- Wednesday
- November 27th, 2024
ಅ.13 ರಂದು ನಿಧನರಾದ ನಿವೃತ್ತ ಯೋಧ ಕೃಷ್ಣಪ್ರಸಾದ್ ಕೂಜುಗೋಡುರವರ ಮನೆಯಲ್ಲಿ ನಿವೃತ್ತ ಯೋಧರಿಂದ ಅಂತಿಮ ನಮನ ಸಲ್ಲಿಸಿಸುವ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ಮನೆಯವರು, ನಿವೃತ್ತ ಯೋಧರು, ಊರವರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.
ಚೆಂಬು ಗ್ರಾಮದ ಊರುಬೈಲು ಹರೀಶ ಹಾಗೂ ಭಾರತಿ ದಂಪತಿಗಳ ಪುತ್ರ 9 ನೇ ತರಗತಿ ವಿದ್ಯಾರ್ಥಿ ಕುಶಾಂತ್ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಅ. 13ರಂದು ಮನೆಯಿಂದ ಔಷಧಿಗೆಂದು ತೆರಳಿದವನು ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ. ಮಗ ಸಂಜೆಯಾದರೂ ಮನೆಗೆ ಬಾರದಿದ್ದುದರಿಂದ ಮನೆಯವರು ಹುಡುಕಾಟ ಆರಂಭಿಸಿದ್ದು, ಪೋಲೀಸರಿಗೂ ದೂರು ನೀಡಿದ್ದಾರೆಂದು ತಿಳಿದುಬಂದಿದೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಿದ್ದಲ್ಲಿ...
ಕಳೆದ ಕೆಲವು ವರ್ಷಗಳಿಂದ ಅವಿನಾಶ್ ಬಸ್ ನಲ್ಲಿ ಕಂಡೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಕುಂಚಡ್ಕದ ಗುರು ಪ್ರಸಾದ್ ಮೃತಪಟ್ಟ ದುರ್ದೈವಿ. ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಅಡ್ಯಡ್ಕ ತಲುಪುವ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರಿಕ್ಷಾವೊಂದರಲ್ಲಿ ಸುಳ್ಯಕ್ಕೆ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ...
ಕೊಡಿಯಾಲ ಗ್ರಾಮದ ಅಜಿರಂಗಳ (ದಿಂಬ್ರಿಗುತ್ತು) ದಿ. ಚಿಕ್ಕಪ್ಪ ರೈಗಳ ಧರ್ಮಪತ್ನಿ ಸುಶೀಲ ರೈ(೭೮) ರವರು ಅ.13 ರಂದು ಸಂಜೆ ಸುಮಾರು ೭ ಗಂಟೆಗೆ ನಿಧನ ಹೊಂದಿದ್ದಾರೆ. ಇಂದು ಪೂ. 11 ಗಂಟೆಗೆ ಮೃತರ ವಿಧಿವಿಧಾನ ಕಾರ್ಯವು ಅಜಿರಂಗಳ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಪುತ್ರ ದಿವಾಕರ ರೈ, ಸೊಸೆ ಕಸ್ತೂರಿ, ಮಗಳು ಹೇಮಲತಾ,...
ಬೆಥನಿ ಪಿ.ಯು ಕಾಲೇಜು ನೂಜಿಬಾಳ್ತಿಲ ಇಲ್ಲಿ ನಡೆದ ಗುಡ್ಡಗಾಡು ಓಟದಲ್ಲಿ ಅರಂತೋಡಿನ ಎನ್.ಎಂ.ಪಿ.ಯು. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಪ್ತಿ ಕೆ.ಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಹಾಗೂ ಇತ್ತೀಚೆಗೆ ನಿಂತಿಕಲ್ಲಿನಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಅಥ್ಲೆಟಿಕ್ಸ್ ನಲ್ಲಿ 3000,1500,800m ಓಟದಲ್ಲಿ ಪ್ರಥಮ ಸ್ಥಾನ ಹಾಗೂ ವೈಯಕ್ತಿಕ ಚಾಂಪಿಯನ್ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈಕೆ...
ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿ ಪಲ್ಟಿಯಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಸಂಪಾಜೆ ಶಾಲೆಯ ಬಳಿ ನಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಕೊಡಗು ಸಂಪಾಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಪಾಜೆ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಐನೆಕಿದು ಗ್ರಾಮದ ನಿವಾಸಿ, ನಿವೃತ್ತ ಯೋಧ ಕೃಷ್ಣಪ್ರಸಾದ ಕೂಜುಗೋಡು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆ ಯಲ್ಲಿ ಅ.13 ರಂದು ರಂದು ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸವಿತಾ, ಪುತ್ರಿಯರಾದ ಸಾದ್ವಿ, ಸಾಕ್ಷಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ. ಇವರು ಭಾರತೀಯ ಸೇನೆಯಲ್ಲಿ ಸುಮಾರು 23 ವರ್ಷಗಳ ಕಾಲ ಸೇವೆ...
ಸುಬ್ರಹ್ಮಣ್ಯ ಅ.13: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಮಹತ್ವಕಾಂಕ್ಷಿ ಯೋಜನೆ ಯಾದ ನೂತನ ಸಮುದಾಯ ಭವನದ ನಿರ್ಮಾಣ ಕಾರ್ಯ ಪ್ರಗತಿಯ ಹಂತದಲ್ಲಿರುತ್ತದೆ. ತಾಲೂಕಿನ 42 ಗ್ರಾಮಗಳ ಸಜಾತಿಬಾಂಧವರ ಮನೆಗಳನ್ನು ಭೇಟಿ ಮಾಡುವ ಅಂಗವಾಗಿ ಸುಬ್ರಹ್ಮಣ್ಯ ಗ್ರಾಮದಲ್ಲಿ ಒಕ್ಕಲಿಗ ಗೌಡ ಸಮುದಾಯದ ಸುಮಾರು 300 ಮನೆಗಳನ್ನು ಶನಿವಾರ ಭೇಟಿ ಮಾಡಲಾಯಿತು. ಹಾಗೂ...
ತನ್ನ ಮನದ ನೋವುಗಳ ಇತರರಿಂದ ಮುಚ್ಚಿಡುವ ಆ ವ್ಯಕ್ತಿಯು ತನ್ನ ಕನಸಿನಲ್ಲೂ ಕೂಡ ಕಣ್ಣೀರ ಸುರಿಸುವನು, ನಾಲ್ಕು ಜನರ ಮಧ್ಯೆ ಮಾತ್ರ ನಗುನಗುತ್ತಾ ಬದುಕುವನು…ನಿದ್ರೆಯಿಲ್ಲದೇ ಅದೆಷ್ಟೋ ರಾತ್ರಿಗಳ ಕಳೆದಿರುವನು ಅವನು, ನಾಳೆಗಳ ಯೋಚನೆಯಲ್ಲಿ ಕೊರಗಿ ಕರಗಿರುವನು ಅವನು, ಏಕಾಂಗಿಯಾಗಿ ಅತ್ತು ತನ್ನ ಮನದ ನೋವುಗಳಿಗೆ ತಾನೇ ಔಷಧಿಯ ನೀಡುವನು ಅವನು…ಎಲ್ಲರ ಮನಸ್ಸಿನ ನೋವುಗಳೇ ಅವನಲ್ಲೂ, ಎಲ್ಲರ...
Loading posts...
All posts loaded
No more posts