃತವಾಗಿ ಧರ್ಮದ ಆಧಾರದ ಮೇಲೆ ಹಲಾಲ್ ಲೋಗೊ ಇರುವ ಪ್ರಮಾಣಪತ್ರವನ್ನು ಸಾರ್ವಜನಿಕರು ಉಪಯೋಗ ಮಾಡುವ ಉತ್ಪನ್ನಗಳ ಮೇಲೆ ಮುದ್ರಣ ಮಾಡಿ, ಸಾವಿರಾರು ಕೋಟಿ ರೂಪಾಯಿಗಳನ್ನು ಮತಾಂದ ಸಂಘಟನೆಗಳು ಸಂಗ್ರಹ ಮಾಡಿ, ದೇಶ ವಿರೋಧಿ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿವೆ. ಕೇಂದ್ರ ಸರಕಾರದ FSSAI ಅಧಿಕೃತ ಪ್ರಮಾಣಪತ್ರ ನೀಡುವ ಸಂಸ್ಥೆ ಇರುವಾಗಲೂ ಸಹ ಧರ್ಮದ ಆಧಾರದಲ್ಲಿ ಹಲಾಲ್...

ಹರಿಹರ ಪಲ್ಲತ್ತಡ್ಕ : ಡಿ.17 ರಿಂದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಧನುಪೂಜೆ

ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.17ರಿಂದ ಜ.14 ರವರೆಗೆ ಪ್ರತೀ ದಿನ ಪ್ರಾತಃಕಾಲ 5:00 ಗಂಟೆಗೆ ಧನುಪೂಜೆ ನಡೆಯಲಿದ್ದು, 14-01-2023ನೇ ಶನಿವಾರ ಮಕರ ಸಂಕ್ರಮಣ ಬೆಳಿಗ್ಗೆ 4:00 ಗಂಟೆಯಿಂದ ಉದ್ಯಾಪನ ಪೂಜೆ, ಮದ್ಯಾಹ್ನ ವನಶಾಸ್ತವೇಶ್ವರನಿಗೆ ವಾರ್ಷಿಕ ಪೂಜೆ ಮತ್ತು ವನಭೋಜನ ಕಾರ್ಯಕ್ರಮ ನಡೆಯಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

ಕಂದಡ್ಕ : ಕಾರು ವ್ಯಾನ್ ಅಪಘಾತ

ಕಂದಡ್ಕ ಬಳಿ ಇಂದು ಬೆಳಿಗ್ಗೆ ಸುಳ್ಯದಿಂದ ಗುತ್ತಿಗಾರಿಗೆ ಬರುತ್ತಿದ್ದ ವ್ಯಾನ್ ಹಾಗೂ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ವಾಹನ ಅಲ್ಪಸ್ವಲ್ಪ ಜಖಂಗೊಂಡಿದ್ದು, ಕಾರು ಚಾಲಕ ಬೆಟ್ಟ ಮರಿಯಪ್ಪ ಎಂಬವರ ಕೈಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಸಂಪಾಜೆ ಸಹಕಾರಿ ಸಂಘದ ಶತ ಸಂಭ್ರಮದ ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತ ಸಂಭ್ರಮದ ಕ್ರೀಡಾಕೂಟ ಜ.1, 2 ಹಾಗೂ 8 ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರು ಡಿ.15 ರಂದು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ನಿರ್ದೇಶಕರುಗಳಾದ ಬಿ.ಎಸ್.ಯಮುನಾ, ಜಗದೀಶ್ ರೈ, ಎಚ್.ಎ.ಹಮೀದ್,...

ಕಾಯಕಲ್ಪಕ್ಕೆ ಕಾಯುತ್ತಿದೆ ಸರಕಾರಿ ಆಸ್ಪತ್ರೆಯ ರಸ್ತೆ

ಸುಳ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿನಂಪ್ರತಿ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಎಲ್ಲರಿಗೂ ಚಿಕಿತ್ಸೆ ನೀಡುವ ಈ ಆಸ್ಪತ್ರೆಯ ರಸ್ತೆಗೆ ಯಾರೂ ಚಿಕಿತ್ಸೆ ನೀಡುವವರಿಲ್ಲ ಎಂಬುದು ಖೇದಕರ ಸಂಗತಿ. ಹಲವು ವರ್ಷಗಳಿಂದ ಈ ಆಸ್ಪತ್ರೆಗೆ ತೆರಳುವ ರಸ್ತೆ ನಾದುರಸ್ತಿಯಲ್ಲಿದೆ. ಹಲವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಟೋ ರಿಕ್ಷಾ, ಕಾರು, ಅಂಬ್ಯುಲೆನ್ಸ್ ಗಳು ಈ ರಸ್ತೆಯನ್ನೇರಿ ಆಸ್ಪತ್ರೆಗೆ...
Loading posts...

All posts loaded

No more posts

error: Content is protected !!