Ad Widget

ಕಂದಡ್ಕ ಸಮೀಪ ಅಕ್ರಮ ಕೋಳಿ ಅಂಕಕ್ಕೆ ಪೋಲೀಸ್ ದಾಳಿ-ಬೈಕ್, ಕೋಳಿ ವಶ

ಕಂದಡ್ಕದ ಸಮೀಪ ಚೆನ್ನಡ್ಕದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ಇಂದು ಸಂಜೆ ದಾಳಿ ನಡೆಸಿದ್ದು 4 ಬೈಕ್ ಹಾಗೂ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಸುಳ್ಯ ವಿಧಾಸಭಾ ಕ್ಷೇತ್ರದ ಇಂಟೆಕ್ ಅಧ್ಯಕ್ಷರಾಗಿ ಶಾಫಿ ಕುತ್ತಮೊಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉದಯಕುಮಾರ್ ಕುಕ್ಕುಡೇಲು, ಯೂತ್ ಕಮಿಟಿ ಅಧ್ಯಕ್ಷರಾಗಿ ಅನಿಲ್ ಬಳ್ಳಡ್ಕ

Udhaya Kukkudelu Anil balladka ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಅಧ್ಯಕ್ಷರಾಗಿ ಶಾಫಿ ಕುತ್ತಮೊಟ್ಟೆ ಆಯ್ಕೆಯಾಗಿದ್ದಾರೆ. ಸೆ. 6 ರಂದು ಮಂಗಳೂರಿನಲ್ಲಿ ನಡೆದ ಇಂಟೆಕ್ ಪದಾಧಿಕಾರಿಗಳ ಜಿಲ್ಲಾ ಅಧ್ಯಕ್ಷ ಮನೋಹರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.ಇಂಟೆಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉದಯಕುಮಾರ್ ಕುಕ್ಕುಡೇಲು, ಇಂಟೆಕ್ ಜಿಲ್ಲಾ ಯೂತ್ ಘಟಕದ ಉಪಾಧ್ಯಕ್ಷರಾಗಿ ಶಾಹುಲ್...
Ad Widget

ಗೋಪಾಲ್ ಏನೆಕಲ್ಲು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಗುತ್ತಿಗಾರು ಜೂನಿಯರ್ ಕಾಲೇಜಿಗೆ ಭಡ್ತಿ

ಕೊಲ್ಲಮೊಗ್ರ ಸ.ಹಿ. ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಗೋಪಾಲ್ ಏನೆಕಲ್ಲು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿ ಗುತ್ತಿಗಾರು ಜೂನಿಯರ್ ಕಾಲೇಜಿಗೆ ಭಡ್ತಿಹೊಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತಿದ್ದಾರೆ.ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟುವಾಗಿರುವ ಇವರು 1998 ರಲ್ಲಿ ಅಡ್ಪಂಗಾಯ ಹಿ.ಪ್ರಾ.ಶಾಲೆಗೆ ದೈ.ಶಿ.ಶಿಕ್ಷಕರಾಗಿ ಸೇರಿ ವೃತ್ತಿ ಆರಂಭಿಸಿದರು. ಅಲ್ಲಿ 7...

ಏನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂದಿರಕ್ಕೆ ಕೊಡುಗೆ

ಏನೆಕಲ್ಲು ಗ್ರಾಮದ ಶ್ರೀಮತಿ ದಮಯಂತಿ ರಾಮಣ್ಣಗೌಡ ಕುಕ್ಕಪ್ಪನ ಮನೆ ಇವರು ಏನೆಕಲ್ಲಿನ ಶ್ರೀ ಆದಿಶಕ್ತಿ ಭಜನಾ ಮಂದಿರಕ್ಕೆ ಸುಮಾರು ಹನ್ನೆರಡು ಸಾವಿರ ರೂಪಾಯಿ ಮೌಲ್ಯದ ಡಯಾಸ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಭವಾನಿಶಂಕರ ಪೂಂಬಾಡಿ ಏನೆಕಲ್ಲು ಉಪಸ್ಥಿತರಿದ್ದರು.

ಕೊಡಿಯಾಲ : ಶ್ರೀ ದುರ್ಗಾ ಪ್ರಗತಿ ಬಂದು ಸಂಘದ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ಳಾರೆ ವಲಯದ ಕೊಡಿಯಾಲ ಒಕ್ಕೂಟದಲ್ಲಿ ನೂತನವಾಗಿ ಶ್ರೀದುರ್ಗಾ ಪ್ರಗತಿ ಬಂದು ಸಂಘ ರಚನೆಯಾಯಿತು. ಸಂಘದ ಉದ್ಘಾಟನೆಯನ್ನು ಕೊಡಿಯಾಲ ಒಕ್ಕೂಟದ ಅಧ್ಯಕ್ಷರಾದ ಆನಂದ ಕೆ ನೆರವೇರಿಸಿದರು. ವಲಯ ಮೇಲ್ವಿಚಾರಕರಾದ ಮುರಳೀಧರರವರು ದಾಖಲಾತಿ ಹಸ್ತಾಂತರಿಸಿ ನಿಯಮಾವಳಿಗಳ ಬಗ್ಗೆ ತಿಳಿಸಿದರು .ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ವನಿತಾ ಉಪಸ್ಥಿತರಿದ್ದರು.

ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.6 ರಂದು ಒಡಿಯೂರು ಗ್ರಾಮ ವಿಕಾಸ ಸಂಘದಿಂದ ಶ್ರಮದಾನ

ಕೊಡಗು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.6 ರಂದು ಶ್ರೀ ಒಡಿಯೂರಿನ ಗ್ರಾಮ ವಿಕಾಸ ಸಂಘದಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು, ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ರಾಜಾರಾಮ್ ಕಳಗಿ ಶ್ರಮದಾನ ಕಾರ್ಯಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಶ್ರೀ ಒಡಿಯೂರು ಗ್ರಾಮ ವಿಕಾಸ ಸಂಘದ ಘಟ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ಗಾಂಭೀರ್,...

ಪ್ರತಿಭಾವಂತ ವಿದ್ಯಾರ್ಥಿನಿ ಕು. ಗೀತಾ ಹೆಚ್.ಸಿ ಗೆ ಮೊಗೇರ ಸಮಾಜದ ವತಿಯಿಂದ ಸನ್ಮಾನ

ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ಎಂಬಲ್ಲಿ ವಾಸವಾಗಿರುವ ಕು. ಗೀತಾ ಹೆಚ್.ಸಿ ಎಂಬ ವಿದ್ಯಾರ್ಥಿನಿ ಕಲಿಯುವಿಕೆಯಲ್ಲಿ ಮುಂದಿದ್ದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ. ಕೊಡಗು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ಈಕೆ ದ್ವಿತೀಯ ಪಿಯುಸಿ (ಕಲಾ ವಿಭಾಗ) ಪರೀಕ್ಷೆಯಲ್ಲಿ 600 ರಲ್ಲಿ 558 (93%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಪಡೆದಿರುತ್ತಾಳೆ. ಅವಳ ಸ್ವಗೃಹ ಸಂಪಾಜೆಯಲ್ಲಿ ಸೆ.6...

ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅಧ್ಯಾಪಕರುಗಳಿಗೆ ಎಸ್ಸೆಸ್ಸೆಫ್ ನ ಗೌರವಾರ್ಪಣೆ

ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ದ.ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುಳ್ಯ ತಾಲೂಕಿನ ಅಧ್ಯಾಪಕರುಗಳಾದ ಸ. ಪ. ಪೂ. ಕಾಲೇಜು ಪಂಜ ಅಧ್ಯಾಪಕರಾದ ಟೈಟಸ್ ವರ್ಗೀಸ್ ಹಾಗೂ ಸ. ಉ. ಹಿ. ಪ್ರಾ. ಶಾಲೆ ಇಡ್ಯಡ್ಕ ಅಧ್ಯಾಪಕಿ ರೇಖಾ ಸರ್ವೋತ್ತಮ ಶೇಟ್ ಮತ್ತು ಸ. ಕಿ. ಪ್ರಾ. ಶಾಲೆ ಬಾನಡ್ಕ...

ಕೊಡಿಯಾಲ : ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಶಿಬಿರ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಶಿಬಿರವು ಕೊಡಿಯಾಲ ಗ್ರಾ.ಪಂ. ಇದರ ಗ್ರಂಥಾಲಯದಲ್ಲಿ ಇಂದು (ಸೆ.06) ನಡೆಯಿತು. ಶಿಬಿರದ ಉದ್ಘಾಟನೆಯನ್ನು ಕೊಡಿಯಾಲ ಭಜನಾ ಪರಿಷದ್ ಸದಸ್ಯರಾದ ಬಾಚೋಡಿ ವೆಂಕಟೇಶ್ ಪೈ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಿ.ಡಬ್ಲ್ಯೂ. ಐ. ಕಂಟ್ರಾಕ್ಟರ್  ಕರುಣಾಕರ...

ಬಾಳಿಲ : ಆಯುಷ್ಮಾನ್ ಕಾರ್ಡ್ ನೋಂದಾವಣೆ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ, ಭಾರತ ಸರ್ಕಾರದ ಸೌಲಭ್ಯಗಳಲ್ಲೊಂದಾದ ಆಯುಷ್ಮಾನ್ ಕಾರ್ಡ್ ನೋಂದಾವಣಿ ಮತ್ತು ವಿತರಣಾ ಶಿಬಿರವು ಬಾಳಿಲದ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಇಂದು(ಸೆ.06) ಜರುಗಿತು. ಕಾರ್ಯಕ್ರಮವನ್ನು ಕಳಂಜ-ಬಾಳಿಲ ಪ್ರಾ. ಕೃ. ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕೂಸಪ್ಪ ಗೌಡ ಮುಗುಪ್ಪು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು....
Loading posts...

All posts loaded

No more posts

error: Content is protected !!