Ad Widget

ದುಲ್ಫುಕಾರ್ ಧಫ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಸಿದ್ದೀಕ್ ಕೊಡಿಯಮ್ಮೆ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ನ್ಯಾಷನಲ್, ಕೋಶಾಧಿಕಾರಿಯಾಗಿ ಅಬ್ದುಲ್ ಕಲಾಂ ಆಯ್ಕೆ

ಸುಳ್ಯದಲ್ಲಿ ಸ್ಥಾಪಿತಗೊಂಡಂತಹ ದುಲ್ಫುಕಾರ್ ಧಫ್ ಅಸೋಸಿಯೇಷನ್(ರಿ.) ಹಲವಾರು ಧಾರ್ಮಿಕ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಸ್ಥಗಿತ ಗೊಂಡಿದ್ದ ಸಂಘದ ಚಟುವಟಿಕೆಗಳನ್ನು ಮತ್ತೆ ಸಕ್ರಿಯಗೊಳಿಸಲು ಸಂಘವನ್ನು ಪುನರ್ ರಚಿಸಲಾಗಿದೆ.  ಸಂಘದ ಮಾಜಿ ಅಧ್ಯಕ್ಷರಾದ ಹನಿಫ್ ಬಿ. ಎಂ. ಇವರ ಅಧ್ಯಕ್ಷತೆಯಲ್ಲಿ ಸುಳ್ಯದ ಅನ್ಸಾರ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ...

ಕೇಂದ್ರ ಸಚಿವ ಹೆಚ್. ಡಿ . ಕುಮಾರಸ್ವಾಮಿಯವರನ್ನು ಅಗೌರವಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜೆ.ಡಿ.ಎಸ್. ಮನವಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗೌರವಾನ್ವಿತ ಬೃಹತ್ ಕೈಗಾರಿಕೆ ಉಕ್ಕು ಹಾಗೂ ಗಣಿ ಸಚಿವರಾದ  ಹೆಚ್. ಡಿ . ಕುಮಾರಸ್ವಾಮಿಯವರನ್ನು ಅಸಹನೀಯ ಪದ ಬಳಕೆ ಬಳಸಿ ಅಗೌರವಿಸಿರುವುದನ್ನು ಸುಳ್ಯ ತಾಲೂಕು ಜನತದಳವು ಖಂಡಿಸುತ್ತದೆ. ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ದುರುದ್ದೇಶದಿಂದ ಕೇಂದ್ರ ಸಚಿವರನ್ನು ಅವಮಾನಗೊಳಿಸಿರುವ ಲೋಕಾಯುಕ್ತ ಎ.ಡಿ.ಜಿ.ಪಿ. ಚಂದ್ರಶೇಖರ್ ಇವರ ವಿರುದ್ಧ...
Ad Widget

ಅವನಿ ಎಂ.ಎಸ್. ಯೋಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಶಾಲಾ 14 ರ ವಯೋಮಾನದ ಅಥ್ಲೆಟಿಕ್ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಅವನಿ ಎಂ.ಎಸ್.ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಶ್ರೀಮತಿ ರೇಷ್ಮಾ ಮತ್ತು...

ಆನೆಗುಂಡಿ ಬಳಿ ಮರಬಿದ್ದು ರಸ್ತೆ ಬಂದ್, ವಿದ್ಯುತ್ ಕಂಬಕ್ಕೆ ಹಾನಿ

ಮಾಣಿ ಮೈಸೂರು ಹೆದ್ದಾರಿಯ ಆನೆಗುಂಡಿ ಬಳಿ ಬೃಹತ್ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುಳ್ಯ 33ಕೆ.ವಿ. ವಿದ್ಯುತ್ ಲೈನ್ ಕಂಬಕ್ಕೆ ಹಾನಿಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಸುಳ್ಯಕ್ಕೆ ವಿದ್ಯುತ್ ಸಂಪರ್ಕ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸುಳ್ಯ : ತಪಾಸಣೆಗೆಂದು ಕರೆತಂದ ಕೈದಿ ಆಸ್ಪತ್ರೆಯಿಂದ ಪರಾರಿ

ಸುಳ್ಯ ಸರಕಾರಿ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದ ಕೈದಿಯೊರ್ವ ಪರಾರಿಯಾದ ಘಟನೆ ಇದೀಗ ವರದಿಯಾಗಿದೆ. ಪೋಲಿಸ್ ಅಧಿಕಾರಿಗಳು ಕೈದಿ ಓರ್ವನನ್ನು ಆರೋಗ್ಯ ತಪಾಸಣೆ ಮಾಡಿಸಲು ಆಸ್ಪತ್ರೆಗೆ ಇಬ್ಬರು ಪೋಲಿಸರು ಕರೆ ತಂದಿದ್ದು ಈ ವೇಳೆ ಓರ್ವ ಪೋಲಿಸ್ ಚೀಟಿ ಮಾಡಿಸುವ ಸಂದರ್ಭದಲ್ಲಿ ಕೈದಿ ತನ್ನ ಕೈಯಲ್ಲಿ ಇದ್ದ ಕೋಳದೊಂದಿಗೆ ಎಸ್ಕೆಪ್ ಆಗಿದ್ದು ಇದೀಗ ಪೋಲಿಸ್ ಅಧಿಕಾರಿಗಳು ಹುಡುಕಾಟ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಅಧ್ಯಯನ ಪ್ರವಾಸ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಸುಬ್ರಹ್ಮಣ್ಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ವಾಣಿಜ್ಯ ವಿಭಾಗದಿಂದ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ಸಕಲೇಶಪುರದ ಕಾಡುಮನೆ ಟೀ ಎಸ್ಟೇಟ್ಗೆ ಡಾ.ವಿನ್ಯಾಸ್ ಮತ್ತು ಕೃತಿಕಾ ಇವರ ನೇತೃತ್ವದಲ್ಲಿ ಅಧ್ಯಯನ ಪ್ರವಾಸವನ್ನು ಕೈಗೊಂಡರು. ಒಟ್ಟು 70 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅರಂಬೂರು: ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ ಎಸ್ ಎಸ್ ಪೂರಕ -ಕೆ.ಆರ್.ಗಂಗಾಧರ್

ಅರಂಬೂರು: ಕರ್ನಾಟಕ ಸರಕಾರ , ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (ಪದವಿಪೂರ್ವ)ಮತ್ತು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 16 ನೇ ವರ್ಷದ ವಾರ್ಷಿಕ ವಿಶೇಷ ಶಿಬಿರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ- ಅರಂಬೂರಿನಲ್ಲಿ ರಾಜ್ಯ ಉತ್ತಮ ಶಿಕ್ಷಕ ಪುರಸ್ಕೃತ ಮುಖ್ಯೋಪಾಧ್ಯಾಯರಾದ ಶ್ರೀ ದಿವಾಕರ್...

ಕುಕ್ಕೆಯಲ್ಲಿ ನಟಿ ರಕ್ಷಿತಾ ಪ್ರೇಮ್ ರವರಿಂದ ಹುಲಿವೇಷ ವೀಕ್ಷಣೆ

ಸುಬ್ರಹ್ಮಣ್ಯ ಅ.4: ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಪ್ರೇಮ್ ಹಾಗೂ ಅವರ ಪತ್ನಿ ನಟಿ ರಕ್ಷಿತಾ ಪ್ರೇಮ್ ಅವರು ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ತದನಂತರ ಕಾರಲ್ಲಿ ಹೊರಡುವ ಸಮಯದಲ್ಲಿ ನವರಾತ್ರಿಯ ವಿಶೇಷ ದಿನದಂದು ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಹುಲಿ ವೇಷವನ್ನು ಕಂಡು ಕಾರಿನಿಂದ ಇಳಿದರು.ತಕ್ಷಣ...

ರಮೇಶ್ ನಾಯಕ್ ಮದಕ ನಿಧನ

ಉಬರಡ್ಕ ಮಿತ್ತೂರು ಗ್ರಾಮದ ಮದಕ ರಮೇಶ್ ನಾಯಕ್ (57) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಕೆಲ ವರ್ಷಗಳ ಹಿಂದೆ ವಿದ್ಯುತ್ ಗುತ್ತಿಗೆದಾರರ ಜತೆ ಲೈನ್ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಶಶಿಕಲಾ, ತಾಯಿ ವಿಮಲಾ, ಸಹೋದರರಾದ ಉಮೇಶ್ ನಾಯಕ್, ದಿವಾಕರ ನಾಯಕ್, ಸಹೋದರಿ ಸತ್ಯವತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಮೈಸೂರಿನ ಯುವದಸರಕ್ಕೆ ಆಯ್ಕೆ

ಮೈಸೂರಿನಲ್ಲಿ ನಾಡ ಹಬ್ಬದ ಪ್ರಯುಕ್ತ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಎಸ್ಎಸ್ ಕಾಲೇಜಿನ ಸಾಂಸ್ಕೃತಿಕ ತಂಡ ಯುವದಸರಕ್ಕೆ ಆಯ್ಕೆಯಾಗಿದೆ.. ದಕ್ಷಿಣ ಕನ್ನಡದ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತ ಪಡಿಸಿದ ಈ ತಂಡ ತೀರ್ಪುಗಾರರ ಮೆಚ್ಚುಗೆ ಪಡೆದು ಆಯ್ಕೆಯಾಗಿದೆ.. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ ಟಿ ಅವರ ಮಾರ್ಗದರ್ಶನದಲ್ಲಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಡಾ. ವಿನ್ಯಾಸ್...
Loading posts...

All posts loaded

No more posts

error: Content is protected !!