- Saturday
- May 9th, 2026
ಅರಂತೋಡು ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗದ ಸಹಕಾರದೊಂದಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಆಗಸ್ಟ್ 23 ರಂದು ಅರಂತೋಡಿನ ಪಟೇಲ್ಸ್ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ ಗಂಟೆ 9:00 ರಿಂದ ಆರಂಭವಾಗಲಿದೆ.ಟೋಕನ್‌ಗಳನ್ನು ಸ್ಥಳದಲ್ಲೇ ಕೊಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಆಲೆಟ್ಟಿ ಗ್ರಾಮದ ಕರುಣಾಕರ ಪಾಂಗಲಾಯಿರವರು ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ 48ನೇ ಸಾಲಿನ ಮಹಾಸಭೆಯಲ್ಲಿ 2025-26ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಆಲೆಟ್ಟಿ ಗ್ರಾಮದ ತಲೆಪಳ್ಳ ನಾರಾಯಣ ನಾಯ್ಕರವರ ಪುತ್ರರಾಗಿರುವ ಇವರು ಕೇಂದ್ರ ಸರ್ಕಾರದ ನೌಕರಿಯಲ್ಲಿ ಸುಧೀರ್ಘ 40 ವರ್ಷಗಳ ಕಾಲ ಸೇವೆಗೈದು ನಿವೃತ್ತರಾದ ನಂತರ ಸಾಮಾಜಿಕ ಹಾಗೂ ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.
ಬೆಳ್ಳಾರೆಯ ಗ್ಲೋಬಲ್ ಸರ್ವಲೆನ್ಸ್ ಸಿಸ್ಟಮ್ ಸಂಸ್ಥೆ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು. ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಸಂಸ್ಥೆಗೆ ಭೇಟಿ ನೀಡಿ, ದೀಪ ಬೆಳಗಿಸಿ, ಆಶೀರ್ವಾದಿಸಿದರು.ಈ ಶುಭ ಸಂದರ್ಭದಲ್ಲಿ ಕೂಸಪ್ಪ ಗೌಡ ಮುಗುಪ್ಪು, ಪತ್ರಕರ್ತ ಯಶ್ವಿತ್ ಕಾಳಮನೆ, ಪ್ರೇಮ್ ಸ್ಟುಡಿಯೋ ಮಾಲಕ ಪ್ರೇಮ್ ಬೆಳ್ಳಾರೆ,...
ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಸಹಧರ್ಮಿಣಿ ದಿವಂಗತ ಕುರುಂಜಿ ಜಾನಕಿ ವೆಂಕಟ್ರಮಣ ಗೌಡರ 13ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ನುಡಿ ನಮನ ಕಾರ್ಯಕ್ರಮವು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆ.22ರಂದು ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್(ರಿ.) ಸುಳ್ಯ ಇದರ...
ವರ್ಲ್ಡ್ ಫೋಟೋಗ್ರಾಫಿ ಡೇ ಪ್ರಯುಕ್ತ ಆಯೋಜಿಸಿದ ಫೋಟೋ ಎಕ್ಸಿಬಿಷನ್ ಮತ್ತು ಮಕ್ಕಳ ರಾಧಾ ಕೃಷ್ಣ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆಯು ಆ.23 ಶನಿವಾರದಂದು ಬೆಳಗ್ಗೆ 10.30ಕ್ಕೆ ರೋಟರಿ ಕ್ಲಬ್, ರೋಟರಿ ಇನ್ನರ್ವೀಲ್, ರೋಟರಿ ಸಿಟಿ, ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯ ಇದರ ಸಹಯೋಗದಲ್ಲಿ ರೋಟರಿ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ.ಗಂಗಯ್ಯ ಗೌಡ ಮುಳುಗಾಡು ಅವರ ಧರ್ಮಪತ್ನಿ ಶ್ರೀಮತಿ ಸರೋಜಿನಿ ಗಂಗಯ್ಯ ಗೌಡ ಮುಳುಗಾಡು ಅಸೌಖ್ಯದಿಂದ ಆ.22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಬ್ಯಾಂಕ್ ಉದ್ಯೋಗಿರುವ ಇವರು ಶಂಖಶ್ರೀ ಮಹಿಳಾ ಮಂಡಲದ ಸ್ಥಾಪಕಾದ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಗುತ್ತಿಗಾರು ರಬ್ಬರ್...
ಅಂತಾರಾಷ್ಟ್ರೀಯ ಲಯನ್ಸ್, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಆ.21 ರಂದು ಹರಿಹರ ಪಳ್ಳತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ” ನಡೆಯಿತು.ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ| ಶ್ರೀಮತಿ ವಿಮಲಾ ರಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿಜಯದಾಸ್ ವಾಡ್ಯಪ್ಪನಮನೆ ಹಾಗೂ ಶಾಲಾ...
ಬಾಲಕೃಷ್ಣ ಗೌಡ ಚಿದ್ಗಲ್ಲು ಹೊಸೊಳಿಕೆ(73) ಇವರು ಬುಧವಾರ ಸಂಜೆ 7:00 ಗಂಟೆ ಸುಮಾರಿಗೆ ಸುಬ್ರಹ್ಮಣ್ಯದ ಹೊಸೊಳಿಕೆ ಸ್ವಗೃಹದಲ್ಲಿ ನಿಧನರಾಗಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು, ಬಂಧು-ಮಿತ್ರರನ್ನು ಅಗಲಿರುತ್ತಾರೆ.
ಸುಳ್ಯದ ಕೇರ್ಪಳದ ಬಾಡಿಗೆ ಮನೆಯೊಂದರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಸುಳ್ಯದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.ಬಾಡಿಗೆ ಮನೆಯಲ್ಲಿ ತನ್ನ ಸ್ನೇಹಿತರೊಂದಿಗೆ ವಾಸವಿದ್ದ ಅಭಿಜಾರ್ಜ್ ಇಂದು ಬೆಳಗ್ಗೆ ತಾನು ಮಲಗಿದ್ದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರ್ಪಳದ ಬಾಲಣ್ಣ ಎಂಬವರ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಅಭಿಜಾರ್ಜ್ ವಿರಾಜಪೇಟೆ ಮೂಲದವರು ಎಂದು ತಿಳಿದುಬಂದಿದೆ....
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಮರಕತದ ಕಿಂಡಿ ಅಣೆಕಟ್ಟಿಗೆ ಮಳೆಯ ಸಂದರ್ಭದಲ್ಲಿ ಭಾರಿ ಗಾತ್ರದ ಮರಗಳು ಬಂದು ಅಡ್ಡಲಾಗಿ ನಿಂತು ಸಮಸ್ಯೆಯಾಗಿರುವ ಬಗ್ಗೆ ವಿಪತ್ತು ನಿರ್ವಹಣಾ ಘಟಕಕಕ್ಕೆ ಮಾಹಿತಿ ದೊರೆತು.ಅದನ್ನು ಆ.20 ರಂದು ಅರಣ್ಯ ಇಲಾಖೆಯ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ತೆರವುಗೊಳಿಸುವ ಕಾರ್ಯವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸುಬ್ರಹಣ್ಯ...
Loading posts...
All posts loaded
No more posts
