ಫ್ರೆಂಡ್ಸ್ ಸಮಾಹಾದಿ ಆಶ್ರಯದಲ್ಲಿ ನಡೆಯಲಿರುವ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಬಿಡುಗಡೆ

ಫ್ರೆಂಡ್ಸ್ ಸಮಾಹಾದಿ ಮುರುಳ್ಯ ಇದರ ಆಶ್ರಯದಲ್ಲಿ ಸೆ.21ರಂದು ನಡೆಯುವ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಸುಳ್ಯ ಶಾಸಕಿ ಕುಮಾರಿ  ಭಾಗೀರಥಿ ಮುರುಳ್ಯ ಅವರಿಗೆ ನೀಡುವ ಮೂಲಕ  ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಸಮಾಹಾದಿ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಖ್ಯಾತ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ “ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ”

ಕರ್ನಾಟಕ ಭಾವೈಕ್ಯ ಪರಿಷತ್ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಜೊತೆಯಾಗಿ ಸೆ-14 ರಂದು ಮಂಗಳೂರಿನ ದೇರಳಕಟ್ಟೆಯ ನವಾಝ್ ಬಿಲ್ಡಿಂಗ್ನ ಸಭಾಂಗಣದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಅರ್ಥಗರ್ಭಿತ ಮೂರು ಚುಟುಕುಗಳನ್ನು ವಾಚಿಸಿದ ಖ್ಯಾತ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಣ್ಯ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Ad Widget

ಮೈಸೂರಿನ ಚಿನ್ನು ಪಿಚ್ಚರ್ಸ್ ಪ್ರೊಡಕ್ಷನ್ ಹೌಸ್ ತಂಡದಿಂದ ಮಂಡೆಕೋಲು ಅರಿವು ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆ

ಮೈಸೂರಿನ ಚಿನ್ನು ಪಿಚ್ಚರ್ಸ್ ಪ್ರೊಡಕ್ಷನ್ ಹೌಸ್ ತಂಡದಿಂದ ಮಂಡೆಕೋಲು ಗ್ರಾಮ ಪಂಚಾಯತ್ ನ ಗ್ರಂಥಾಲಯದ ಯಕ್ಷಗಾನ ತಂಡದ ಎಲ್ಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಈ ತಂಡದ ಸದಸ್ಯರಾದ ಪ್ರೋಪಸರ್ ಪುರುಷೋತ್ತಮ್ ಅಗ್ನಿ, ಚಿನ್ನೂ ಪಿಚ್ಚರ್ಸ್ ತಂಡದ ನಿರ್ದೇಶಕರಾದ ರಾಘುನಾಯಕ್ , ತಂಡದ ಸದಸ್ಯರಾದ ಶ್ರೀವತ್ಸಾ, ಡಾ ಸ್ವಾತಿ, ಡಾ ತನ್ಮಯಿಯವರು ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.  ತಂಡದ...

ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸನ್ಮಾನ

2024-25 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ  ಪರೀಕ್ಷೆಯಲ್ಲಿ 100 ಪ್ರತಿಶತ ಫಲಿತಾಂಶ  ಪಡೆದ ಸುಳ್ಯ  ರೋಟರಿ ಸಂಸ್ಥೆಯ ಪ್ರಾಂಶುಪಾಲರನ್ನು ಮತ್ತು ಉಪನ್ಯಾಸಕರನ್ನು ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ  ಕಾಲೇಜುಗಳ ಪ್ರಾಚಾರ್ಯರ ಸಂಘ(ರಿ.) ಮಂಗಳೂರು ವತಿಯಿಂದ ಸೆಪ್ಟೆಂಬರ್ 14 ರಂದು ಎಕ್ಸೆಲೆಂಟ್ ಪ.ಪೂ ಕಾಲೇಜು ಮೂಡುಬಿದಿರೆ ಇಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ತಮ್ಮ ಶ್ರೇಷ್ಠ ಸಾಧನೆ...

ಶೇ.100 ಫಲಿತಾಂಶ ಪಡೆದ ಗುತ್ತಿಗಾರು ಕಾಲೇಜಿಗೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ

ಹಳ್ಳಿ ಪ್ರದೇಶಗಳಲ್ಲಿ ಅಪ್ಪಟ ಹಳ್ಳಿ ಪ್ರದೇಶದ ಮಕ್ಕಳಿಗೆ ಯಾವುದೇ ಖಾಸಗಿ ವಿದ್ಯಾಸಂಸ್ಥೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಕ್ರೀಡಾ ಕ್ಷೇತ್ರದಲ್ಲಿ ಕೂಡ ಸಾಧನೆ ತೊರೆಯುತ್ತಿರುವ ಸರಕಾರಿ ಕಾಲೇಜು ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಶಿಕ್ಷಣ ಸಂಸ್ಥೆಯು‌ 2024-25ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ...

ಅಡ್ತಲೆ : ಚಾಮುಂಡಿ ನವೋದಯ ಸ್ವ ಸಹಾಯ ಸಂಘದಿಂದ ಕು.ಸುಶ್ಮಿತಾಳಿಗೆ ಸನ್ಮಾನ

ಶ್ರೀ ಚಾಮುಂಡಿ ನವೋದಯ ಸ್ವ ಸಹಾಯ ಸಂಘ ಅಡ್ತಲೆ, ಕಾಯರ ಮರ್ಕಂಜ ಇವರ ವತಿಯಿಂದ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಕು.ಸುಶ್ಮಿತಾ ಎಂ.ಎ ಬೆದ್ರುಪಣೆಯವರಿಗೆ ಸನ್ಮಾನ ಕಾರ್ಯಕ್ರಮ ಸೆ. 12 ರಂದು ಬಾಲಚಂದ್ರ ಕೊಡಪಾಲ ಅಡ್ತಲೆ ಇವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಬೇಬಿ ಕೆ. ಕಾರ್ಯದರ್ಶಿ ಶ್ರೀಮತಿ ಸವಿತಾ...

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದ ಶ್ರೀಮತಿ ಲಲಿತಾ ಕುಮಾರಿ ಅವರಿಗೆ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದ ಕೊಲ್ಲಮೊಗ್ರದ ಬೆಂಡೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಅವರಿಗೆ ಇಂದು(ಸೆ.14) ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ,...

ಸೆ.15 : 500ನೇ  ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ವೀರ ರಾಣಿ ಅಬ್ಬಕ್ಕ ರಥಯಾತ್ರೆ ಸುಳ್ಯಕ್ಕೆ – ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಗತಿಸುವಂತೆ ವೆಂಕಟ್ ವಳಲಂಬೆ ಮನವಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಇದರ ನೇತೃತ್ವದಲ್ಲಿ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ 500ನೇ  ಜಯಂತ್ಯೋತ್ಸವ ಪ್ರಯುಕ್ತ  ರಥಯಾತ್ರೆ ಆರಂಭಗೊಂಡಿದೆ. ರಥಯಾತ್ರೆಯು ಸೆ.15 ರಂದು ಸಂಜೆ 6 ಗಂಟೆಗೆ ಸುಳ್ಯದ ಗಾಂಧಿನಗರಕ್ಕೆ ಆಗಮಿಸಲಿದೆ. ದೇಶಾಭಿಮಾನಿಗಳು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸ್ವಾಗತಿಸಲು ತಿರ್ಮಾನಿಸಲಾಗಿದ್ದು, ಬಳಿಕ  ಪಂಜಿನ...

ಸುಳ್ಯ : ವೆಂಕಟರಮಣ ಸೊಸೈಟಿ ಮಹಾಸಭೆ – 2.28 ಕೋಟಿ ರೂ. ಲಾಭ – 15 ಶೇ. ಡಿವಿಡೆಂಡ್ ಘೋಷಣೆ

ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಮಹಾಸಭೆ ಸೆ.14 ರಂದು ಸಂಘದ ಅಧ್ಯಕ್ಷರಾದ ಕೆ.ಸಿ.ಸದಾನಂದ  ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು “ನಮ್ಮ ಸಂಘವು ವಾರ್ಷಿಕ ಉತ್ತಮ ವ್ಯವಹಾರ ನಡೆಸಿದ್ದು 2.28 ಲಕ್ಷ ಲಾಭಾಂಶ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.15% ಡಿವಿಡೆಂಡ್ ನೀಡುವುದು” ಎಂದು ಘೋಷಿಸಿದರು.‌ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಸ್ಥಾಪಕಾಧ್ಯಕ್ಷ,...

ತಾಲೂಕಿನ ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯ ಗಳಲ್ಲಿ ರೇಬಿಸ್ ರೋಗನಿರೋಧಕ ಲಸಿಕೆ ಉಚಿತವಾಗಿ ಲಭ್ಯ

ತಾಲೂಕಿನ ಪಶು ಆಸ್ಪತ್ರೆ ಸುಳ್ಯ ಹಾಗೂ ಬೆಳ್ಳಾರೆ, ಗುತ್ತಿಗಾರು ಮತ್ತು ಕಳಂಜ ಪಶು ಚಿಕಿತ್ಸಾಲಯಗಳಲ್ಲಿ ದಿನಾಂಕ 16.9.2025 ರಿಂದ ಹುಚ್ಚುನಾಯಿ ರೋಗ(ರೇಬಿಸ್) ನಿರೋಧಕ ಲಸಿಕೆಯು ಉಚಿತವಾಗಿ ಲಭ್ಯವಿದ್ದು ಎಲ್ಲಾ ನಾಯಿ ಮತ್ತು ಬೆಕ್ಕುಗಳ ಮಾಲೀಕರು ಕೆಲಸದ ವೇಳೆಯಲ್ಲಿ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಂಪರ್ಕಿಸಿ ತಮ್ಮ ಸಾಕುಪ್ರಾಣಿಗಳಿಗೆ ಉಚಿತವಾಗಿ ಲಸಿಕೆ ಪಡೆದುಕೊಳ್ಳುವಂತೆ ಪಶುಸಂಗೋಪನಾ ಇಲಾಖೆಯ ಪ್ರಕಟಣೆಯಲ್ಲಿ ಸಹಾಯಕ...
Loading posts...

All posts loaded

No more posts

error: Content is protected !!