ನೇರಳಾಡಿ ಮಲೆ ದೈವಗಳ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶ್ರಮದಾನ

ವಳಲಂಬೆಯ ನೇರಳಾಡಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ದೈವಗಳ ನೇಮೋತ್ಸವವು (ಜಾಲಾಟ) ಎ.1ರಿಂದ 4ರ ತನಕ ಜರುಗಲಿದೆ‌.ಇದರ ಅಂಗವಾಗಿ ಮಾ.29ರಂದು ಶ್ರಮದಾನ ನೆರವೇರಿತು. ಈ ಸಂದರ್ಭದಲ್ಲಿ ಊರುಕಟ್ಟಿನ ಸುಮಾರು 50 ಕ್ಕೂ ಮಿಕ್ಕಿ ಮಹಿಳೆಯರು ಪುರುಷರು ಶ್ರಮದಾನದಲ್ಲಿ ಭಾಹವಹಿಸಿದರು.‌ ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗಂಗಾಧರ ಗೌಡ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:30/03/2026ಸೋಮವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197*01,🐏ಮೇಷ ರಾಶಿ🐏*📃,ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿರುತ್ತವೆ, ಕೈಗೊಂಡ ಕೆಲಸಗಳು ಕಷ್ಟದಿಂದಲೂ ಪೂರ್ಣಗೊಳ್ಳುವುದಿಲ್ಲ. ಪ್ರಯಾಣಗಳು ಮುಂದೂಡಲ್ಪಡುತ್ತವೆ, ಉದ್ಯೋಗಿಗಳು ವಹಿಸಿಕೊಳ್ಳಬೇಕಾದ ಸ್ಥಾನಗಳಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಮನೆಯ ಹೊರಗಿನ ಜವಾಬ್ದಾರಿಗಳು ಹೆಚ್ಚಾಗುತ್ತವೆ,ಗಮನಿಸಿ:-ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಪ್ರಗತಿ ಹೊಂದುತ್ತವೆ,ಪರಿಹಾರ:-ನಿಮ್ಮ ತಂದೆ ಅಥವಾ ತಂದೆಹಂತಹ ವ್ಯಕ್ತಿಯಿಂದ ಆಶೀರ್ವಾದ ಪಡೆಯಿರಿ,*02,🐂ವೃಷಭ...
Ad Widget

ವಳಲಂಬೆ : ನೇರಳಾಡಿ ಮಲೆ ದೈವಗಳ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವ – ಗೊನೆ ಮುಹೂರ್ತ

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕ್ರಿಯಾ ಭಾಗಗಳು ಹಾಗೂ ಶ್ರೀ ಮಲೆ ದೈವಗಳ ನೇಮೋತ್ಸವವು (ಜಾಲಾಟ) ಎ.1ರಿಂದ 4ರ ತನಕ ಜರುಗಲಿದೆ‌.ಇದರ ಅಂಗವಾಗಿ ಮಾ.29ರಂದು ಗೊನೆ ಮುಹೂರ್ತ ನೆರವೇರಿತು.‌

ಗುತ್ತಿಗಾರಿನ “ಆಸರೆ ಇಲೆಕ್ಟ್ರಾನಿಕ್ಸ್” ಇದೀಗ ಪ್ರತಿಷ್ಠಿತ “ಟಾಟಾ ಕಂಪನಿಯ ಉತ್ಪನ್ನಗಳ ಅಧಿಕೃತ ವಿತರಕ ಸಂಸ್ಥೆ”

ಗುತ್ತಿಗಾರಿನ ಆಸರೆ ಇಲೆಕ್ಟ್ರಾನಿಕ್ಸ್ ಈಗ ಪ್ರತಿಷ್ಟಿತ ಟಾಟಾ ಕಂಪನಿಯ ಉತ್ಪನ್ನಗಳ ಅದಿಕೃತ ವಿತರಕರು… ಗುತ್ತಿಗಾರಿನಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ಆಸರೆ ಇಲೆಕ್ಟ್ರಾನಿಕ್ಸ್ ಬ್ರಾಂಡೆಡ್ ವಸ್ತುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು ಇದೀಗ ಪ್ರತಿಷ್ಟಿತ ಟಾಟಾ ಕಂಪನಿಯ‌ ವಸ್ತುಗಳ‌ ಅಧೀಕೃತ ‌ವಿತರಕರಾಗಿದ್ದಾರೆ.. ಇಲ್ಲಿ ಟಾಟಾ ಕಂಪನಿಯ‌ ಎರ್ ಕೂಲರ್, ಟಿವಿ ಪ್ರಿಡ್ಜ್ ವಾಷಿಂಗ್ ಮೆಷಿನ್ ಹಾಗೂ ಎಲ್ಲಾ ಗೃಹಬಳಕೆ ಉಪಕರಣಗಳು ದೊರೆಯುತ್ತದೆ...

ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ – ಭಯ ಭಕ್ತಿಯಿಂದ ಅಗ್ನಿಸೇವೆ ವೀಕ್ಷಿಸಿದ ಸಾವಿರಾರು ಭಕ್ತರು

ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ವಿಜ್ರಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ದೈವದ ಪ್ರಸಾದ ಸ್ಬೀಕರಿಸಿ ದೈವದ ಕೃಪೆಗೆ ಪಾತ್ರರಾದರು. ಮಾ.27 ರಂದು ದೈವಸ್ಥಾನದ ಸನ್ನಿಧಿಯಲ್ಲಿ ಗಣಪತಿ ಹವನ,ಮಾ. 28 ರಂದು ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತೆಗೆದು, ರಾತ್ರಿ ಗಂಟೆ 8-30ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ನಂತರ ಕುಲ್ಚಾಟ ನಡೆಯಿತು....

ಎ.1 – 4 : ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಶ್ರೀ ಮಲೆ ದೈವಗಳ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವ (ಜಾಲಾಟ)

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕ್ರಿಯಾ ಭಾಗಗಳು ಹಾಗೂ ಶ್ರೀ ಮಲೆ ದೈವಗಳ ನೇಮೋತ್ಸವವು (ಜಾಲಾಟ) ಎ.1ರಿಂದ 4ರ ತನಕ ಜರುಗಲಿದೆ‌.ಮಾ.29ರಂದು ಗೊನೆ ಮುಹೂರ್ತ ನೆರವೇರಿತು.  ಎ.1ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ ಸರ್ಪ ಸಂಸ್ಕಾರ,...

ಸುಳ್ಯ : ಮಾ.30 ರಂದು ಅಮ್ಮ ಚಿಣ್ಣರ ಮನೆಯಲ್ಲಿ ವಾರ್ಷಿಕೋತ್ಸವ

ಸುಳ್ಯದ ಅಮ್ಮ ಚಿಣ್ಣರ ಮನೆಯಲ್ಲಿ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಮಾ.30 ರಂದು ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ನಡೆಯಲಿದೆ. ವಾರ್ಷಿಕೋತ್ಸವದ ಉದ್ಘಾಟನೆಯನ್ನು ಕೆವಿಜಿ ಮೆಡಿಕಲ್ ಕಾಲೇಜು ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ| ನವ್ಯಾ ಬಿ.ಎನ್.ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಪೋಷಕ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಅತ್ಯಾಡಿ ವಹಿಸಲಿದ್ದಾರೆ.‌ ಅಮ್ಮ ಸೇವಾ ಟ್ರಸ್ಟ್ ನಿರ್ದೇಶಕರಾದ ಸೀತಾರಾಮ ಕೇವಳ, ಶ್ರೀಮತಿ...

ತಳೂರು : ಸ್ಕೂಟಿ ಮೇಲೆ ಮರ ಬಿದ್ದು ಜಖಂ

ತಳೂರಿನ ಷಣ್ಮುಖ ಎಂಬವರು ತನ್ನ ಸಮೀಪ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟಿ ಮೇಲೆ ಮರ ಬಿದ್ದು  ಸಂಪೂರ್ಣ ಜಖಂ ಆಗಿದೆ.

ಸುಳ್ಯ ತಾಲೂಕಿನಾದ್ಯಂತ ಭಾರಿ ಗಾಳಿ – ಮಳೆ

ತಾಲೂಕಿನಾದ್ಯಂತ ಇಂದು ಭಾರಿ ಗುಡುಗು ಹಾಗೂ ಗಾಳಿಯೊಂದಿಗೆ ಮಳೆ ಸುರಿದಿದ್ದು ಬಿಸಿಲ ಬೇಗೆಯಿಂದಿದ್ದ ಭೂಮಿಗೆ ತಂಪಾಗಿದೆ. ಸುಳ್ಯದಲ್ಲಿ ಸಂಜೆ 4.45 ಮಳೆ ಸುರಿಯಲಾರಂಭಿಸಿದೆ. ಭಾರಿ ಗಾಳಿ ಬೀಸಿದ್ದು ಹಲವೆಡೆ ರಸ್ತೆ ಹಾಗೂ ವಿದ್ಯುತ್ ಲೈನ್ ನ ಮೇಲೆ ಮರದ ಗೆಲ್ಲು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗೂನಡ್ಕ ದರ್ಖಾಸ್ತು  ಬಳಿ ಭಾರಿ ಬಿರುಗಾಳಿ ಹಾಗೂ ಗುಡುಗು...

ಬೆಳ್ಳಾರೆ : ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ

ಬೆಳ್ಳಾರೆಯ ಮಾಸ್ತಿಕಟ್ಟೆ ತಡಗಜೆ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿಗೆ ತೆರಳುವ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶೈನಿ ಕಿರಣ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ನಾಗೇಶ್ ಕುಲಾಲ್, ಹಿದಾಯ ಪಬ್ಲಿಕ್ ಸ್ಕೂಲ್ ಶಿಕ್ಷಕಿ...
Loading posts...

All posts loaded

No more posts

error: Content is protected !!