Ad Widget

ಸುಳ್ಯ: ಬೀರಮಂಗಲ ಉದ್ಯಾನವನಕ್ಕೆ ಪುತ್ತೂರು ಎ. ಸಿ ಭೇಟಿ – ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತೆ ನಗರ ಪಂಚಾಯತ್ ಗೆ ಸೂಚನೆ

ಸುಳ್ಯದ ಬೀರಮಂಗಲದಲ್ಲಿ ನಾಗರೋಥ್ಥಾನ ಯೋಜನೆಯಡಿ ನಿರ್ಮಾಣವಾಗಿರುವ ಉದ್ಯಾನವನಕ್ಕೆ ಪುತ್ತೂರು ಸಹಾಯಕ ಆಯುಕ್ತರು ಇಂದು ಭೇಟಿ ನೀಡಿದರು. ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಸುಳ್ಯದ ಪ್ರವಾಸಿ ಮಂದಿರದಲ್ಲಿ ಎ. ಸಿ ಯವರನ್ನು ಭೇಟಿಯಾಗಿ ಉದ್ಯಾನವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ಮಾಣದ ಬಗ್ಗೆ ಗಮನಕ್ಕೆ ತಂದ ಸಂದರ್ಭದಲ್ಲಿ ಉದ್ಯಾನವನಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ...

ನ.8 ರಂದು ಸುಬ್ರಹ್ಮಣ್ಯ ದೇವರ ಹಳ್ಳಿಯಲ್ಲಿ ಉಚಿತ ಹೊಲಿಗೆ ಮಿಷನ್ ವಿತರಣೆ ಹಾಗೂ ತರಬೇತಿ

ಸುಬ್ರಹ್ಮಣ್ಯ ರೋಟರಿ ಕ್ಲಬ್ ಆಶ್ರಯದಲ್ಲಿ ಬೆಂಗಳೂರು ಮಹಾಲಕ್ಷ್ಮಿ ಸೆಂಟ್ರಲ್ ರೋಟರಿ ಕ್ಲಬ್ ನವರು ಕೌಶಲ್ಯ ಅಭಿವೃದ್ಧಿ ಯೋಜನೆ ಅನ್ವಯ ಸುಬ್ರಹ್ಮಣ್ಯದ ದೇವರಹಳ್ಳಿ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಮಿಷಿನ್ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮವನ್ನು ನಡೆಸಲಿರುವರು.ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರ್ ವಹಿಸಲಿರುವರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ...
Ad Widget

ಆಲೆಟ್ಟಿ : ವಿದ್ಯಾರ್ಥಿ ಆತ್ಮಹತ್ಯೆ

ಕಲ್ಲೆಂಬಿಯ ರಾಘವ ಬೆಳ್ಳಪ್ಪಾಡ ಎಂಬವರ ಪುತ್ರ ಮಿಥುನ್ ರಾಜ್( 26) ಎಂಬ ಯುವಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮನೆಯವರು ಸುಳ್ಯಕ್ಕೆ ಬಂದಿದ್ದಾಗ ಪುನಃ ಮನೆಗೆ ಹಿಂತಿರುಗಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ. ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ಮಹಜರು ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಮೃತ ಪಟ್ಟ ಯುವಕ ಸುಳ್ಯದ ಕೆ.ವಿ.ಜಿ.ಕಾನೂನು...

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಪ್ರಿಯ ಜಿಲ್ಲಾ ಮಟ್ಟದ ಅಡೆತಡೆ ಓಟದಲ್ಲಿ ದ್ವಿತೀಯ ಸ್ಥಾನ

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಇಲಾಖೆ ವತಿಯಿಂದ ನಡೆದ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಕ್ರೀಡಾಕೂಟದ 80 ಮೀಟರ್ ಅಡೆತಡೆ ಓಟದಲ್ಲಿ ವಿದ್ಯಾಬೋಧಿನೀ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ| ಹರ್ಷಪ್ರಿಯ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಐವರ್ನಾಡು ಶ್ರೀಮತಿ ದೀಪ ಆರ್ ಮತ್ತು ಶ್ರೀ ಕುಮಾರ್ ಎಂ ದಂಪತಿಗಳ ಪುತ್ರಿ.

ಕೋಲ್ಚಾರು ಶಾಲೆಯಲ್ಲಿ ಭೀಮರಾವ್ ವಾಷ್ಠರ್ ತಂಡದಿಂದ ವಿಶೇಷ ಗೀತ ಗಾಯನ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ - ಸಾಹಿತ್ಯ ಸಂಭ್ರಮ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುವಿಚಾರ ವೇದಿಕೆ ವತಿಯಿಂದ ರಾಜ್ಯದಲ್ಲಿ ಮಲೆನಾಡ ಗಾಂಧಿ ದಿ. ಗೋವಿಂದೇಗೌಡ ಸ್ಮರಣಾರ್ಥ ನೀಡುವ ಅತ್ತ್ಯುತ್ತಮ ಶಾಲೆ ಪುರಸ್ಕಾರ ಪಡೆದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರು ಶಾಲೆಯ ಸಭಾಂಗಣದಲ್ಲಿ ಸುಳ್ಯದ ಖ್ಯಾತ ಗಾಯಕ, ಜ್ಯೋತಿಷಿ ಮತ್ತು ಸಾಹಿತಿಗಳಾದ...

ಮಾಜಿ ಸಚಿವ ಎಸ್.ಅಂಗಾರರು ಬೇಡಿಕೆ ಸಲ್ಲಿಸಿದ್ದ ರಸ್ತೆಗಳ ಅಭಿವೃದ್ಧಿಗೆ ಈಗ ಅನುದಾನ ಮಂಜೂರು

ಎಸ್‌.ಅಂಗಾರರು ಸಚಿವರಾಗಿದ್ದ 2022-23ನೇ ಸಾಲಿನಲ್ಲಿ ಸುರಿದ ಬಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿಗಾಗಿ ಮಳೆ ಪರಿಹಾರ ಕಾರ್ಯಕ್ರಮದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದ 3 ಕೋಟಿ ರೂ.ಗಳ ಕಾಮಗಾರಿಗಳ ಪಟ್ಟಿಗೆ ಆಗಿನ ಸರಕಾರ ಮಂಜೂರಾತಿ ನೀಡಿತ್ತು. ಆ ಪಟ್ಟಿಯಲ್ಲಿದ್ದ. ಈ ಕೆಳಗೆ ಉಲ್ಲೇಖಿಸಲಾದ ರಸ್ತೆಗಳ ಅಭಿವೃದ್ಧಿಗೆ...

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಸಭೆ – ಅಧ್ಯಕ್ಷರಾಗಿ ಮಧುಸೂಧನ,  ಪ್ರ.ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಕೋಶಾಧಿಕಾರಿಯಾಗಿ ವಿಜಯಕುಮಾರ್ ಆಯ್ಕೆ

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಸಭೆ 04/11/2024 ಸೋಮವಾರದಂದು ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ದ.ಕ. ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷರಾದ ಶ್ರೀಯುತ ವಿಶ್ವನಾಥ ಶೆಟ್ಟಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಹಾಗೂ...

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ *ಎತ್ತ ಸಾಗುತ್ತಿದೆ ದೇಶ ಕಟ್ಟುವ ಯುವಜನತೆ ವಿಷಯದ ಕುರಿತ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ದಿನಾಂಕ 08-11-2024 ರಂದು ರಾತ್ರಿ 8.30ಕ್ಕೆ ಬಿತ್ತರಗೊಳ್ಳಲಿದೆ. ಇದನ್ನು ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಆಲಿಸಬಹುದು. ಈ ಹಿಂದೆ...

ಕಲ್ಕಿ ಮೊಬೈಲ್ ಶಾಪ್ ನಲ್ಲಿ ದೀಪಾವಳಿಯ ಲಕ್ಕಿ ಕೂಪನ್ ಡ್ರಾ

ಸುಳ್ಯದ ಬಸ್ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿರುವ ಕಲ್ಕಿ ಮೊಬೈಲ್ ಶೋ ರೂಮ್‌ನಲ್ಲಿ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಕೂಪನ್ ಡ್ರಾ ಇಂದು ನಡೆಯಿತು. ತಾ.ಪಂ. ಮಾಜಿ ಅಧ್ಯಕ್ಷ ಶಂಕರ ಪೆರಾಜೆ ಡ್ರಾ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅನುಗ್ರಹ ಹೋಟೆಲ್ ನ ಕುಸುಮಾಧರ, ಸಂಭ್ರಮ ಇಲೆಕ್ಟ್ರಾನಿಕ್ಸ್ ನ ರೋಹಿತ್, ಮಾಧವ ಬೆಟ್ಟಂಪಾಡಿ, ಮಹೇಶ್ ಗುಡ್ಡೆಮನೆ, ಲಿಗೋಧರ...

ಸುಬ್ರಹ್ಮಣ್ಯ : ನ.10 ರಂದು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ, ಜೆ.ಆರ್.ಸಿ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಆಟೋ ಚಾಲಕ-ಮಾಲಕರ ಸಂಘ(ರಿ.), ಯುವ ತೇಜಸ್ಸು ಟ್ರಸ್ಟ್,...
Loading posts...

All posts loaded

No more posts

error: Content is protected !!