Ad Widget

ಹಲಸಿನಹಣ್ಣು ತಲೆಗೆ ಬಿದ್ದು ಆಸ್ಪತ್ರೆ ಸೇರಿದ ವ್ಯಕ್ತಿಗೆ ಕೊರೊನಾ

ಕೇರಳ ತಿರುವನಂತಪುರಂನ ನಿವಾಸಿ ಆಟೋ ಚಾಲಕನೋರ್ವ ಹಲಸಿನಹಣ್ಣು ಕುಯ್ಯಲು ಹೋಗಿ ಮರವೇರಿ ದಾಗ ಇನ್ನೊಂದು ಹಲಸಿನಹಣ್ಣು ಅವರ ತಲೆಯ ಮೇಲೆ ಬಿದ್ದು ಚಿಕಿತ್ಸೆಗೆಂದು ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಂತೆ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ವರದಿಯಲ್ಲಿ ಲಭಿಸಿದೆ. ಇವರಿಗೆ ತಗುಲಿದ ಕೊರೋನ ಸೋಂಕಿನ ಹಿನ್ನೆಲೆ ಪರೀಕ್ಷಿಸಿದಾಗ ಯಾವುದೇ ಪ್ರಯಾಣ ಬೆಳೆಸಿದವರು ಅಥವಾ...

ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದೆ ತೇರ್ಗಡೆ ಗೊಳಿಸುವಂತೆ ರಾಜ್ಯದ ಸಂಘಟನೆಗಳಿಂದ ಮುಖ್ಯಮಂತ್ರಿ ಗಳಿಗೆ ಮನವಿ

ಶಿಕ್ಷಣ ಕ್ಷೇತ್ರದಲ್ಲಿ ಹಲವು ದಶಕಗಳು ಕೆಲಸ ನಿರ್ವಹಿಸಿದ ಸುಮಾರು 3-4 ದಶಕಗಳ ಅಪಾರ ಆಡಳಿತ ಹಾಗೂ ಶೈಕ್ಷಣಿಕ ಅನುಭವವುಳ್ಳ ನಿವೃತ್ತ ನಿರ್ದೇಶಕರುಗಳು , ಇಲಾಖೆಯ ಹತ್ತಾರು ಹಿರಿಯ ವಿಶ್ರಾಂತ ಅಧಿಕಾರಿಗಳು ಹಾಗು ಈ ಕ್ಷೇತ್ರದಲ್ಲಿ ಕೆಳಸ್ಥರದಲ್ಲಿ ಕೆಲಸ ನಿರ್ವಹಿಸುವ ಹಲವು ಮೂಲ ವಾರಸುದಾರರರ ಜೊತೆ ವಿಸ್ತೃತವಾಗಿ ಚರ್ಚಿಸಿದ  ನಾವು ಈ ದೇಶದ ಪ್ರಜ್ಞಾವಂತ ನಾಗರೀಕರಾಗಿ ಎಸ್ಎಸ್ಎಲ್...
Ad Widget

ವಿಟ್ಲದ ಲಿಂಕ್ ಕಾವಿನಮೂಲೆಯ ಕುಟುಂಬ ಕ್ವಾರಂಟೈನ್

ವಿಟ್ಲದಲ್ಲಿ ನಿನ್ನೆ ಕೊರೋನ ಪಾಸಿಟಿವ್ ಬಂದಿರುವ ಪೊಲೀಸ್ ಕಾನ್ಸ್‌ಟೇಬಲ್ ಬೆಳ್ಳಾರೆಯ ಕಾವಿನಮೂಲೆ ಎಂಬಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ. ಪೋಲಿಸ್ ಗೆ ಕೊರೊನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾವಿನಮೂಲೆಯಲ್ಲಿರುವ ಸೋಂಕಿತನ ಕುಟುಂಬವನ್ನು ಹೋಮ್ ಕ್ವಾರಂಟೆನ್ ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಕ್ವಾರಂಟೈನ್ ನಲ್ಲಿದ್ದವರಿಗೆ ಆಹಾರ ಪೂರೈಕೆ ಮಾಡಿದ ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ತುರ್ತು ಸೇವಾ ತಂಡ

ತಮಿಳುನಾಡಿಗೆ ಕೆಲಸ ನಿಮಿತ್ತ ತೆರಳಿದ್ದ ಸುಳ್ಯ ತಾಲೂಕಿನ ಏಳು ಮಂದಿ ಯುವಕರು ಲಾಕ್ ಡೌನ್ ಆದ ದಿನದಿಂದ ಊರಿಗೆ ಮರಳಲಾಗದೆ ಸಂಕಷ್ಟದಲ್ಲಿದ್ದರು. ತಮಿಳುನಾಡಿನಲ್ಲಿಯೇ ಎರಡು ತಿಂಗಳಿಗಿಂತಲೂ ಹೆಚ್ಚು ದಿನಗಳು ಕೆಲಸವಿಲ್ಲದೆ ಕಳೆದಿದ್ದು,ಮುಂದಕ್ಕೆ ಅಲ್ಲಿಯೇ ದಿನದೂಡಲು ಅಥವಾ ಊರಿಗೆ ಬರಲು ಖರ್ಚಿಗೆ ಹಣವಿಲ್ಲದೆ ಸಂಕಷ್ಟದಲ್ಲಿರುವಾಗ ಸುಳ್ಯ ದ ಎಸ್ಸೆಸ್ಸೆಫ್ ನ ನಾಯಕರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಹಾಯವನ್ನು...

ಸ್ವತಃ ಹೋಮ್ ಕ್ವಾರಂಟೈನ್‌ಗೆ ಒಳಗಾದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಸ್ವತಃ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮೇ.25ರಂದು ಬೆಳಗ್ಗೆ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಸಚಿವರು ಒಂದು ವಾರಗಳ ಕಾಲ ಸ್ವತಃ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ ಎಂದು ತಿಳಿದು ಬಂದಿದೆ.ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಮಹತ್ವದ...

ಬೂಡು ಅಪಾಯಕಾರಿ ವಿದ್ಯುತ್ ತಂತಿ- ಅಧಿಕಾರಿಗಳಿಂದ ಪರಿಶೀಲನೆ

ಬೂಡು ವಾರ್ಡಿನಲ್ಲಿ ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿಕೊಡುವಂತೆ ಮೆಸ್ಕಾಂಗೆ ನ ಪಂ ಸದಸ್ಯ ರಿಯಾಜ್ ಕಟ್ಟೆ ಕಾರ್ಸ್ ಹಾಗೂ ಸ್ಥಳೀಯರು ನೀಡಿದ ಮನವಿಯ ಹಿನ್ನಲೆ ಸುಳ್ಯ ನಗರ ಮೆಸ್ಕಾಂ ಅಧಿಕಾರಿ ಹರೀಶ್ ನಾಯಕ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಕಂಬಗಳು ಹಾಗೂ ಕೆಲವು ವಿದ್ಯುತ್ ಸಂಚರಿಸುವ ತಂತಿಗಳು ಮಾರ್ಗಕ್ಕೆ ಜೊತು...

ಕೆ ಬಿ ಅಬ್ದುಲ್ ಖಾದರ್ ಹಾಜಿ ಪೇರೋಲಿ ನಿಧನ

ಎಸ್ ಎಸ್ ಎಫ್ ಜಾಲ್ಸೂರು ಸೆಕ್ಟರ್ ಇದರ ಮಾಜಿ ಅಧ್ಯಕ್ಷರು ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರು ಅಬ್ದುಲ್ ನಾಸಿರ್ ಬಾಹಸನಿ ಹಾಗೂ ಎಸ್ ಎಸ್ ಎಫ್ ಸುಣ್ಣ ಮೂಲೆ ಶಾಖೆಯ ಕೋಶಾಧಿಕಾರಿ ಕಯಬು ಇವರ ತಂದೆಯವರಾದ ಕೆ ಬಿ ಅಬ್ದುಲ್ ಖಾದರ್ ಹಾಜಿ ಪೇರೋಲಿ (69) ಮೇ 24 ರಂದು...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಗೆ 6ನೇ ಬಲಿ

ಕೊರೊನಾಗೆ ಮಂಗಳೂರಿನಲ್ಲಿ ಮತ್ತೊಂದು ಬಲಿದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವ್ಯಕ್ತಿ ಸಾವು, ಹೃದಯದ ಕಾಯಿಲೆ ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ,ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ನಿನ್ನೆ ಸಾವನ್ನಪ್ಪಿದ್ದ ವ್ಯಕ್ತಿ , ಕೋವಿಡ್ ಟೆಸ್ಟ್ ನಲ್ಲಿ ವ್ಯಕ್ತಿಗೆ ಇಂದು ಕೊರೊನ ಪಾಸಿಟಿವ್ . ಮೃತಪಟ್ಟ ಬಳಿಕ ನಿನ್ನೆ ಕೊರೊನಾ ಟೆಸ್ಟ್ ಮಾಡಲಾಗಿತ್ತು ,ದಕ್ಷಿಣ ಕನ್ನಡ...

ಶಫೀಕ್ ಜಯನಗರ ಹುಟ್ಟುಹಬ್ಬ

ಜಯನಗರ ನಿವಾಸಿ ಹಸೈನಾರ್ ಜಯನಗರ ಹಾಗೂ ಸಪಿಯ ದಂಪತಿಗಳ ಪುತ್ರ ಮೋಹಮ್ಮದ್ ಶಫೀಕ್ ರವರ ಹದಿಮೂರನೆಯ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಜಯನಗರ ಮನೆಯಲ್ಲಿ ಇಂದು (ಮೇ ೨೫) ಆಚರಿಸಲಾಯಿತು.

ಗ್ರಾ.ಪಂ.ಗಳಿಗೆ ನಾಮನಿರ್ದೇಶನ ಬದಲು ಚುನಾವಣೆ ನಡೆಸಲು ಒತ್ತಾಯ

ಸರಕಾರ ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆ ಮಾಡುವ ಪ್ರಕ್ರಿಯೆ ಸರಿಯಲ್ಲ. ಕೂಡಲೇ ಸರ್ಕಾರದಿಂದ ಆಡಳಿತ ಅಧಿಕಾರಿ ನೇಮಕ ಮಾಡಬೇಕು ಅಥವಾ ಚುನಾವಣೆ ನಡೆಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಅರಂತೋಡು ಗ್ರಾ.ಪಂ.ಸದಸ್ಯ ರವೀಂದ್ರ ಪಂಜಿಕೋಡಿ ಒತ್ತಾಯಿಸಿದ್ದಾರೆ.
Loading posts...

All posts loaded

No more posts

error: Content is protected !!