Ad Widget

ನೋಟಿಸ್ ನೀಡಲು ಆರಂಭಿಸಿದ ಬಳಿಕವು ಎಚ್ಚೆತ್ತುಕೊಂಡಿಲ್ಲ ವಾಹನ ಸವಾರರು – ಮತ್ತೆ ಮತ್ತೆ ನಿಯಮ ಉಲ್ಲಂಘನೆ!

ಸುಳ್ಯ : ಸುಳ್ಯ ನಗರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು ಇದನ್ನು ಪೋಲಿಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಿ ನ್ಯಾಯಲಯದಲ್ಲಿ ದಂಡ ಕಟ್ಟುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು. ಸುಳ್ಯದ ರಾಮ ಭಜನಾ ಮಂದಿರದ ಮುಂಭಾಗದಲ್ಲಿ ಕೆಲ ವಾಹನ ಸವಾರರು ಪಾರ್ಕಿಂಗ್ ನಿಯಮ ಉಲ್ಲಂಘಿಸಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು, ಸರತಿ ಸಾಲಿನಲ್ಲಿ ಮೂರು ಕಾರುಗಳು...

ವಳಲಂಬೆ: ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಗಾಂಧಿ ಜಯಂತಿ ಪ್ರಯುಕ್ತ ಸ್ತ್ರೀಶಕ್ತಿ ಸಂಘ ವಳಲಂಬೆ, ಸಂಜೀವಿನಿ ಸಂಘ ವಳಲಂಬೆ, ಅಂಗನವಾಡಿ ಪೋಷಕ ವೃಂದದವರು, ಹಿರಿಯ ವಿದ್ಯಾರ್ಥಿ ಸಂಘದವರು ಜಂಟಿಯಾಗಿ ಅಂಗನವಾಡಿ ಕೇಂದ್ರದ ಸುತ್ತಮುತ್ತಲು ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಚ್ಛತಾ ಕಾಯಕ್ರಮಕ್ಕೆ ಉಪಾಹಾರವನ್ನು ಚಂದ್ರಾವತಿ ಅಂಗನವಾಡಿ ಕಾಯಕರ್ತೆ, ಜೀವನ್ ದಂಬೆಕೋಡಿ, ಮತ್ತು ಚೈತನ್ಯ ವಳಲಂಬೆ ಇವರು ನೀಡಿ ಸಹಕರಿಸಿದರು.
Ad Widget

ಉಬರಡ್ಕ : ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಯುವಕ ಮಂಡಲ ಉಬರಡ್ಕ ಮಿತ್ತೂರು ಇದರ ವತಿಯಿಂದ ಉಬರಡ್ಕ ಬಸ್ ತಂಗುದಾಣ ಸ್ವಚ್ಛತೆ ಮತ್ತು ಉಬರಡ್ಕ ಪಂಚಾಯತ್ ನವರೊಂದಿಗೆ ಸೇರಿಕೊಂಡು ಉಬರಡ್ಕ ಪೇಟೆಯಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಗಾಂಧಿಜಯಂತಿ ಪ್ರಯುಕ್ತ ಮಾಡಲಾಯಿತು.ಈ ಸಂದರ್ಭದಲ್ಲಿ ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ – ಹೈಸ್ಕೂಲ್ ವಿಭಾಗದಲ್ಲಿ ಆಲೆಟ್ಟಿಯ ಪೂರ್ವಿಕಾ ಕೆ.ವಿ. ಪ್ರಥಮ

ದ.ಕ.ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.‌ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಆಲೆಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ವಿಕಾ ಕೆ.ಎಲ್. ಅವರು ಮಂಡಿಸಿದ ಪ್ರಬಂಧಕ್ಕೆ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ದೊರೆತಿದೆ.

ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ – ಪದವಿ ಪೂರ್ವ ವಿಭಾಗದಲ್ಲಿ ಗುತ್ತಿಗಾರಿನ ಕು.ಶ್ರೀಪೂರ್ಣ ಪ್ರಥಮ

ದ.ಕ.ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.‌ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ವಿದ್ಯಾರ್ಥಿನಿ ಗುತ್ತಿಗಾರಿನ ಶ್ರೀಪೂರ್ಣ ಜಿ.ಎಲ್. ಅವರು ಮಂಡಿಸಿದ ಪ್ರಬಂಧಕ್ಕೆ ಜಿಲ್ಲಾ ಮಟ್ಟದ ಪ.ಪೂ.ವಿಭಾಗಲ್ಲಿ ಪ್ರಥಮ ಸ್ಥಾನ ದೊರೆತಿದ್ದು, ಜಿಲ್ಲಾಧಿಕಾರಿಯರಿಂದ ಬಹುಮಾನ ಪಡೆದುಕೊಂಡರು. ಈಕೆ ಧಾರ್ಮಿಕ ಪರಿಷತ್ ಸದಸ್ಯರಾದ ಗುತ್ತಿಗಾರು ಗ್ರಾಮದ ಲಕ್ಷ್ಮೀಶ ಗಬ್ಲಡ್ಕ ಹಾಗೂ ಕುಮುದಾ ರವರ ಪುತ್ರಿ.

ಅರಂತೋಡು ಗ್ರಾಮ ಪಂಚಾಯತ್ ಸ್ವಚ್ಛತಾ ಮೇಲ್ವಿಚಾರಕಿ ಸೌಮ್ಯ ಲತಾ ರವರಿಗೆ ಸ್ವಚ್ಛತಾ ಹೀ ಸೇವಾ ಆಂದೋಲನ ಪುರಸ್ಕಾರ

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜನಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರ ಸಚಿವಾಲಯ ಗ್ರಾಮಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರ0ತೋಡು ಗ್ರಾಮ ಪಂಚಾಯತಿನ ಸ್ವಚ್ಛತಾ ಮೇಲ್ವಿಚಾರಕಿ ಸೌಮ್ಯ ಲತಾ ರವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್  ಅವರು ಸಮಾರಂಭದಲ್ಲಿ...

ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಹ್ಯಾಮರ್ ಥ್ರೋ ನಲ್ಲಿ ಭಾಗವಹಿಸಿದ ಜ್ಯೋತಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಸಚಿನ್ ಕೆ ಹಾಗೂ ಬಾಲಕಿಯರ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ರಕ್ಷಾ ಕೆ.ಎ. ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ. ಶಾಲಾ ದೈ ಹಿಕ ಶಿಕ್ಷಕರಾದ ನಿತಿನ್ ಎಂ ಎಂ ತರಬೇತಿ ನೀಡಿದ್ದಾರೆ.

ಕನಕಮಜಲಿನ ಕಹಾನಿ ಯೋಗೀಶ್ ಬುಡ್ಡೆಗುತ್ತು ಅವರಿಗೆ ಫಸ್ಟ್ ವಿನ್ನ‌ರ್ ಪ್ರಶಸ್ತಿ

ಮಿಸ್ಸಿ ಮಿಸ್ಟರ್ ಟೀನ್ ಮಿಸ್ ಕರ್ನಾಟಕ ಸೀಸನ್ 2 ಸ್ಪರ್ಧೆಯಲ್ಲಿ ಮೂಲತಃ ಕನಕಮಜಲು ಗ್ರಾಮದ ಬುಡ್ಡೆಗುತ್ತುವಿನವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಕಹಾನಿ ಯೋಗೀಶ್ ಅವರು ಫಸ್ಟ್ ವಿನ್ನರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೆ.29ರಂದು ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಜಾ ನೆಕ್ಸಸ್ ಮಾಲ್ ನಲ್ಲಿ ಜರುಗಿದ ಸೀಸನ್ 2 ಕಾರ್ಯಕ್ರಮದಲ್ಲಿ ಒಟ್ಟು 14 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಈಕೆ ಕನಕಮಜಲು...

ಗುತ್ತಿಗಾರು : ವರ್ತಕರಿಂದ ಸ್ವಚ್ಛತಾ ಕಾರ್ಯ

ಗುತ್ತಿಗಾರಿನ ಮೇಲಿನ ಪೇಟೆಯಲ್ಲಿರುವ ಶ್ರೀನಿಧಿ ಕಾಂಪ್ಲೆಕ್ಸ್ ನ ವರ್ತಕರು ಮತ್ತು ಸಿಬ್ಬಂದಿ ವರ್ಗ ಗಾಂಧಿ ಜಯಂತಿ ಪ್ರಯುಕ್ತ ಕಾಂಪ್ಲೆಕ್ಸ್ ನ ಸುತ್ತಮುತ್ತ ಸ್ವಚತೆ ಗೊಳಿಸಿದರು.‌ ವಕೀಲರಾದ ಹರೀಶ್ ಪೂಜಾರಿಕೋಡಿ ಮತ್ತಿತರರು ಪಾಲ್ಗೊಂಡರು.

ವಳಲಂಬೆ : ಸ್ವಚ್ಛ ಭಾರತ ವಿಷನ್ ಯೋಜನೆ ಅಂಗವಾಗಿ ಗಾಂಧಿ ಜಯಂತಿಯಂದು ಸ್ವಚ್ಛತಾ ಕಾರ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ "ಸ್ವಚ್ಛ ಭಾರತ ವಿಷನ್" ಯೋಜನೆ ಅಂಗವಾಗಿ ಗಾಂಧಿ ಜಯಂತಿಯ ದಿನದಂದು ಪ್ರತಿಯೊಬ್ಬ ನಾಗರೀಕನು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಾಗೂ ಸೇವಾ ಪಾಕ್ಷಿಕ ಕಾರ್ಯಯೋಜನೆ ಮಾಡಬೇಕು ಎಂದು ಕರೆ ನೀಡಿದ್ದರು. ಇದರ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್ ವಳಲಂಬೆ ಯವರ ನೇತೃತ್ವದಲ್ಲಿ ಗುತ್ತಿಗಾರು ಶಕ್ತಿ ಕೇಂದ್ರ...
Loading posts...

All posts loaded

No more posts

error: Content is protected !!