- Saturday
- August 8th, 2026
ಕಷ್ಟಗಳ ಮೇಲೆ ಕಷ್ಟ ಎರಗಿ ಬಂದಾಗ ಅವರ ಕಷ್ಟಕ್ಕೆ ಹೆಗಲು ಕೊಟ್ಟವನ ಬಾಳಿಗೆ ಇಂದು ಕಷ್ಟವು ಬಂದೆರಗಿದೆ. ಕಷ್ಟ ಎಂದು ಹೇಳಿ ಬಂದ ಪ್ರತಿಯೊಬ್ಬರಿಗೂ ತನ್ನ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುವುದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಆ ಬಗ್ಗೆ ಸಹಾಯ ಹಸ್ತ, ನೆರವಿನ ಹಸ್ತ ಅನ್ನುವ ಪ್ರಕಟನೆ ಹಾಕುವ ಮುಖಾಂತರ ಮಾಹಿತಿಯನ್ನು ಹಂಚಿ ಹಲವಿಗೆ ದಾನಿಗಳ ಮೂಲಕ...
ಕಲ್ಲುಗುಂಡಿ ಕಡೆಪಾಲ ಬಳಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವನಪ್ಪಿದ ಘಟನೆ ಇಂದು ನಡೆದಿದೆ. ಕಳೆದ ಕೆಲ ದಿನಗಳಿಂದ ಈ ಅಪರಿಚಿತ ವ್ಯಕ್ತಿ ರಸ್ತೆಯುದ್ದಕ್ಕೂ ತಿರುಗಾಡುತ್ತಿದ್ದ ಎಂದು ತಿಳಿದುಬಂದಿದೆ. ಸ್ಕೂಟರ್ ಸವಾರ ಕೊಯನಾಡು ಚಡಾವು ನಿವಾಸಿ ಅಲ್ಪಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಲ್ಲುಗುಂಡಿ ಪೋಲಿಸರು ಸ್ಥಳಕ್ಕೆ...
ಸುಳ್ಯ ಕುರುಂಜಿಭಾಗ್ ಸಮೀಪ ಇರುವ ಬಿ ಸಿ ಎಂ ಹಾಸ್ಟೆಲ್ ನಲ್ಲಿ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಸುಳ್ಯದ ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ಸೋನಿಯಾ (18) ಬೆಂಗಳೂರು ರಾಮನಾಥ ಪುರದ, ಕಾರಮಂಗಲ ತಾಲೊಕಿನ ಮಾರ್ಲಮಂಗಲ ಗ್ರಾಮದ ಪುರುಷೋತ್ತಮ ಎಂಬವರ ಪುತ್ರಿ. ಸೋನಿಯಾ ಇಂದು ಕಾಲೇಜಿಗೆ ಹೋಗದೇ...
ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಡಿಸಂಬರ್ 16 ರಂದು ನಡೆಯಿತು. ಗೌರವಾಧ್ಯಕ್ಷರಾದ ಖಾಝಿಯೂ ಆದ ಕೂರ ತಂಘಳ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಾರ್ಷಿಕ ವರದಿ ಮತ್ತು ಆಯ ವ್ಯಯಪಟ್ಟಿ ಮಂಡಿಸಿದರು. ನಂತರ ನೂತನ ಆಡಳಿತ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಅಬ್ದುಲ್ ಗಫೂರ್,ಉಪಾಧ್ಯಕ್ಷರಾಗಿ ಇಬ್ರಾಹಿಂ ಕಜೆ, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಪಳ್ಳಿಮನೆ, ಕಾರ್ಯದರ್ಶಿ...
ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ ‘ಕೆ.ವಿ.ಜಿ. ಸುಳ್ಯ ಹಬ್ಬ’ ಆಚರಣೆಯ ಅಂಗವಾಗಿ ಡಿ.25ರಂದು ಯುವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಯುವ ಸಾಧಕರಾದ ಸಚಿನ್ ಪ್ರತಾಪ್-ಕ್ರೀಡೆ, ಮೇಜರ್ ಡಾ.ಕುಶ್ವಂತ್ ಕೋಳಿಬೈಲ್-ವೈದ್ಯಕೀಯ, ಸಂತೋಷ್ ಕೊಡೆಂಕಿರಿ-ಚಿತ್ರರಂಗ, ಭವ್ಯಶ್ರೀ ಕುಲ್ಕುಂದ- ಯಕ್ಷಗಾನ, ಮಂಜುನಾಥ...
ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ನ ರಾಷ್ಟ್ರೀಯ ಅಧಿವೇಶನ ಹರಿಯಾಣದ ಕುರುಕ್ಷೇತ್ರದಲ್ಲಿ ಡಿ 26ರಂದು ನಡೆಯಲಿದ್ದು, ಸುಳ್ಯದಿಂದ ಮೂವರು ನ್ಯಾಯವಾದಿಗಳು ಭಾಗವಹಿಸಲು ತೆರಳಿರುತ್ತಾರೆ. ಡಿ.26 ರಂದು ಅಪರಾಹ್ನ 3.00 ಗಂಟೆಗೆ ಪ್ರಾರಂಭವಾಗಲಿರುವ ಅಧಿವೇಶನದಲ್ಲಿ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಯಾಗಿರುವ ಜಸ್ಟೀಸ್ ಸೂರ್ಯಕಾಂತ್ ರವರು ಉದ್ಘಾಟಿಸಲ್ಲಿದ್ದಾರೆ. ಸುಳ್ಯದಿಂದ ಯುವ ನ್ಯಾಯವಾದಿ, ಸಿ.ಎ.ಬ್ಯಾಂಕ್ ನಿರ್ದೇಶಕ ಹರೀಶ್ ಬೂಡುಪನ್ನೆ, ದ.ಕ.ಜಿಲ್ಲಾ ಅಧಿವಕ್ತಾ...
ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದವ ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ ‘ಕೆ.ವಿ.ಜಿ. ಸುಳ್ಯ ಹಬ್ಬ’ ಆಚರಣೆಗೆ ಚಾಲನೆ ನೀಡಲಾಯುತು. ಎರಡು ದಿನಗಳ ಸುಳ್ಯ ಹಬ್ಬದ ಅಂಗವಾಗಿ ಡಿ.25 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಿತು. ಚೆನ್ನಕೇಶವ...
ಬಾಳಿಲ ಗ್ರಾಮದ ಕುಕ್ಕುತ್ತಡಿ ದಿ|ಜತ್ತಪ್ಪ ಗೌಡರ ಪುತ್ರ ಚಿ|ರಾ| ಯತೀಶ್.ಕೆ ರವರ ವಿವಾಹವು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪುಳಿತ್ತಡಿ ಪುಟ್ಟಣ್ಣ ಗೌಡರ ಪುತ್ರಿ ಚಿ|ಸೌ| ದೀಕ್ಷಿತಾ ರವರೊಂದಿಗೆ ಡಿ.25ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು.
ಸುಳ್ಯದ ಹಳೆಗೇಟಿನಲ್ಲಿರುವಆರ್ಯುಧಾಮ ಆಯುರ್ವೇದ ಆಸ್ಪತ್ರೆಗೆಮಹಿಳಾ ಮತ್ತು ಪುರುಷ ತೆರಪಿಸ್ಟ್, ಹಾಸ್ಪಿಟಲ್ ಮೈಂಟೆನೆನ್ಸ್ ಸ್ಟಾಪ್, ಸಸ್ಯಾಹಾರ ಅಡುಗೆಯವರು ಬೇಕಾಗಿದ್ದಾರೆ. ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುವುದು.ಸಂಪರ್ಕಿಸಿ:. ಡಾ/ ಹರಿಪ್ರಸಾದ್ ಶೆಟ್ಟಿ9880464302
ಸುಳ್ಯದ ಕೇರ್ಪಳದಲ್ಲಿ ಬಂಟರ ಸಂಘದಿಂದ ವತಿಯಿಂದ ನಿರ್ಮಾಣಗೊಂಡ ನೂತನ ಬಂಟರ ಸಮುದಾಯ ಭವನವನ್ನು ಆಶಾ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ಮುಂಬೈಯ ಹೇರಂಭಾ ಗ್ರೂಪ್ ಕೇರ್ ಲಿಮಿಟೆಡ್‌ನ ನಿರ್ದೇಶಕರಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ,ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ರಾಜ್ಯ ಒಕ್ಕಲಿಗರ ಸಂಘದ...
Loading posts...
All posts loaded
No more posts
