- Wednesday
- November 27th, 2024
ಸುಳ್ಯ ಅಟಲ್ ನಗರದ ಕೋಡಿಮೂಲೆ ಎಂಬಲ್ಲಿ ಕಳೆದ ರಾತ್ರಿ ಡಿ.ಎಸ್ ಗಿರೀಶ್ ದೇವರಗುಂಡ ರವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿಗೆ ಹಾನಿ ಮಾಡಿದೆ. 5 ಅನೆಗಳ ಹಿಂಡು ದಾಳಿ ನಡೆಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನುಷ್ಯ ತನ್ನ ಜೀವನದಲ್ಲಿ ಸಮಾಜಕ್ಕೆ ಕಿಂಚಿತ್ ಸೇವೆಯನ್ನು ಮಾಡುವ ಮೂಲಕ ಸಾರ್ಥಕ ಜೀವನವನ್ನು ಕಟ್ಟಿಕೊಳ್ಳಬೇಕು. ರೆಡ್ ಕ್ರಾಸ್ ಸಂಸ್ಥೆ ಬಹಳಷ್ಟು ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದು ಅದರ ದ್ಯೇಯೋದ್ದೇಶವನ್ನು ಅರಿತು ಸೇವಾ ಮನೋಭಾವದೊಂದಿಗೆ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಿ. ಆ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಎಂದು ಸುಳ್ಯದ ಪ್ರಭಾರ ತಹಶೀಲ್ದಾರರಾದ ಮಂಜುನಾಥ್ ಎಂ ಅಭಿಪ್ರಾಯಪಟ್ಟರು. ಅವರು ಸುಳ್ಯದ...
ಸುಳ್ಯ ದ ವಿಷ್ಣು ಸರ್ಕಲ್ ಬಳಿಯಲ್ಲಿ ಕಳೆದ ರಾತ್ರಿ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಡಿಸೈರ್ ಕಾರ್ (KL 14 V 2721) ಚಾಲಕನ ನಿಯಂತ್ರಣ ತಪ್ಪಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನಕ್ಕೆ ತಿರುಗುವಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರ್ ಮುಂಭಾಗ ಜಖಂಗೊಂಡಿದ್ದು ವಿದ್ಯುತ್ ಕಂಬ ತುಂಡಾಗಿ ಕಾರ್ ನ ಮೇಲೆ...
ಸುಳ್ಯ : ಐವರ್ನಾಡು ಗ್ರಾಮದ ಕೃಷಿಕರಾದ ಸಿ. ಕೆ. ನವೀನ್ ಚಾತುಬಾಯಿಯವರೀಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ದೊರೆತಿದೆ.ಶಿವಮೊಗ್ಗದ ನವುಲೆ ವಿಶ್ವವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 18 ರಿಂದ 24ರ ವರೆಗೆ ನಡೆದ ಕೃಷಿ ಮತ್ತು ತೋಟಗಾರಿಕೆ ಮೇಳ 2024ರಲ್ಲಿ...
ವರಮಹಾಲಕ್ಷ್ಮಿ ಆಚರಣಾ ಸಮಿತಿಯ 2023-24ನೇ ಸಾಲಿನ ಲೆಕ್ಕಪತ್ರ ಮಂಡನೆ ಹಾಗೂ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಅ.19 ರಂದು ಸಮಿತಿಯ ಅಧ್ಯಕ್ಷರಾದ ವಾಣಿ ಯಶವಂತ ಉಳುವಾರು ಇವರ ಉಪಸ್ಥಿತಿಯಲ್ಲಿ ನಡೆಯಿತು. 2023-24ನೇ ಸಾಲಿನ ಖರ್ಚು-ವೆಚ್ಚದ ಲೆಕ್ಕಾಚಾರವನ್ನು ಖಜಾಂಜಿಯಾದ ಗೀತಾ ಜಯಪ್ರಕಾಶ್ ಉಳುವಾರು ರವರು ಮಂಡಿಸಿದರು. ಎಲ್ಲರೂ ಸರ್ವಾನುಮತದಿಂದ ಅನುಮೋದಿಸಿದರು. ನಂತರ 2023-24ನೇ ಸಾಲಿನ ನೂತನ ವರಮಹಾಲಕ್ಷ್ಮಿ...
ಎಲಿಮಲೆಯ ಸರಕಾರಿ ಪ್ರೌಢಶಾಲೆಯ ಕಾಂಕ್ರೀಟ್ ರಸ್ತೆ ಹಾಗೂ ಶಾಲೆಯ ನೂತನ ದ್ವಾರದ ಉದ್ಘಾಟನೆ ಇಂದು ನಡೆಯಿತು. ನೂತನ ಕಾಂಕ್ರೀಟ್ ರಸ್ತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಹಾಗೂ ದ್ವಾರದ ಉದ್ಘಾಟನೆಯನ್ನು ಎಲಿಮಲೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದಯಾನಂದ.ಎನ್.ಕೆ. ನೆರವೇರಿಸಿದರು. ತಾಲೂಕು ಮಟ್ಟದ ಕ್ರೀಡಾಕೂಟದ ಕ್ರೀಡಾಂಗಣದ ಕಾಮಗಾರಿಗೆ...
ಬೇಂಗಮಲೆಯಲ್ಲಿ ಕಸ ಎಸೆದವರಿಗೆ ಪಂಚಾಯತ್ ನಿಂದ ದಂಡ ವಿಧಿಸಿದ ಘಟನೆ ನಡೆದಿದ್ದು ಕಸ ಎಸೆದವರಿಂದಲೇ ತ್ಯಾಜ್ಯ ವಿಲೇವಾರಿಗೊಳಿಸಲಾಯಿತು.ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯ ನಿವಾಸಿ ಲಿಂಗಣ್ಣ ಎಂಬವರಿಗೆ ಪಂಚಾಯತ್ ರೂ 6000.00 ದಂಡ ವಿಧಿಸಿದ ಘಟನೆ ನಡೆದಿದೆ.ಆ.19 ರಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದಿದ್ದಾರೆ ಎಂಬ...
ಕೊಡಗು ಜಿಲ್ಲಾ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ಆರೋಪಿಗಳಾದ ಹರಿಪ್ರಸಾದ್ ಮತ್ತು ಜಯನ್ರವರಿಗೆ ಜೀವಾವಧಿ ಸಜೆಯನ್ನು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇಂದು ಘೋಷಿಸಿದೆ. ಬಾಲಚಂದ್ರ ಕಳಗಿಯವರು ಚಲಾಯಿಸುತ್ತಿದ್ದ ಒಮಿನಿ ಕಾರಿಗೆ 2019 ಮಾ.19 ರಂದು ಲಾರಿ ಗುದ್ದಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಸಂಪತ್, ಹರಿಪ್ರಸಾದ್ ಮತ್ತು...
ಸುಳ್ಯದ ಗಾಯಕ, ಸಾಹಿತಿ, ಜ್ಯೋತಿಷಿ ಎಚ್ ಭಿಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಅದ್ದೂರಿ ವಾಷ್ಠರ್ ಫೈವ್ ಸ್ಟಾರ್ ಆರ್ಕೆಸ್ಟ್ರಾ ಕಾರ್ಯಕ್ರಮವು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಜರುಗಿತು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸಪ್ತಸ್ವರ ಮೆಲೋಡಿಸ್ ಜಂಟಿ ಸಹಯೋಗದಲ್ಲಿ ಸುಳ್ಯ ದಸರಾ ಹಬ್ಬದ ಶ್ರೀ ಶಾರದಾಂಬಾ ದೇವಿಯ ಶೋಭಾಯಾತ್ರೆಯ ಪ್ರಯುಕ್ತ ಅದ್ದೂರಿ ಸಂಗೀತ...
ಸುಳ್ಯದ 33 /11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆ.ವಿ. ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ಕೆಲಸ ಹಮ್ಮಿಕೊಂಡಿರುವುದರಿಂದ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ದೇವರಗುಂಡ,ಅಜ್ಜಾವರ ಡಿಪೋ, ಜಬಳೆ, ಉಬರಡ್ಕ, ಮಂಡೆಕೋಲು, ತೊಡಿಕಾನ, ಕಲ್ಲುಗುಂಡಿ, ಕೋಲ್ಚಾರ್ ಪೀಡರುಗಳಲ್ಲಿ ಅ.19 ರಂದು ಬೆಳಿಗ್ಗೆ ಗಂಟೆ 10 ರಿಂದ ಸಂಜೆ 6 ರ ತನಕ ವಿದ್ಯುತ್ ವ್ಯತ್ಯಯ...
Loading posts...
All posts loaded
No more posts