ಡಾ. ಅನುರಾಧಾ ಕುರುಂಜಿಯವರಿಗೆ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆನಾಡಿನ ಸಮಾಚಾರ ಸೇವಾ ಸಂಘ (ರಿ), ಗೋಕಾಕ, ಬೆಳಗಾವಿ ಇವರು ಶಿಕ್ಷಕರ ದಿನಾಚರಣೆ ನಿಮಿತ್ಯ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಪ್ರತೀ ವರ್ಷ ಕೊಡ ಮಾಡುವ ಪ್ರತಿಷ್ಠಿತ "ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023" ನ್ನು ಪ್ರದಾನ ಮಾಡಲಾಯಿತು.ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ,...

ಸುಬ್ರಹ್ಮಣ್ಯ : ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮಹಿಳೆಯರಿಗೆ ಪೌಷ್ಟಿಕ ಆಹಾರ ಶಿಬಿರ ಹಾಗೂ ಸ್ಪರ್ಧೆ

ಸುಬ್ರಹ್ಮಣ್ಯ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಏನೇಕಲ್ಲು ಅಂಗನವಾಡಿ ಶಾಲೆಯಲ್ಲಿ ಮಹಿಳೆಯರಿಗಾಗಿ ಪೌಷ್ಟಿಕ ಆಹಾರ ತಯಾರಿ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಏನಕಲ್ಲು ಅಂಗನವಾಡಿಯ ಪೋಷಕರು ಹಾಗೂ ಆಸುಪಾಸಿನ ಸುಮಾರು 50 ಮಹಿಳೆಯರು ಈ ಪೌಷ್ಟಿಕ ಆಹಾರ ತಯಾರಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆ ಎನ್ನ ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ...
Ad Widget

ಸುಬ್ರಹ್ಮಣ್ಯ :  ಅದ್ದೂರಿಯಾಗಿ ಸಂಪನ್ನಗೊಂಡ ಗಣೇಶೋತ್ಸವ : ಕುಣಿತ ಭಜನೆ, ಚೆಂಡವಾದನ ಹಾಗೂ ಡಿಜೆ ಸದ್ದಿನೊಂದಿಗೆ ಸಾಗಿದ ಶೋಭಾಯಾತ್ರೆ

ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ 52ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.19ರಿಂದ ಸೆ.23ವರೆಗೆ ಕುಕ್ಕೆಸುಬ್ರಹ್ಮಣ್ಯದಲ್ಲಿ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದು ಅದ್ದೂರಿ ಶೋಭಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ ನಡೆಯಿತು. 108 ತೆಂಗಿನಕಾಯಿ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.   ಸಾಂಸ್ಕೃತಿಕ ಮನೋರಂಜನೆ,ಕುಣಿತ ಭಜನೆ, ಚೆಂಡೆವಾದನ, ಡಿಜೆ ಅಬ್ಬರ ಜತೆಗೆ ಸ್ತಬ್ಧಚಿತ್ರ ಸ್ಪರ್ಧೆ ಗಣೇಶೋತ್ಸವದ...

ಮರಾಟಿ ಸಂಘದ ವತಿಯಿಂದ ಸತ್ಯನಾರಾಯಣ ಪೂಜಾಕಾರ್ಯಕ್ರಮ.

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು. ಅಭಿರಾಮ್ ಭಟ್ ಅರಂಬೂರುರವರ ನೇತೃತ್ವದಲ್ಲಿ ಗಣಪತಿ ಹವನ, ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಬದಲ್ಲಿ...

ಸುಳ್ಯ : ಕಾರಿನ ಹಿಂಭಾಗಕ್ಕೆ ಗುದ್ದಿದ ಸ್ಕೂಟಿ – ಸವಾರನಿಗೆ ಗಾಯ

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಸ್ಕೂಟಿ ಸವಾರನ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಸೆ. 23ರಂದು ರಾತ್ರಿ ಸಂಭವಿಸಿದೆ. ಘಟನೆಯಿಂದ ಸ್ಕೂಟಿ ಸವಾರನಿಗೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟಿಯ ಮುಂಭಾಗ ಮತ್ತು ಕಾರಿನ ಹಿಂಭಾಗ ಜಖಂಗೊಂಡಿದ್ದು, ಮಳೆ ಬಂದ ಹಿನ್ನೆಲೆಯಲ್ಲಿ ಸ್ಕೂಟಿ...

ಗಾಣಿಗ ಸಮ್ಮಿಲನ ಪ್ರಯುಕ್ತ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ

ಸುಳ್ಯ ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಜರಗುವ ಗಾಣಿಗ ಸಮ್ಮಿಲನ ಪೂರ್ವಭಾವಿಯಾಗಿ ಜೆ.ಸಿ‌. ಮೈದಾನದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ನಿವೃತ್ತ ಯೋಧ ಲೋಕೇಶ್ ಇರಂತಮಜಲು ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ವಹಿಸಿದ್ದರು. ಕ್ರೀಡಾಕೂಟವನ್ನು ತೆಂಗಿನಕಾಯಿ ಒಡೆಯುವ ಮೂಲಕ ಚಂದ ಕುಡೆಕಲ್ಲು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾಲಿಂಗ...

ಚಾಲಕನ ನಿಯಂತ್ರಣ ಕಳೆದು ಪಿಕಪ್ ಪಲ್ಟಿ.

ಹುಣಸೂರು ಮೂಲದ ಪಿಕಪ್ ವಾಹನವು ಬಾಳೆಗೊನೆಗಳನಗನ್ನು ಮಂಗಳೂರಿಗೆ ಸಾಗಿಸಿ ವಾಪಾಸ್ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದು ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ. ಪಿಕಪ್ ನಲ್ಲಿ ಚಾಲಕನೋರ್ವ ಮಾತ್ರ ಬರುತ್ತಿದ್ದು ಇವರು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದ್ದು ಇದೀಗಊರವರ ನೆರವಿನಿಂದ ಮಗುಚಿ ಬಿದ್ದ ಪಿಕಪ್ ವಾಹನವನ್ನು ಮತ್ತೆ ಸರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ : ಎನ್ನೆಂಪಿಯುಸಿಯ ಪೂರ್ವಿ ಕೆ. ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪಪೂ ವಿಭಾಗ ಗಾಂಧಿನಗರ ಸುಳ್ಯದಲ್ಲಿ ನಡೆದ ತಾಲೂಕು ಮಟ್ಟದ ತ್ರೋ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸುಳ್ಯ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನ ಪ್ರಾ ವಾಣಿಜ್ಯ ವಿಭಾಗದ ಪೂರ್ವಿ ಕೆ. ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾಳೆ.

ಕೇರ್ಪಳದ ಎಸ್.ವಿ. ಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ

ಮೂಡುಬಿದಿರೆಯ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್. ವಿ. ಪ್ರಸಾದ್ ಅವರು ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ."ಡಿಸೈನ್ ಆಂಡ್ ಅನಾಲಿಸಿಸ್ ಆಫ್ ವೇದಿಕ್ ಮಲ್ಟಿಪ್ಲಯರ್ ಫ಼ಾರ್ ಡಿಎಸ್ಪಿ ಪ್ರೊಸೆಸರ್ " ಎನ್ನುವ ವಿಷಯದ ಬಗ್ಗೆ ಅವರು ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದರು. ರೇವಾ ವಿಶ್ವವಿದ್ಯಾನಿಲಯದ ಇಲೆಕ್ಟಾನಿಕ್ಸ್...

ಆಲೆಟ್ಟಿ ಗ್ರಾಮದ ಬಿಜೆಪಿ ಕಾರ್ಯಕರ್ತರ ಸಭೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರ ಸಭೆ

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರ ಸಭೆ ಆಲೆಟ್ಟಿ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗಿಯಾದರು. ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಪಕ್ಷದ ಸಂಘಟನೆಯಲ್ಲಿ ಅನೇಕ ಕಾರ್ಯಕರ್ತರು ತಮ್ಮ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಹಗಲಿರುಳು ಕೆಲಸ ಮಾಡಿದ ಪರಿಣಾಮ...
Loading posts...

All posts loaded

No more posts

error: Content is protected !!