Ad Widget

ಅಡ್ಕಾರು : ಕ್ಯಾನ್ಸರ್‌ ಬಗ್ಗೆ ಜಾಗೃತಿ ಕಾರ್ಯಕ್ರಮ

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ(ರಿ.) ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು, ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ ಜಾಲ್ಸೂರು ಇವುಗಳ ಸಹಯೋಗದೊಂದಿಗೆವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕ್ಯಾನ್ಸರ್‌ ಬಗ್ಗೆ ಜಾಗೃತಿ ಕಾರ್ಯಕ್ರಮ ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಸಭಾಭವನ ಫೆ.5 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯ ಗ್ರಾಮೀಣಾಬಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್‌ರವರು ಉದ್ಘಾಟಿಸಿದರು. ವಿಜಯ...

ರಾಷ್ಟ್ರೀಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಶ್ರೀಮತಿ ಹರ್ಷಿತಾ.ಕೆ ತೇರ್ಗಡೆ

ಕೇಂದ್ರ ಸರಕಾರ ಉನ್ನತ  ಶಿಕ್ಷಣ ಇಲಾಖೆ ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಸಹಯೋಗದೊಂದಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸುವ  ರಾಷ್ಟ್ರೀಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ  ಪರೀಕ್ಷೆ (ಯುಜಿಸಿ ನೆಟ್ ಡಿಸೆಂಬರ್-2025) ಯಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಶ್ರೀಮತಿ ಹರ್ಷಿತಾ.ಕೆ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಇವರು ಬೆಳ್ಳಾರೆ ತಡಗಜೆ ಪ್ರಜ್ವಲ್ ನಾಯಕ.ಟಿ ಇವರ ಪತ್ನಿ ಹಾಗೂ...
Ad Widget

ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಎಸ್.ವೆಂಕಪ್ಪ ಗೌಡ ; ಉಪಾಧ್ಯಕ್ಷರಾಗಿ ಪ್ರವೀಣ್ ರೈ ನಳೀಲು

ಪುತ್ತೂರು : ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪೆರುವಾಜೆ ಗ್ರಾಮದ ಪೆರ್ಜಿ ನಾರ್ಕೋಡು ಎನ್.ಎಸ್.ವೆಂಕಪ್ಪ ಗೌಡ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್ ರೈ ನಳೀಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಫೆ.4ರಂದು ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ...

“ಅಳಿವಿನ ಅಂಚಿನಲ್ಲಿರುವ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ” : ಡಾ. ಡಿ.ವೀರೇಂದ್ರ ಹೆಗ್ಗಡೆ

ಕಾಸರಗೋಡು : “ಯಕ್ಷಗಾನ ಬೊಂಬೆಯಾಟವೂ ಸೇರಿದಂತೆ ಅಳಿವಿನ ಅಂಚಿನಲ್ಲಿರುವ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ. ಈ ನಿಟ್ಟಿನಲ್ಲಿ ಮಾದರಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿರುವ ಕಾಸರಗೋಡಿನ ಕೆ.ವಿ. ರಮೇಶ ಅಭಿನಂದನಾರ್ಹರು” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನೂತನ ಅಭಿಯಾನವಾದ 'ಗಣ್ಯರೆಡೆಗೆ ಬೊಂಬೆ...

ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ದಿನೇಶ್ ಅಂಬೆಕಲ್ಲು ರವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾಗತ

ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಪಿಸಿಸಿಯಿಂದ ನೇಮಕಗೊಂಡ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ದಿನೇಶ್ ಅಂಬೆಕಲ್ಲು ರವರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದು, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಾಫ, ಬ್ಲಾಕ್ ಕಾಂಗ್ರೆಸ್...

ಸುಬ್ರಹ್ಮಣ್ಯ : ಅಮೇರಿಕಾದಲ್ಲಿ ನ್ಯಾಯಾಧೀಶರಾಗಿರುವ ಸುರೇಂದ್ರನ್.ಕೆ ಪಟೇಲ್ ಕುಮಾರಸ್ವಾಮಿ ವಿದ್ಯಾಲಯಕ್ಕೆ ಭೇಟಿ

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯಕ್ಕೆ ಕೇರಳ ಮೂಲದ ಪ್ರಸ್ತುತ ಅಮೆರಿಕದ  ಟೆಕ್ಸಾಸ್ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರನ್.ಕೆ ಪಟೇಲ್ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂಕೀರ್ತ ಹೆಬ್ಬಾರ್ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:05-02-2026 ಗುರುವಾರ 📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 01,🐏ಮೇಷ ರಾಶಿ🐏🌺,ಹೊಸ ವ್ಯಕ್ತಿಗಳ ಪರಿಚಯಗಳು ಉಂಟಾಗುತ್ತವೆ. ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳ ಬೆಂಬಲ ಹೆಚ್ಚಾಗುತ್ತದೆ, ಅಮೂಲ್ಯವಾದ ವಸ್ತು ಮತ್ತು ವಸ್ತ್ರ ಲಾಭಗಳು ದೊರೆಯುತ್ತವೆ. ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ,ಪರಿಹಾರ:- ಕುಲದೇವತೆಯ ಪ್ರಾರ್ಥನೆಯನ್ನು ಮಾಡಿ,02,🐂ವೃಷಭ ರಾಶಿ🐂🌺,ದೈವಿಕ ಸೇವಾ ಕಾರ್ಯಗಳಲ್ಲಿ...

ಡಾ. ಹರಪ್ರಸಾದ್ ತುದಿಯಡ್ಕರಿಗೆ ಆಯುಷ್ ಶ್ರೀ ಪ್ರಶಸ್ತಿ ಪ್ರದಾನ

ಡಾ. ಟಿ.ಎಂ.ಎ ಪೈ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ಮಂಗಳೂರಿನಲ್ಲಿ ಆಯೋಜಿಸಿದ್ದ ಆಯುಷ್ ಹಬ್ಬ 2026ರ ಅಂಗವಾಗಿ ನಡೆದ ಆಯುಷ್ ಅಭಿನಂದನಾ ಕಾರ್ಯಕ್ರಮದಲ್ಲಿ  ಡಾ.ಹರಪ್ರಸಾದ ತುದಿಯಡ್ಕ ರವರಿಗೆ  ಅವರ ವೈದ್ಯಕೀಯ ಸಾಧನೆಗಾಗಿ "ಆಯುಷ್ ಶ್ರೀ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

ಪೂರ್ಣಚಂದ್ರ ಕಣೆಮರಡ್ಕ ನಿಧನ

ಮಂಡೆಕೋಲು ಗ್ರಾಮದ  ಪೂರ್ಣಚಂದ್ರ ಕಣೆಮರಡ್ಕ ಅಸೌಖ್ಯದಿಂದ ಫೆ.04 ರಂದು ನಿಧನರಾದರು. ಅವರು  ಮಂಡೆಕೋಲು ಗ್ರಾ.ಪಂ.ಮಾಜಿ ಸದಸ್ಯರಾಗಿ, ಕಳೇರಿ ಉಳ್ಳಾಕುಲು ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾಗಿ, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಡಾ. ಹರಿಣಾಕ್ಷಿ ಕೇವಳ ಅವರಿಗೆ ಪಿ.ಎಚ್.ಡಿ ಪದವಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 21ನೇ ಘಟಿಕೋತ್ಸವದಲ್ಲಿ 2026 ಜ.31 ರಂದು ನಡೆದ ಸಮಾರಂಭದಲ್ಲಿ ಡಾ. ಹರಿಣಾಕ್ಷಿ ಎಂ.ಡಿ ಕೇವಳ ಇವರಿಗೆ ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಪಿ.ಎಚ್.ಡಿ ಪದವಿ ಪ್ರದಾನ ಮಾಡಿದರು. ಡಾ. ಹರಿಣಾಕ್ಷಿ ಅವರು ಉಡುಪಿಯ ಕಲ್ಯಾಣಪುರದಲ್ಲಿರುವ ಮಿಲಾಗ್ರಿಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಎಂ.ಫಿಲ್‌....
Loading posts...

All posts loaded

No more posts

error: Content is protected !!