Ad Widget

ಎಲಿಮಲೆ: ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಭಜನಾ ಸತ್ಸಂಗ ಕಾರ್ಯಕ್ರಮ

ಎಲಿಮಲೆ ಮಂಜುಶ್ರೀ ಭಜನಾ ಮಂಡಳಿ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಂಗವಾಗಿ ಸೆ. 10ರಂದು ರಾತ್ರಿ ಶ್ರೀ ಧರ್ಮಪಾಲ ಸುಳ್ಳಿ ಇವರ ಮನೆಯಲ್ಲಿ ವಿಶೇಷ ಭಜನಾ ಸತ್ಸಂಗ ಕಾರ್ಯಕ್ರಮ ನೆರವೇರಿತು. ಈ ಭಜನಾ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು. ಭಜನಾ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನೆರವೇರಿತು

ಕೊರೊನ ವೈರಸ್ ನಿಂದ ವಿಶ್ವ ವಿಮುಕ್ತಿ ಗೊಂಡು ವಿಶ್ವ ಶಾಂತಿ ನೆಲೆಸಲೆಂದು ಮೊಗರ್ಪಣೆ ದರ್ಗಾ ಶರೀಫ್ ನಲ್ಲಿ ವಿಶೇಷ ಪ್ರಾರ್ಥನೆ

ಮುಸಲ್ಮಾನ ಬಾಂಧವರ ಪವಿತ್ರ ಶುಕ್ರವಾರದ ಪ್ರಾರ್ಥನೆಯ ದಿನದಂದು ಮಹಾಮಾರಿ ಕೊರೋನ ವೈರಸ್ ಹಿನ್ನೆಲೆಯಲ್ಲಿ ಇಡೀ ಮಾನವಕುಲಕ್ಕೆ ಶಾಂತಿಗಾಗಿ, ಆರೋಗ್ಯಭರಿತ ಜೀವನಕ್ಕಾಗಿ ಮೊಗರ್ಪಣೆ ದರ್ಗಾ ಶರೀಫ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನೇತೃತ್ವವನ್ನು ಸೈಯದ್ ಜೈನುಲ್ ಅಬಿದಿನ್ ತಂಙಳ್ ಜಯನಗರ ವಹಿಸಿದ್ದರು. ಕೊರೋನ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಪ್ರಾರ್ಥನಾ ಮಂದಿರಗಳು ಸ್ತಬ್ಧವಾಗಿದ್ದು ಅತೀ ಶೀಘ್ರದಲ್ಲಿ ಈ...
Ad Widget

ಲಯನ್ಸ್ ವತಿಯಿಂದ ಕಲ್ಲುಗುಂಡಿಯಲ್ಲಿ ಉಚಿತ ಹೊಗೆ ತಪಾಸಣಾ ಶಿಬಿರ

ಲಯನ್ಸ್ ಕ್ಲಬ್ ವತಿಯಿಂದ ಕಲ್ಲುಗುಂಡಿಯಲ್ಲಿ ಉಚಿತ ಹೊಗೆ ತಪಾಸಣಾ ಶಿಬಿರ ಸೆ.5 ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಪ್ರಯೋಜನ ಪಡೆದರು. ಕ್ಲಬ್ ನ ಅಧ್ಯಕ್ಷ ಲ. ವಾಸುದೇವ ಕಟ್ಟೆಮನೆ, ನಿಕಟಪೂರ್ವ ಅಧ್ಯಕ್ಷರಾದ ಲ.ಕಿಶೋರ್ ಪಿ.ಬಿ., ಅಪ್ಪಣ್ಣ, ಪ್ರಶಾಂತ್ ಮುಂತಾದವರು ಪಾಲ್ಗೊಂಡಿದ್ದರು.

ನಾಲ್ಕೂರು – ಶಿವಾನಿ ಪ್ರಗತಿಬಂಧು ಸಂಘ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಾಲ್ಕೂರು ಒಕ್ಕೂಟದ ಚೆಮ್ನೂರು ದಾಮೋದರ ಗೌಡರವರ ಮನೆಯಲ್ಲಿ ನೂತನ ಶಿವಾನಿ ಪ್ರಗತಿಬಂಧು ಸಂಘವನ್ನು ಹಿರಿಯರಾದ ದಾಮೋದರ ಗೌಡ ಚೆಮ್ಮೂರು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ರವರು ಯೋಜನೆಯ ಕಾರ್ಯಕ್ರಮಗಳ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ಮೋಹನ್ ಅಮೆ, ಸಂಯೋಜಕರಾಗಿ...

ಪಂಜದ ಪಶುವೈದ್ಯ ಡಾ.ದೇವಿಪ್ರಸಾದ್ ಕಾನತ್ತೂರ್ ಅಮಾನತು ಪ್ರಕರಣ – ಸಮಾಜಕ್ಕಾಗಿ ಮಾಡಿದ ಉತ್ತಮ ಸೇವೆ ಸಹಿಸದ ಕೆಲವರು ನನ್ನ ಮೇಲೆ ಮಾಡಿದ ಷಡ್ಯಂತ್ರ – ವೈದ್ಯರು ಸ್ಪಷ್ಟನೆ

ಪಂಜ ಪಶುವೈದ್ಯ ಡಾ.ದೇವಿಪ್ರಸಾದ್ ಕಾನತ್ತೂರ್ ರವರನ್ನು ಸೇವೆಯಿಂದ ಅಮಾನತುಗೊಳಿಸಿ ಪಶು ಸಂಗೋಪನಾ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುವ ಘಟನೆ ಸೆಪ್ಟೆಂಬರ್ 10ರಂದು ಪಂಜದಿಂದ ವರದಿಯಾಗಿದೆ. ‌ದೇವಿಪ್ರಸಾದ್ ಕಾನತ್ತೂರ್ ರವರು 2017 ರಲ್ಲಿ ಕೇನ್ಯ ಕಾಯಂಬಾಡಿಯ ಮಹಿಳೆಯೊಬ್ಬರಿಗೆ ಜಾನುವಾರು ಸಾಗಾಟಕ್ಕೆ ಜಾನುವಾರು ಆರೋಗ್ಯ ದೃಢಪತ್ರದ ದಿನಾಂಕವನ್ನು ತಿದ್ದಿ 14.3.2020 ರಂದು ತನಗೆ ಅಧಿಕಾರವಿಲ್ಲದೆಯೂ ಸರ್ಟಿಫಿಕೇಟ್ ನೀಡಿದ್ದಾರೆಂದು ಪಶುವೈದ್ಯ...

ಬೊಳುಬೈಲು ಬಿಜೆಪಿ ಬೂತ್ ಸಮಿತಿಯ ಕಾರ್ಯಾಲಯ ಉದ್ಘಾಟನೆ – ಸನ್ಮಾನ

ಜಾಲ್ಸೂರು ಗ್ರಾಮದ ಬೊಳುಬೈಲಿನಲ್ಲಿ ಬಿಜೆಪಿ ಪಕ್ಷದ ಬೂತ್ ಸಮಿತಿಯ ಕಾರ್ಯಾಲಯ ಸೆ.10ರಂದು ಉದ್ಘಾಟನೆಗೊಂಡಿತು. ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್ ಅವರು ಪಕ್ಷದ ಕಛೇರಿಯನ್ನು ಉದ್ಘಾಟಿಸಿ, ಶುಭಹಾರೈಸಿದರು.ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತ ಸುರೇಂದ್ರ ಪಿಲಿಕ್ಕೋಡಿ ಹಾಗೂ ಪಕ್ಷದ ಕಛೇರಿಗೆ ಕೋಣೆಯನ್ನು ನೀಡಿದ ಕೆ.ಪಿ. ತಾರನಾಥ ಬೊಳುಬೈಲು ಅವರ ಪುತ್ರ ಚಿತ್ತರಂಜನ್...

ಮಡಪ್ಪಾಡಿ : ಆಯುಷ್ಮಾನ್ ಆರೋಗ್ಯ ಕಾರ್ಡ್ ಅಭಿಯಾನ

ಗ್ರಾಮ ಪಂಚಾಯತ್ ಮಡಪ್ಪಾಡಿ ಹಾಗೂ ಯುವಕ ಮಂಡಲ ಮಡಪ್ಪಾಡಿ ಇದರ ಆಶ್ರಯದಲ್ಲಿ ಸೆ. 8 ರಂದು ಆಯುಷ್ಮಾನ್ ಆರೋಗ್ಯ ಕಾರ್ಡ್ ಅಭಿಯಾನ ಇಂದು ನಡೆಯಿತು. ‌ಕಾರ್ಯಕ್ರಮದ ಉದ್ಘಾಟನೆಯನ್ನು ವೈಧ್ಯಾಧಿಕಾರಿ ಡಾ.ನಂದಕುಮಾರ್ ಉದ್ಘಾಟಿಸಿ ಮಾತನಾಡಿ ಆಯುಷ್ಮಾನ್ ಯೋಜನೆಯ ಮುಖಾಂತರ ವಿವಿಧ ಖಾಯಿಲೆಗಳಿಗೆ ಸರಕಾರ ಉಚಿತ ಚಿಕಿತ್ಸೆಯ ಸೌಲಭ್ಯ ಒದಗಿಸಿರುವ ಪ್ರಧಾನಿಗಳ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಮಾಜಿ...

ರಾಕೇಶ್ ಮೆಟ್ಟಿನಡ್ಕ ರಿಗೆ ಜೇಸಿಐ ಸಾಧನಾಶ್ರೀ ಪ್ರಶಸ್ತಿ

ಜೇಸಿಐ ಭಾರತದ ವಲಯ 15ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿ ಗುತ್ತಿಗಾರು ಜೇಸಿಐ ಕಾರ್ಯದರ್ಶಿ ರಾಕೇಶ್ ಮೆಟ್ಟಿನಡ್ಕ ಇವರಿಗೆ ಲಭಿಸಿದೆ. ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸಿ ಘಟಕದಿಂದ ಒರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಸೆ. 6 ರಂದು ಬಂಟ್ವಾಳದ ಬಂಟರ ಭವನದಲ್ಲಿ...

ಪ್ರೌಢಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಟೈಟಸ್ ವರ್ಗೀಸ್

ದ.ಕ. ಜಿಲ್ಲಾಡಳಿತ ಕೊಡಮಾಡುವ ಪ್ರೌಢಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಂಜ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪದವೀಧರ ಸಹಾಯಕ ಟೈಟಸ್ ವರ್ಗೀಸ್ ಆಯ್ಕೆಯಾಗಿ ಸೆ. 5ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿರುತ್ತಾರೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಸುಧಾಮ ಆಚಾರಿಪಾಲ್ ನಲ್ಲಿ ಸಿ.ಎಂ. ವರ್ಗೀಸ್ ಮತ್ತು ಶ್ರೀಮತಿ ಮರಿಯಮ್ಮ...

ಶಿಕ್ಷಕ ರಾಧಾಕೃಷ್ಣ ಕೆ.ಎಸ್. ರವರಿಗೆ ಪದೋನ್ನತಿ

ಆಲೆಟ್ಟಿ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಧಾಕೃಷ್ಣ. ಕೆ.ಎಸ್ ರವರು ಪದೋನ್ನತಿ ಹೊಂದಿದ್ದು ಇದೀಗ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಸೂರ್ಯ, ಇಡ್ಕಿದು ಇಲ್ಲಿಗೆ ಆಂಗ್ಲಭಾಷಾ ಸಹಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ. ಇವರು ಸ.ಉ.ಹಿ.ಪ್ರಾಥಮಿಕ ಶಾಲೆ ಕಲ್ಮಕಾರು ಇಲ್ಲಿ 10 ವರ್ಷ, ಸ.ಹಿ.ಪ್ರಾಥಮಿಕ ಶಾಲೆ ಮಿತ್ತಡ್ಕ- ಮರ್ಕಂಜದಲ್ಲಿ 3 ವರ್ಷಗಳ...
Loading posts...

All posts loaded

No more posts

error: Content is protected !!