ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳು – 1848 ವಿದ್ಯಾರ್ಥಿಗಳು

2023ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.31ರಿಂದ ಆರಂಭಗೊಳ್ಳಲಿದೆ. ಈ ಬಾರಿ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಒಟ್ಟು 1848 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಸುಳ್ಯ ತಾಲೂಕಿನಲ್ಲಿ 36 ಪ್ರೌಢಶಾಲೆ ಗಳಿವೆ. ಇಲ್ಲಿಂದ ಒಟ್ಟು 1848 ವಿದ್ಯಾರ್ಥಿ ಗಳು ಈ ಬಾರೀ ಪರೀಕ್ಷೆ ಬರೆಯಲಿದ್ದಾರೆ. ಪುನಾರಾವರ್ತಿತ ವಿದ್ಯಾರ್ಥಿಗಳು 55 ಮಂದಿ ನೋಂದಾವಣೆ ಮಾಡಿದ್ದಾರೆ.ಆದರೆ ಖಾಸಗಿಯಾಗಿ 50 ಮಂದಿ...

ಪೆರಾಜೆ ಶ್ರೀ ಶಾಸ್ತಾವು ದೇವಾಲಯದಲ್ಲಿ ಜಾತ್ರಾ ಸಂಭ್ರಮ, ನಾಳೆ ಶ್ರೀ ಭಗವತಿ ದೊಡ್ಡಮುಡಿ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.10 ರಿಂದ ಜಾತ್ರಾ ಸಂಭ್ರಮ ಪ್ರಾರಂಭಗೊಂಡಿದ್ದು, ಏ.1೦ ರವರೆಗೆ ನಡೆಯಲಿದೆ. ಮಾ.26ರಂದು ಬೆಳಿಗ್ಗೆ ಕಲಾಶೋತ್ಸವ, ಮಹಾಪೂಜೆ ನಡೆದು, ಮಹಾಸಮಾರಾಧನೆ ನಡೆಯಿತು. ಸಂಜೆ ಶ್ರೀ ಉಳ್ಳಾಕುಲು ಮಾಡದ ಅರಮನೆಯಿಂದ ಭಂಡಾರ ತಂದು, ಮುಖ್ಯ ತೋರಣ ಏರಿಸುವುದು, ಶಿಸ್ತು ಅಳೆಯುವುದು ನಡೆಯಿತು. ರಾತ್ರಿ ಶ್ರೀ ದೇವರ ಭೂತ ಬಲಿ, ನೃತ್ಯ ಬಲಿ ಹಾಗೂ...
Ad Widget

ವಳಲಂಬೆ : ಬರೆಗೆ ಗುದ್ದಿ ಕಾರು ಜಖಂ

ವಳಲಂಬೆ ಕಾಜಿಮಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಬರೆಗೆ ಗುದ್ದಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಸುಳ್ಯದ ಜ್ಯೋತಿಷ್ಯ ಉದಯ ನಾಯರ್ ಅವರು ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿದೆ.

ಮೇ.10 ರಂದು ಚುನಾವಣೆ – ಸುಳ್ಯದಲ್ಲಿ ಸಿದ್ಧತೆ ಆರಂಭಿಸಿದ ಅಧಿಕಾರಿಗಳು

ಮೇ. 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರ ಪೂರ್ಣವಾಗಿ ಸಿದ್ಧವಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಅರುಣ್‌ಕುಮಾರ್ ಸಾಂಗವಿ ತಿಳಿಸಿದ್ದಾರೆ. ಸುಳ್ಯ ತಾಲೂಕು ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಗೆ ನೀತಿ ಸಂಹಿತೆ ನಿನ್ನೆಯಿಂದಲೇ ಜಾರಿಗೆ ಬಂದಿದೆ. ನೀತಿ ಸಂಹಿತೆಯ...

ಸುಳ್ಯ : ಕ್ಷೇತ್ರದ ಚುನಾವಣಾಧಿಕಾರಿಯಾಗಿ ಅರುಣ್‌ಕುಮಾರ್

ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಯ, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಅರುಣ್‌ಕುಮಾರ್ ಸಂಗಾವಿ ನಿಯುಕ್ತಿಗೊಂಡಿದ್ದು, ಕರ್ತವ್ಯ ಆರಂಭಿಸಿದ್ದಾರೆ. ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಅರುಣ್‌ಕುಮಾರ್‌ರವರು ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಸುಳ್ಯದಲ್ಲಿ ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ.

ಚೆಡಾವು ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

ಕೊಡಗು ಸಂಪಾಜೆ ಗ್ರಾಮದ ಚೆಡಾವು ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ ಕಾರ್ಯಕ್ರಮ ಮಾ.25 ಮತ್ತು 26 ರಂದು ನಡೆಯಿತು.ಮಾ.25 ರಂದು ಸಂಜೆ ಸ್ವಾಮಿ ಗುಳಿಗ ಬಂಟ, ವರ್ಣಾರ ಪಂಜುರ್ಲಿ ದೈವ, ಕಲ್ಲುರ್ಟಿ ದೈವದ ನರ್ತನ ಸೇವೆ ನಡೆದು, ಮಾ.26 ರ ಬೆಳಗ್ಗೆ ಕಾರಣಿಕ ದೈವ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.ಊರ, ಪರವೂರ...

ನಡುಗಲ್ಲು : ದೀಪ ಸಂಜೀವಿನಿ ಸ್ವಸಹಾಯ ಸಂಘದ ಸಾರಥ್ಯದಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕ ಉದ್ಘಾಟನೆ

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇಲ್ಲಿನ ದೀಪ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಸೇರಿ ಸ್ತ್ರೀ ಸಾಮರ್ಥ್ಯ ಯೋಜನೆಯ ಅಡಿಯಲ್ಲಿ ಬಟ್ಟೆ ಚೀಲ ತಯಾರಿಸಲು ಮುಂದಾಗಿದ್ದು, ಇವರು ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಸದುದ್ದೇಶವನ್ನು ಹೊಂದಿದ್ದಾರೆ.ಈ ಬಟ್ಟೆ ಚೀಲ ತಯಾರಿಕಾ ಘಟಕವು ಮಾ.30 ರಂದು ನಡುಗಲ್ಲಿನಲ್ಲಿ ಉದ್ಘಾಟನೆಗೊಂಡಿತು.ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ...

ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕೊರಂಬಡ್ಕ ಕ್ಷೇತ್ರಕ್ಕೆ ಅನುದಾನ

ಡಾ.ಡಿ.ವಿರೇಂದ್ರ ಹೆಗ್ಗಡೆ ಖಾವಂದರು ಶ್ರೀ ಕ್ಷೇತ್ರ ಧರ್ಮಸ್ಥಳ,ಹಾಗು ರಾಜ್ಯಸಭಾ ಸದಸ್ಯರು ಕರ್ನಾಟಕ ಇವರಿಗೆ ವ್ಯವಸ್ಥಾಪನ ಅಡಳಿತ ಸಮಿತಿ (ರಿ) ಶ್ರೀ ಕ್ಷೇತ್ರ ಕೊರಂಬಡ್ಕದ ವತಿಯಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಖಾವಂದರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರದಿಂದ ಪ್ರಸಾದದ ರೂಪದಲ್ಲಿ 25000₹ ಅನುದಾನವನ್ನು ಬಿಡುಗಡೆಗೊಳಿಸಿದ್ದರು.ಇದರ ಡಿಡಿ ಚೆಕ್ ನ್ನು ಸುಳ್ಯ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ...

ಏ.16ರಿಂದ ಮೇ 14ರ ತನಕ ಶ್ರೀ ಕೇಶವಕೃಪಾ ಅಂತರ್‌ರಾಜ್ಯ ಮಟ್ಟದ ವೇದ-ಯೋಗ-ಕಲಾ ಶಿಬಿರ

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಏ.16 ರಿಂದ ಮೇ. 14 ರ ತನಕ ವೇದ,ಯೋಗ, ಕಲಾ ಶಿಬಿರ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರತಿಷ್ಠಾನದ ಕಾರ್ಯಚಟುವಟಿಕೆ ಹಾಗೂ ಶಿಬಿರದ ಬಗ್ಗೆ ವಿವರ ನೀಡಿದರು. ಪ್ರತಿಷ್ಠಾನದ ಆಶ್ರಯದಲ್ಲಿ ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳಿ೦ದ...

ನಾಲ್ಕೂರು: ಮತ್ತೆ ಹೊತ್ತಿ ಉರಿಯುತ್ತಿರುವ ಅರಣ್ಯ

ನಾಲ್ಕೂರಿನ ಅರಣ್ಯ ಪ್ರದೇಶವಾದ ವಲ್ಪಾರೆ, ಚಾರ್ಮತ ಅರಣ್ಯ ಪ್ರದೇಶದ ವಡ್ಡೆತಮುಖ ಭಾಗದಲ್ಲಿ ಮತ್ತೆ ಬೀಕರ ಬೆಂಕಿ ಹತ್ತಿಕೊಂಡಿದೆ. ನಿನ್ನೆ ಮಧ್ಯಾಹ್ನ ಆಗುವಾಗ ಒಮ್ಮೆ ನಂದಿಸಲಾಗಿತ್ತಾದರೂ ರಾತ್ರಿಯಾಗುವಾಗ ಮತ್ತೆ ಉರಿಯಲಾಂಬಿಸಿದೆ. ರಾತ್ರಿ ಯಿಂದ ಆರಂಭವಾದ ಬೆಂಕಿ ಇಂದು ಉರಿಯುತ್ತಲೇ ಇದೆ. ಬೆಂಕಿಯ ಭೀಕರತೆಗೆ ಬಿಸಿ ಗಾಳಿ ಬೀಸುತ್ತಿದೆ. ಪಟಾಕಿಗೆ ಒಡೆದಂತೆ ಶಬ್ದ ಬರುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು,...
Loading posts...

All posts loaded

No more posts

error: Content is protected !!