- Monday
- May 4th, 2026
ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ 2025-2028ನೇ ಸಾಲಿನ ಆಡಳಿತ ಸಮಿತಿ ಸದಸ್ಯರ ಪ್ರಥಮ ಸಭೆ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ್ ರೈಯವರ ಅಧ್ಯಕ್ಷತೆಯಲ್ಲಿ ಅರಂಬೂರಿನ ಹೋಟೆಲ್ ರಸಪಾಕ ಗ್ರ್ಯಾಂಡ್ ನಲ್ಲಿ ಜರುಗಿತು.2025-2028ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು.ಗೌರವಾಧ್ಯಕ್ಷರಾಗಿ ಪಿ.ಬಿ.ಸುಧಾಕರ್ ರೈ ನೆಟ್ ಕಾಂ, ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಜನತಾ ಗ್ರೂಪ್ಸ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್...
ಯುವಜನ ಸಂಯುಕ್ತ ಮಂಡಳಿಯ 75 ದಿನಗಳ ಪಂಚಸಪ್ತತಿ ಸ್ವಚ್ಚತಾ ಅಭಿಯಾನದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಗುತ್ತಿಗಾರು ನಿರಂತರ ಕೈಜೋಡಿಸುತ್ತಿದೆ. 3ನೇ ದಿನದ ಸ್ವಚ್ಚತಾ ಕಾರ್ಯಕ್ರಮ ಗುತ್ತಿಗಾರು ಪೇಟೆಯಲ್ಲಿ ಮತ್ತು 4 ನೇ ಸ್ವಚ್ಚತಾ ಕಾರ್ಯಕ್ರಮ ವಳಲಂಬೆ ಬಸ್ಸು ತಂಗುದಾಣದ ಪರಿಸರ ಶುಚಿಗೊಳಿಸಲಾಯಿತು.
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಚಿಗುರು ಗೆಳೆಯರ ಬಳಗ(ರಿ.) ಪಂಬೆತ್ತಾಡಿ ಇದರ ವತಿಯಿಂದ "ಪಂಚಸಪ್ತತಿ-2025" 75 ದಿನಗಳ ಸ್ವಚ್ಛತಾ ಅಭಿಯಾನದ 2ನೇ ಕಾರ್ಯಕ್ರಮ ಪಂಜ ಹೋಬಳಿ ಮಟ್ಟದ ಕ್ರೀಡಾಕೂಟ ಸಲುವಾಗಿ ಪದವಿಪೂರ್ವ ಕಾಲೇಜು ಪಂಜದ ಕೋಟಿಚೆನ್ನಯ ಕ್ರೀಡಾಂಗಣದಲ್ಲಿ ಚಿಗುರು ಗೆಳೆಯಯ ಬಳಗ ಇದರ ಸದಸ್ಯರಿಂದ ಕ್ರೀಡಾಂಗಣ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗ ಶ್ರೀ ಶಾರದಾಂಬ ವೇದಿಕೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ.ಪೂ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ.ಓ.ಎಲ್.ಇ(ರಿ.)ಪ್ರಧಾನ ಕಾರ್ಯದರ್ಶಿ ಆರ್ಕಿ ಟೆಕ್ಟ್ ಅಕ್ಷಯ್ ಕೆ.ಸಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಶಾರದಾಂಬ...
ಸುಬ್ರಹ್ಮಣ್ಯ ಅಕ್ಟೋಬರ್ 12 : ದಕ್ಷಿಣ ಭಾರತದ ನಾಗರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಸಾಲು ಸಾಲಾಗಿ ಕ್ಷೇತ್ರಕ್ಕೆ ಬರುವ ಭಕ್ತರ ದಂಡೆ ಕಂಡು ಬಂತು. ರಾಜ್ಯದಲ್ಲಿ ಜಾತಿ ಸಮೀಕ್ಷೆ ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಮುಂದುವರಿದ ಕಾರಣ ಹಾಗೂ ಎರಡನೇ ಶನಿವಾರ ನಿನ್ನೆ ಆದ್ದರಿಂದ ಇಂದು ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ(ರಿ.) ಇವುಗಳ ಸಂಯುಕ್ತಾಶ್ರಯದಲ್ಲಿ “ಪಂಚಸಪ್ತತಿ-2025” ಅಭಿಯಾನದ ಅಡಿಯಲ್ಲಿ ಮುಂದಿನ 75 ದಿನಗಳ ಕಾಲ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿದ್ದು, ಈ ಅಭಿಯಾನಕ್ಕೆ ಹರಿಹರ ಪಳ್ಳತ್ತಡ್ಕದ ಸಚಿನ್ ಕ್ರೀಡಾ ಸಂಘವು ಕೈ ಜೋಡಿಸಿದ್ದು, ಈ ಸಂದರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.(ವರದಿ :...
ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ “ಪಂಚಸಪ್ತತಿ-2025” ಸ್ವಚ್ಛತಾ ಕಾರ್ಯಕ್ರಮಕ್ಕೆ ನಡುಗಲ್ಲು ಶ್ರೀ ದುರ್ಗಾ ಯುವತಿ ಮಂಡಲದ ವತಿಯಿಂದ ಚಾಲನೆ ನೀಡಲಾಯಿತು.ಅ.10 ರಂದು ನಡುಗಲ್ಲು ಅಂಗನವಾಡಿ ವಠಾರದಲ್ಲಿ ಅಧಿಕೃತ ಚಾಲನೆ ನೀಡಿ, ಅಂಗನವಾಡಿಯ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಯುವತಿ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಡಿದ್ದರು.
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ) ಇದರ ಎರಡನೇಯ ಕಾರ್ಯಕ್ರಮ ದಿನಾಂಕ ಅ.12 ಆದಿತ್ಯವಾರದಂದು ಬೆಳಿಗ್ಗೆ 7.30ಕ್ಕೆ ನಡೆಯಿತು.ಮಡಪ್ಪಾಡಿ ಯುವಕ ಮಂಡಲದ ಶೌಚಾಲಯ ಹಾಗೂ ಸ್ನಾನಗೃಹ ಹಾಗೂ ಇದರ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರಾದ...
ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವಿಟ್ಲ, ತಾಲೂಕು ಪಂಚಾಯತ್ ಸುಳ್ಯ ಇವರುಗಳ ಜಂಟಿ ಆಶ್ರಯದಲ್ಲಿ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯ ನೇರ ಪ್ರಸಾರ ವೀಕ್ಷಣೆ ಅ.11 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮೇಶ್ ಟಿ.ಜೆ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಕೃಷಿ...
Loading posts...
All posts loaded
No more posts
