ಕೊಲ್ಲಮೊಗ್ರು:ನಮ್ಮ ಗ್ರಾಮ ನಮ್ಮ ಯೋಜನೆ ವಿಶೇಷ ಗ್ರಾಮಸಭೆ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ನ.18ರಂದು 2021-22 ನೇ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆಯ ವಿಶೇಷ ಗ್ರಾಮಸಭೆಯ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿಯವರಾದ ಸುರೇಶ್ ವಹಿಸಿದ್ದರು.ಈ ಸಂಧರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ. ಸ್ವಾಗತಿಸಿ ವಂದಿಸಿದರು . ತಾಲೂಕು ಪಂಚಾಯತು ಸದಸ್ಯರಾದ ಉದಯ ಕೊಪ್ಪಡ್ಕಹಾಗೂ ನಿಕಟಪೂರ್ವ ಗ್ರಾ.ಪಂ....

ನ. 29ರಂದು ಗುತ್ತಿಗಾರಿನಲ್ಲಿ “ಬಿ.ಎಂ.ಎಸ್. ಕಪ್” ಕ್ರಿಕೆಟ್ ಪಂದ್ಯಾಟ, ಮತ್ತು ಸನ್ಮಾನ ಕಾರ್ಯಕ್ರಮ

ನ. 29ರಂದು ಗುತ್ತಿಗಾರಿನಲ್ಲಿ "ಬಿ. ಎಂ. ಎಸ್. ಕಪ್" ಮುಕ್ತ ಕ್ರಿಕೆಟ್ ಪಂದ್ಯಾಟ, ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸುಳ್ಯ ತಾಲೂಕು ಆಟೋ ಚಾಲಕರ ಸಂಘ, ಬಿ. ಎಂ.ಎಸ್. ಗುತ್ತಿಗಾರು ಘಟಕದ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Ad Widget

ನ.27 : ಕಸ್ತೂರಿ ರಂಗನ್ ವರದಿ ವಿರುದ್ಧ ಸುಳ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ

ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳ ಜನತೆ ಪ್ರತೀದಿನ ಆತಂಕದ ವಾತಾವರಣದಲ್ಲಿ ಜೀವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಸ್ತೂರಿ ರಂಗನ್ ಸಮಿತಿಯು ನೀಡಿದ ವರದಿಯಿಂದ ಇದು ದೃಢಪಟ್ಟಿದೆ. ಆದ್ದರಿಂದ ದಿನಾಂಕ 27/11/2020 ನೇ ಶುಕ್ರವಾರ ಸಮಯ ಬೆಳಗ್ಗೆ 10:30 ಕ್ಕೆ ಸುಳ್ಯ ತಾಲೂಕು ಕಛೇರಿ ಎದುರು ಕಸ್ತೂರಿ ರಂಗನ್ ವರದಿ ವಿರುದ್ಧ ಸುಳ್ಯ ತಾಲೂಕಿನ ಬಾಧಿತ ಗ್ರಾಮಗಳ ಗ್ರಾಮಸ್ಥರಿಂದ...

ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನಕ್ಕೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಭೇಟಿ

ಇತಿಹಾಸ ಪ್ರಸಿದ್ಧ ಕೋಟಿ-ಚೆನ್ನಯರ ಆರಾಧ್ಯ ದೇವರು ಶತಮಾನದಿಂದ ತುಳುನಾಡ ಭಕ್ತರಿಂದ ಆರಾಧಿಸುತ್ತಾ ಬಂದಿರುವ ಎಣ್ಮೂರು ಗ್ರಾಮದ ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶೀಘ್ರದಲ್ಲಿ ನಡೆಯಲಿದ್ದು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ನಾಗಬ್ರಹ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶೋಭಾ ಕರಂದ್ಲಾಜೆ ಅವರು...

ಕಾಲೇಜುಗಳಲ್ಲಿ ತರಗತಿಗಳು ಆರಂಭವಾದರೂ ಆನ್ ಲೈನ್ ತರಗತಿಗಳನ್ನೇ ಅವಲಂಬಿಸುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು

ಕೊರೋನಾದಿಂದಾಗಿ ಕಳೆದ 8 ತಿಂಗಳಿನಿಂದ ಕಾಲೇಜುಗಳು ಮುಚ್ಚಿದ್ದವು. ಆದರೆ ಇಂದಿನಿಂದ ಕಾಲೇಜುಗಳು ಪುನರಾರಂಭಗೊಂಡಿವೆ. ಸರ್ಕಾರ ಕಾಲೇಜುಗಳನ್ನು ಆರಂಭಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸೋಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಷ್ಟೇ ಅಲ್ಲದೇ ಪ್ರತೀ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿ ನೆಗೆಟಿವ್ ವರದಿ ಬಂದವರಿಗೆ ಮಾತ್ರ ಕಾಲೇಜಿಗೆ ಬರಲು ಅವಕಾಶ ನೀಡಲಾಗಿದೆ....

ಆಲಂಕಾರು: ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ನೆಟ್ಟಣ ಶಾಖೆಯಲ್ಲಿ ಸಲಹಾ ಸಮಿತಿ ಸಭೆ

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ. ನಿ. ಇದರ ನೆಟ್ಟಣ ಶಾಖಾ ಸಲಹಾ ಸಮಿತಿ ಸಭೆಯು ನ. 17ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಟ್ಟಣ ಶಾಖೆಯಲ್ಲಿ ಸಲಹಾ ಸಮಿತಿ ಅಧ್ಯಕ್ಷ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು ವಹಿಸಿದ್ದರು. ಸಭೆಯಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ಆಲಂಕಾರು ಅಧ್ಯಕ್ಷ ರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ ,...

ಎಸ್ ಎಂ ಎ ದಕ್ಷಿಣ ಕನ್ನಡ ಜಿಲ್ಲಾ ಎಲೆಕ್ಷನ್ ಚೀಫ್ ಡೈರೆಕ್ಟರ್ ಆಗಿ ಅಬ್ದುಲ್ಲಾಹ್ ಅಹ್ಸನಿ ಮಾಡನ್ನೂರು – ಡೈರೆಕ್ಟರ್ ರಾಗಿ ಹಸೈನಾರ್ ಜಯನಗರ ಆಯ್ಕೆ

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ಎಂಎ ದಕ್ಷಿಣ ಕನ್ನಡ ಜಿಲ್ಲಾ ಎಲೆಕ್ಷನ್ ಡೈಯರಕ್ಟರೇಟ್ ರಾಗಿ ಏಳು ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಸಮಿತಿಯ ಚೇರ್ಮನ್ ಆಗಿ ಅಸ್ಸಯ್ಯದ್ ಸಾದಾತ್ ತಂಙಳ್ ಕರವೇಲು , ಬೆಳ್ಳಾರೆ ಜೋನಲ್ ಸಮಿತಿಯಿಂದ ಚೀಫ್ ಡೈರೆಕ್ಟರ್ ಆಗಿ ಅಬ್ದುಲ್ಲಾ ಅಹ್ಸನಿ ಮಾಡನ್ನೂರು ಡೈರೆಕ್ಟರ್ ಆಗಿ ಹಸೈನಾರ್ ಜಯನಗರ ಆಯ್ಕೆಯಾಗಿದ್ದಾರೆ. ನವಂಬರ್ 17ರಂದು ಉಪ್ಪಿನಂಗಡಿಯ ನೆಕ್ಕಿಲಾಡಿ...

ಎಸ್ ಎಮ್ ಎ(ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ )ದ. ಕ. ಜಿಲ್ಲಾ ಈಸ್ಟ್ ಎಲೆಕ್ಷನ್ ಕ್ರಿಯೇಶನ್ ಸಮಾವೇಶ 2020 ಮತ್ತು ತಾಜುಲ್ ಉಲಮಾ ಅನುಸ್ಮರಣೆ

ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಪುತ್ತೂರು ಸಮಿತಿ ವತಿಯಿಂದ ಎಸ್ಎಂಎ ಎಲೆಕ್ಷನ್ ಕ್ರಿಯೇಶನ್ ಸಮಾವೇಶ 20 20 ಹಾಗೂ ಸೈಯದ್ ತಾಜುಲ್ ಉಲಮಾ ಅನುಷ್ಮರಣಾ ಕಾರ್ಯಕ್ರಮ ನವಂಬರ್17 ರಂದು ಜಿಲ್ಲಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ರವರ ಅಧ್ಯಕ್ಷತೆಯಲ್ಲಿ ನೆಕ್ಕಿಲಾಡಿ ಮದ್ರಸ ಸಭಾಂಗಣದಲ್ಲಿ ನಡೆಯಿತು. ಅಸ್ಸಯ್ಯದ್ ಸಾದಾತ್ ತಂಙಳ್ ಕರುವೇಲು ದುವಾ ನೇತೃತ್ವ...

ರಾಜ್ಯಮಟ್ಟದ ಕರುನಾಡು ಕಲಾಕುಂಚ ಇ-ಪ್ರಶಸ್ತಿ ಗೆ ಆಯ್ಕೆ

ಕರುನಾಡು ಸಾಹಿತ್ಯ ಪರಿಷತ್ತು,ತಾಲ್ಲೂಕು ಘಟಕ ಚಿಂತಾಮಣಿ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ ಯಲ್ಲಿ 1ರಿಂದ 5 ತರಗತಿ ವಿಭಾಗದಲ್ಲಿ ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯ ಯ 5ನೇ ತರಗತಿಯ ಮನುಜ್ಞ ಯು.ಬಿ. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಕರುನಾಡು ಕಲಾಕುಂಚ ಇ-ಪ್ರಶಸ್ತಿ ಗೆ  ಭಾಜನರಾಗಿದ್ದಾರೆ....

ನಾಲ್ಕೂರು : ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ

ನಾಲ್ಕೂರು ಗ್ರಾಮದ ನಡುಗಲ್ಲು ಆಂಜೇರಿ ಮತ್ತು ಚಾರ್ಮತ ಪರಮಲೆ ಎಂಬಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿಯ ‌ ಗುದ್ದಲಿ ಪೂಜೆಯನ್ನು ಶಾಸಕರಾದ ಎಸ್ ಅಂಗಾರ ನೆರವೇರಿಸಿದರು. ಸುಮಾರು 15 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.
Loading posts...

All posts loaded

No more posts

error: Content is protected !!