- Tuesday
- November 26th, 2024
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವೈಧ್ಯರು ಹಾಗೂ 108 ಅಂಬ್ಯುಲೆನ್ಸ್ ಸಿಬ್ಬಂದಿಗಳ ನಡುವೆ ಶೀತಲ ಸಮರ ಮುಂದುವರೆದಿದ್ದು, ಇವರಿಬ್ಬರ ಜಗಳದಲ್ಲಿ ರೋಗಿಗಳನ್ನು ಕಂಗಾಲಾಗುವಂತೆ ಮಾಡಿದೆ. ಇದೀಗ ರೋಗಿಯೊಬ್ಬರನ್ನು ಮಂಗಳೂರಿಗೆ ಕರೆದೊಯ್ಯಲು 108 ಆಂಬುಲೆನ್ಸ್ ನವರು ಒಪ್ಪದೇ ಇದ್ದು ಬಳಿಕ ರೋಗಿಯನ್ನು ಬೇರೆ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆವರವಾನಿಸಿದ ಘಟನೆ ಇಂದು ನಡೆದಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 108 ವಾಹನ...
ಸುಳ್ಯ ವಲಯ ಗಾಂಧಿನಗರ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆ ಯೋಜನಾ ಕಚೇರಿ ಸಭಾಭವನದಲ್ಲಿ ಅ.27 ರಂದು ನಡೆಯಿತು. ತ್ರೈಮಾಸಿಕ ಸಭೆಯಲ್ಲಿ ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡರವರು ಮಾಹಿತಿ ನೀಡಿದರು. ಸಂಘದ ಬದ್ಧತೆಗಳ ಬಗ್ಗೆ , ಬಡ್ಡಿ ಲೆಕ್ಕಾಚಾರಗಳ ಬಗ್ಗೆ, ಒಕ್ಕೂಟದಲ್ಲಿ ಸದಸ್ಯರಿಗೆ ಮಂಜೂರಾದ ಪ್ರಗತಿ ರಕ್ಷಾ ಕವಚದ ಮೊತ್ತ ಜಾಗೂ, ಪ್ರಗತಿ ರಕ್ಷಾ ಕವಚ ಮಾಡುವುದರಿಂದ...
ಕೊಡಿಯಾಲ ಗ್ರಾಮದ ಮೂವಪ್ಪೆ ಬೂತ್ (ಬೂತ್ ನಂ.79) ಅಧ್ಯಕ್ಷರದ ಪೂರ್ಣಿಮಾ ಅವರ ಮನೆಯಲ್ಲಿ ಇಂದು ಮನ್ ಕಿ ಬಾತ್ ಕಾರ್ಯಕ್ರಮ ನಡೆಯಿತು. ನಂತರ ಗಿಡ ನೆಡುವ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ,ಹಿರಿಯರಾದ ಚಿದಾನಂದ ಉಪಾಧ್ಯಾಯ, ಮೂವಪ್ಪೆ ಬೂತ್ ಕಾರ್ಯದರ್ಶಿ ಶೋಭಾ ಕಲ್ಪಡ, ಕೊಡಿಯಾಲ ಶಕ್ತಿಕೇಂದ್ರ ಪ್ರಮುಖ್ ಚೇತನ್ ಕೊಡಿಯಾಲ, ಕುಕ್ಕಪ್ಪ ಕುಂಟಿನಿ, ಬೂತ್ ಸಮಿತಿ ಸದಸ್ಯರು ಹಾಗೂ...
ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸುಳ್ಯ ವಲಯ ಸಮಿತಿ ಇದರ ವತಿಯಿಂದ ವಿಜಿಲೆಂಡ್ ವಿಖಾಯ ತರಬೇತಿ ಶಿಬಿರ ವಿಖಾಯ ಚಯರ್ಮೆನ್ ಮಹಮ್ಮದ್ ಕೆ ಎ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು ನಡೆಯಿತು. ಕಾರ್ಯಕ್ರಮವನ್ನು ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್ ಹನೀಫಿ ಉದ್ಘಾಟಿಸಿದರು. ಪ್ರಥಮ ಸೆಕ್ಷನ್ ಶಿಬಿರವನ್ನು ಅಜ್ಮಲ್ ಪೈಝಿ ಕೋಟ ಮಾತನಾಡಿ...
ಅರಂತೋಡು ಗ್ರಾಮದ ಊರುಬೈಲ್ (ಬೆದ್ರುಪಣೆ ) ಪುರುಷೋತ್ತಮ ಎಂಬವರ ಮನೆಯಲ್ಲಿ ದಾಸವಾಳ ಗಿಡದಲ್ಲಿ ಅವಳಿ ಹೂ ಅರಳಿದ್ದು ಪ್ರಕೃತಿಯ ವಿಸ್ಮಯ ಜನರಲ್ಲಿ ಕುತೂಹಲ ಮೂಡಿಸಿದೆ. (ಚಿತ್ರ : ನಿತಿನ್ ಬೆದ್ರುಪಣೆ)
ಸುಳ್ಯ: ಕರಿಯಮೂಲೆಯಲ್ಲಿ ಈ ಹಿಂದೆ ನಿರ್ಮಿಸಲಾದ ಅಂಗನವಾಡಿ ಕೇಂದ್ರದಲ್ಲಿ ಕೆಲ ಸಮಸ್ಯೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯು ತಾತ್ಕಾಲಿಕವಾಗಿ ವಿಷ್ಣು ನಗರದಲ್ಲಿರು ಮನೆಯೊಂದನ್ನು ಅಂಗನವಾಡಿ ಕೇಂದ್ರವಾಗಿ ಮಾರ್ಪಾಡು ಮಾಡಲು ತೀರ್ಮಾನಿಸಿದ್ದರು. ಈ ಹಿನ್ನಲೆಯಲ್ಲಿ ವಿಷ್ಣು ನಗರದ ಮನೆಯ ಪರಿಸರದಲ್ಲಿ ಊರವರಿಂದ ಶ್ರಮದಾನ ನಡೆಸಲಾಯಿತು.
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಿತಿಯ ಪದಾಧಿಕಾರಿಗಳ ನೇಮಕವನ್ನು ಎನ್.ಎಸ್.ಯು.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಧನುಷ್ ಕುಕ್ಕೇಟಿ ಮತ್ತು ಜಿಲ್ಲಾ ಎನ್.ಎಸ್.ಯು.ಐ ಉಪಾದ್ಯಕ್ಷರು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಉಸ್ತುವಾರಿಗಳಾದ ಕೀರ್ತನ್ ಗೌಡ ಕೊಡಪಾಲ ರವರ ನೇತೃತ್ವದಲ್ಲಿ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸುಹನ್ ಆಳ್ವ...
ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ವಿದ್ಯಾ ಬೋಧಿನಿ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. 17ರ ವಯೋಮಿತಿಯ ಬಾಲಕರ ತಂಡ ಪ್ರಶಸ್ತಿ ,17ರ ವಯೋಮಿತಿಯ ಬಾಲಕಿಯರ ತಂಡ ಪ್ರಶಸ್ತಿ, 17ರ ವಯೋಮಿತಿಯ ಬಾಲಕ/ ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿವಿಧ ಕ್ರೀಡಾ ವಿಭಾಗದಲ್ಲಿ ವಿದ್ಯಾರ್ಥಿಗಳು ಜಿಲ್ಲಾ...
ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಕುಮಾರಧಾರ ನದಿಯಲ್ಲಿ ಹರಿದು ಬಂದು ಭಕ್ತಾದಿಗಳ ಸ್ನಾನಘಟ್ಟ ಬಳಿಯ ವೆಂಟೆಡ್ ಡ್ಯಾಮ್ ಬಳಿ ಮರ, ಕಸ, ಕಡ್ಡಿ, ಕಲ್ಲು ,ಸೇರಿಕೊಂಡು ನೀರು ಶೇಖರಣೆಗೊಂಡು ಮಲಿನ ಗೊಂಡಿತ್ತು. ಇದನ್ನು ಮನಗಂಡ ರವಿ ಕಕ್ಕೆ ಪದವು ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್...
Loading posts...
All posts loaded
No more posts