Ad Widget

ಉಬರಡ್ಕ : ಗಾಂಧಿಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

ಉಬರಡ್ಕ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ "ಸ್ವಚ್ಛತೆಯೇ ಸೇವೆ 2024" ಕಾರ್ಯಕ್ರಮದ ಅಂಗವಾಗಿ ಉಬರಡ್ಕ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂದರ್ಧದಲ್ಲಿ ಪಂಚಾಯತ್ ಅಧ್ಯಕ್ಷರು, ಪಿಡಿಓ, ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆ, ಉಬರಡ್ಕ ಯುವಕ ಮಂಡಲ ಪದಾಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹರಿಹರ ಪಳ್ಳತ್ತಡ್ಕ ಕ್ಲಸ್ಟರ್ ನ 10 ಶಾಲೆಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ವಿತರಣೆ

ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುಳ್ಯ ಮತ್ತು ಪಂಜ ಹೋಬಳಿ ಘಟಕಗಳ ಆಶ್ರಯದಲ್ಲಿ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯ ತಾಲೂಕಿನ 105 ಶಾಲೆಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಭಾವಚಿತ್ರ ವಿತರಣಾ ಕಾರ್ಯಕ್ರಮವು ನಡೆಯುತ್ತಿದ್ದು, ಅ.01 ರಂದು ಹರಿಹರ ಪಳ್ಳತ್ತಡ್ಕ ಕ್ಲಸ್ಟರ್ ನ 10 ಶಾಲೆಗಳಿಗೆ ಜ್ಞಾನಪೀಠ ಪ್ರಶಸ್ತಿ...
Ad Widget

ಗಾಂಧಿ‌ಜಯಂತಿ ಪ್ರಯುಕ್ತ ಪಯಸ್ವಿನಿ ಯುವಕ ಮಂಡಲದಿಂದ ಸ್ವಚ್ಚತಾ ಅಭಿಯಾನ

ಸ್ವಚ್ಛತೆಯ ಜಾಗೃತಿ ‌ನಿರಂತರ : ಡಾ.ಗಿರೀಶ್ ಭಾರದ್ವಾಜ್ ಅ.2 ರ ಗಾಂಧಿ ಜಯಂತಿ ಪ್ರಯುಕ್ತ ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ಆಶ್ರಯದಲ್ಲಿ ಸ್ವಚ್ಚತಾ ಅಭಿಯಾನ ಭಸ್ಮಡ್ಕ ಜಂಕ್ಷನ್ ನಿಂದ ಕೆ.ವಿ.ಜಿ. ಕ್ಯಾಂಪಸ್ ರಸ್ತೆಯ‌ ತನಕ ನಡೆಯಿತು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರು ಅಭಿಯಾನಕ್ಕೆ ಚಾಲನೆ ನೀಡಿ, ಯುವಕ ಸಂಘಗಳ ಸ್ವಚ್ಚತಾ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದರ...

ಮೆಸ್ಕಾಂ ಕಛೇರಿಯಲ್ಲಿ ಗಾಂಧಿಜಯಂತಿ ಆಚರಣೆ

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಗಾಂಧಿಜಯಂತಿ ಆಚರಣೆ ನಡೆಯಿತು.‌ ಜೂನಿಯರ್ ಇಂಜಿನಿಯರ್ ಗಳಾದ ಮಹೇಶ್ ಕೆ. ದಿವ್ಯ, ಉಷಾ, ಮೇಲ್ವಿಚಾರಕರಾದ ಧರ್ಮಪಾಲ, ರಫೀಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಸ್ತ್ರೀಜಿ ಮತ್ತು ಗಾಂಧೀಜಿಯವರ ಆದರ್ಶಗಳನ್ನು ನಿತ್ಯ ಅಳವಡಿಸಿಕೊಳ್ಳೋಣ: ಡಾ|| ಚೂಂತಾರು

ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಛೇರಿ ಮೇರಿಹಿಲ್‍ನಲ್ಲಿ ದಿನಾಂಕ: 02-10-2024ರಂದು ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರು ಜಂಟಿಯಾಗಿ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮತ್ತು ಗಾಂಧೀಜಿಯವರ ತ್ಯಾಗ, ಸೇವೆ ಹಾಗೂ ಬಲಿದಾನವನ್ನು...

ಅರಂತೋಡು : ಎನ್.ಎಂ.ಪಿ‌.ಯು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾಗಿ  ಸೋಮಶೇಖರ ಪಿಂಡಿಮನೆ

ಪಾಪ್ಯುಲರ್ ಎಜುಕೇಶನ್ ಸೊಸೈಟಿ ( ರಿ )ಅರಂತೋಡು ಇದರ ಆಡಳಿತ ಒಳಪಟ್ಟ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಆರಂತೋಡು ಇದರ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾಗಿ  ಸೋಮಶೇಖರ.ಸರ್ ಪಿಂಡಿಮನೆ ಅಧಿಕಾರ ಸ್ವೀಕರಿಸಿದರು.

ಹರಿಹರ ಪಳ್ಳತ್ತಡ್ಕ : ಸಚಿನ್ ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಜಗದೀಶ್ ವಾಡ್ಯಪ್ಪನಮನೆಕಾರ್ಯದರ್ಶಿಯಾಗಿ ದೀಕ್ಷಿತ್ ದೊಡ್ಡಕಜೆಕೋಶಾಧಿಕಾರಿಯಾಗಿ ಚೇತನ್ ಕಾಟೂರುಕ್ರೀಡಾ ಕಾರ್ಯದರ್ಶಿಯಾಗಿ ದಯಾನಂದ ಪರಮಲೆ ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸೆ.29 ರಂದು ನಡೆಯಿತು.ಸಂಘದ ಗೌರವಾಧ್ಯಕ್ಷರಾಗಿ ಪ್ರದೀಪ್ ಕಜ್ಜೋಡಿ, ನೂತನ ಅಧ್ಯಕ್ಷರಾಗಿ ಜಗದೀಶ್ ವಾಡ್ಯಪ್ಪನಮನೆ, ಕಾರ್ಯದರ್ಶಿಯಾಗಿ ದೀಕ್ಷಿತ್ ದೊಡ್ಡಕಜೆ, ಕೋಶಾಧಿಕಾರಿಯಾಗಿ ಚೇತನ್ ಕಾಟೂರು, ಕ್ರೀಡಾ ಕಾರ್ಯದರ್ಶಿಯಾಗಿ...

ಗುತ್ತಿಗಾರು : ಭೂ ಸೇನೆಯ ಯೋಧ ತಿರುಮಲೇಶ್ವರ ಕೆ. ಸೇವಾ ನಿವೃತ್ತಿ

ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ ತಿರುಮಲೇಶ್ವರ ಕಡ್ತಲ್‌ಕಜೆ (ಅಬೀರ)ರವರು 24 ವರ್ಷಗಳ ಸೇವೆ ಸಲ್ಲಿಸಿ ಸೆ.30ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.ಇವರು ತಮ್ಮ ವಿದ್ಯಾಭ್ಯಾಸವನ್ನು 1 ರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ, 8 ರಿಂದ ಪ್ರಥಮ ಪಿಯುಸಿಯನ್ನು ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಇವರು ಸೆ.2000ರಲ್ಲಿ ಪಿಯುಸಿ ಓದುತ್ತಿದ್ದಾಗಲೇ ಸೇನೆಗೆ ಆಯ್ಕೆಗೊಂಡರು.‌ ಒಟ್ಟು 24...

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪುತ್ತೂರಿನ ಕಿಶೋರ್ ಬೊಟ್ಯಾಡಿ

ಕೋಟ ಶ್ರೀನಿವಾಸ ಪೂಜಾರಿಯವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಕಿಶೋರ್ ಕುಮಾರ್ ಬೊಟ್ಯಾಡಿ ಕಣಕ್ಕಿಳಿಸಲಾಗಿದೆ. ಪುತ್ತೂರಿನವರಾಗಿರುವ ಕಿಶೋರ್ ಕುಮಾ‌ರ್ ಅವರು ಬಿಜೆಪಿಯ ಯುವ ನಾಯಕರಾಗಿದ್ದು, ಈ ಹಿಂದೆ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೂ ಅವರ ಹೆಸರು ಕೇಳಿ ಬಂದಿತ್ತು.

ಕಸ ಎಸೆದ ಅಂಬಟೆಡ್ಕದ ಸ್ಟಿಕ್ಕರ್ ಕಟ್ಟಿಂಗ್ ಶಾಪ್ ನ ಮಾಲಕರಿಗೆ ರೂ. 5000 ದಂಡ

ಸುಳ್ಯ ಅಂಬಟೆಡ್ಕ ಬಳಿ  ಕಂಪ್ಯೂಟರೈಸ್ಡ್ ಸ್ಟಿಕರ್ ಕಟ್ಟಿಂಗ್ ಎಂಬ ಸಂಸ್ಥೆಯವರು ತಮ್ಮಲ್ಲಿಯ ಕಸದ ರಾಶಿಯನ್ನು ಅಂಬಟೆಡ್ಕ ಪ್ರೆಸ್ ಕ್ಲಬ್ ಬಳಿ ಬಿಸಾಕಿರುವುದಕ್ಕೆ ಸುಳ್ಯ ಪಟ್ಟಣ ಪಂಚಾಯತ್ ವತಿಯಿಂದ ಪರಿಶೀಲಿಸಿ 5000 ರೂ ದಂಡನೆ ವಿಧಿಸಲಾಯಿತು
Loading posts...

All posts loaded

No more posts

error: Content is protected !!