- Thursday
- August 6th, 2026
ಶ್ರೀ ರಾಜ್ಯ ದೈವ ಪುರುಷ ದೈವ ದೈವಸ್ಥಾನ ಕಂದ್ರಪ್ಪಾಡಿ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ನಿರಂಜನ್ ಕಡ್ಲಾರು ಸಾಹಿತ್ಯದ ಭಕ್ತಿಗೀತೆಗಳನ್ನು ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್ ಅಂಗಾರ ಬಿಡುಗಡೆಗೊಳಿಸಿದರು. ಅವರು ಮಾರ್ಚ್ 14ರಂದು ಕಂದ್ರಪ್ಪಾಡಿ ಜಾತ್ರೋತ್ಸವದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಕ್ತಿ ಗೀತೆಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ಅಭಿವೃದ್ಧಿ...
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ (ಪಬ್ಲಿಕ್)ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. 10 ದಿನಗಳ ಬಳಿಕ ಅಂದರೆ ಮಾ.27ರಿಂದ ಪರೀಕ್ಷೆ ನಡೆಸಲು ಸೂಚನೆ ನೀಡಿರುವ ಹೈಕೋರ್ಟ್, ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳುವಂತಿಲ್ಲ, ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಶಾಲೆಗೆ ಮಾತ್ರವೇ ಕಳಿಸಬೇಕು ಎಂದೂ ಸೂಚನೆ ನೀಡಿದೆ. 5 ಮತ್ತು 8ನೇ...
ಉಬರಡ್ಕ ಮಿತ್ತೂರು ಗ್ರಾಮದ ಯುವಕ ಮಂಡಲ ಉಬರಡ್ಕ ಮಿತ್ತೂರು ಹಾಗೂ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಪ್ರಥಮ ನೋಂದಾಯಿತ ಯುವಕ ಮಂಡಲದ ಸುವರ್ಣ ಮಹೋತ್ಸವ ಆಚರಣೆಯು ಮಾ.20 ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್....
ಸುಳ್ಯದ ಅಂಬೆಟಡ್ಕದಲ್ಲಿರುವ ಪ್ರೆಸ್ ಕ್ಲಬ್ ಕಟ್ಟಡಕ್ಕೆ ಬೆಳ್ಳಾರೆಯ ಗ್ಲೋಬಲ್ ಸರ್ವಾಲೆನ್ಸ್ ನವರು ಸಿಸಿ ಕ್ಯಾಮೆರಾ ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದು ಇದರ ಉದ್ಘಾಟನಾ ಸಮಾರಂಭ ಮಾ.15 ರಂದು ಸಂಜೆ ನಡೆಯಿತು. ಸುಳ್ಯ ಠಾಣಾ ಕ್ರೈಂ ಎಸ್.ಐ ಶಾಹಿದ್ ಆಫ್ರಿದಿರವರು ನೂತನ ಸಿಸಿ ಕ್ಯಾಮೆರಾವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಗ್ಲೋಬಲ್ ಸರ್ವಾಲೆನ್ಸ್...
ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಮುಂದಿನ ಎರಡು ವರ್ಷ ಕ್ಕೆ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕುಕ್ಕೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ರಮೇಶ್ ನೀರಬಿದಿರೆ ಆಯ್ಕೆಯಾದರು. ಮಾ.15 ರಂದು ಬೆಳಗ್ಗೆ ಸಂಘದ ಅಧ್ಯಕ್ಷ ಹರೀಶ್ ಬಂಟ್ವಾಳ ಅಧ್ಯಕ್ಷತೆಯಲ್ಲಿ...
ಬೆಳ್ಳಾರೆಯ ಮಣಿಕ್ಕಾರ ಕಾಂಪ್ಲೆಕ್ಸ್ ನಲ್ಲಿ ಹರ್ಷಿತ್ ಪೆರುವಾಜೆಯವರ ಮಾಲೀಕತ್ವದ ಜಲಧಿ ಸೊಲ್ಯೂಶನ್ಸ್ ಮಾ.17ರಂದು ಶುಭಾರಂಭಗೊಳ್ಳಲಿದೆ. ಸಂಸ್ಥೆಯಲ್ಲಿ ಫೈನಾನ್ಶಿಯಲ್ ಸಂಬಂಧಿತ ಸೇವೆಗಳಾದ ಪರ್ಸನಲ್ ಲೋನ್, ವೆಹಿಕಲ್ ಲೋನ್, ಹೋಮ್ ಲೋನ್, ಬ್ಯುಸಿನೆಸ್ ಲೋನ್, ಮೋರ್ಗೇಜ್ ಲೋನ್ ಹಾಗೂ ಜನರಲ್ ಇನ್ಶೂರೆನ್ಸ್, ವೆಹಿಕಲ್ ಇನ್ಶೂರೆನ್ಸ್ , ಲೈಫ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಟ್ರಾವೆಲ್ ಬುಕಿಂಗ್, ಹೋಲಿಡೇ ಪ್ಯಾಕೇಜ್, ಟಿಕೆಟ್...
ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಬಿ ಎಮ್ ಎಸ್ ಸಂಯೋಜಿತ ಶಿವಹರಿ ಅಟೋ ಚಾಲಕರ ಸಂಘ(ರಿ) ಹರಿಹರ ಪಲ್ಲತ್ತಡ್ಕ ಘಟಕ ಇದರ ವಾರ್ಷಿಕ ಮಹಾಸಭೆ ಹಾಗು ಪದಗ್ರಹಣ ಕಾರ್ಯಕ್ರಮ ಮಾ.15ರಂದು ಶ್ರೀ ಹರಿಹರೇಶ್ವರ ಸಭಾ ಭವನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಶಿವಹರಿ ಅಟೋ ಚಾಲಕರ ಸಂಘದ ಅದ್ಯಕ್ಷರಾದ ದಯನಂದ ಪರಮಲೆ ವಹಿಸಿದ್ದರು.ಈ ಸಂದರ್ಭದಲ್ಲಿ ತಾಲೂಕು...
ಮಹಿಳಾ ದಿನಾಚರಣೆಯಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತೆ , ತಾ|ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷೆ , ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂ.ಮೀನಾಕ್ಷಿ ಗೌಡ ಅವರನ್ನು ಒಂದೇ ದಿನ ಮೂರು ಸಂಸ್ಥೆ ವತಿಯಿಂದ ಗೌರವಿಸಲಾಯಿತು.ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಡೈರೆಕ್ಟರ್ ಡಾ| ಕೆ. ವಿ.ಚಿದಾನಂದ , ಲಯನ್ಸ್ ಕ್ಲಬ್ ಸುಳ್ಯ ವತಿಯಿಂದ ಅದರ ಅಧ್ಯಕ್ಷೆ ರೂಪಾಶ್ರೀ ಜೆ.ರೈ...
ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ 268 ನೇ ಆಧಾರ್ ಕ್ಯಾಂಪ್ ಹರಿಹರಪಲ್ಲತ್ತಡ್ಕ ಗ್ರಾ.ಪಂ.ನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಜಯಂತ್ ಬಾಳುಗೋಡು, ಪಿಡಿಒ ಪುರುಷೋತ್ತಮ ಮಣಿಯಾನ ಮೊದಲಾದವರು ಉಪಸ್ಥಿತರಿದ್ದರು.
ಆಲೆಟ್ಟಿ ಗ್ರಾಮದ ಪ್ರತಿಷ್ಠಿತ ಕುಡೆಕಲ್ಲು ಮನೆತನದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾಮೂಲು ಪ್ರಕಾರ ನಡೆಯುವ ಶ್ರೀ ವಿಷ್ಣುಮೂರ್ತಿ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವವು ಮಾ.24 ರಿಂದ 26 ರತನಕ ನಡೆಯಲಿರುವುದು.ಮಾ.24 ರಂದು ಮಧ್ಯಾಹ್ನ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ರಾತ್ರಿ ಕಳಿಯಾಟಕ್ಕೆ ಕೂಡುವುದು. ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ, ನಂತರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ...
Loading posts...
All posts loaded
No more posts
