- Friday
- November 1st, 2024
ಕಡಬ ತಾಲೂಕಿನಲ್ಲಿರುವ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಸೆ.24ರಿಂದ ಆಶ್ಲೇಷ ಸೇವೆಗಳನ್ನು ಹೆಚ್ಚಳಗೊಳಿಸಲಾಗುತ್ತಿದೆ.ಸಂಜೆ ಆಶ್ಲೇಷ ಸೇವೆ ಆರಂಬಿಸಲಾಗುವುದು ಎಂದು ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ರೂಪಾ ಎಂ.ಜೆ ತಿಳಿಸಿದ್ದಾರೆ. ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.24 ರಿಂದ ಬೆಳಗ್ಗೆ ಎರಡು ಹಂತದಲ್ಲಿ ತಲಾ 75 ರಂತೆ 150, ಸಂಜೆ 75 ರಂತೆ ದಿನವೊಂದಕ್ಕೆ 225...
ಸುಳ್ಯ :ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ದ.ಕ,ಜಿಲ್ಲೆ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, (ರಿ) ಪಠೇಲ್ ಚಾರಿಟೇಬಲ್ ಟ್ರಸ್ಟ್ (ರಿ), ಪಠೇಲ್ ಮೆಡಿಕಲ್ &ಲ್ಯಾಬೋರೇಟರಿ ಸುಳ್ಯ ಮತ್ತು ಇಂಡಿಯನ್ ರೆಡ್...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕು ಬೆಳ್ಳಾರೆ ವಲಯದ ವತಿಯಿಂದ ಐವರ್ನಾಡು ಒಕ್ಕೂಟದ ಜ್ಞಾನಶ್ರೀ ಸ್ವ ಸಹಾಯ ಸಂಘದ ಸದಸ್ಯರಾದ ಪ್ರೇಮ ನಾಯಕ್ ಅವರ ಮನೆಗೆ ಪ್ರಾಕೃತಿಕ ವಿಕೋಪದಡಿಯಲ್ಲಿ ಮನೆ ಹಾನಿಗೆ 5000ರೂ ಸಹಾಯಧನದ ಚೆಕ್ಕನ್ನು ಸುಳ್ಯ ಯೋಜನೆ ಕಚೇರಿಯಲ್ಲಿ ಪ್ರಬಂಧಕರಾದ ಜನಾರ್ದನ ಅವರು ವಿತರಿಸಿದರು .ಈ ಸಂದರ್ಭ ಬೆಳ್ಳಾರೆ...
ಎಸ್ಕೆಎಸ್ಎಸ್ಎಫ್ ತ್ವಲಬಾ ವಿಂಗ್ ಸವಣೂರು ಕ್ಲಸ್ಟರ್ ನೂತನ ಸಾರಥಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಕಾರ್ಯದರ್ಶಿಯಾಗಿ ಹನೀಫ್ ಸವಣೂರು ಚೇರ್ಮಾನ್ ರಾಝಿಕ್ ಕಣಿಮಜಲು, ವೈಸ್ ಚೇರ್ಮಾನ್ ಗಳು ಅನ್ವರ್ ವೀರಮಂಗಳ , ಶಫೀಖ್ ಕಣಿಮಜಲು ಜನರಲ್ ಕನ್ವೀನರ್ ಮುಹಮ್ಮದ್ ರಾಝೀ ಸರ್ವೇ ವೈಸ್ ಕನ್ವೀನರ್'ಗಳು ಮನ್ಸೂರ್ ಸವಣೂರು, ಮುಬೀದ್ ವೀರಮಂಗಳ ಸಂಪುಟನಾ ಕಾರ್ಯದರ್ಶಿ ರಿಯಾಝ್ ಪರಣೆ, ಕೋಶಾಧಿಕಾರಿ...
ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್'ನ ಅಧ್ಯಕ್ಷರೂ ,ಕಮ್ಮಾಡಿ ಸಂಸ್ಥೆಯ ಮಾಲಕ, ಸಾಮಾಜಿಕ ಮತ್ತು ಧಾರ್ಮಿಕ ನೇತಾರಾಗಿ ಸೇವೆ ಸಲ್ಲಿಸುತ್ತಿದ್ದ ಕಮ್ಮಾಡಿ ಇಬ್ರಾಹಿಂ ಹಾಜಿ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 22ರಂದು ರಾತ್ರಿ ನಿಧನರಾಗಿದ್ದಾರೆ.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ (ರಿ.) ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸುಳ್ಯದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೆ.23 ರಂದು ಪ್ರತಿಭಟಿಸಲಾಯಿತು. ಕೋವಿಡ್ - 19 ರ ಈ ಸಂಕಟ ಕಾಲದಲ್ಲಿ ಕೊರೋನಾ ವಾರಿಯರ್ಸ್...
ಇತ್ತೀಚೆಗೆ ನಿಧನರಾದ ಬೆಳ್ಳಾರೆಯ ಆಟೋಚಾಲಕ ಲಕ್ಷ್ಮೀಶ ಕಿನ್ನಿಮಜಲು ನೆಟ್ಟಾರು ಇವರಿಗೆ ಬೆಳ್ಳಾರೆ ಮೇಲಿನ ಪೇಟೆಯ ಆಟೋಚಾಲಕ ಮಾಲಕರ ವತಿಯಿಂದ ಸೆ.23 ರಂದು ಬೆಳಿಗ್ಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಮೇಲಿನ ಪೇಟೆಯ ಎಲ್ಲಾ ಆಟೋ ಚಾಲಕ - ಮಾಲಕರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೆಪ್ಟೆಂಬರ್ 24 ರಿಂದ 30ರ ತನಕ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ. ಇದರ ಅಂಗವಾಗಿ ಸೆಪ್ಟೆಂಬರ್ 28 ರಂದು ಸುಳ್ಯಕ್ಕೆ ಭೇಟಿ ನೀಡಲಿದ್ದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ಸರಕಾರಿ ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ ಎಂದು...
ಸುಳ್ಯ ತಹಶೀಲ್ದಾರ್ ಆಗಿದ್ದ ಕುಂಞ ಅಹಮ್ಮದ್ ರಿಗೆ ನಾಗಮಂಗಲಕ್ಕೆ ವರ್ಗಾವಣೆ ಯಾದಾಗ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿಷ್ಟಾಚಾರ ವಿಭಾಗದ ತಹಶೀಲ್ದಾರ್ ಆಗಿದ್ದ ಅನಂತಶಂಕರ್ ರನ್ನು ಸುಳ್ಯಕ್ಕೆ ನಿಯೋಜಿಸಲಾಗಿತ್ತು .ಕಡಬ ತಹಶೀಲ್ದಾರ್ ಆಗಿದ್ದ ಜಾನ್ ಪ್ರಕಾಶ್ ರೋಡ್ರಿಗಸ್ ಅವರಿಗೆ ವರ್ಗಾವಣೆಯಾಗಿದ್ದು ಅನಂತ ಶಂಕರ ಅವರನ್ನು ಕಡಬ ತಹಶೀಲ್ದಾರ್ ಆಗಿ ಸರಕಾರದಿಂದ ಆದೇಶವಾಗಿದೆ.
Loading posts...
All posts loaded
No more posts