Ad Widget

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಗುರುಗಳಿಗೆ ನಮನಗಳು

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃವೃತ್ತಿಯಲ್ಲಿ ಅತಿ ಪವಿತ್ರವಾದ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ.ವಿದ್ಯಾರ್ಥಿಗಳ ಜೀವನವನ್ನು ಉತ್ತಮ ರೀತಿಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವಪೂರ್ಣವಾಗಿದೆ. ಹಿಂದೆ ಗುರು ಮುಂದೆ ಗುರಿ ಎಂಬ ಮಾತಿನಂತೆ ಒಬ್ಬ ವ್ಯಕ್ತಿ ತನ್ನ ಗುರಿಯನ್ನು ತಲುಪಲು ಆತನ ಪರಿಶ್ರಮ ಎಷ್ಟು...

ಮಕ್ಕಳ ಬಾಳಿನ ಸಾರಥಿ ಶಿಕ್ಷಕ

ಅಪೂರ್ಣದಿಂದ ಕೂಡಿರುವ ಪುಸ್ತಕಕ್ಕೆ ಹೊಸ ಅಕ್ಷರಗಳನ್ನು ತುಂಬಿ ಸಹ ಜೀವನವನ್ನು ರೂಪಿಸಿ ರಂಗಿನ ಮೆರಗನ್ನು ನೀಡುವಾತ ನಮ್ಮ ಶಿಕ್ಷಕ.ಹಿಂದಿನ ಕಾಲದಿಂದಲೂ ಶಿಕ್ಷಣಕ್ಕೆ ಬಂದಿರುವ ವಿಶೇಷ ಗಣನೆಯು ನಮ್ಮ ಶಿಕ್ಷಣ ಕ್ಷೇತ್ರವನ್ನು ಮೆಲುಕು ಹಾಕುತ್ತಿದೆ. ಶಿಕ್ಷಣ ಸಮಾಜದಲ್ಲಿ ಬಹುವ್ಯಾಪಿಸಿದೆ.ಗುರು ಬ್ರಹ್ಮ ಗುರು ವಿಷ್ಣು ಗುರುರ್ ದೇವೋ ಮಹೇಶ್ವರಗುರು ಸಾಕ್ಷತ್ ಪರ ಬ್ರಹ್ಮ ತಸ್ಮೈಶ್ರೀ ಗುರುವೇ ನಮ ಪ್ರತಿಯೊಬ್ಬರ...
Ad Widget

ಛತ್ರಪ್ಪಾಡಿ : ಸ್ವಾಮಿ ಕೊರಗಜ್ಜ ಪ್ರಗತಿ ಬಂಧು ಸಂಘ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಾಲ್ಕೂರು ಒಕ್ಕೂಟದ ಆಶ್ರಯದಲ್ಲಿ ಛತ್ರಪ್ಪಾಡಿಯಲ್ಲಿ ಸ್ವಾಮಿ ಕೊರಗಜ್ಜ ಪ್ರಗತಿ ಬಂಧು ಸಂಘವನ್ನು ಬಾಲಕೃಷ್ಣ ಚತ್ರಪ್ಪಾಡಿಯವರ ಮನೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ವಿಶ್ವನಾಥ ಚತ್ರಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಯೋಜನೆಯ ಗುತ್ತಿಗಾರು ವಲಯದ ಮೇಲ್ವಿಚಾರಕ ಸುಧೀರ್ ರವರು ಯೋಜನೆಯ ಕಾರ್ಯಕ್ರಮಗಳ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ...

ಬಿ.ಆರ್.ಪಿ. ಲಿಂಗಪ್ಪ ಬೆಳ್ಳಾರೆಯವರಿಗೆ ಪದೋನ್ನತಿ

ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯದಲ್ಲಿದ್ದ ಲಿಂಗಪ್ಪ ಬೆಳ್ಳಾರೆಯವರು ಪದೋನ್ನತಿ ಹೊಂದಿದ್ದು, ಇದೀಗ ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿಗೆ ಆಂಗ್ಲಭಾಷಾ ಶಿಕ್ಷಕರಾಗಿ ನಿಯೋಜಿತರಾಗಿದ್ದಾರೆ. ಕ್ರೀಡೆ, ಯಕ್ಷಗಾನ, ಜೇಸೀ ವಲಯದಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಇವರು ಕಳೆದ 5 ವರ್ಷಗಳಿಂದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ (ಬಿ.ಆರ್.ಪಿ) ಸೇವೆಯಲ್ಲಿದ್ದರು. ಬೆಳ್ಳಾರೆ ದಿ.ದುಗ್ಗಪ್ಪ ಗೌಡ ಹಾಗೂ ಪರಮೇಶ್ವರಿ...

ಪೈಚಾರಿನಲ್ಲಿ ಬಾಂಬೆ ಮೆನ್ಸ್ ಪಾರ್ಲರ್ ಶುಭಾರಂಭ

ಸುಳ್ಯದ ಪೈಚಾರು ಜಂಕ್ಷನ್ ನಲ್ಲಿ ರಾಘವ ಕೆ.ಯವರ ಮಾಲಕತ್ವದ ಬಾಂಬೆ ಮೆನ್ಸ್ ಪಾರ್ಲರ್ ಸೆ .2 ರಂದು ಶುಭಾರಂಭಗೊಂಡಿದೆ. ಹಿರಿಯರಾದ ಬಾಲಕೃಷ್ಣ ನಾಯ್ಕರವರು ಉದ್ಘಾಟಿಸಿ ಶುಭಹಾರೈಸಿದರು . ಈ ಸಂದರ್ಭದಲ್ಲಿ ಶ್ರೀಮತಿ ಮೀನಾಕ್ಷಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು .

ಮಡಿಕೇರಿಯಿಂದ ಮಂಗಳೂರಿಗೆ 1 ಗಂಟೆ 54 ನಿಮಿಷದಲ್ಲಿ ಅಂಬ್ಯುಲೆನ್ಸ್‌ನಲ್ಲಿ ರೋಗಿಯ ರವಾನೆ

ಮಡಿಕೇರಿಯ ಹೈಲ್ಯಾಂಡ್ ಹಾಸ್ಪಿಟಲ್ ನಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರನ್ನು ತುರ್ತಾಗಿ ಮಂಗಳೂರಿಗೆ ಕೇವಲ 1 ಗಂಟೆ 54 ನಿಮಿಷದಲ್ಲಿ ಅಂಬ್ಯುಲೆನ್ಸ್ ಮೂಲಕ ತಲುಪಿಸಲಾಯಿತು. ಈ ಮೂಲಕ ಅಂಬ್ಯುಲೆನ್ಸ್ ಚಾಲಕ ಐಬು ಅವರ ಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಂಬ್ಯುಲೆನ್ಸ್ ಗೆ ಹೋಗುವ ದಾರಿಯಲ್ಲಿ ಝೀರೋ ಟ್ರಾಫಿಕ್ ಮಾಡಿಕೊಡಲಾಯಿತು. ಕೊಯನಾಡಿನಿಂದ ಕನಕಮಜಲು ತನಕ ಝೀರೋ ಟ್ರಾಫಿಕ್...

ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಪ್ರವೀಣ್ ನೆಟ್ಟಾರ್

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಪ್ರವೀಣ್ ನೆಟ್ಟಾರ್ ಇವರು ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವ ಇವರು ಈ ಹಿಂದೆ ಭಾಜಪದ ವಾರ್ಡ್ ಸಮಿತಿಯ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇವರು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರಿನ ನಿವಾಸಿಯಾಗಿದ್ದಾರೆ.

ಪೆರುವಾಜೆ ಶಾಲಾ ಶಿಕ್ಷಕಿ ಕವಿತಾ ಸಿ.ಕೆ.ಯವರಿಗೆ ಪದೋನ್ನತಿ

ಪೆರುವಾಜೆ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಕವಿತಾ ಸಿ.ಕೆ.ಯವರು ಪದೋನ್ನತರಾಗಿದ್ದು , ಇದೀಗ ಸರ್ಕಾರಿ ಪದವಿಪೂರ್ವ ಕಾಲೇಜು ಸವಣೂರು ಇಲ್ಲಿನ ಪ್ರೌಢಶಾಲಾ ವಿಭಾಗಕ್ಕೆ ಇಂಗ್ಲಿಷ್ ಶಿಕ್ಷಕಿಯಾಗಿ ನಿಯೋಜನೆಗೊಂಡಿರುತ್ತಾರೆ. ಇವರು ಸ.ಹಿ.ಪ್ರಾಥಮಿಕ ಶಾಲೆ ಉಬರಡ್ಕ - ಮಿತ್ತೂರಿನಲ್ಲಿ 9 ವರ್ಷ ಹಾಗೂ ಸ.ಹಿ.ಪ್ರಾಥಮಿಕ ಶಾಲೆ ಪೆರುವಾಜೆಯಲ್ಲಿ 9 ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರು ಐವರ್ನಾಡು...

ಕಳೆದೊಂದು ವರ್ಷದಿಂದ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಪಡಿಸಿಕೊಡುವಂತೆ ಆಗ್ರಹಿಸಿ ಸ್ಥಳೀಯರಿಂದ ಸಾಂಕೇತಿಕ ಪ್ರತಿಭಟನೆ

ಸುಳ್ಯ ಪೈಚಾರು ಭಾಗವಾಗಿ ಸುಬ್ರಮಣ್ಯ , ಬೆಳ್ಳಾರೆಗೆ ಸಂಪರ್ಕ ಕಲ್ಪಿಸುವ ಸೋಣಂಗೇರಿ ಸಮೀಪದ ರಸ್ತೆಯೊಂದು ಭಾರಿ ದೊಡ್ಡ ಕಂದಕಕ್ಕೆ ಕುಸಿದುಬಿದ್ದಿದ್ದು ಕಳೆದ ಒಂದು ವರ್ಷಗಳಿಂದ ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಈ ವರ್ಷದ ಮಳೆಯು ಇದೀಗ ಕೊನೆಯ ಹಂತದಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯ ಹಿರಿಯರು ಸ್ಥಳ ಪರಿಶೀಲನೆಯನ್ನು ನಡೆಸಿ ಈಗಾಗಲೇ ರಸ್ತೆಯ...

ಬೆಳ್ಳಾರೆ : ಜಗದೀಶ್ ಪಿ.ಎಲ್. ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆ

ಜೇಸಿಐ ಬೆಳ್ಳಾರೆಯ ಪೂರ್ವಾಧ್ಯಕ್ಷ,ಪ್ರಸ್ತುತ ಕಾರ್ಯದರ್ಶಿಯಾಗಿರುವ ಯುವ ಉದ್ಯಮಿ, ಬೆಳ್ಳಾರೆ ಅಜಂತಾ ಮೊಬೈಲ್ ಪಾಲುದಾರ,ಏರ್ ಟೆಲ್ ಸೇಲ್ಸ್ ಮತ್ತು ಎಕ್ಸಿಕ್ಯೂಟಿವ್ ಮೆನೇಜರ್ , ಜೇಸೀ ಹೆಚ್ ಜಿ ಎಫ್ ಜಗದೀಶ್ ಪಿ.ಎಲ್. ಜೇಸಿಐ ಭಾರತದ ವಲಯ 15 ರ ವಿಭಾಗದ ಅಭಿವೃದ್ಧಿ ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವ್ಯವಹಾರ ಅಥವಾ ವೃತ್ತಿ...
Loading posts...

All posts loaded

No more posts

error: Content is protected !!