ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಲೆಕ್ಕಪತ್ರ ಮಂಡನಾ ಸಭೆ

ಸುಳ್ಯ ನಗರದ ಕಾಯರ್ತೋಡಿಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವವು ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿದ್ದು, ಬ್ರಹ್ಮಕಲಶದ ಲೆಕ್ಕಪತ್ರ ಮಂಡನಾ ಸಭೆಯು ಜೂ.4ರಂದು ಸಂಜೆ ದೇವಸ್ಥಾನದಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಅವರು ವಹಿಸಿದ್ದರು. ಆರ್ಥಿಕ ಸಮಿತಿಯ ಸಂಚಾಲಕರಾದ ನಾರಾಯಣ ಕೇಕಡ್ಕ ಅವರು ಲೆಕ್ಕಪತ್ರ ಮಂಡಿಸಿದರು. ಬ್ರಹ್ಮಕಲಶೋತ್ಸವದ ಉಳಿಕೆಯ ಮೊತ್ತದಲ್ಲಿ ದೇವಸ್ಥಾನದ ಹೊರಂಗಣ ಗ್ರ್ಯಾನೈಟ್ ಅಳವಡಿಕೆ...

ಸುಳ್ಯ ರೆಪ್ಕೋ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾಗಿ ಕಲೈಅರಸನ್

ಸುಳ್ಯ ರೆಪ್ಕೋ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರಾಗಿ ಕಲೈಅರಸನ್ ರವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ತಮಿಳುನಾಡು ರೆಪ್ಕೋ ಬ್ಯಾಂಕ್ ನಲ್ಲಿ ಮೆನೇಜರ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಪದೋನ್ನತಿಗೊಂಡು ಸುಳ್ಯ ಶಾಖೆಗೆ ವರ್ಗಾವಣೆಗೊಂಡು ಬಂದಿದ್ದಾರೆ. ಸುಳ್ಯ ರೆಪ್ಕೋ ಬ್ಯಾಂಕಿನಲ್ಲಿ ಮೆನೇಜರ್ ಆಗಿದ್ದ ಪದ್ಮನಾಭ ಶೆಟ್ಟಿಯವರು ಬೆಂಗಳೂರು ರೆಪ್ಕೋ ಬ್ಯಾಂಕಿಗೆ ವರ್ಗಾವಣೆಗೊಂಡಿದ್ದಾರೆ.
Ad Widget

ಸಂಪಾಜೆ : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಸನ್ಮಾನ

ಸುಳ್ಯ ವಿಧಾನ ಸಭಾಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯರು ಯಕ್ಷಗಾನ ಕಲಾವಿದಜಯಾನಂದ ಸಂಪಾಜೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಪ್ರಮುಖರಾದ ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಸಂತೋಷ್ ಕುತ್ತಮೊಟ್ಟೆ ಮತ್ತು ಮಹಿಳಾ ಪ್ರಮುಖರು, ಮನೆಯವರು ಉಪಸ್ಥಿತರಿದ್ದರು.

ಸುಳ್ಯ : ಎನ್ನೆoಪಿಯುಸಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ನಾವು ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಬದುಕಬೇಕು. ಭೂಮಿಯಲ್ಲಿ ತಾಪಮಾನ ಹೆಚ್ಚುತ್ತಿದ್ದು,ದಟ್ಟ ಕಾಡಿನಲ್ಲಿ ಗಿಡಗಳು ಸುಟ್ಟು ಹೋಗುತ್ತಿದೆ , ಪರಿಸರ ಕಾಳಜಿ ಪ್ರಾಯೋಗಿಕವಾಗಿ ಆಗಬೇಕಿದೆ.ಪ್ಲಾಸ್ಟಿಕ್ ನಿರ್ಮೂಲನೆಯಾಗಬೇಕು ಎಂದು ಸುಳ್ಯ ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಸಂಜೀವ ಕುದ್ಪಾಜೆ ಹೇಳಿದರು. ಅವರು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ...

ಗುರಿಯುಕ್ತ ಜ್ಞಾನಾರ್ಜನೆಯ ಚಿಂತನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಪ್ರಾಚಾರ್ಯ ಸೋಮಶೇಖರ ನಾಯಕ್ ಅಭಿಮತ

ಸುಬ್ರಹ್ಮಣ್ಯ: ಇಂದಿನ ಮಕ್ಕಳು ಮುಂದಿನ ಶ್ರೇಷ್ಠ ಪ್ರಜೆಗಳು.ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಮಹತ್ತರವಾದ ಘಟ್ಟ.ಈ ಹಂತದಲ್ಲಿ ಶಿಸ್ತು ಮತ್ತು ಪರಿಶ್ರಮದ ಅಧ್ಯಯನಕ್ಕೆ ಮನಮಾಡಿದರೆ ಬದುಕಿನಲ್ಲಿ ಶ್ರೇಷ್ಠ ಜ್ಞಾನ ಸಂಪಾದಿಸುವುದು ಖಂಡಿತಾ. ವಿದ್ಯಾರ್ಥಿಗಳು ಗುರಿಯುಕ್ತ ಜ್ಞಾನಾರ್ಜನೆಯ ಚಿಂತನೆ ಮಾಡಿದರೆ ಭವಿಷ್ಯ ಉಜ್ವಲವಾಗುತ್ತದೆ. ಅತ್ಯಂತ ಶ್ರೇಷ್ಠವಾದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವಿದ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡುವುದು ಪುಣ್ಯ.ಅಂತಹ ಭಾಗ್ಯ...

ಸುಳ್ಯ :ಸಹಕಾರಿ ಯೂನಿಯನ್ ವತಿಯಿಂದ ಭಾಗೀರಥಿ ಮುರುಳ್ಯರಿಗೆ ಅಭಿನಂದನೆ

ಸುಳ್ಯ ತಾಲೂಕು ಸಹಕಾರಿ ಯೂನಿಯನ್ ವತಿಯಿಂದ ನೂತನ ಶಾಸಕಿಯಾಗಿ ಆಯ್ಕೆಯಾದ ಭಾಗೀರಥಿ ಮುರುಳ್ಯ ರವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವು ಎ. ಪಿ. ಎಂ. ಸಿ. ಸಭಾಂಗಣ ಇಂದು ನಡೆಯಿತು.

ನವೀನ್ ಚಂದ್ರ ಜೋಗಿ ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಮರು ವರ್ಗಾವಣೆ

ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಗಳನ್ನು ಮೊದಲಿದ್ದ ಠಾಣೆಗೆ ಮರು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದ್ದು ಚಿಕ್ಕ ಮಗಳೂರು ವೃತ್ತಕ್ಕೆ ವರ್ಗಾವಣೆಗೊಂಡಿದ್ದ ನವೀನ್ ಚಂದ್ರ ಜೋಗಿಯವರು ಮತ್ತೆ ಸುಳ್ಯ ವೃತ್ತಕ್ಕೆ ವರ್ಗಾವಣೆಗೊಂಡಿದ್ದಾರೆ.ಕಡಬ ಠಾಣೆಯಿಂದ ಪುಂಜಾಲಕಟ್ಟೆಗೆ ವರ್ಗಾವಣೆಗೊಂಡಿದ್ದ ಆಂಜನೇಯ ರೆಡ್ಡಿಯವರಿಗೆ ಮತ್ತೆ ಕಡಬ ಠಾಣೆಗೆ ವರ್ಗಾವಣೆಯಾಗಿದೆ.

ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಬಡ ಮಕ್ಕಳಿಗೆ ಪುಸ್ತಕ ವಿತರಣೆ

ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಜೂ.4 ರಂದು ಅಡ್ತಲೆ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ನಿವೃತ್ತ ಮಾಜಿ ಸೈನಿಕರಾದ ಕಮಲಾಕ್ಷಯವರು ಕಾರ್ಯಕ್ರಮ ಉದ್ಘಾಟಿಸಿ, ಸುಮಾರು 20 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆ...

ಕಲ್ಮಡ್ಕ : ಅವೈಜ್ಞಾನಿಕ ಕಾಮಗಾರಿಯಿಂದ ಮೊದಲ ಮಳೆಗೆ ಕೊಚ್ಚಿ ಹೋದ ಮನೆ ನಿವೇಶನ

ದೇಶದ ಪ್ರತಿಯೊಬ್ಬ ಪ್ರಜೆಗೂ ನಿವೇಶನ ಕಲ್ಪಿಸುವುದು ಸರಕಾರದ ಮಹತ್ವದ ಯೋಜನೆ. ಈ ಯೋಜನೆಯ ಅಡಿಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ನಿಂತಿಕಲ್ಲು ಸಮೀಪ ಕಾಪಡ್ಕ ಎಂಬಲ್ಲಿ ಫಲಾಭವಿಗಳಿಗೆ ನಿವೇಶನ ಕಲ್ಪಿಸಲಾಗಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದು ಎಂಬಂತೆ ಈ ನಿವೇಶನ ಮೊದಲ ಮಳೆಗೆ ಹಾಕಿದ ಮಣ್ಣೆಲ್ಲಾ ಕೊಚ್ಚಿ ಹೋಗಿದೆ . ಈ...

ವಳಲಂಬೆ : ಬಸ್ ನಿಲ್ದಾಣದ ಮೇಲೆ ಬಿದ್ದಿದ್ದ ಮರದ ಗೆಲ್ಲು ತೆರವು

ಗುತ್ತಿಗಾರು ಗ್ರಾಮದ ವಳಲoಬೆ ಯಲ್ಲಿ ಇರುವ ಕಡ್ತಲ್ ಕಜೆ ಬಸ್ ತಂಗುದಾಣ ದ ಮೇಲೆ ಗಾಳಿ ಮಳೆಗೆ ಮರ ವೊಂದು ಬಿದ್ದು ದರಿಂದ,ಅದನ್ನು ಕಾಂಗ್ರೆಸ್ ಕಾರ್ಯಕರ್ತರು ತೆರವು ಗೊಳಿಸಿದರು, ಈ ಸಂದರ್ಭದಲ್ಲಿ ಸನತ್ ಮುಳುಗಾಡು, ಪರಮೇಶ್ವರ್ ಚಣಿಲ ಕೇಶವ ಹೊಸೋಳಿಕೆ ರಂಜಿತ್, ಸುರೇಶ್, ರವಿ ಪೈಕ, ಲಕ್ಷಣ ಆಚಾರಿ,ಮೊದಲಾದ ವರು ಇದ್ದರು
Loading posts...

All posts loaded

No more posts

error: Content is protected !!