ದೇವ ಗೆಳೆಯರ ಬಳಗದ ವತಿಯಿಂದ ರಸ್ತೆ ಬದಿಯ ಪ್ಲಾಸ್ಟಿಕ್ ಹೆಕ್ಕುವ ಸ್ವಚ್ಛತಾ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ "ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವ ಗೆಳೆಯರ ಬಳಗದ ವತಿಯಿಂದ ಅಂಗನವಾಡಿ ಶಾಲಾ ಬಳಿಯಿಂದ ದೇವ ಪಡ್ಪು ಅಂಗಡಿಯಿಂದ ಅಚ್ರಪ್ಪಾಡಿವರೆಗೆ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ ಹೆಕ್ಕುವ  ಸ್ವಚ್ಚತೆಯನ್ನು ಮಾಡಲಾಯಿತು.            ‌ ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಗೌರವಾ ಧ್ಯಕ್ಷ...

ಗುತ್ತಿಗಾರಿನಲ್ಲಿ ಟೀಂ ಇಂಪಾರ್ಟೆಂಟ್ ಎಫ್.ಸಿ ತಂಡದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಗುತ್ತಿಗಾರು ಗ್ರಾಮ ಪಂಚಾಯತ್ ಆವರಣದಲ್ಲಿ ಯುವಜನ ಸಂಯುಕ್ತ ಮಂಡಳಿಯ ಪಂಚಸಪ್ತತಿ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಇಂಪೋರ್ಟ್‌ಂಟ್ ಎಫ್‌ಸಿ(ರಿ.) ಗುತ್ತಿಗಾರು ವತಿಯಿಂದ ನಡೆಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷ ಮುಳಿಯ ಸಾತ್ವಿಕ್, ಉಪಾಧ್ಯಕ್ಷರು ಕೌಶಿಕ್ ಶ್ಯಾಮ ಮತ್ತು ಶ್ರೀಶರಣ ಮೊಗ್ರ, ಮೋನಿಷ್ ಬಾಕಿಲ, ನಿರ್ದೇಶಕರಾದ ಚರಣ್ ಕೊಂಬೊಟ್ಟು, ಸದಸ್ಯರಾದ ನಿಖಿಲ್, ಅನಿಲ್, ರೆನ್ವಿತ್, ವೈಭವ್, ಚಿರಾಗ್ ಸೇರಿದಂತೆ ಹಲವರು...
Ad Widget

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ

ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.) ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮವು ಸುಳ್ಯ ತಾಲೂಕಿನ ಸ. ಹಿ.ಪ್ರಾಥಮಿಕ ಶಾಲೆ ಮುಳ್ಯ ಅಟ್ಲೂರಿನಲ್ಲಿ ನಡೆಯಿತು.ಟ್ರಸ್ಟ್‌ನ ಗೌರವ ಅಧ್ಯಕ್ಷರಾದ ಬಾಲಕೃಷ್ಣ ಬೊಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರರಾದ ಫಾಲಚಂದ್ರ ವೈ.ವಿ, ಸಲಹಾ ಸಮಿತಿ ಸದಸ್ಯರಾದ ಡಾ.ಅನುರಾಧಾ ಕುರುಂಜಿ, ಸ್ಥಳೀಯ ಸಮಿತಿಯ...

ಉಮೇಶ್ ಮಣಿಕ್ಕಾರ ಅವರಿಗೆ ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರ ಪ್ರದಾನ

ಬೆಂಗಳೂರಿನ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡಮಿಯು ತನ್ನ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಪ್ರತಿಮ ಸಾಧಕರಿಗೆ ನೀಡುವ ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರಕ್ಕೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಭಾಜನರಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ವಿದ್ಯಾ ವಿಕಾಸ  ಶಿಕ್ಷಣ ಸಂಸ್ಥೆಯ...

ಏನೆಕಲ್ಲು ಪ್ರೌಢಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

ಏನೆಕಲ್ಲು ಸರಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಾಲಕಿಯರ ಶೌಚಾಲಯಕ್ಕೆ ಏನೆಕಲ್ಲು ಪರಮಲೆ ಸಹೋದರರ ವತಿಯಿಂದ ನೀರಿನ ಟ್ಯಾಂಕನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ “ಸಹಕಾರಿ ಮೊಬೈಲ್ ಆ್ಯಪ್” ಬಿಡುಗಡೆ ; “ಸಹಕಾರಿ ಆ್ಯಪ್ ನಿಂದ ಪಾರದರ್ಶಕ ವ್ಯವಹಾರ” : ಎಸ್.ಎನ್.ಮನ್ಮಥ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ತನ್ನ ನಿರಂತರ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಗ್ರಾಮದ ಕೃಷಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಇದೀಗ ತಾಲೂಕಿನ ಸಹಕಾರಿ ಸಂಘಗಳಲ್ಲಿಯೇ ಪ್ರಥಮವಾಗಿ “ಸಹಕಾರಿ ಫೋನ್ ಆ್ಯಪ್” ಬಿಡುಗಡೆ ಮಾಡಿದೆ.ಡಿ.22 ರಂದು ಸಂಘದ ಸಭಾಭವನದಲ್ಲಿ “ಸಹಕಾರಿ ಮೊಬೈಲ್ ಆ್ಯಪ್” ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಕೃಷಿಕರಾದ ದಾಮೋದರ ಜಬಳೆಯವರು “ಸಹಕಾರಿ ಮೊಬೈಲ್...

“ಜೀವ ಉಳಿಸುವ ರಕ್ಷಣಾ ಕೌಶಲ್ಯದ ಅರಿವು ಎಲ್ಲರಿಗೂ ಅಗತ್ಯ” : ಪಿ ಬಿ ಸುಧಾಕರ್ ರೈ ; ಬೆಳ್ಳಾರೆಯಲ್ಲಿ  ಜೀವ ರಕ್ಷಕ್, ಸಿ.ಪಿ.ಆರ್ ತರಬೇತಿ ಕಾರ್ಯಗಾರ

“ತುರ್ತು ಸಂದರ್ಭದಲ್ಲಿ  ಹೃದಯ ಸ್ಥಂಭನ ಮತ್ತು ಉಸಿರಾಟದ ತೊಂದರೆಯ ಸಂಧರ್ಭದಲ್ಲಿ ಸಿ.ಪಿ.ಆರ್ ಮೂಲಕ ಜೀವ ರಕ್ಷಣಾ ಕೌಶಲ್ಯದಿಂದ ಅನೇಕ ಜೀವಗಳನ್ನು ಉಳಿಸಬಹುದು” ಎಂದು ಸುಳ್ಯ ತಾಲೂಕು ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಪಿ.ಬಿ ಸುಧಾಕರ ರೈ ಹೇಳಿದರು. ಅವರು ಬೆಳ್ಳಾರೆಯ ಪೆರುವಾಜೆ ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.13ರಂದು  ಯುವಜನ...

ಶೌಚಾಲಯ ನಿರ್ಮಿಸಿಕೊಡುವ ಮೂಲಕ ಬಡ ಕುಟುಂಬಕ್ಕೆ ಆಸರೆಯಾದ ಶಾಸ್ತಾವು ಯುವಕ ಮಂಡಲ ರೆಂಜಾಳ ; ಬಯಲು ಶೌಚಮುಕ್ತ ಗ್ರಾಮ ಅಭಿಯಾನಕ್ಕೆ ದಿಟ್ಟ ಹೆಜ್ಜೆ – ವ್ಯಾಪಕ ಮೆಚ್ಚುಗೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ "ಪಂಚಸಪ್ತತಿ - 2025 ಸ್ವಚ್ಚತಾ ಅಭಿಯಾನದ ಅಂಗವಾಗಿ ರೆಂಜಾಳ ಶಾಸ್ತಾವು ಯುವಕ ಮಂಡಲದ ಸದಸ್ಯರು ಮರ್ಕಂಜ ಗ್ರಾಮದ ಮಾವಜಿ ದುಗ್ಗಪ್ಪ ಗೌಡರ ಮನೆಗೆ ನೂತನ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ. ನೂತನ ಶೌಚಾಲಯದ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ...

ಬೆಳ್ಳಾರೆಯ ಪಳ್ಳಿಮಜಲು ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ) ಮಸೀದಿಯಲ್ಲಿ ಪ್ರವಾದಿ ಮುಹಮ್ಮದ್ ಮುಸ್ತ್ವಫಾ(ಸ್ವ.ಅ.ಸ)ರ ಹೆಸರಿನಲ್ಲಿ ಪ್ರತೀ ಆದಿತ್ಯವಾರ ಅಸ್ತಮಿಸಿದ ಸೋಮವಾರ ಮುಸ್ಸಂಜೆ ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸಿನ ಮಾಸಿಕ ಸ್ವಲಾತ್ ಕಾರ್ಯಕ್ರಮ ಡಿ 21 ರಂದು  ನಡೆಯಿತು.ಪಳ್ಳಿಮಜಲು ಮಸೀದಿಯ ಖತೀಬರಾದ ಮುಹಮ್ಮದ್ ರಫೀಖ್ ಬಾಹಸನಿ ಮಾದರಿ ವಿವಾಹ ಎಂಬ ವಿಷಯದಲ್ಲಿ ವಿಷಯ ಮಂಡನೆ ಮಾಡಿದರು. ಸ್ವಲಾತಿನ ವೇದಿಕೆಯಲ್ಲಿ...

ಸುಳ್ಯ ತಾಲೂಕು ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರ

ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಜಮೀಯ್ಯತ್ತುಲ್ ಸಂಸ್ಥೆಯ ಫಲಾಹ್ ಸುಳ್ಯತಾಲೂಕು ಘಟಕದ ವತಿಯಿಂದ ಸ್ಕಾಲರ್ಷಿಪ್ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಮಾದಕ ವಸ್ತುಗಳ ವಿರೋಧಿ ಆಂದೋಲನ ಜಾಗೃತಿ ಉಪನ್ಯಾಸ ಮತ್ತು ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಜರಗಿತು.ಅಧ್ಯಕ್ಷತೆಯನ್ನು...
Loading posts...

All posts loaded

No more posts

error: Content is protected !!