- Wednesday
- November 27th, 2024
ಕೊರೋನಾ ತಡೆಗೆ ನಮ್ಮಲ್ಲೇ ಸಿಕ್ತು ಸಂಜೀವಿನಿ.! ದೇಶದ ಮೊದಲ ಕೊರೋನಾ ಲಸಿಕೆ ʼಕೊವ್ಯಾಕ್ಸಿನ್ʼ ಗೆ ಅನುಮೋದನೆಹೈದರಾಬಾದ್: ಕೊರೊನಾ ವಿರುದ್ಧ ಭಾರತದ ಮೊದಲ ಲಸಿಕೆ ಕೊವ್ಯಾಕ್ಸಿನ್ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ.ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಗೆ ಡಿಸಿಜಿಐ ಅನುಮತಿ ನೀಡಿದೆ. ಸುರಕ್ಷತೆ ಮತ್ತು...
ಊರವರಿಂದ ಮಿತ್ತಡ್ಕ ವಿದ್ಯುತ್ ಲೈನ್ ಟ್ರೀಕಟ್ಟಿಂಗ್ರೆಂಜಾಳ , ಮಿತ್ತಡ್ಕ, ಅರಮನೆಗಯ ವ್ಯಾಪ್ತಿಯಲ್ಲಿ ಹಾದು ಹೋಗುವ 11ಕೆವಿ ಫೀಡರ್ ಗೆ ತಾಗುವ ಮರದ ಗೆಲ್ಲು, ಹಬ್ಬಿರುವ ಬಳ್ಳಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ದುಬೈನಿಂದ ಖಾಸಗಿ ವಿಮಾನದಲ್ಲಿ ಮಂಗಳೂರಿಗೆ ಹೊರಟಿದ್ದ 150 ಮಂದಿ ಪ್ರಯಾಣಿಕರಿಗೆ ಕರ್ನಾಟಕ ಸರಕಾರ ಪ್ರವೇಶ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದು ಅವರನ್ನು ಕಾಸರಗೋಡು ಜಿಲ್ಲಾಡಳಿತ ಕಾಸರಗೋಡು ಸುತ್ತಮುತ್ತಲಿನ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಿದ್ದು ಈ ವೇಳೆ 20 ಮಂದಿ ದುಬೈ ಯಾನಿಗಳು ಕ್ವಾರಂಟೈನ್ ಆಗದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ...
ಉಳ್ಳಾಲದಲ್ಲಿ 6 ಪೊಲೀಸರಿಗೆ ಸೋಂಕು ಬಂದಿದೆ. ಬೆಳಗ್ಗೆ 10 ಗಂಟೆಯಿಂದ ಉಳ್ಳಾಲ ಠಾಣೆ ಮುಂಭಾಗದಲ್ಲಿ ಕುಳಿತು (ಹೆಣ ಕಾಯುವಂತೆ) ಆಸ್ಪತ್ರೆ ದಾಖಲಾಗಲು ಕಾಯ್ತಾ ಇದ್ದಾರೆ. ಯಾವ ಆಸ್ಪತ್ರೆ ಗೂ ದಾಖಲಿಸುವ ಕೆಲಸ ನಡೆಯುತ್ತಿಲ್ಲ. ಪ್ರತಿಷ್ಠಿತ ಆಸ್ಪತ್ರೆಗಳೇ ನಮ್ಮಲ್ಲಿಗೆ ತರಬೇಡಿ ಹೇಳ್ತಾ ಇದ್ದಾರೆ.ಪೊಲೀಸರ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು? ದಕ ಜಿಲ್ಲಾಡಳಿತ ಏನು ಮಾಡುತ್ತಿದೆ. ಉಸ್ತುವಾರಿ...
ಪುತ್ತೂರು ಸುತ್ತಮುತ್ತ ಕೋವಿಡ್ - 19 ಪ್ರಕರಣಗಳು ಹೆಚ್ಚುತ್ತಿದ್ದು ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದಿನಾಂಕ : 01 ರಿಂದ 6 ಜುಲೈ 2020ರವರೆಗೆ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ನಡೆಯಬೇಕಾಗಿದ್ದ " ಉದ್ಯೋಗ ನೈಪುಣ್ಯ ತರಬೇತಿ ಶಿಬಿರ" ವನ್ನು ಮುಂದೂಡಲಾಗಿದೆ. ತರಬೇತಿಯ ಹೊಸ ದಿನಾಂಕವನ್ನು ತಿಳಿಸಲಾಗುವುದು.
ಶೌರ್ಯ ಯುವತಿ ಮಂಡಲ ಪೈಲಾರು ಇದರ ಆಶ್ರಯದಲ್ಲಿ ಕಸೂತಿ ತರಬೇತಿ ಕಾರ್ಯಕ್ರಮ ಜೂ-28ರಂದು ಮಿತ್ರವೃಂದ ಪೈಲಾರು ಇದರ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಶೌರ್ಯ ಯುವತಿ ಮಂಡಲ ಪೈಲಾರು ಇದರ ಅಧ್ಯಕ್ಷರಾದ ಯಕ್ಷಿತ ಪಾರೆ ವಹಿಸಿದ್ದರು. ತರಬೇತುದಾರರಾಗಿ ಶ್ರೀಮತಿ ಮನೋರಮ ಕಡಪಳ ಆಗಮಿಸಿ ಕಸೂತಿ ಕಲೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಶೌರ್ಯ ಯುವತಿ ಮಂಡಲ ಇದರ ಸದಸ್ಯರು...
ಇಡೀ ದೇಶವೇ ದಿನದಿಂದ ದಿನಕ್ಕೆ ಕೋರೋನಾ ಅಟ್ಟಹಾಸದಿಂದ ಕಂಗಲಾಗುತ್ತಿದೆ. ಜನತೆಯಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ವೃದ್ಧರು ಮಕ್ಕಳು ಎನ್ನದೆ ಕೋರೋನಾವು ಎಲ್ಲರನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದು ಹಿಂಡಿಹಿಪ್ಪೆ ಮಾಡಲು ಹೊರಟಿದೆ. ರಾಜ್ಯದಲ್ಲಿ ಕೋರೋನಾ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ಹಲವಾರು ದಿನಗಳಿಂದ ಜಿಲ್ಲೆಯಲ್ಲಿ ಸೊಂಕಿತರ ಪ್ರಮಾಣವು ಹೆಚ್ಚುತ್ತಾ ಬಂದಿದೆ. ಇವೆಲ್ಲವನ್ನು ತಿಳಿದ ತಾಲೂಕಿನ ಜನತೆ ತಾಲೂಕಿನಲ್ಲಿ...
ಸುಳ್ಯ ಎಲ್ ಡಿ ಬ್ಯಾಂಕ್ ಪ್ರಕಟಣೆ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಪ್ರಕಟಣೆಯಂತೆ ರೈತ ಸದಸ್ಯರು ಪಡೆದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಪೂರಕ ಸಾಲಗಳಲ್ಲಿ ಜ . 31 ಕ್ಕೆ ಸುಸ್ತಿಯಾಗಿರುವ ಸಾಲಗಳ ಮೇಲಿನ ಬಡ್ಡಿಯನ್ನು ರಾಜ್ಯ ಸರಕಾರ ಮನ್ನಾ ಮಾಡುವ ಯೋಜನೆಯನ್ನು ಕೋವಿಡ್ 19 ಮಹಾಮಾರಿಯ...
2020-21 ನೇ ಸಾಲಿನ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಸಂಬಂದಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪ್ರೀಮಿಯಂ ಅನ್ನು ನಮ್ಮ ಸಹಕಾರ ಸಂಘದಲ್ಲಿ ಸ್ವೀಕರಿಸಲು ಆರಂಬಿಸಲಾಗಿದೆ. ಅಡಿಕೆಗೆ ಎಕರೆಗೆ ರೂ 2560/- , ಕಾಳು ಮೆಣಸು ಪ್ರೀಮಿಯಂ ಪ್ರತಿ ಎಕರೆಗೆ 940/-ಪ್ರೀಮಿಯಂ ಪಾವತಿಸಲು ಜೂ.30 ಕೊನೆಯ ದಿನ.ಸದಸ್ಯರು ಸಂಬಂದ ಪಟ್ಟ ಕೃಷಿ ಇರುವ ಪಹಣಿಯ ಸರ್ವೆ...
ಸುಳ್ಯದಲ್ಲಿ ನಾಲ್ಕು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು , ಈ ಪೈಕಿ ಗರ್ಭಿಣಿ ಮಹಿಳೆಯಲ್ಲಿ ಕೂಡ ಸೋಂಕು ಇರುವುದು ಆತಂಕ ಉಂಟುಮಾಡಿದೆ.ಕನಕಮಜಲು ಸಮೀಪದ ಸುಣ್ಣಮೂಲೆಯ ಗರ್ಭಿಣಿ ಮಹಿಳೆಗೆ ಹೆರಿಗೆಯಾದ ಬಳಿಕ ಸೋಂಕು ದೃಢಪಟ್ಟಿದೆ. ಸೋಣಂಗೇರಿಯ ವೃದ್ಧ, ಐವರ್ನಾಡಿನ ಇಬ್ಬರು ಯುವಕರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಇವರೆಲ್ಲರಿಗೆ ಸಂಪರ್ಕ ಆಧಾರದಲ್ಲಿ ಸೋಂಕು ಬಂದಿದೆ ಎಂಬ ಮಾಹಿತಿ...
Loading posts...
All posts loaded
No more posts