- Tuesday
- November 5th, 2024
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪೇರಡ್ಕ ದರ್ಗಾ ಷರೀಫ್ ಭೇಟಿ ನೀಡಿದರು. ಈ ಸಂದರ್ಭ ಮುನೀರ್ ದಾರಿಮಿ ದುಹಾಕೆ ನೇತೃತ್ವ ನೀಡಿದರು. ಈ ಸಂದರ್ಭ ಸುಳ್ಯ ತಾಲೂಕು ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಹಮೀದ್ ಜಿ. ಕೆ. ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷ ಸವಾದ್ ಗೂನಡ್ಕ, ನಗರ...
ಐವರ್ನಾಡು ಗ್ರಾಮದ ಪಂಚಮೂಲ ಕಾಲೋನಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸೋಲಾರ್ ಹೋಮ್ ಲೈಟ್ ಸೌಲಭ್ಯವನ್ನು ಒದಗಿಸಲಾಯಿತು. ಅಜ್ಜಮೂಲೆ ಕಾಲೋನಿಯ ಸದಾನಂದ ಇವರ ಮನೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಇಲ್ಲಿನ ಸ್ಥಳೀಯ ಸುಮಾರು ಹನ್ನೊಂದು ಮನೆಗಳಿಗೆ ಸೋಲಾರ್ ಲೈಟ್ ಸೌಲಭ್ಯವನ್ನು ಒದಗಿಸಲಾಗಿದೆ. ಅಜ್ಜಮೂಲೆ ಕಾಲೋನಿಯ ಜನರು ಜನವಸತಿ ಸಭೆಯಲ್ಲಿ ವಿದ್ಯುತ್ ಸಮಸ್ಯೆಯನ್ನು ಗ್ರಾಮ ಪಂಚಾಯಿತಿನ ಗಮನಕ್ಕೆ ತಂದಿದ್ದರು....
ಕರ್ನಾಟಕ ರಾಜ್ಯ ಎನ್.ಎಸ್.ಯು.ಐ. ವತಿಯಿಂದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸುವ ನಿಟ್ಟಿನಲ್ಲಿ ನಡೆಯುತ್ತಿರುವ "ನಮ್ಮೂರ ಹೆಮ್ಮೆ "ಕಾರ್ಯಕ್ರಮಕ್ಕೆ ಸೆ.8 ರಂದು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಡೆಯಿತು . ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಾಲನೆಯನ್ನು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗಮಿಸಿ ಚಾಲನೆ ನೀಡಿದ್ದರು.ಅಧ್ಯಕ್ಷ...
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಪದವಿ ಕಾಲೇಜಿನ ಹಿಂದಿ ಉಪನ್ಯಾಸಕಿ ದೇವಕಿ ಪ್ರಸನ್ನ ಜಿ.ಎಸ್. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.'ಮಧು ಕಾಂಕರಿಯಾ ಕೆ ಕಥಾ ಸಾಹಿತ್ಯ ಮೆ ಮಾನವೀಯ ಸಂವೇದನಾ' ಎನ್ನುವ ವಿಷಯದ ಬಗ್ಗೆ ಡಾ.ಪ್ರಭಾ.ವಿ.ಭಟ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ದೇವಕಿ ಪ್ರಸನ್ನ ಅವರು ಪ್ರಬಂಧ ಮಂಡಿಸಿದ್ದರು.ಅವರು ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿ...
ಭೂಸುಧಾರಣಾ ಕಾಯಿದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯಿದೆ ಮತ್ತು ಇತರೆ ಕಾಯ್ದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಪಾಜೆಯಿಂದ ಮಂಗಳೂರಿಗೆ ವಿಶೇಷ ಜಾಥಾ ನಡೆಯಲಿದೆ ಎಂದು ರೈತ ಸಂಘದ ಅಧ್ಯಕ್ಷರಾದ ಲೋಲಜಾಕ್ಷ ಭೂತಕಲ್ಲು ಹೇಳಿದರು.ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟ ದಕ್ಷಿಣಕನ್ನಡ...
ಕುಕ್ಕಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಂಟ್ರಾಕ್ಟರ್ ಸುನಿಲ್ ನಾಯ್ಕ್ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿನ್ನೆ ರಾತ್ರಿ (ಸೆ.7) ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು. ಪುತ್ತೂರು ಬೀದಿಮಜಲಿನವರಾಗಿದ್ದ ಇವರು ಹಲವು ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಕಂಟ್ರಾಕ್ಟರ್ ವೃತ್ತಿ ಮಾಡುತಿದ್ದರು. ಮೃತರು ತಂದೆ ಭಾಸ್ಕರ ನಾಯ್ಕ್, ತಾಯಿ, ಪತ್ನಿ ಪೂನಂ, ಇಬ್ಬರು ಮಕ್ಕಳು ಹಾಗೂ ಹಲವಾರು ಬಂಧುಮಿತ್ರರನ್ನು ಅಗಲಿದ್ದಾರೆ.
ಲಖನ್ ಸಿಂಗ್ ಯಾದವ್ ಪುತ್ತೂರು ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ ದಿನಕರ್ ಶೆಟ್ಟಿಯವರಿಗೆ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ನೂತನ ಐಪಿಎಸ್ ಅಧಿಕಾರಿ ಎ.ಎಸ್ಪಿ ಲಖನ್ ಸಿಂಗ್ ಯಾದವ್ ಸೆ.6ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಲಖನ್ ಸಿಂಗ್ ಯಾದವ್ ಅವರು ಮೈಸೂರಿನಲ್ಲಿ ಪ್ರೊಬೆಷನರಿ ಎ.ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವರ್ಗಾವಣೆಗೊಂಡಿರುವ ಡಿವೈಎಸ್ಪಿ ದಿನಕರ್ ಶೆಟ್ಟಿಯ ಅವರು ಸುರತ್ಕಲ್ ನಿವಾಸಿಯಾಗಿದ್ದು ಈ ಹಿಂದೆ...
ಆರಂತೋಡು ಗ್ರಾಮ ಪಂಚಾಯತ್ ಸ. ನಂ 127/1 p 1 ರಲ್ಲಿ ಈ ಹಿಂದೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಯೋಜನೆ ಹಾಕಿದ ಸ್ಥಳ ವಿರೋಧ ಬಂದು ಕೊಡಂಕೇರಿಗೆ ಸ್ಥಳಾಂತರ ಗೊಂಡಿತ್ತು. ಇದೀಗ ಈ ಜಾಗಕ್ಕೆ ಪಂಚಾಯತ್ ಬೇಲಿ ಹಾಕುವ ವೇಳೆ ಮತ್ತೊಮ್ಮೆ ವಿವಾದ ಉಂಟಾಗಿ ದಲಿತ್ ಸೇವಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಕಂದಾಯ ಇಲಾಖೆ...
ಸುಬ್ರಹ್ಮಣ್ಯ ಗ್ರಾಮದ ನೂಚಿಲ ನಿವಾಸಿ, ಖ್ಯಾತ ಯಕ್ಷಗಾನ ಕಲಾವಿದ ಗಂಗಾಧರ ಬಾರಿಗ ಸೆ.07 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 54 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಇವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.ಯಕ್ಷಗಾನ ಕಲಾವಿದರಾಗಿ ಧರ್ಮಸ್ಥಳ ಮೇಳ ಹಾಗೂ ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿರುವ ಇವರು, ಸುಬ್ರಹ್ಮಣ್ಯದಲ್ಲಿ ಶ್ರೀ ವಾಸುಕಿ ಯಕ್ಷಗಾನ ಕಲಾಕೇಂದ್ರ (ರಿ) ಸಂಸ್ಥೆಯ...
ದ.ಕ.ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಆಶ್ರಯದಲ್ಲಿ ನಡೆದ ವರ್ಚುವಲ್ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಜಿಲ್ಲೆಯ 28 ಸ್ಕೌಟ್ ವಿದ್ಯಾರ್ಥಿಗಳಲ್ಲಿ ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿಯ ಮನುಜ ನೇಹಿಗ ಸುಳ್ಯ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.ಈತ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಮತ್ತು ಡಾ| ಮೌಲ್ಯ ದಂಪತಿಗಳ ಪುತ್ರನಾಗಿದ್ದಾನೆ.
Loading posts...
All posts loaded
No more posts